ನಿಧನ

ಉಜಿರೆ ಸುವರ್ಣಾ ಹೆಗ್ಡೆ ನಿಧನ

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಕಾಲೇಜು ಪತ್ರಿಕೋಧ್ಯಮ ವಿ‌ಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗ್ಡೆ ಅವರ ಪತ್ನಿ ಸುವರ್ಣಾ ಹೆಗ್ಡೆ (49) ಸೋಮವಾರ ಹೃದಯಾಘಾತದಿಂದ ಉಜಿರೆ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.  ಮೂಲತಃ ಹೊನ್ನಾವರದವರಾದ ಪ್ರಸ್ತುತ ಉಜಿರೆ ಉಂಡ್ಯಾಪು ನಗರದಲ್ಲಿ ನೆಲೆಸಿದ್ದರು. ಮೃತರು ಪತಿ, ಪುತ್ರ, ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಉಜಿರೆ ಸುವರ್ಣಾ ಹೆಗ್ಡೆ ನಿಧನ Read More »

ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜನಾರ್ದನ್ ಕುಲಾಲ್ ನಿಧನ | ರೈಲಿನಲ್ಲಿ ಹೃದಯಾಘಾತ

ಬಂಟ್ವಾಳ: ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ, ಬಂಟ್ವಾಳ ಬೈಪಾಸ್ ನಿವಾಸಿ ಜನಾರ್ದನ್ ಕುಲಾಲ್ (75) ಅವರು ರೈಲಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ಹಾಸನದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜುಲೈ 2ರ ರವಿವಾರ ರಾತ್ರಿ ಘಟನೆ ನಡೆದಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಜನಾರ್ದನ ಅವರು ತಮ್ಮ ಕುಟುಂಬದ ಜತೆ ರವಿವಾರ ಸಂಜೆಯ ರೈಲಿನ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಹಾಸನ ತಲುಪುತ್ತಿದ್ದಂತೆ ಅನಾರೋಗ್ಯ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಹಾಸನ ರೈಲು ನಿಲ್ದಾಣದಿಂದ ಹಾಸನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷಿಸಿದ

ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜನಾರ್ದನ್ ಕುಲಾಲ್ ನಿಧನ | ರೈಲಿನಲ್ಲಿ ಹೃದಯಾಘಾತ Read More »

ಸ್ಯಾಕ್ಸೋಫೋನ್ ಕಲಾವಿದ ಮೂಡಾಯೂರು ಶ್ರೀಧರ ದೇವಾಡಿಗ ನಿಧನ

ಪುತ್ತೂರು: ಸ್ಯಾಕ್ಸೋಫೋನ್ ಕಲಾವಿದ ಮೂಡಾಯೂರು ಶ್ರೀಧರ ದೇವಾಡಿಗ (64) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ 50 ವರ್ಷಗಳಿಂದ ಸ್ಯಾಕ್ಸೋಫೋನ್ ವಾದನ ಸೇವೆ ಮಾಡಿಕೊಂಡು ಬಂದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಮೃತರ ಮನೆಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸ್ಯಾಕ್ಸೋಫೋನ್ ವಾದಕ ಪಿ.ಕೆ.ಗಣೇಶ್ ಮತ್ತಿತರ ಗಣ್ಯರು ತೆರಳಿ ಸಂತಾಪ ಸೂಚಿಸಿದರು.

ಸ್ಯಾಕ್ಸೋಫೋನ್ ಕಲಾವಿದ ಮೂಡಾಯೂರು ಶ್ರೀಧರ ದೇವಾಡಿಗ ನಿಧನ Read More »

ಗಣೇಶ್ ಆಚಾರ್ಯ ನಿಧನ

ಪುತ್ತೂರು: ಉರ್ಲಾಂಡಿ ನಿವಾಸಿ ಗಣೇಶ್ ಆಚಾರ್ಯ (63) ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಇಲ್ಲಿಯ ಬ್ಲಡ್ ಬ್ಯಾಂಕ್ ಬಿಲ್ಡಿಂಗ್ ನಲ್ಲಿ ಮಂಗಳಾ ಝೆರಾಕ್ಸ್ ಸೆಂಟರ್ ನಡೆಸುತ್ತಿದ್ದರು. ಮೃತರು ಪತ್ನಿ,  ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಗಣೇಶ್ ಆಚಾರ್ಯ ನಿಧನ Read More »

ಸೀತಾರಾಮ ಶೆಣೈ ನಿಧನ

ಪುತ್ತೂರು: ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಕಚೇರಿಯ ನಿವೃತ್ತ ಅಧೀಕ್ಷಕ ಸೀತಾರಾಮ ಶೆಣೈ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. 1965 ರಲ್ಲಿ ಕಾಲೇಜಿನಲ್ಲಿ ಅಧ್ಯಾಪಕೇತರ ಸಿಬ್ಬಂದಿಯಾಗಿ ಸೇರ್ಪಡೆಗೊಂಡಿದ್ದು, 1967 ರಲ್ಲಿ ಕಚೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ 2001 ರಲ್ಲಿ ನಿವೃತ್ತರಾಗಿದ್ದರು. ಅವರ ನಿಧನಕ್ಕೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.

ಸೀತಾರಾಮ ಶೆಣೈ ನಿಧನ Read More »

ದೊಲ್ಲ ಯಾನೆ ಕೊರಗಪ್ಪ ಗೌಡ ನಿಧನ

ಕಡಬ: ತಾಲೂಕಿನ ಕೊಯಿಲ ಗ್ರಾಮದ ಕಾಯರಟ್ಟ ನಿವಾಸಿ ದೊಲ್ಲ ಯಾನೆ ಕೊರಗಪ್ಪ ಗೌಡ(96) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿಯರನ್ನು ಅಗಲಿದ್ದಾರೆ.

ದೊಲ್ಲ ಯಾನೆ ಕೊರಗಪ್ಪ ಗೌಡ ನಿಧನ Read More »

ಹಿರಿಯ ನ್ಯಾಯವಾದಿ ಚಂದ್ರಶೇಖರ ಮುಂಗ್ಲಿಮನೆ ನಿಧನ

ಪುತ್ತೂರು: ಹಿರಿಯ ನ್ಯಾಯವಾದಿ, ಪುತ್ತೂರು ಒಕ್ಕಲಿಗ ಗೌಡ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಮುಂಗ್ಲಿಮನೆ (81) ಹೃದಯಾಘಾತದಿಂದ ಗುರುವಾರ ನಿಧನರಾದರು. ಕೊಂಬೆಟ್ಟು ಶ್ರಿ ಮಹಾಲಿಂಗೇಶ್ವರ ಐಟಿಐ ನಿರ್ದೇಶಕರಾಗಿದ್ದ ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನಿಂದ ಬಂದಿರುವ ಪುತ್ರಿಯನ್ನು ಬಸ್ ನಿಲ್ದಾಣದಿಂದ ದರ್ಬೆಯಲ್ಲಿರುವ ಮನೆಗೆ ಕಾರಿನಲ್ಲಿ ಕರೆದುಕೊಂಡು ಬಂದ ಬಳಿಕ ಮನೆಯಲ್ಲಿ  ವಿಶ್ವಾಂತ್ರಿ ಪಡೆಯುತ್ತಿದ್ದ ಸಂದರ್ಭ ಹೃದಯಾಘಾತವಾಗಿ ನಿಧನರಾದರು.. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಮಾಜಿ ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ

ಹಿರಿಯ ನ್ಯಾಯವಾದಿ ಚಂದ್ರಶೇಖರ ಮುಂಗ್ಲಿಮನೆ ನಿಧನ Read More »

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಅರ್ಚಕ ಕಶೆಕೋಡಿ ಸೀತಾರಾಮ ನೂರಿತ್ತಾಯ ನಿಧನ

ಮಾಣಿ: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಅರ್ಚಕ ಕಶೆಕೋಡಿ ನಿವಾಸಿ ಸೀತಾರಾಮ ನೂರಿತ್ತಾಯ (86) ಬುಧವಾರ ನಿಧನರಾದರು. ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ 55 ವರ್ಷಗಳ ಕಾಲ ಪ್ರಧಾನ ಅರ್ಚಕರಾಗಿ ಪೌರೋಹಿತ್ಯ ಪೂರೈಸಿರುವ ಅವರು ಕೃಷಿಕರಾಗಿದ್ದರು. ಪೌರೋಹಿತ್ಯ ಸೇವೆಯಲ್ಲಿ ಸತ್ಯ, ನಿಷ್ಠೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದರು. ಮಾಣಿ ಗ್ರಾಮದಲ್ಲಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ, ದೈವಗಳ ನೇಮೋತ್ಸವಗಳಲ್ಲಿ ಸಕ್ರಿಯರಾಗಿ ಪೂಜಾ ಕೈಂಕರ್ಯಗಳೊಂದಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆಯೂ ಚಿಂತನೆ ಮಾಡಿಕೊಂಡು

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಅರ್ಚಕ ಕಶೆಕೋಡಿ ಸೀತಾರಾಮ ನೂರಿತ್ತಾಯ ನಿಧನ Read More »

ಜಯಂತ ಶೆಟ್ಟಿ ಕೇರ್ಪಳ ನಿಧನ

ಸುಳ್ಯ : ಹಳೆಗೇಟು ಪ್ರಶಾಂತ್ ಬಾರ್ & ರೆಸ್ಟೋರೆಂಟ್ ಮಾಲಕ ಜಯಂತ್ ಶೆಟ್ಟಿ ಕೇರ್ಪಳ (60) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಜಯಂತ್ ಶೆಟ್ಟಿಯವರು ಗೃಹರಕ್ಷಕದಳದ ಘಟಕಾಧಿಕಾರಿಯಾಗಿ, ಲಯುನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಜಯಂತ ಶೆಟ್ಟಿ ಕೇರ್ಪಳ ನಿಧನ Read More »

ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ ನಿಧನ

ಪುತ್ತೂರು: ಉಪ್ಪಿನಂಗಡಿ ಮಾಲೀಕ್ ಜುಮ್ಮಾ ಮಸೀದಿ ಅಧ್ಯಕ್ಷ, ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ (49) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರನ್ನು ಕೆಲ ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಮಾಜಿಕ, ಧಾರ್ಮಿಕ ಸಂಘಟನೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಉಪ್ಪಿನಂಗಡಿ ಗ್ರಾಪಂ ಮಾಜಿ ಸದಸ್ಯರಾಗಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿ, ಪುತ್ತೂರು ತಾಲೂಕು ಜಮಾಅತ್ ಉಪಾಧ್ಯಕ್ಷರಾಗಿ, ಮಾಡನ್ನೂರು ಹುದಾ ಇಸ್ಲಾಮಿಕ್ ಅಕಾಡೆಮಿ ಉಪಾಧ್ಯಕ್ಷರಾಗಿ, ಕಮ್ಮಾಡಿ

ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ ನಿಧನ Read More »

error: Content is protected !!
Scroll to Top