ನಿಧನ

ಭೋಜ್‌ಪುರಿ ಡ್ರೀಮ್ ಗರ್ಲ್‌ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ

ವಾರಣಾಸಿ : ಭೋಜ್‌ಪುರಿ ನಟಿ ಅಕಾಂಕ್ಷಾ ದುಬೆ ಅವರು ವಾರಣಾಸಿಯ ಖಾಸಗಿ ಹೊಟೇಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಭೋಜ್‌ಪುರಿ ಚಿತ್ರರಂಗದ ಡ್ರೀಮ್ ಗರ್ಲ್‌ ಎಂದೇ ಖ್ಯಾತರಾಗಿದ್ದ 25 ವರ್ಷದ ಆಕಾಂಕ್ಷಾ ದುಬೆ ಶೂಟಿಂಗ್ ಹಿನ್ನೆಲೆಯಲ್ಲಿ ವಾರಣಾಸಿಗೆ ಆಗಮಿಸಿದ್ದರು. ಶೂಟಿಂಗ್ ಮುಗಿದ ಬಳಿಕ ಹೊಟೇಲ್‌ಗೆ ಹೋಗಿದ್ದು, ಭಾನುವಾರ ಬೆಳಗ್ಗೆ ಅವರಿದ್ದ ಕೊಠಡಿ ಬಾಗಿಲು ತೆರೆದಾಗ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇನ್ನು ಮೃತದೇಹ ಪತ್ತೆಯಾಗುವುದಕ್ಕೆ ಕೆಲವೇ ಗಂಟೆಗಳಿಗೆ ಮುನ್ನ ಭೋಜ್‌ಪುರಿಯ ಹಿಲೋರೆ ಮಾರೆ ಹಾಡಿಗೆ ರೀಲ್ಸ್ ಮಾಡಿ […]

ಭೋಜ್‌ಪುರಿ ಡ್ರೀಮ್ ಗರ್ಲ್‌ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ Read More »

ಹೈದರಾಬಾದ್‌ : ವಿಷಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಹೈದರಾಬಾದ್‌: ಇಲ್ಲಿನ ಕುಷಯಗುಡ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಶನಿವಾರ ಮಧ್ಯಾಹ್ನ ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರನ್ನು ಸತೀಶ್, ಅವರ ಪತ್ನಿ ವೇದಾ ಮತ್ತು ಅವರ ಇಬ್ಬರು ಮಕ್ಕಳಾದ ನಿಶಿಕೇತ್ (9) ಮತ್ತು ನಿಹಾಲ್ (5) ಎಂದು ಗುರುತಿಸಲಾಗಿದೆ. ಮಕ್ಕಳಿಗೆ ವಿಷ ಕುಡಿಸಿ ಬಳಿಕ ಹೆತ್ತವರು

ಹೈದರಾಬಾದ್‌ : ವಿಷಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ Read More »

ಕಿಶೋರ್ ನಿಧನ

ಪುತ್ತೂರು: ಆರ್ಯಾಪು ಗ್ರಾಮದ ದೇವಸ್ಯ ನಿವಾಸಿ ದಿ. ಪೂವಣ್ಣಿ ಗೌಡರ ಪುತ್ರ, ಕೃಷಿಕ ಕಿಶೋರ್ (38) ಮಾ. 25ರಂದು ಬೆಳಿಗ್ಗೆ ಅಸೌಖ್ಯದಿಂದ ಮಂಗಳೂರಿನ‌ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಸಹೋದರ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಕಿಶೋರ್ ನಿಧನ Read More »

ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ದುರ್ಮರಣ

ಮಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಘಟನೆ ಮಂಗಳೂರಿನ ಸುಳ್ಯದ ಗಾಂಧಿ ನಗರ ಸಮೀಪ ನಡೆದಿದೆ. ಮೃತರ ಪೈಕಿ ಇಬ್ಬರ ಗುರುತು ಪತ್ತೆಯಾಗಿದ್ದು ಮತ್ತೋರ್ವ ಕಾರ್ಮಿಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮೃತ ಕಾರ್ಮಿಕ ದಂಪತಿ ಗದಗ ಜಿಲ್ಲೆಯ ಮುಂಡರಗಿ ನಿವಾಸಿಗಳಾದ ಸೋಮಶೇಖರ ರೆಡ್ಡಿ (45) ಮತ್ತು ಶಾಂತ (40) ಎಂದು ತಿಳಿದುಬಂದಿದೆ.ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ತಂಡ, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು ಜೆಸಿಬಿ ಮೂಲಕ

ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ದುರ್ಮರಣ Read More »

ಇಂಟೆಲ್ ಕಾರ್ಪೊರೇಷನ್ ಸಹ-ಸಂಸ್ಥಾಪಕ ಗಾರ್ಡನ್ ಮೂರ್ ನಿಧನ

ಅಮೇರಿಕಾ : ಕಂಪ್ಯೂಟರ್ ವಿಜ್ಞಾನ ಜಗತ್ತಿನ ದಾರ್ಶನಿಕ ಮತ್ತು ಇಂಟೆಲ್ ಕಾರ್ಪೊರೇಷನ್ ಸಹ-ಸಂಸ್ಥಾಪಕ ಗಾರ್ಡನ್ ಮೂರ್ (94) ನಿಧನರಾಗಿದ್ದಾರೆ.ಇವರ ಸಾವು ತಂತ್ರಜ್ಞಾನ ಕ್ಷೇತ್ರದ ಮೇಲೆ ಅಪಾರ ಪ್ರಭಾವವನ್ನು ಉಂಟು ಮಾಡಲಿದೆ. ಕಂಪ್ಯೂಟರ್ ಚಿಪ್ ಉದ್ಯಮದ ಪ್ರವರ್ತಕರಾಗಿ, ಅವರ ಕೆಲಸವು ಆಧುನಿಕ ತಂತ್ರಜ್ಞಾನದ ಪ್ರಗತಿಯ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ. ಗಾರ್ಡನ್ ಮೂರ್ ತನ್ನ ನಾಮಸೂಚಕ ಸಿದ್ಧಾಂತಕ್ಕೆ ಹೆಸರುವಾಸಿಯಾಗಿದ್ದರು, ಮೂರ್ ಕಾನೂನು, ಇದು ದಶಕಗಳಿಂದ ಕಂಪ್ಯೂಟರ್ ಚಿಪ್‌ಗಳ ಅಭಿವೃದ್ಧಿಯನ್ನು ರೂಪಿಸಿದೆ. ಮೈಕ್ರೊಪ್ರೊಸೆಸರ್‌ನಲ್ಲಿನ ಟ್ರಾನ್ಸಿಸ್ಟರ್‌ಗಳ ಸಂಖ್ಯೆಯು ಸರಿಸುಮಾರು ಪ್ರತಿ ಎರಡು

ಇಂಟೆಲ್ ಕಾರ್ಪೊರೇಷನ್ ಸಹ-ಸಂಸ್ಥಾಪಕ ಗಾರ್ಡನ್ ಮೂರ್ ನಿಧನ Read More »

ರಾಧಾಕೃಷ್ಣ ರಾವ್ ನಿಧನ

ಪುತ್ತೂರು: ಕೊಂಬೆಟ್ಟು ನಿವಾಸಿ ರಾಧಾಕೃಷ್ಣ ರಾವ್ (61) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಸಹೋದರು, ಸಹೋದರಿಯರನ್ನು ಅಗಲಿದ್ದಾರೆ.

ರಾಧಾಕೃಷ್ಣ ರಾವ್ ನಿಧನ Read More »

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಗಣಪತಿ ಭಟ್ ಶವವಾಗಿ ಪತ್ತೆ

ಕಾರವಾರ : ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ಗಣಪತಿ ಭಟ್ ಶವವಾಗಿ ಪತ್ತೆಯಾಗಿದ್ದಾರೆ. ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ವಿಚಾರಣೆಗೊಳಪಟ್ಟಿದ್ದ ಸಿದ್ದಾಪುರ ತಾಲೂಕಿನ ನೆಲೆಮಾವು ಗ್ರಾಮದ ಗಣಪತಿ ಭಟ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಭಾಗಿಯಾಗಿದ್ದರು ಎಂಬ ಆರೋಪದಡಿ ಬಂಧಿತರಾಗಿದ್ದ ಗಣಪತಿ ಭಟ್ ತನಿಖೆ ಎದುರಿಸಿದ್ದರು. ವಿಚಾರಣೆ ಬಳಿಕ ಸಿದ್ದಾಪುರಕ್ಕೆ ಆಗಮಿಸಿದ್ದ ಗಣಪತಿ ಭಟ್ ಮೃತದೇಹ ಅವರ ಸ್ವಗೃಹದಲ್ಲಿ ನೇಣು ಬಿಗಿದ

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಗಣಪತಿ ಭಟ್ ಶವವಾಗಿ ಪತ್ತೆ Read More »

ಬಾಲಿವುಡ್‌ ಖ್ಯಾತ ಸಿನೆಮಾ ನಿರ್ದೇಶಕ ಪ್ರದೀಪ್‌ ಸರ್ಕಾರ್‌ ನಿಧನ

ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಮುಂಬಯಿ : ಬಾಲಿವುಡ್‌ನ ಖ್ಯಾತ ಸಿನೆಮಾ ನಿರ್ದೇಶಕ ಪ್ರದೀಪ್‌ ಸರ್ಕಾರ್‌ (68) ಇಂದು ನಸುಕಿನ ವೇಳೆ ನಿಧನರಾಗಿದ್ದಾರೆ. ಪರಿಣಿತ, ಲಗಾ ಚುನರಿ ಮೇ ದಾಗ್‌, ಮರ್ದಾನಿ, ಹೆಲಿಕಾಪ್ಟರ್‌ ಏಲದಂಥ ಜನಪ್ರಿಯ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.ಜಾಹೀರಾತು ಚಿತ್ರ ನಿರ್ದೇಶಕರಾಗಿ ಸುದೀರ್ಘ 17 ವರ್ಷ ದುಡಿದು ಬಳಿಕ ಪ್ರದೀಪ್‌ ಸರ್ಕಾರ್‌ ಬಾಲಿವುಡ್‌ಗೆ ಬಂದಿದ್ದರು. ಹಲವು ನೆನಪಿನಲ್ಲಿ ಉಳಿಯುವಂಥ ಜಾಹೀರಾತುಗಳನ್ನು ಅವರು ನಿರ್ದೇಶಿಸಿದ್ದರು. ಪರಿಣಿತ ಅವರು ನಿರ್ದೇಶಿಸಿದ ಮೊದಲ ಚಿತ್ರ. ಮೊದಲ ಚಿತ್ರವೇ

ಬಾಲಿವುಡ್‌ ಖ್ಯಾತ ಸಿನೆಮಾ ನಿರ್ದೇಶಕ ಪ್ರದೀಪ್‌ ಸರ್ಕಾರ್‌ ನಿಧನ Read More »

ನಿವೃತ್ತ ಉಪತಹಶೀಲ್ದಾರ್ ಬಾಲಣ್ಣ ಪಿ. ನಿಧನ

ಪುತ್ತೂರು: ನಿವೃತ್ತ ಉಪತಹಶೀಲ್ದಾರ್ ಬಾಲಣ್ಣ ಪಿ. (68) ಬುಧವಾರ ನಿಧನರಾಗಿದ್ದಾರೆ. ಬನ್ನೂರು ನಂದಿಲ ನಿವಾಸಿಯಾದ ಅವರು ಪುತ್ತೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಮ್ಯಾನೇಜರ್ ಆಗಿದ್ದು, ಬಳಿಕ ಕಡಬದಲ್ಲಿ ಉಪ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಉಪತಹಶೀಲ್ದಾರ್ ಬಾಲಣ್ಣ ಪಿ. ನಿಧನ Read More »

ಬೆಳ್ಳಾರೆ ಕುಸುಮಧರ ಆಚಾರ್ಯ ನಿಧನ

ಪುತ್ತೂರು: ಬೆಳ್ಳಾರೆ ನಿವಾಸಿ ಕುಸುಮಧರ ಆಚಾರ್ಯ ಬುಧವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪ್ರಾರ್ಥಿ‍ವ ಶರೀರವನ್ನು ಗುರುವಾರ ರಾತ್ರಿ ತಂದು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗುವುದು. ಶುಕ್ರವಾರ ಬೆಳ್ಳಾರೆ ಸ್ವಗೃಹಕ್ಕೆ ಕೊಂಡೊಯ್ದು ಅಲ್ಲಿ ಅಂತಿಮ ವಿಧಿವಿಧಾನ ನಡೆಸಿ ಪುತ್ತೂರು ಹಿಂದೂ ರುದ್ರಭೂಮಿಯಲ್ಲಿ ಬೆಳಿಗ್ಗೆ 11.30 ಕ್ಕೆ ಅಗ್ನಿಸ್ಪರ್ಶ ಮಾಡಲಾಗುವುದು.

ಬೆಳ್ಳಾರೆ ಕುಸುಮಧರ ಆಚಾರ್ಯ ನಿಧನ Read More »

error: Content is protected !!
Scroll to Top