ಶೈಕ್ಷಣಿಕ

ಅಕ್ಷಯ ಪದವಿಪೂರ್ವ ಕಾಲೇಜಿನಲ್ಲಿ ಉಚಿತ CET ತರಬೇತಿ ಆರಂಭ

ಪುತ್ತೂರು: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ತಲುಪಿಸುವ ನಿಟ್ಟಿನಲ್ಲಿ ಸಂಪ್ಯದಲ್ಲಿರುವ ಅಕ್ಷಯ ಪಿಯು ಕಾಲೇಜು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಕಾಲೇಜು ವತಿಯಿಂದ ಉಚಿತ ಕ್ರ್ಯಾಶ್ ಕೋರ್ಸ್ಗಳನ್ನು ಆರಂಭಿಸಲಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಈ ಸಂಸ್ಥೆ, ಸ್ಪರ್ಧಾತ್ಮಕ ಪರೀಕ್ಷೆಗಳಾದ CET, NEET ಹಾಗೂ IIT-JEEಗೆ ವಿಶೇಷ ತರಬೇತಿ ನೀಡುತ್ತಿದೆ. ಶ್ರೀ ಚೈತನ್ಯ ಇನ್‌ಸ್ಟಿಟ್ಯೂಷನ್ […]

ಅಕ್ಷಯ ಪದವಿಪೂರ್ವ ಕಾಲೇಜಿನಲ್ಲಿ ಉಚಿತ CET ತರಬೇತಿ ಆರಂಭ Read More »

SSLC ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋದ ಬಡ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಿದ ಅಧಿಕಾರಿಗಳು

ಗದಗ: ಬಡತನದ ಕಾರಣಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದ್ದರೂ ಹೋಗದೆ ದ್ರಾಕ್ಷಿ ತೋಟದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆತಂದು ಅಧಿಕಾರಿಗಳು ಪರೀಕ್ಷೆ ಬರೆಸಿದ ಘಟನೆ ಮುಂಡರಗಿಯ ಬರ್ಡೂರಿನಲ್ಲಿ ನಡೆದಿದೆ. ಪಲ್ಲವಿ ಎಂಬ ಬಾಲಕಿ ಈ ಬಾರಿ ಹತ್ತನೇ ತರಗತಿ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಮನೆಯಲ್ಲಿ ತೀರದ ಬಡತನದ ಕಾರಣಕ್ಕೆ ಆಕೆ ತನ್ನ ಪರೀಕ್ಷೆಗೂ ಹೋಗದೆ ದ್ರಾಕ್ಷಿ ತೋಟಕ್ಕೆ ದಿನಗೂಲಿ ಕೆಲಸಕ್ಕೆ ಹೋಗಿದ್ದಳು. ಅವಳ ಪರಿಸ್ಥಿತಿ ಅರಿತ ಅಧಿಕಾರಿಗಳು ಆಕೆ ಕೆಲಸ ಮಾಡುತ್ತಿದ್ದಲ್ಲಿಗೆ ತೆರಳಿ, ಆಕೆಯ ಪೋಷಕರ ಮನವೊಲಿಸಿ

SSLC ಪರೀಕ್ಷೆ ಬಿಟ್ಟು ಕೂಲಿ ಕೆಲಸಕ್ಕೆ ಹೋದ ಬಡ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಿದ ಅಧಿಕಾರಿಗಳು Read More »

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಜ್ಞಾನದೀಪ ನವೋದಯ ತರಬೇತಿ ಕೇಂದ್ರದ 16 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಜನವರಿ ತಿಂಗಳಲ್ಲಿ ನಡೆಸಿದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಒಟ್ಟು 16 ವಿದ್ಯಾರ್ಥಿಗಳು ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಬೈರಮೂಲೆ ಸುಬ್ಬಪ್ಪ ಪಾಟಾಳಿ ಮತ್ತು ವೇದಾವತಿ ಎ ದಂಪತಿಗಳ ಪುತ್ರ ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಬಿ ಎಸ್ ಸುದರ್ಶನ್ ಐವತೋಕ್ಲು ಗ್ರಾಮದ ಕಮಿಲ

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಜ್ಞಾನದೀಪ ನವೋದಯ ತರಬೇತಿ ಕೇಂದ್ರದ 16 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆ Read More »

ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಚಾಲನೆ

ಸವಣೂರು: ಎಸ್ ಎಸ್ ಎಲ್ ಸಿ 2026 ಪರೀಕ್ಷಾ ಕೇಂದ್ರವಾದ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈ ಕೆ. ಅವರು ದೀಪ ಪ್ರಜ್ವಲನೆಯ ಮೂಲಕ ಪರೀಕ್ಷೆಗೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪರೀಕ್ಷಾ ಅಧೀಕ್ಷರ ಶಿವಕುಮಾರ್, ಉಪಧೀಕ್ಷಕಿ ಲಕ್ಷ್ಮೀ, ಪ್ರಶ್ನೆಪತ್ರಿಕೆ ಅಧೀಕ್ಷಕ ಸತೀಶ್ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಉಪಸ್ಥಿತರಿದ್ದರು.

ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಚಾಲನೆ Read More »

ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವ್ಯೂಹ ಭಿತ್ತಿಪತ್ರ ಅನಾವರಣ

ಸಂಪ್ಯ:ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಇನ್ವಿಕ್ತ ವಾಣಿಜ್ಯ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ‘ವಾಣಿಜ್ಯ ವ್ಯೂಹ’ ಎಂಬ ಶಿರೋನಾಮೆಯಲ್ಲಿ ಭಿತ್ತಿಪತ್ರದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವನ್ನು ಕೇಶವ್ ಅಮೈ (ಆಡಳಿತ ನಿರ್ದೇಶಕರು ಎಸ್.ಆರ್.ಕೆ. ಲ್ಯಾಡರ್ಸ್ ಪುತ್ತೂರು) ಇವರು ಉದ್ಘಾಟಿಸಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಎಲ್ಲಿದ್ದರು ತಮ್ಮ ಬದುಕನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತಾರೆ. ಸಿಕ್ಕ ಅವಕಾಶಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಜೀವನದಲ್ಲಿ ಯಶಸ್ವಿಯನ್ನು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಮುಖ್ಯ ಅತಿಥಿ ಡಾ. ಅಕ್ಷಯ್ (ಕಾರ್ಯದರ್ಶಿ ಅಕ್ಷಯ ಸಮೂಹ

ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವ್ಯೂಹ ಭಿತ್ತಿಪತ್ರ ಅನಾವರಣ Read More »

ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಸರ್ವ ಸಿದ್ಧತೆ

ಪರೀಕ್ಷೆ ಬರೆಯಲಿದ್ದಾರೆ 9 ಲಕ್ಷ ವಿದ್ಯಾರ್ಥಿಗಳು ಬೆಂಗಳೂರು: ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ರಾಜ್ಯದಾದ್ಯಂತ ಆರಂಭವಾಗಲಿದೆ. ಶಿಕ್ಷಣ ಇಲಾಖೆ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ರಾಜ್ಯದಲ್ಲಿ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಜೆರಾಕ್ಸ್, ಸೈಬರ್/ಕಂಪ್ಯೂಟರ್ ಸೆಂಟರ್ ಅಂಗಡಿಗಳನ್ನು ಮುಚ್ಚುವಂತೆ ಪ್ರತಿಬಂಧಕಾಜ್ಞೆಯನ್ನು

ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಸರ್ವ ಸಿದ್ಧತೆ Read More »

ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲ‌ ಮಾಧ್ಯಮದ ಇಬ್ಬರು ವಿದ್ಯಾರ್ಥಿಗಳು NSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆ

ಉಡುಪಿ: ಕುಂಜಿಬೆಟ್ಟುವಿನ ಟಿ. ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ (ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲದ ಘಟಕ)ದ ಇಬ್ಬರು ವಿದ್ಯಾರ್ಥಿಗಳು 2025–26ನೇ ಸಾಲಿನ ಪ್ರತಿಷ್ಠಿತ INSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆಯಾಗಿದ್ದಾರೆ. ಈ ಯೋಜನೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಮುಖ ಯೋಜನೆಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಅದರ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನೋವೇಶನ್ ಫೌಂಡೇಶನ್–ಇಂಡಿಯಾ (NIF) ಸಹಯೋಗದಲ್ಲಿ ಜಾರಿಗೆ ತರಲಾಗುತ್ತಿದೆ. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ 9ನೇ ತರಗತಿಯ ಅವನೀಶ್ ಕೆ.

ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲ‌ ಮಾಧ್ಯಮದ ಇಬ್ಬರು ವಿದ್ಯಾರ್ಥಿಗಳು NSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆ Read More »

ವಿಜೃಂಭಣೆಯಿಂದ ನಡೆದ ಮಕ್ಕಳ ಮನೆಯ ವಾರ್ಷಿಕೋತ್ಸವ ‘ವರ್ಷ ಸಂಭ್ರಮ 2026’

ಪುತ್ತೂರು: ಪ್ರಣತಿ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಮಕ್ಕಳ ಮನೆಯ ವಾರ್ಷಿಕೋತ್ಸವ ‘ವರ್ಷ ಸಂಭ್ರಮ 2026’ ಪುತ್ತೂರಿನ ಟೌನ್‌ ಹಾಲ್‌ನಲ್ಲಿ ನಡೆಯಿತು. ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು, ಹಾಗೆಯೇ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀಧರ ರೈ ಮತ್ತು ಮಕ್ಕಳ ಮನೆಯ ಮೂಲ ಸಂಸ್ಥಾಪಕ ಮಹಾಲಿಂಗೇಶ್ವರ ಭಟ್ ದಿವ್ಯ ಹಸ್ತದಿಂದ‌‌ ಉದ್ಘಾಟನೆ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಧರ್ ರೈ ಅವರು ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಜನ್ವಿ, ದುತಿ, ಆರ್ವಿ, ಮಾನುಶಿ, ವೈಶ್ವಿ ಕಾರ್ಯಕ್ರಮದ ಮೊದಲಿನ ಅಂಗವಾದ

ವಿಜೃಂಭಣೆಯಿಂದ ನಡೆದ ಮಕ್ಕಳ ಮನೆಯ ವಾರ್ಷಿಕೋತ್ಸವ ‘ವರ್ಷ ಸಂಭ್ರಮ 2026’ Read More »

ವೃತ್ತಿ ಬದುಕಿನ ಯಶಸ್ಸಿಗೆ ಸಂದರ್ಶನ ಕೌಶಲ್ಯ ಅಗತ್ಯ: ಸೀತಾರಾಮ ಕೇವಳ

ಬೆಳ್ಳಾರೆ ಜ್ಞಾನದೀಪದಲ್ಲಿ ಸಂದರ್ಶನ ಕೌಶಲ್ಯ ಕಾರ್ಯಾಗಾರ ಭವಿಷ್ಯ ನಿರ್ಮಾಣಕ್ಕೆ ಸಂದರ್ಶನ ಕೌಶಲ್ಯ ತರಬೇತಿ ಸಹಕಾರಿಯಾಗಿದ್ದು, ಸಂದರ್ಶನ ಎದುರಿಸುವ ಗುಟ್ಟು ತಿಳಿದಾಗ ಮಾತ್ರ ಉತ್ತಮ ಉದ್ಯೋಗದ ಕನಸು ನನಸಾಗಿಸಿಕೊಳ್ಳಲು ಸಾಧ್ಯ ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ಸೀತಾರಾಮ ಕೇವಳ ಹೇಳಿದರು. ಅವರುಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವತಿಯಿಂದ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಒಂದು ದಿನದ ಸಂದರ್ಶನ ಕೌಶಲ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿ ನೀಡಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ. ಕ ಜಿಲ್ಲಾಧ್ಯಕ್ಷ

ವೃತ್ತಿ ಬದುಕಿನ ಯಶಸ್ಸಿಗೆ ಸಂದರ್ಶನ ಕೌಶಲ್ಯ ಅಗತ್ಯ: ಸೀತಾರಾಮ ಕೇವಳ Read More »

ಸುಳ್ಯ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಉಮೇಶ್ ರವರಿಗೆ ‘ ‘ವಿದ್ಯಾರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲಾ ಸಂಘದ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶ ಮತ್ತು ಗಣ್ಯರಿಗೆ ಗೌರವ ಅರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ – 2026 ಸಮಾರಂಭದಲ್ಲಿ ಸುಳ್ಯದ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಉಮೇಶ್ ಅವರಿಗೆ ‘ ‘ವಿದ್ಯಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಮತಿ ದಯಾಮಣಿ

ಸುಳ್ಯ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಉಮೇಶ್ ರವರಿಗೆ ‘ ‘ವಿದ್ಯಾರತ್ನ’ ಪ್ರಶಸ್ತಿ ಪ್ರದಾನ Read More »

error: Content is protected !!
Scroll to Top