ನಿಧನ

ಅಟೋ ಚಾಲಕ ಕಮಲಾಕ್ಷ ನಿಧನ

ಕಡಬ : ಕಡಬ ತಾಲೂಕಿನ ಆಲಂಕಾರು ಗ್ರಾಮದ ನೆಕ್ಕಿಲಾಡಿ ನಿವಾಸಿ ಅಟೋ ಚಾಲಕ ಕಮಲಾಕ್ಷ ಗೌಡ(44) ಅಲ್ಪ ಕಾಲದ ಅಸೌಖ್ಯದಿಂದ ಗುರವಾರ ರಾತ್ರಿ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೂರು  ದಿನಗಳ  ಹಿಂದೆ ಬ್ರೈನ್ ಎಮರೇಜ್‌ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಮಲಾಕ್ಷ ಗೌಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜೀವನೋಪಾಯಕ್ಕೆ  ಆಲಂಕಾರಿನಲ್ಲಿ ಅಟೋ ಚಾಲನೆ ಮಡುತ್ತಿದ್ದ  ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅಟೋ ಚಾಲಕ ಕಮಲಾಕ್ಷ ನಿಧನ Read More »

ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಜಯರಾಮ ಕೆ.ನಿಧನ

ಪುತ್ತೂರು : ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಜಯರಾಮ ಕೆ.ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಪೆರ್ಲಂಪಾಡಿ ನಿವಾಸಿಯಾಗಿರುವ ಜಯರಾಮ ಕೆ.ಅವರು ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪಾಲ್ತಾಡಿ ಶಾಖಾವ್ಯವಸ್ಥಾಪಕರಾಗಿದ್ದು, ಬಳಿಕ ಪೆರ್ಲಂಪಾಡಿಯಲ್ಲಿರುವ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಅಸೌಖ್ಯದಿಂದಿದ್ದ ಜಯರಾಮ ಅವರು ಆರೋಗ್ಯದಲ್ಲಿ ಚೇತರಿಕೆಗೊಂಡು ಕರ್ತವ್ಯದಲ್ಲಿದ್ದರು.ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೌಮ್ಯಸ್ವಭಾವದ ವ್ಯಕ್ತಿತ್ವದ ಜಯರಾಮ ಕೆ.ಅವರು ಬ್ಯಾಂಕಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದರು.

ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಜಯರಾಮ ಕೆ.ನಿಧನ Read More »

ಮಹಾಲಿಂಗೇಶ್ವರ ಭಟ್ ನಿಧನ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾಸುಕಿ ನಾಗನ ಸನ್ನಿಧಿಯಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಕೋಟೆ ಮಹಾಲಿಂಗೇಶ್ವರ ಭಟ್ (58) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಬೆಳ್ಳಾರೆ ಕೋಟೆ ಮನೆತನದವರಾದ ಮಹಾಲಿಂಗೇಶ್ವರ ಭಟ್ ಅವರು ಪುತ್ತೂರು ಕೊಡಿಪ್ಪಾಡಿ ಸಮೀಪದ ಬಿರಾವು ಎಂಬಲ್ಲಿ ವಾಸ್ತವ್ಯ ಹೂಡಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮಹಾಲಿಂಗೇಶ್ವರ ಭಟ್ ನಿಧನ Read More »

ಕೌಡಿಚ್ಚಾರು ನಿವಾಸಿ ಕವಿತಾ ನಿಧನ

ಪುತ್ತೂರು: ಕೌಡಿಚ್ಚಾರು ನಿವಾಸಿ ಕವಿತಾ (30) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮೂಲತಃ ಕೆದಂಬಾಡಿಯವರಾದ ಅವರು ವಿವಾಹದ ಬಳಿಕ ಅರಿಯಡ್ಕ ಗ್ರಾಮದ ಕೌಡಿಚ್ಚಾರಿನಲ್ಲಿ ವಾಸವಿದ್ದರು.

ಕೌಡಿಚ್ಚಾರು ನಿವಾಸಿ ಕವಿತಾ ನಿಧನ Read More »

ಚಿಕ್ಕಪುತ್ತೂರು ನಿವಾಸಿ ಮಾಲತಿ ನಿಧನ

ಪುತ್ತೂರು: ಚಿಕ್ಕಪುತ್ತೂರು ನಿವಾಸಿ ಚೇತನ್ ಕುಮಾರ್ ಪತ್ನಿ ಮಾಲತಿ (43) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು. ಕಳೆದ 15 ವರ್ಷಗಳಿಂದ ನೆಲ್ಲಿಕಟ್ಟೆ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಚಿಕ್ಕಪುತ್ತೂರು ನಿವಾಸಿ ಮಾಲತಿ ನಿಧನ Read More »

ಪೆರಿಯಡ್ಕ ಜಕಾರಿಯಾ ನಿಧನ

ಉಪ್ಪಿನಂಗಡಿ: ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ ಜಕಾರಿಯಾ (52) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾಗಿದ್ದಾರೆ. ಪೆರಿಯಡ್ಕ ಎಸ್‍ ಕೆಎಸ್‍ ಎಸ್‍ ಎಫ್ ಘಟಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಅವರ ತಮ್ಮ ಯು.ಕೆ.ಹಮೀದ್ ಅವರ ಸಾವಿನಿಂದ ಕಂಗೆಟ್ಟಿದ್ದರು. ಮೃತರು ತಾಯಿ, ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಹಾಗೂ ಸಹೋದರನನ್ನು ಅಗಲಿದ್ದಾರೆ.

ಪೆರಿಯಡ್ಕ ಜಕಾರಿಯಾ ನಿಧನ Read More »

ಸ್ವಾಗತ್ ಬೇಕರಿ ಮಾಲಕ ಜಯರಾಮ್ ಶೆಟ್ಟಿ ನಿಧನ

ಪುತ್ತೂರು: ಇಲ್ಲಿಯ  ಅರುಣಾ ಥಿಯೇಟರ್ ಬಳಿಯ ಸ್ವಾಗತ್ ಬೇಕರಿ ಮಾಲಕ, ಸಾಮೆತ್ತಡ್ಕ ನಿವಾಸಿ ಜಯರಾಮ್ ಶೆಟ್ಟಿ (72) ಗುರುವಾರ ನಿಧನರಾಗಿದ್ದಾರೆ. ಅವರು ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಮಕ್ಕಳು, ಅಳಿಯ, ಸೊಸೆ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಸ್ವಾಗತ್ ಬೇಕರಿ ಮಾಲಕ ಜಯರಾಮ್ ಶೆಟ್ಟಿ ನಿಧನ Read More »

ಗೋಪಾಲಕೃಷ್ಣ ಶಗ್ರಿತ್ತಾಯ ನಿಧನ

ಪುತ್ತೂರು: ಶಾಂತಿಗೋಡು ಪುಂಡಿಕಾಯಿ ಯ ಜ್ಯೋತಿಷಿ, ನಿವೃತ್ತ ಶಿಕ್ಷಕ, ಮಕ್ಕಳ ಸಾಹಿತಿ,ಯಕ್ಷಗಾನ ಅರ್ಥಧಾರಿ,ಯಕ್ಷಗಾನ ಮಕ್ಕಳ ಮೇಳ ಸಂಘಟಕ ,ಕನ್ನಡ ರತ್ನ  ಗೋಪಾಲಕೃಷ್ಣ ಶಗ್ರಿತ್ತಾಯ (87) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಬೆಳಗ್ಗೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ರಾಮಕುಂಜ ಓರಿಯಂಟಲ್ ಹೈಸ್ಕೂಲ್ ನಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದ ಅವರು ನಂತರ ಪಡುಬೆಟ್ಟು ,ಹೊಸ್ತೋಟ, ಶಿರಾಡಿ ಮುಂತಾದ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಶಿಕ್ಷಕ ವೃತ್ತಿ ನಡೆಸಿ ನಿವೃತ್ತರಾಗಿದ್ದರು. ಯಕ್ಷಗಾನ ರಂಗದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಹನ್ನೆರಡು ವರ್ಷದೊಳಗಿನ ಬಾಲಕಲಾವಿದರುಗಳನ್ನೇ ಸಂಘಟಿಸಿ

ಗೋಪಾಲಕೃಷ್ಣ ಶಗ್ರಿತ್ತಾಯ ನಿಧನ Read More »

ನಿವೃತ್ತ ಎ.ಎಸ್.ಐ., ಆರ್ಯಾಪು ಗ್ರಾ.ಪಂ. ಸದಸ್ಯ ರುಕ್ಮಯ್ಯ ಮೂಲ್ಯ ನಿಧನ

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ, ನಿವೃತ್ತ ಎ.ಎಸ್.ಐ., ವಳತ್ತಡ್ಕ ನಿವಾಸಿ ರುಕ್ಮಯ್ಯ ಮೂಲ್ಯ (62 ವ.)ರವರು ಮಂಗಳವಾರ ಮಧ್ಯಾಹ್ನ‌ ಹೃದಯಾಘಾತದಿಂದ ನಿಧನರಾದರು. ಅವರಿಗೆ ಮಧ್ಯಾಹ್ನ‌ ಮನೆಯಲ್ಲಿ ಲಘು ಹೃದಯ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ನಿವೃತ್ತ ಎ.ಎಸ್.ಐ., ಆರ್ಯಾಪು ಗ್ರಾ.ಪಂ. ಸದಸ್ಯ ರುಕ್ಮಯ್ಯ ಮೂಲ್ಯ ನಿಧನ Read More »

SSLC ಮರುಮೌಲ್ಯಮಾಪನದಲ್ಲಿ 7 ಹೆಚ್ಚುವರಿ ಅಂಕ | 615 ಅಂಕ ಪಡೆದುಕೊಂಡ ಶ್ರಾವ್ಯ ಕೆ.ಎಚ್. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ದ್ವಿತೀಯ

ಪುತ್ತೂರು: SSLC  ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದ ಶ್ರಾವ್ಯ ಕೆ.ಎಚ್. 615 ಅಂಕ ಪಡೆದುಕೊಂಡಿದ್ದಾರೆ. ಈ ಹಿಂದೆ 608 ಅಂಕ ಪಡೆದಿದ್ದ ಶ್ರಾವ್ಯ ಕೆ.ಎಚ್. ಅವರು ಮರುಮೌಲ್ಯಮಾಪನದಲ್ಲಿ 7 ಹೆಚ್ಚುವರಿ ಅಂಕ ಪಡೆದುಕೊಂಡಿದ್ದಾರೆ. ಇದೀಗ ಒಟ್ಟು 615 ಅಂಕ ಪಡೆದುಕೊಳ್ಳುವ ಮೂಲಕ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ತಿಳಿಸಿದ್ದಾರೆ. ಇವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಹುದೇರಿ ಕುಶಾಲಪ್ಪ

SSLC ಮರುಮೌಲ್ಯಮಾಪನದಲ್ಲಿ 7 ಹೆಚ್ಚುವರಿ ಅಂಕ | 615 ಅಂಕ ಪಡೆದುಕೊಂಡ ಶ್ರಾವ್ಯ ಕೆ.ಎಚ್. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ದ್ವಿತೀಯ Read More »

error: Content is protected !!
Scroll to Top