ಪೆರಿಯಡ್ಕ ಜಕಾರಿಯಾ ನಿಧನ
ಉಪ್ಪಿನಂಗಡಿ: ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ ಜಕಾರಿಯಾ (52) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾಗಿದ್ದಾರೆ. ಪೆರಿಯಡ್ಕ ಎಸ್ ಕೆಎಸ್ ಎಸ್ ಎಫ್ ಘಟಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಅವರ ತಮ್ಮ ಯು.ಕೆ.ಹಮೀದ್ ಅವರ ಸಾವಿನಿಂದ ಕಂಗೆಟ್ಟಿದ್ದರು. ಮೃತರು ತಾಯಿ, ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಹಾಗೂ ಸಹೋದರನನ್ನು ಅಗಲಿದ್ದಾರೆ.
ಪೆರಿಯಡ್ಕ ಜಕಾರಿಯಾ ನಿಧನ Read More »