ಸುದ್ದಿ

RSS ಗೆ ಸ್ಪರ್ಧೆ ನೀಡಲು ಹುಟ್ಟಿದ ಯಾವ ಸಂಘವೂ ಉಳಿದಿಲ್ಲ: ಮೋಹನ್ ಭಾಗವತ್

ಜೈಪುರ: RSS ಗೆ ಸಂಬಂಧಿಸಿದ ಹಾಗೆ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಾತನಾಡಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸ್ಪರ್ಧೆ ನೀಡಲೆಂದು ಹಲವರು ಪ್ರಯತ್ನ ಮಾಡಿ ತಮ್ಮದೇ ಶಾಖೆಯನ್ನು ಸ್ಥಾಪಿಸಿದರು. ಆದರೆ ಅವುಗಳು 15 ದಿನಗಳ ಕಾಲ ಸಹ ಉಳಿಯಲಿಲ್ಲ ಎಂದು ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷಗಳಿಂದ ನಡೆಯುತ್ತಿದೆ. ಇನ್ನೂ ಬೆಳೆಯುತ್ತದೆ. ಇದಕ್ಕೆ ಕಾರಣ ಸ್ವಯಂಸೇವಕರ ಸಮರ್ಪಣಾ ಮನೋಭಾವ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಘ ನಡೆಯುತ್ತಿರುವುದು ಸ್ವಯಂಸೇವಕರ ಭಾವನಾತ್ಮಕ ಶಕ್ತಿ ಮತ್ತು ಜೀವ ಶಕ್ತಿಯ […]

RSS ಗೆ ಸ್ಪರ್ಧೆ ನೀಡಲು ಹುಟ್ಟಿದ ಯಾವ ಸಂಘವೂ ಉಳಿದಿಲ್ಲ: ಮೋಹನ್ ಭಾಗವತ್ Read More »

ಸೌದಿಯಲ್ಲಿ ಭೀಕರ ಬಸ್ ಅಪಘಾತ – 45 ಭಾರತೀಯರ ಸಾವು: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಸೌದಿ ಅರೇಬಿಯಾದ ಮದೀನಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟ 45 ಭಾರತೀಯರ ಸಾವಿಗೆ ಸಂತಾಪ ವ್ಯಕ್ತಪಡಿಸಿ ಪ್ರಧಾನಿ ಮೋದಿ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮದೀನಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ಪ್ರಜೆಗಳು ಸಾವನ್ನಪ್ಪಿದ ವಿಚಾರ ತಿಳಿದು ತೀವ್ರ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಾವು ಸದಾ ಇರುತ್ತೇವೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ರಿಯಾದ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ಜೆಡ್ಡಾದ ಕಾನ್ಸುಲೇಟ್ ಸಾಧ್ಯವಿರುವ ಎಲ್ಲ ಸಹಾಯವನ್ನು

ಸೌದಿಯಲ್ಲಿ ಭೀಕರ ಬಸ್ ಅಪಘಾತ – 45 ಭಾರತೀಯರ ಸಾವು: ಪ್ರಧಾನಿ ಮೋದಿ ಸಂತಾಪ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಪಡ್ನೂರು A, C ಒಕ್ಕೂಟಗಳ ವಾರ್ಷಿಕೋತ್ಸವ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ (ರಿ ) ವಿಟ್ಲ, ವಿಟ್ಲ padnur A ಮತ್ತು C ಒಕ್ಕೂಟಗಳ ವಾರ್ಷಿಕೋತ್ಸವ ಕಾರ್ಯಕ್ರಮವು ವಿಟ್ಲ padnur ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಉದ್ಘಾಟನೆಯನ್ನು ನಾರಾಯಣ ಶೆಟ್ಟಿ ಕುಲ್ಯಾರ್ ನಡೆಸಿ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ಮಂಡಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸುರೇಶ ಗೌಡ, ಯೋಜನೆಯ ನಡೆದು ಬಂದ ಹಾದಿಯ ಬಗ್ಗೆ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ, ಕ್ಷೇತ್ರದ ಕಾರ್ಯಕ್ರಮದ ಬಗ್ಗೆ ಸವಿಸ್ತಾರವಾಗಿ ಮಾತಾಡಿದರು. ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷ ಜಯಂತ್

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಪಡ್ನೂರು A, C ಒಕ್ಕೂಟಗಳ ವಾರ್ಷಿಕೋತ್ಸವ Read More »

ಮಕ್ಕಾದಲ್ಲಿ ಭೀಕರ ಅಪಘಾತ : 42 ಭಾರತೀಯ ಉಮ್ರಾ ಯಾತ್ರಿಕರು ದುರ್ಮರಣ

ಟ್ಯಾಂಕರ್‌ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿ ಉರಿದ ಬಸ್‌ ನವದೆಹಲಿ : ಸೌದಿ ಅರೇಬಿಯಾದಲ್ಲಿ ಮಕ್ಕಾ ಸಮೀಪ ಸೋಮವಾರ ಮುಂಜಾನೆ ಬಸ್‌ ಮತ್ತು ಡೀಸೆಲ್‌ ಟ್ಯಾಂಕರ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 42 ಭಾರತೀಯ ಮಕ್ಕಾ ಯಾತ್ರಿಕರು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಮಕ್ಕಾದಿಂದ ಮದೀನಾಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್‌ ಸೋಮವಾರ ಮುಂಜಾನೆ 1.30ರ ವೇಳೆಗೆ ಮುಫ್ರಿಹತ್‌ ಎಂಬ ಸ್ಥಳದಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದಿಂದ ತೀವ್ರತೆಯಿಂದಾಗಿ ಬಸ್‌ಗೆ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಬಸ್‌ನಲ್ಲಿದ್ದವರೆಲ್ಲ ಹೈದರಾಬಾದ್‌ನ

ಮಕ್ಕಾದಲ್ಲಿ ಭೀಕರ ಅಪಘಾತ : 42 ಭಾರತೀಯ ಉಮ್ರಾ ಯಾತ್ರಿಕರು ದುರ್ಮರಣ Read More »

ಡಾ. ಕೆ. ವಿ. ಚಿದಾನಂದ, ಡಾ. ಕೆ. ವಿ. ರೇಣುಕಾ ಪ್ರಸಾದ್ ಅವರಿಗೆ ವಿರಾಜಪೇಟೆ ಗೌಡ ಸಮುದಾಯದಿಂದ ಸನ್ಮಾನ

ಮಡಿಕೇರಿ: ವಿರಾಜಪೇಟೆಯಲ್ಲಿ ಗೌಡ ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಕೋಟಿ ಬೆಲೆಯ ಜಾಗವನ್ನು ನೀಡಿ ದೊಡ್ಡ ಮಟ್ಟದ ಕೊಡುಗೆ ನೀಡಿದ ಅಕಾಡೆಮಿ ಆಫ್‌ ಲಿಬರಲ್‌ ಎಜ್ಯುಕೇಶನ್‌ನ ಡಾ. ಕೆ.ವಿ. ಚಿದಾನಂದ್ ಮತ್ತು ಡಾ. ಕೆ.ವಿ. ರೇಣುಕಾಪ್ರಸಾದ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಅಕಾಡೆಮಿ ಆಫ್‌ ಲಿಬರಲ್‌ ಎಜ್ಯುಕೇಶನ್‌ನ ಸ್ಥಾಪಕಾಧ್ಯಕ್ಷ ದಿ. ಡಾ.ಕುರುಂಜಿ ವೆಂಕಟ್ರಮಣ ಗೌಡರು ಜಾಗ ಮತ್ತು ಕಟ್ಟಡವೊಂದನ್ನು ಖರೀಸಿಕೊಟ್ಟಿದ್ದರು. ಆದರೆ ಆ ಜಾಗದ ದಾಖಲೆ ಪತ್ರ ವಿರಾಜಪೇಟೆ ಗೌಡ ಸಮಾಜದ ಹೆಸರಿಗೆ ಆಗಿರಲಿಲ್ಲ. ಆ ಜಾಗ ಡಾ.ಚಿದಾನಂದ್

ಡಾ. ಕೆ. ವಿ. ಚಿದಾನಂದ, ಡಾ. ಕೆ. ವಿ. ರೇಣುಕಾ ಪ್ರಸಾದ್ ಅವರಿಗೆ ವಿರಾಜಪೇಟೆ ಗೌಡ ಸಮುದಾಯದಿಂದ ಸನ್ಮಾನ Read More »

ಟೆಕ್ಕಿ ಮಹಿಳೆಯನ್ನೇ ಡಿಜಿಟಲ್‌ ಅರೆಸ್ಟ್‌ ಖೆಡ್ಡಾಕ್ಕೆ ಕೆಡವಿ 31.83 ಕೋ.ರೂ. ದೋಚಿದ ಸೈಬರ್‌ ಖದೀಮರು

ರಾಜ್ಯದ ಅತಿದೊಡ್ಡ ಸೈಬರ್‌ ವಂಚನೆಗೆ ಬಲಿಪಶುವಾದ ವಿದ್ಯಾವಂತ ಮಹಿಳೆ ಬೆಂಗಳೂರು : ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗಿ ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಇದು ಕರ್ನಾಟಕದಲ್ಲೇ ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡ ಗರಿಷ್ಠ ಮೊತ್ತ ಎಂಬುದಾಗಿ ಪೊಲೀಸ್ ಮೂಲಗಳು ಹೇಳಿವೆ. ಇಂದಿರಾನಗರದ ನಿವಾಸಿ 57 ವರ್ಷ ವಯಸ್ಸಿನ ಮಹಿಳಾ ಟೆಕ್ಕಿಯನ್ನು ಸೈಬರ್ ಪಾತಕಿಗಳು ಆರು ತಿಂಗಳಿಗೂ ಹೆಚ್ಚು ಕಾಲ ನಿರಂತರ ಡಿಜಿಟಲ್‌ ಅರೆಟ್ಸ್‌ನಲ್ಲಿರಿಸಿ ಹಣ ದೋಚಿ

ಟೆಕ್ಕಿ ಮಹಿಳೆಯನ್ನೇ ಡಿಜಿಟಲ್‌ ಅರೆಸ್ಟ್‌ ಖೆಡ್ಡಾಕ್ಕೆ ಕೆಡವಿ 31.83 ಕೋ.ರೂ. ದೋಚಿದ ಸೈಬರ್‌ ಖದೀಮರು Read More »

ಶಬರಿಮಲೆ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆ ಆರಂಭ

ಮುಂಜಾನೆ 3 ಗಂಟೆಗೆ ತೆರೆದ ದೇಗುಲದ ಬಾಗಿಲು, ಸಾವಿರಾರು ಭಕ್ತರಿಂದ ಅಯ್ಯಪ್ಪ ದರ್ಶನ ಶಬರಿಮಲೆ : ಈ ವರ್ಷದ ಮಂಡಲ ಮತ್ತು ಮಕರ ವಿಳಕ್ಕು ಯಾತ್ರಾ ಋತುವಿಗಾಗಿ ಶಬರಿಮಲೆ ದೇಗುಲದ ಬಾಗಿಲು ಇಂದು ತೆರೆದಿದೆ. ಅಯ್ಯಪ್ಪ ದೇಗುಲದ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆ ಇಂದಿನಿಂದ ಆರಂಭವಾಗಿದ್ದು, ಇಂದು ನಸುಕಿನ 3 ಗಂಟೆಗೆ ದೇಗುಲದ ಬಾಗಿಲು ತೆರೆಯಲಾಗಿದೆ. ಸಾವಿರಾರು ಭಕ್ತರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಮೇಲ್‌ಶಾಂತಿ ಅರುಣ್‌ಕುಮಾರ್‌ ನಂಬೂದಿರಿಯವರು ಇಂದು ನಸುಕಿನ 3 ಗಂಟೆಗೆ ತಂತ್ರಿ ಮಹೇಶ್‌ ಮೋಹನಾರು ಮತ್ತು

ಶಬರಿಮಲೆ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆ ಆರಂಭ Read More »

ಶ್ರೀ ಪುಣ್ಯ ಕುಮಾರ ದೈವಸ್ಥಾನ ಮಾಡತ್ತಾರು ಕಲ್ಲೇಗ: ವಾರ್ಷಿಕ ನೇಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಕಲ್ಲೇಗ ಮಾಡತ್ತಾರುವಿನ ಶ್ರೀ ಪುಣ್ಯ ಕುಮಾರ ಹಾಗೂ ಧರ್ಮದೈವಗಳ ವರ್ಷಾವಧಿ ನೇಮದ ಜನವರಿ 2 ಮತ್ತು 3 ರಂದು ನಡೆಯಲಿದ್ದು, ಪುಣ್ಯಕುಮಾರ ದೈವಸ್ಥಾನ ಚಾವಡಿಯಲ್ಲಿ ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಅರ್ಚಕ ಕೃಷ್ಣ ಶೇವಿರೆ, ಅಧ್ಯಕ್ಷ ಶ್ರೀಧರ್ ಹೆಗ್ಡೆ ಉಳಿಯ, ಕಾರ್ಯದರ್ಶಿ ಉಮೇಶ್ ಆಚಾರ್ಯ, ಗೌರವಾಧ್ಯಕ್ಷ ಜೀವಂಧರ್ ಜೈನ್, ಮಾಜಿ ಕಾರ್ಯದರ್ಶಿ ನಾರಾಯಣ ಗೌಡ ಕಲ್ಲೇಗ, ಉಪಾಧ್ಯಕ್ಷ ಜೀನಪ್ಪ ಪೂಜಾರಿ ಮುರ, ಖಜಾಂಚಿ ಗಣೇಶ್ ನ್ಯಾಕ್ ಪದ್ಮಡ್ಕ, ಜೊತೆ ಕಾರ್ಯದರ್ಶಿ ಚಂದಪ್ಪ ಕುಲಾಲ್, ಸಮಿತಿಯ

ಶ್ರೀ ಪುಣ್ಯ ಕುಮಾರ ದೈವಸ್ಥಾನ ಮಾಡತ್ತಾರು ಕಲ್ಲೇಗ: ವಾರ್ಷಿಕ ನೇಮದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಬಂಟ್ವಾಳ : ಅಕ್ರಮ ಕಸಾಯಿಖಾನೆಗೆ ದಾಳಿ, ಓರ್ವ ಆರೋಪಿ ಬಂಧನ

ಮನೆಯ ಶೆಡ್‌ನ್ನು ಕಸಾಯಿಖಾನೆಯಾಗಿ ಪರಿವರ್ತಿಸಿ ಜಾನುವಾರು ವಧೆ ಬಂಟ್ವಾಳ : ಇಲ್ಲಿನ ಅರಳ ಗ್ರಾಮದಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಪೊಲೀಸರು ಭಾನುವಾರ ದಾಳಿ ಮಾಡಿ ನಾಲ್ಕು ಜಾನುವಾರುಗಳನ್ನು ರಕ್ಷಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅರಳ ಗ್ರಾಮದ ನಿವಾಸಿ ಮಯ್ಯದ್ದಿ (57) ಬಂಧಿತ ಆರೋಪಿ. ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಮನೆಯ ಆವರಣದಲ್ಲಿರುವ ಶೆಡ್ ಬಳಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.

ಬಂಟ್ವಾಳ : ಅಕ್ರಮ ಕಸಾಯಿಖಾನೆಗೆ ದಾಳಿ, ಓರ್ವ ಆರೋಪಿ ಬಂಧನ Read More »

error: Content is protected !!
Scroll to Top