ನಿಧನ

ಕುದ್ಮಾರು ರಾಮಚಂದ್ರ ಬನಾರಿ ನಿಧನ

ಕುದ್ಮಾರು: ಕಡಬ ತಾಲೂಕಿನ ಕುದ್ಮಾರು ನಿವಾಸಿ ರಾಮಚಂದ್ರ ಬನಾರಿ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ವೃತ್ತಿಯಲ್ಲಿ ಟೈಲರ್ ಆಗಿದ್ದ  ಅವರು ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ನಳಿನಾಕ್ಷಿ, ಪುತ್ರ ಸ್ವಸ್ತಿಕ್, ಪುತ್ರಿ ಚೈತನ್ಯ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ.

ಕುದ್ಮಾರು ರಾಮಚಂದ್ರ ಬನಾರಿ ನಿಧನ Read More »

ಅಣ್ಣು ಶಾಂತಿಗೋಡು ನಿಧನ

ಪುತ್ತೂರು: ಶಾಂತಿಗೋಡು ಗ್ರಾಮದ ಓಲಾಡಿ ದಿ.ಚೋಮರವರ ಪುತ್ರ ಅಣ್ಣು ಶಾಂತಿಗೋಡು (49) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಮೃತರು ಅವಿವಾಹಿತರಾಗಿದ್ದಾರೆ. ಮೃತರು ಸಹೋದರ, ಸಹೋದರಿಯರು, ಬಂದು ಬಳಗದವರನ್ನು ಅಗಲಿದ್ದಾರೆ.

ಅಣ್ಣು ಶಾಂತಿಗೋಡು ನಿಧನ Read More »

ಸಿದ್ದೇಶ್ ಯಾದವ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಕಾಲಿಕ ನಿಧನ ಹೊಂದಿದ ಬಳ್ಳಾರಿ ವಿಭಾಗ ಪ್ರಭಾರಿಗಳಾಗಿದ್ದ ಸಿದ್ದೇಶ್ ಯಾದವ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮೃತರಿಗೆ ಗೌರವ ಸಮರ್ಪಿಸಿದರು. ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಸಿದ್ಧೇಶ್ ಅವರ ಆತ್ಮಕ್ಕೆ ಸದ್ಗತಿ ದೊರಕಲಿ. ಅವರ ಕುಟುಂಬಕ್ಕೆ ಅಗಲುವಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.

ಸಿದ್ದೇಶ್ ಯಾದವ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ Read More »

ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರೊ. ಟಿ.ಓ.ಜೋನ್ ನಿಧನ

ಪುತ್ತೂರು : ಮಾಯಿದೇ ದೇವುಸ್ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರೊ.ಟಿ.ಓ.ಜೋನ್ (80) ನಿಧನರಾಗಿದ್ದಾರೆ. ಕೇರಳದ ಕೊಟ್ಟಾಯಂ ನಿವಾಸಿಯಾಗಿರುವ ಅವರು ಅಸೌಖ್ಯದಿಂದ ಕೇರಳದಲ್ಲಿ ನಿಧನರಾಗಿದ್ದಾರೆ. 1979-80 ರಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಸೇವೆಗೆ ಸೇರಿದ್ದು, ಸುಮಾರು 33 ವರ್ಷಗಳ ಕಾಲ ಕಾಲೇಜಿನಲ್ಲಿ ಸೇವೆ ಸಲ್ಲಿಸಿ 2012 ರಲ್ಲಿ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರೊ. ಟಿ.ಓ.ಜೋನ್ ನಿಧನ Read More »

ನಿವೃತ್ತ ಹೆಡ್‌ಕಾನ್‌ಸ್ಟೇಬಲ್ ಮಾಧವ ಗೌಡ ನಿಧನ

ಪುತ್ತೂರು: ನಿವೃತ್ತ ಹೆಡ್‌ಕಾನ್‌ಸ್ಟೇಬಲ್ ಮತ್ತು ಕೊಳಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಮಾಧವ ಗೌಡ(78ವ) ಸೋಮವಾರ ನಿಧನರಾದರು. ಕೊಳ್ತಿಗೆ ಗ್ರಾಮದ ಕೊರಂಬಡ್ಕ ದೊಡ್ಡಮನೆ ನಿವಾಸಿಯಾಗಿರುವ ಅವರು ಅನಾರೋಗ್ಯದಿಂದಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಿಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ನಿವೃತ್ತ ಹೆಡ್‌ಕಾನ್‌ಸ್ಟೇಬಲ್ ಮಾಧವ ಗೌಡ ನಿಧನ Read More »

ಉಜಿರೆ ಸುವರ್ಣಾ ಹೆಗ್ಡೆ ನಿಧನ

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಕಾಲೇಜು ಪತ್ರಿಕೋಧ್ಯಮ ವಿ‌ಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗ್ಡೆ ಅವರ ಪತ್ನಿ ಸುವರ್ಣಾ ಹೆಗ್ಡೆ (49) ಸೋಮವಾರ ಹೃದಯಾಘಾತದಿಂದ ಉಜಿರೆ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.  ಮೂಲತಃ ಹೊನ್ನಾವರದವರಾದ ಪ್ರಸ್ತುತ ಉಜಿರೆ ಉಂಡ್ಯಾಪು ನಗರದಲ್ಲಿ ನೆಲೆಸಿದ್ದರು. ಮೃತರು ಪತಿ, ಪುತ್ರ, ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಉಜಿರೆ ಸುವರ್ಣಾ ಹೆಗ್ಡೆ ನಿಧನ Read More »

ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜನಾರ್ದನ್ ಕುಲಾಲ್ ನಿಧನ | ರೈಲಿನಲ್ಲಿ ಹೃದಯಾಘಾತ

ಬಂಟ್ವಾಳ: ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ, ಬಂಟ್ವಾಳ ಬೈಪಾಸ್ ನಿವಾಸಿ ಜನಾರ್ದನ್ ಕುಲಾಲ್ (75) ಅವರು ರೈಲಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ಹಾಸನದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜುಲೈ 2ರ ರವಿವಾರ ರಾತ್ರಿ ಘಟನೆ ನಡೆದಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಜನಾರ್ದನ ಅವರು ತಮ್ಮ ಕುಟುಂಬದ ಜತೆ ರವಿವಾರ ಸಂಜೆಯ ರೈಲಿನ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಹಾಸನ ತಲುಪುತ್ತಿದ್ದಂತೆ ಅನಾರೋಗ್ಯ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಹಾಸನ ರೈಲು ನಿಲ್ದಾಣದಿಂದ ಹಾಸನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷಿಸಿದ

ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜನಾರ್ದನ್ ಕುಲಾಲ್ ನಿಧನ | ರೈಲಿನಲ್ಲಿ ಹೃದಯಾಘಾತ Read More »

ಸ್ಯಾಕ್ಸೋಫೋನ್ ಕಲಾವಿದ ಮೂಡಾಯೂರು ಶ್ರೀಧರ ದೇವಾಡಿಗ ನಿಧನ

ಪುತ್ತೂರು: ಸ್ಯಾಕ್ಸೋಫೋನ್ ಕಲಾವಿದ ಮೂಡಾಯೂರು ಶ್ರೀಧರ ದೇವಾಡಿಗ (64) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ 50 ವರ್ಷಗಳಿಂದ ಸ್ಯಾಕ್ಸೋಫೋನ್ ವಾದನ ಸೇವೆ ಮಾಡಿಕೊಂಡು ಬಂದಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಮೃತರ ಮನೆಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸ್ಯಾಕ್ಸೋಫೋನ್ ವಾದಕ ಪಿ.ಕೆ.ಗಣೇಶ್ ಮತ್ತಿತರ ಗಣ್ಯರು ತೆರಳಿ ಸಂತಾಪ ಸೂಚಿಸಿದರು.

ಸ್ಯಾಕ್ಸೋಫೋನ್ ಕಲಾವಿದ ಮೂಡಾಯೂರು ಶ್ರೀಧರ ದೇವಾಡಿಗ ನಿಧನ Read More »

ಗಣೇಶ್ ಆಚಾರ್ಯ ನಿಧನ

ಪುತ್ತೂರು: ಉರ್ಲಾಂಡಿ ನಿವಾಸಿ ಗಣೇಶ್ ಆಚಾರ್ಯ (63) ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಇಲ್ಲಿಯ ಬ್ಲಡ್ ಬ್ಯಾಂಕ್ ಬಿಲ್ಡಿಂಗ್ ನಲ್ಲಿ ಮಂಗಳಾ ಝೆರಾಕ್ಸ್ ಸೆಂಟರ್ ನಡೆಸುತ್ತಿದ್ದರು. ಮೃತರು ಪತ್ನಿ,  ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಗಣೇಶ್ ಆಚಾರ್ಯ ನಿಧನ Read More »

ಸೀತಾರಾಮ ಶೆಣೈ ನಿಧನ

ಪುತ್ತೂರು: ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಕಚೇರಿಯ ನಿವೃತ್ತ ಅಧೀಕ್ಷಕ ಸೀತಾರಾಮ ಶೆಣೈ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. 1965 ರಲ್ಲಿ ಕಾಲೇಜಿನಲ್ಲಿ ಅಧ್ಯಾಪಕೇತರ ಸಿಬ್ಬಂದಿಯಾಗಿ ಸೇರ್ಪಡೆಗೊಂಡಿದ್ದು, 1967 ರಲ್ಲಿ ಕಚೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ 2001 ರಲ್ಲಿ ನಿವೃತ್ತರಾಗಿದ್ದರು. ಅವರ ನಿಧನಕ್ಕೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.

ಸೀತಾರಾಮ ಶೆಣೈ ನಿಧನ Read More »

error: Content is protected !!
Scroll to Top