ಸುದ್ದಿ

ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು

ಉತ್ಸವದ ವೇಳೆಯೇ ಭಾರಿ ಗಾಳಿ-ಮಳೆಗೆ ಕುಸಿದ ಗೋಡೆ ಹೈದರಾಬಾದ್‌: ಆಂಧ್ರ ಪ್ರದೇಶದ ವಿಶಾಖಪಟ್ಟಣದ ಸಿಂಹಾಚಲಂನಲ್ಲಿರುವ ಸಿಂಹಾದ್ರಿ ಅಪ್ಪಣ್ಣಸ್ವಾಮಿ ದೇವಸ್ಥಾನದ ಗೋಡೆ ಕುಸಿದು ಎಂಟು ಜನರು ಸಾವನ್ನಪ್ಪಿರುವ ಘಟನೆ ಬುಧವಾರ ಮುಂಜಾನೆ ವೇಳೆ ಸಂಭವಿಸಿದೆ. ದೇವಸ್ಥಾನದಲ್ಲಿ ನಡೆಯುತ್ತಿದ್ದ ಚಂದನೋತ್ಸವಂ ವೇಳೆ ಈ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ ಚಂದನೋತ್ಸವದಲ್ಲಿ ವರಾಹ ಲಕ್ಷ್ಮೀ ನರಸಿಂಹಸ್ವಾಮಿಯ ನಿಜರೂಪ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಇದೇ ವೇಳೆ ದೇವಸ್ಥಾನದಲ್ಲಿ ಇತ್ತೀಚಿಗೆ ನಿರ್ಮಿಸಲಾಗಿದ್ದ 20 ಅಡಿ ಉದ್ದದ ಹೊಸ ಗೋಡೆಯೊಂದು ಕುಸಿದಿದೆ. ಪರಿಣಾಮ […]

ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು Read More »

ಕ್ರಿಕೆಟ್‌ ಪಂದ್ಯಾಟದ ವೇಳೆ ಯುವಕನ ಹತ್ಯೆ : 20 ಮಂದಿ ಬಂಧನ

ಕೊನೆಗೂ ಕುಡುಪು ಕೊಲೆ ರಹಸ್ಯ ಬೇಧಿಸಿದ ಪೊಲೀಸರು ಮಂಗಳೂರು : ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನ ಸಮೀಪ ಅಪರಿಚಿತ ಯುವಕನ್ನು ಹೊಡೆದು ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ 20 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಿಕೆಟ್‌ ಪಂದ್ಯಾಟ ನಡೆಯುತ್ತಿರುವಾಗ ಈ ವ್ಯಕ್ತಿ ಮಧ್ಯೆ ಬಂದು ಕಿರಿಕ್‌ ಮಾಡಿದಾಗ ಯುವಕರ ಗುಂಪು ಕೆರಳಿ ಅವನನ್ನು ಹಿಗ್ಗಾಮುಗ್ಗಾ ಥಳಿಸಿದೆ. ಈ ಹೊಡೆತಗಳಿಂದ ಸಾವು ಸಂಭವಿಸಿದೆ ಎಂದು ವಿಧಿವಿಜ್ಞಾನ ವರದಿ ದೃಢಪಡಿಸಿದೆ. ಏ.27ರಂದು ಸಂಜೆ ನಿರ್ಜನ ಸ್ಥಳದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಯುವಕನ ಮೃತದೇಹ

ಕ್ರಿಕೆಟ್‌ ಪಂದ್ಯಾಟದ ವೇಳೆ ಯುವಕನ ಹತ್ಯೆ : 20 ಮಂದಿ ಬಂಧನ Read More »

ಹೋಟೆಲ್‌ನಲ್ಲಿ ಭೀಕರ ಬೆಂಕಿ ಅವಘಡ : 15 ಮಂದಿ ಜೀವಂತ ದಹನ

ಕೋಲ್ಕತ್ತಾ: ಕೋಲ್ಕತ್ತಾದ ಬುರ್ರಾಬಜಾರ್​ನಲ್ಲಿರುವ ಹೋಟೆಲ್​ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 15 ಮಂದಿ ಜೀವಂತ ಸುಟ್ಟು ಕರಕಲಾಗಿರುವ ಘಟನೆ ಸಂಭವಿಸಿದೆ. ಅನೇಕ ಮಂದಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣ್ಣಿನ ಮಾರುಕಟ್ಟೆ ಪ್ರದೇಶದಲ್ಲಿರುವ ಹೋಟೆಲ್ ರಿತುರಾಜ್‌ನಲ್ಲಿ ನಿನ್ನೆ ರಾತ್ರಿ 8.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಹೋಟೆಲ್ ಸಿಬ್ಬಂದಿಯೊಬ್ಬರು ಮಹಡಿಯಿಂದ ಹಾರಿ ಸಾವನ್ನಪ್ಪಿದ್ದಾರೆ. ಹೋಟೆಲ್‌ನಿಂದ 15 ಶವಗಳನ್ನು ಹೊರತೆಗೆಯಲಾಗಿದ್ದು, ಹಲವರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಮನೋಜ್ ವರ್ಮಾ ತಿಳಿಸಿದ್ದಾರೆ. ಕೋಲ್ಕತ್ತ ನಗರದ ಹಳೆ

ಹೋಟೆಲ್‌ನಲ್ಲಿ ಭೀಕರ ಬೆಂಕಿ ಅವಘಡ : 15 ಮಂದಿ ಜೀವಂತ ದಹನ Read More »

ಚಲಿಸುತ್ತಿದ್ದ ಕಾರಿನಲ್ಲಿ ಯುವಕರಿಂದ ಅಪಾಯಕಾರಿ ಸ್ಟಂಟ್ : ಪ್ರಕರಣ ದಾಖಲು..!!

ಕಡಬ : ಚಲಿಸುತ್ತಿದ್ದ ಕಾರಿನಲ್ಲಿ ಬಾಗಿಲು ಹಾಗೂ  ಕಾರಿನ ಮೇಲ್ಬಾಗದಲ್ಲಿ ಕುಳಿತು ಹರಸಾಹಸವನ್ನು ಮಾಡುತ್ತಾ ಚಲಿಸುತ್ತಿದ್ದ ಇತರ ವಾಹನಗಳ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿ ಹುಚ್ಚಾಟ ಮೆರೆದ ಘಟನೆ ಎ. 27 ಭಾನುವಾರದಂದು ರಾತ್ರಿ ಕಡಬದಲ್ಲಿ ನಡೆದಿದೆ. ಕಡಬ-ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಕಡಬದಿಂದ ಅಲಂಕಾರು ತನಕ 15 ಕಿ.ಮೀ. ದೂರ ಹಲವು ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಕರ್ಕಶವಾಗಿ ನಿರಂತರ ಹಾರ್ನ್ ಹಾಕುತ್ತಾ ಸಂಚಾರ ನಿಯಮವನ್ನು  ಉಲ್ಲಂಘಿಸಿ ವಾಹನ ಚಲಾಯಿಸಿರುವಂತಹ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಇದಕ್ಕೆ ಪೂರಕ

ಚಲಿಸುತ್ತಿದ್ದ ಕಾರಿನಲ್ಲಿ ಯುವಕರಿಂದ ಅಪಾಯಕಾರಿ ಸ್ಟಂಟ್ : ಪ್ರಕರಣ ದಾಖಲು..!! Read More »

ಮೇ 1 : ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕಾರ್ಮಿಕ ದಿನಾಚರಣೆ

ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಸ್ವಚ್ಚ ಪುತ್ತೂರು ಕಾರ್ಯಕ್ರಮದ  ಅಂಗವಾಗಿ ಕಾರ್ಮಿಕ ದಿನಾಚರಣೆ ಮೇ 1 ರಂದು ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಸಭಾಂಗಣದಲ್ಲಿ ಜರಗಲಿರುವುದು. ಕಾರ್ಯಕ್ರಮದಲ್ಲಿ  ಪೌರಕಾರ್ಮಿಕರಿಗೆ ಹಾಗೂ ನಗರಸಭೆ ಸಿಬ್ಬಂದಿಗಳಿಗೆ ಅಧಿಕಾರಿಗಳು ಮತ್ತು ಸರ್ವ ಸದಸ್ಯರಿಗೆ ಗೌರವಾರ್ಪಣೆ  ಕಾರ್ಯಕ್ರಮ ಜರಗಲಿದೆ. ಸ್ವಚ್ಚ ಪುತ್ತೂರು ಯೋಜನೆಯಲ್ಲಿ ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿರುವುದರಿಂದ  ಈ ಯೋಜನೆಯ ಭಾಗೀದಾರರು  ಎಂಬ ನೆಲೆಯಲ್ಲಿ ನಗರಸಭೆಗೆ ಸಂಬಂಧಿಸಿದವರನ್ನು ಗೌರವಿಸಲು ಈ

ಮೇ 1 : ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನವೀಕೃತ ಮಳಿಗೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಕಾರ್ಮಿಕ ದಿನಾಚರಣೆ Read More »

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಆಕರ್ಷಕ ಕೊಡುಗೆ

ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ಗ್ರಾಹಕರಿಗೆ ಅಕ್ಷಯ ತೃತೀಯ ಪ್ರಯುಕ್ತ ಆಕರ್ಷಕ ಕೊಡುಗೆ ನೀಡಲಾಗಿದೆ. ಈ ಆಫರ್ ತಮ್ಮ ಎಲ್ಲಾ ಮಳಿಗೆಗಳಾದ ಪುತ್ತೂರು, ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿ ಲಭ್ಯವಿದೆ. ಸಂಸ್ಕ್ರತದಲ್ಲಿ ಅಕ್ಷಯ ಎಂದರೆ ಶಾಶ್ವತ ಎಂದರ್ಥ ಅಕ್ಷಯ ತೃತೀಯ ಎಂಬುವುದು ಶುಭದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಜನರು  ಚಿನ್ನ ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಖರೀದಿಸುತ್ತಾರೆ. ಏಕೆಂದರೆ ಇದು ಕುಟುಂಬಕ್ಕೆ ಸಮೃದ್ದಿ ಮತ್ತು ಆದೃಷ್ಟವನ್ನು ತರುತ್ತದೆ ಎಂಬುದು ನಂಬಿಕೆ. ಆದ್ದರಿಂದ

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಆಕರ್ಷಕ ಕೊಡುಗೆ Read More »

ಮಂಗಳೂರು : ಹೊತ್ತಿ ಉರಿದ ಲಾರಿ | ಚಾಲಕ  ಪ್ರಾಣಪಾಯದಿಂದ ಪಾರು

ಮಂಗಳೂರು: ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಕೊಯನಾಡು ಬಳಿ ಲಾರಿಗೆ ಆಕಸ್ಮಿಕವಾಗಿ ಅಗ್ನಿ ಸ್ಪರ್ಶಗೊಂಡು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಮಡ್ ಬ್ಲಾಕ್ ತುಂಬಿಸಿಕೊಂಡು ಹೋಗುತ್ತಿದ್ದ ವೇಳೆ ಕೊಯನಾಡು ಸಮೀಪ ಲಾರಿಯಲ್ಲಿ ದಿಡೀ‌ರ್ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಚಾಲಕ ಲಾರಿಯನ್ನು ನಿಲ್ಲಿಸಿ ಇಳಿದಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸ್ಥಳೀಯರು, ಅಗ್ನಿಶಾಮಕ ದಳದವರು, ಪೊಲೀಸರು ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಮಂಗಳೂರು : ಹೊತ್ತಿ ಉರಿದ ಲಾರಿ | ಚಾಲಕ  ಪ್ರಾಣಪಾಯದಿಂದ ಪಾರು Read More »

ಕೆಎಸ್‌ಆರ್‌ಟಿಸಿ- ಬೈಕ್‍ ಡಿಕ್ಕಿ | ಬೈಕ್‍ ಸವಾರ ಮೃತ್ಯು

ಪುತ್ತೂರು : ಕೆಎಸ್‌ಆರ್‌ಟಿಸಿ ಬಸ್ಸಿಗೆ ಬುಲೆಟ್ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಸಮೀಪ ನಡೆದಿದೆ. ಕೇರಳ ರಿಜಿಸ್ಟ್ರೇಷನ್ ಹೊಂದಿರುವ ಬೈಕ್ ಇದಾಗಿದ್ದು, ಮೃತ ಸವಾರನ ಕುರಿತು ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆಎಸ್‌ಆರ್‌ಟಿಸಿ- ಬೈಕ್‍ ಡಿಕ್ಕಿ | ಬೈಕ್‍ ಸವಾರ ಮೃತ್ಯು Read More »

ಕಾಡಾನೆ ದಾಳಿಯಿಂದ ಮಹಿಳೆ ಮೃತ್ಯು

ಪುತ್ತೂರು: ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಕಣಿಯಾರು ಮಲೆ ಅರ್ತಿಯಡ್ಕ ಸಿಆರ್ ಸಿ ಕಾಲನಿಯಿಂದ ವರದಿಯಾಗಿದೆ. ರಬ್ಬರ್ ಟ್ಯಾಪಿಂಗ್ ಗೆ ತೆರಳಿದ ಅರ್ತಿಯಡ್ಕದ ಮಹಿಳೆಯೋರ್ವರ ಮೇಲೆ ಎ.29 ರಂದು ಮುಂಜಾನೆ ಆನೆ ದಾಳಿ ನಡೆಸಿದೆ. ಆನೆ ದಾಳಿಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

ಕಾಡಾನೆ ದಾಳಿಯಿಂದ ಮಹಿಳೆ ಮೃತ್ಯು Read More »

ಕುಡುಪು ಕೊಲೆ ಪ್ರಕರಣ : ಹಲವು ಮಂದಿ ವಶ

ಕೋಮು ವೈಷಮ್ಯಕ್ಕೆ ಎಡೆಮಾಡಿಕೊಡದಂತೆ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಮನವಿ ಮಂಗಳೂರು : ಮಂಗಳೂರಿನ ಹೊರವಲಯದ ಕುಡುಪು ಬಳಿ ಯುವಕನನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಂತ್ಯಂತ ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, ಕ್ರಿಕೆಟ್ ಆಟ ಆಡುವ ವೇಳೆ ಆಟಗಾರರು ಹಾಗೂ ಅನ್ಯ ಕೋಮಿನ ಯುವಕನ ನಡುವೆ ಮಾತಿನ ಚಕಮಕಿ ನಡೆದು, ಯುವಕನ ಮೇಲೆ

ಕುಡುಪು ಕೊಲೆ ಪ್ರಕರಣ : ಹಲವು ಮಂದಿ ವಶ Read More »

error: Content is protected !!
Scroll to Top