ಸುದ್ದಿ

ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಹೊಸದಿಲ್ಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಉಗ್ರರು ಗುಂಡಿಕ್ಕಿ ಸಾಯಿಸಿದ ಬೆನ್ನಿಗೆ ಸೇನೆ ಇಬ್ಬರು ಉಗ್ರರನ್ನು ಗಡಿ ರೇಖೆಯ ಬಳಿ ಸಾಯಿಸಿದೆ. ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ನುಸುಳಿಕೊಂಡು ಬರಲು ಯತ್ನಿಸಿದ್ದ ಉಗ್ರರನ್ನು ಸೇನೆ ಸಾಯಿಸಿದೆ. ಭಾರಿ ಗುಂಡಿನ ಕಾಳಗದ ಬಳಿಕ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಉಗ್ರರಿಂದ ಅಪಾರ ಪ್ರಮಾಣದ ಮದ್ದುಗುಂಡು, ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾರಾಮುಲ್ಲಾದ ಉರಿನಾಲಾದ ಸರ್ಜೀವನ್‌ ಎಂಬ ಪ್ರದೇಶದಿಂದ ಮೂವರು ಉಗ್ರರು ಒಳನುಸುಳಲು ಯುತ್ನಿಸಿದ್ದರು. ಓರ್ವ […]

ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ Read More »

ಮಾದಕವಸ್ತು ಸೇವನೆ ಮಾಡಿದ ಮೂವರು ಆರೋಪಿಗಳು ಅರೆಸ್ಟ್

ಮಣಿಪಾಲ : ಲಾಡ್ಜ್ ಒಂದರಲ್ಲಿ ಮಾದಕ ವಸ್ತು ಸಹಿತ ಮೂವರನ್ನು ಪೊಲೀಸರು ಎ. 22 ಮಂಗಳವಾರದಂದು ಬಂಧಿಸಿರುವ ಘಟನೆ ಮಣಿಪಾಲದ 80 ಬಡಗಬೆಟ್ಟು ಗ್ರಾಮದ ದಶರಥ ನಗರದಲ್ಲಿ ನಡೆದಿದೆ. ಕಾಪುವಿನ ಮಂಚಕಲ್ ಅಜರುದ್ದೀನ್, ಮಹಾರಾಷ್ಟ್ರದ ಪುಣೆಯ ರಾಜೇಶ್ ಪ್ರಕಾಶ್ ಜಾದವ್, ಮತ್ತು ಮಲ್ಪೆಯ ನಾಜೀಲ್ (ಅಶಿಪ್) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಮಾದಕವಸ್ತುವನ್ನು ತೆಗೆದುಕೊಳ್ಳಲು ಉಪಯೋಗಿಸುವ ಸಿರಿಂಜ್‌ಗಳನ್ನು ಹೊಂದಿದ ಬಗ್ಗೆ ಬಂದ ಮಾಹಿತಿ ಆಧರಿಸಿ ಮಣಿಪಾಲ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 40 ಸಾವಿರ ರೂ ಮೌಲ್ಯದ

ಮಾದಕವಸ್ತು ಸೇವನೆ ಮಾಡಿದ ಮೂವರು ಆರೋಪಿಗಳು ಅರೆಸ್ಟ್ Read More »

ಆಟೋ ರಿಕ್ಷಾ ಚಾಲಕನೋರ್ವ ರಿಕ್ಷಾ ಸಹಿತ ನಾಪತ್ತೆ

ಪುತ್ತೂರು:  ಬಾಡಿಗೆಗೆಂದು ಹೋದ ರಿಕ್ಷಾ ಚಾಲಕನೋರ್ವ ರಿಕ್ಷಾ ಸಹಿತವಾಗಿ ನಾಪತ್ತೆಯಾದ ಘಟನೆ ನಡೆದಿದೆ. ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಬಾಡಿಗೆಗೆಂದು ಹೋದ ಸಾಲ್ಮರ ಸೂತ್ರ ಬೆಟ್ಟು ನಿವಾಸಿ ಆಟೋ ರಿಕ್ಷಾ ಚಾಲಕ ಲೋಕೇಶ ಎಂಬವರು ರಿಕ್ಷಾ ಸಮೇತ ನಾಪತ್ತೆಯಾಗಿರುವ ಕುರಿತು ಎ.21ರಂದು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗ್ಗೆ 5.30ಕ್ಕೆ ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಬಾಡಿಗೆ ಇದೆ ಎಂದು ಮನೆಯಿಂದ  ಹೋದವರು ಮತ್ತೆ ಮನೆಗೆ ವಾಪಸಾಗಿಲ್ಲವೆಂದು ತಿಳಿದು ಬಂದಿದೆ. ಈ ಘಟನಾ ಕುರಿತು ಇತರ

ಆಟೋ ರಿಕ್ಷಾ ಚಾಲಕನೋರ್ವ ರಿಕ್ಷಾ ಸಹಿತ ನಾಪತ್ತೆ Read More »

ಪಹಲ್ಗಾಮ್‌ ಉಗ್ರ ದಾಳಿ : ಕರ್ನಾಟಕದ ಇನ್ನೋರ್ವ ವ್ಯಕ್ತಿ ಬಲಿ

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ಉಗ್ರರು ನಡೆಸಿದ ನಡೆದ ಹಿಂದೂಗಳ ನರಮೇಧದಲ್ಲಿ ಬೆಂಗಳೂರಿನ ಮಧುಸೂದನ್‌ ಎಂಬವರು ಬಲಿಯಾಗಿದ್ದು, ಇದರೊಂದಿಗೆ ಕರ್ನಾಟಕದ ಮೂವರು ಸಾವನ್ನಪ್ಪಿರುವುದು ದೃಢವಾಗಿದೆ. ಮೂಲತಃ ಆಂಧ್ರದ ನೆಲ್ಲೂರಿನವರಾದ ಮಧುಸೂದನ್‌ ರಾಮಮೂರ್ತಿ ನಗರದಲ್ಲಿ ವಾಸವಾಗಿದ್ದರು. ಎರಡು ದಿನದ ಹಿಂದೆ ಕಾಶ್ಮೀರಕ್ಕೆ ಕುಟುಂಬ ತೆರಳಿದ್ದರು. ಮಧುಸೂದನ್‌ ಅವರ ಸಾವಿನೊಂದಿಗೆ ಕರ್ನಾಟಕ ಮೂವರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಈಗಾಗಲೇ ಶಿವಮೊಗ್ಗದ ಮಂಜುನಾಥ್‌ ರಾವ್‌, ಬೆಂಗಳೂರಿನ ಭರತ್‌ ಭೂಷಣ್‌ ಎಂಬವರು ಮೃತಪಟ್ಟಿದ್ದಾರೆ. ವಿಮಾನ ನಿಲ್ದಾಣದಲ್ಲೇ ಮೋದಿ ಸಭೆ ಸೌದಿ ಅರೇಬಿಯಾ ಪ್ರವಾಸವನ್ನು

ಪಹಲ್ಗಾಮ್‌ ಉಗ್ರ ದಾಳಿ : ಕರ್ನಾಟಕದ ಇನ್ನೋರ್ವ ವ್ಯಕ್ತಿ ಬಲಿ Read More »

ಅರಮನೆ ರಸ್ತೆಯಲ್ಲಿರುವ ಎರಡು ಅಂಗಡಿಗಳಿಗೆ ತಗುಲಿದ ಬೆಂಕಿ

ವಿಟ್ಲ : ಅರಮನೆ ರಸ್ತೆಯ ರಸ್ಕಿನ್ ಕಾಂಪ್ಲೆಕ್ಸ್ ನಲ್ಲಿ ಎರಡು ಅಂಗಡಿಗಳಿಗೆ ಬೆಂಕಿ ತಗುಲಿದ ಘಟನೆ ವಿಟ್ಲದಲ್ಲಿ ನಡೆದಿದೆ. ಮುರುಳಿಧರ್ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದ ಸದಸ್ಯರು ತಕ್ಷಣ ಪಿಕಪ್ ವಾಹನದಲ್ಲಿ ನೀರು ತಂದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಬಳಿಕ ಸ್ಥಳಕ್ಕೆ ಪುತ್ತೂರು ವಿಭಾಗದ ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದರು.    ಸದ್ಯ ಅಂಗಡಿಗಳಲ್ಲಿ ಇದ್ದ ಅಡಿಕೆ, ಕರಿಮೆಣಸು ಸುಟ್ಟುಹೋಗಿದೆ ಎಂದು ತಿಳಿದುಬಂದಿದೆ.  

ಅರಮನೆ ರಸ್ತೆಯಲ್ಲಿರುವ ಎರಡು ಅಂಗಡಿಗಳಿಗೆ ತಗುಲಿದ ಬೆಂಕಿ Read More »

ಪಹಲ್ಗಾಮ್‌ ದಾಳಿಯ ಮಾಸ್ಟರ್‌ಮೈಂಡ್‌ ಸೈಫುಲ್ಲಾ ಖಾಲಿದ್‌

ಭಾರತದ ಪ್ರಧಾನಿಗಿಂತಲೂ ಹೆಚ್ಚಿನ ಭದ್ರತೆ ಇದೆಯಂತೆ ಪಾಕಿಸ್ಥಾನದ ಈ ಉಗ್ರನಿಗೆ ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೂತ್ರಧಾರ ಸೈಫುಲ್ಲಾ ಖಾಲಿದ್‌ ಎಂಬ ಉಗ್ರ ಮುಖಂಡ ಎಂದು ತಿಳಿದುಬಂದಿದೆ. ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಅಂಗಸಂಸ್ಥೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಹೊತ್ತುಕೊಂಡಿದೆ. ಈ ದಾಳಿಯ ಮಾಸ್ಟರ್ ಮೈಂಡ್ ಭಯೋತ್ಪಾದಕ ಸೈಫುಲ್ಲಾ ಖಾಲಿದ್ ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಮತ್ತು ಟಿಆರ್‌ಎಫ್‌ನ ಭಯೋತ್ಪಾದಕ ಚಟುವಟಿಕೆಗಳ ಪ್ರಮುಖ ನಿರ್ವಾಹಕ ಈ ಸೈಫುಲ್ಲಾ ಖಾಲಿದ್‌. ಸೈಫುಲ್ಲಾ ಖಾಲಿದ್​ನನ್ನು ಸೈಫುಲ್ಲಾ

ಪಹಲ್ಗಾಮ್‌ ದಾಳಿಯ ಮಾಸ್ಟರ್‌ಮೈಂಡ್‌ ಸೈಫುಲ್ಲಾ ಖಾಲಿದ್‌ Read More »

ಖುಷಿಯಿಂದ ಪ್ರವಾಸಕ್ಕೆ ಹೋದವರು ಹೆಂಡತಿ, ಮಗನ ಎದುರೇ ಉಗ್ರರ ಗುಂಡಿಗೆ ಬಲಿಯಾದರು

ಬೆಂಗಳೂರಿನ ಭರತ್‌ಭೂಷಣ್‌, ಶಿವಮೊಗ್ಗದ ಮಂಜುನಾಥ್‌ ಹತ್ಯೆ ಅತಿ ದಾರುಣ ಬೆಂಗಳೂರು: ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಂವ್‌ನ ಬೈಸನ್‌ ಎಂಬ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಉಗ್ರರ ಭೀಕರ ದಾಳಿಯಲ್ಲಿ ಕರ್ನಾಟಕದ ಇಬ್ಬರು ವ್ಯಕ್ತಿಗಳು ತಮ್ಮ ಹೆಂಡತಿ ಮತ್ತು ಮಕ್ಕಳ ಎದುರೇ ಗುಂಡೇಟು ತಿಂದು ಮರಣವನ್ನಪ್ಪಿದ್ದಾರೆ. ಉಗ್ರರು ಪ್ರವಾಸಿಗರ ಪೈಕಿ ಪುರುಷರನ್ನು ಪ್ರತ್ಯೇಕಿಸಿ ಅವರ ಧರ್ಮ ಕೇಳಿ, ಕುರಾನ್‌ನ ವಾಕ್ಯಗಳನ್ನು ಪಠಿಸಲು ಹೇಳಿ ಅವರು ಹಿಂದುಗಳು ಎಂದು ದೃಢಪಡಿಸಿಕೊಂಡು ಕುಟುಂಬದವರ ಎದುರೇ ಗುಂಡಿಕ್ಕಿದ್ದಾರೆ. ಬೆಂಗಳೂರು ಮೂಲದ ಟೆಕ್ಕಿ

ಖುಷಿಯಿಂದ ಪ್ರವಾಸಕ್ಕೆ ಹೋದವರು ಹೆಂಡತಿ, ಮಗನ ಎದುರೇ ಉಗ್ರರ ಗುಂಡಿಗೆ ಬಲಿಯಾದರು Read More »

ಜನಿವಾರ ತೆಗೆಸಿದ ಘಟನೆ ಕೋಮುವಾದದ ಅತಿರೇಕ : ಸಂಸದ ಕ್ಯಾ.ಬ್ರಿಜೇಶ್‌ ಚೌಟ

ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಾದ ಆಕ್ರಮಣ ಎಂದು ಆಕ್ರೋಶ ಮಂಗಳೂರು : ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ತೀವ್ರವಾಗಿ ಖಂಡಿಸಿದ್ದು, ಕರ್ನಾಟಕದ ಸರ್ವ ಜನಾಂಗದ ಶಾಂತಿ ತೋಟವನ್ನು ಸರ್ವನಾಶ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ದ್ವೇಷಿಸುತ್ತಿದ್ದು, ವಿದ್ಯಾರ್ಥಿಯ ಭವಿಷ್ಯದ ಹಿತಾಸಕ್ತಿಯನ್ನು ಕಡೆಗಣಿಸಿ ಹಾಗೂ ಹಿಂದೂ ಸಂಪ್ರದಾಯದ ಆಚಾರ ವಿಚಾರಗಳನ್ನು ಅಪಚಾರವೆಸಗಿದೆ ಎಂದು ಹೇಳಿದ್ದಾರೆ. ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿಇಟಿ

ಜನಿವಾರ ತೆಗೆಸಿದ ಘಟನೆ ಕೋಮುವಾದದ ಅತಿರೇಕ : ಸಂಸದ ಕ್ಯಾ.ಬ್ರಿಜೇಶ್‌ ಚೌಟ Read More »

ಶನಿವಾರ ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆ

ವ್ಯಾಟಿಕನ್ ಸಿಟಿ : ಏಪ್ರಿಲ್ 21ರಂದು ನಿಧನರಾಗಿರುವ ಕ್ರೈಸ್ತ ಧರ್ಮದ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ 8 ಗಂಟೆಗೆ ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ನಡೆಯಲಿದೆ ಎಂದು ವ್ಯಾಟಿಕನ್ ತಿಳಿಸಿದೆ.ಪೋಪ್ ಫ್ರಾನ್ಸಿಸ್ ಅವರ ಸಾರ್ವಜನಿಕ ದರ್ಶನ ಬುಧವಾರ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಪ್ರಾರಂಭವಾಗಿದೆ ಎಂದು ಕಾರ್ಡಿನಲ್‌ಗಳು ತಿಳಿಸಿದ್ದಾರೆ. ಅವರ ಶವಪೆಟ್ಟಿಗೆಯನ್ನು ಅವರು ವಾಸಿಸುತ್ತಿದ್ದ ವ್ಯಾಟಿಕನ್ ಹೋಟೆಲ್‌ನಿಂದ ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು.ಪೋಪ್ ಫ್ರಾನ್ಸಿಸ್ ಅವರ ಮರಣದ

ಶನಿವಾರ ಪೋಪ್‌ ಫ್ರಾನ್ಸಿಸ್‌ ಅಂತ್ಯಕ್ರಿಯೆ Read More »

26 ಜನರ ಹತ್ಯೆಗೆ ಜಾಗತಿಕ ಆಕ್ರೋಶ ವ್ಯಕ್ತ; ಸೌದಿ ಪ್ರವಾಸ ಮೊಟಕುಗೊಳಿಸಿ ವಾಪಸಾದ ಮೋದಿ

2019ರ ಪುಲ್ವಾಮಾ ಬಳಿಕ ಅತಿದೊಡ್ಡ ದಾಳಿ – ಧರ್ಮ ಕೇಳಿ ಪ್ರವಾಸಿಗರಿಗೆ ಗುಂಡಿಕ್ಕಿದ ಉಗ್ರರು ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರದ ಪ್ರವಾಸಿಗರ ಸ್ವರ್ಗ ಎಂದು ಕರೆಯಲ್ಪಡುವ ಪಹಲ್ಗಾಮ್‌ ಕಣಿವೆ ನಿನ್ನೆ ಅಕ್ಷರಶಃ ನರಕವಾಗಿ ಬದಲಾಗಿದೆ. ಪ್ರವಾಸಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಇಬ್ಬರು ಕನ್ನಡಿಗರ ಸಹಿತ ಕನಿಷ್ಠ 26 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವು ಮಂದಿ ಚಿಂತಾಜನಕ ಸ್ಥಿತಿಯಲ್ಲಿ ಇದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸೌದಿ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಮೊಟಕುಗೊಳಿಸಿ

26 ಜನರ ಹತ್ಯೆಗೆ ಜಾಗತಿಕ ಆಕ್ರೋಶ ವ್ಯಕ್ತ; ಸೌದಿ ಪ್ರವಾಸ ಮೊಟಕುಗೊಳಿಸಿ ವಾಪಸಾದ ಮೋದಿ Read More »

error: Content is protected !!
Scroll to Top