ನಿಧನ

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಅರ್ಚಕ ಕಶೆಕೋಡಿ ಸೀತಾರಾಮ ನೂರಿತ್ತಾಯ ನಿಧನ

ಮಾಣಿ: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಅರ್ಚಕ ಕಶೆಕೋಡಿ ನಿವಾಸಿ ಸೀತಾರಾಮ ನೂರಿತ್ತಾಯ (86) ಬುಧವಾರ ನಿಧನರಾದರು. ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ 55 ವರ್ಷಗಳ ಕಾಲ ಪ್ರಧಾನ ಅರ್ಚಕರಾಗಿ ಪೌರೋಹಿತ್ಯ ಪೂರೈಸಿರುವ ಅವರು ಕೃಷಿಕರಾಗಿದ್ದರು. ಪೌರೋಹಿತ್ಯ ಸೇವೆಯಲ್ಲಿ ಸತ್ಯ, ನಿಷ್ಠೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದರು. ಮಾಣಿ ಗ್ರಾಮದಲ್ಲಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ, ದೈವಗಳ ನೇಮೋತ್ಸವಗಳಲ್ಲಿ ಸಕ್ರಿಯರಾಗಿ ಪೂಜಾ ಕೈಂಕರ್ಯಗಳೊಂದಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆಯೂ ಚಿಂತನೆ ಮಾಡಿಕೊಂಡು […]

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಅರ್ಚಕ ಕಶೆಕೋಡಿ ಸೀತಾರಾಮ ನೂರಿತ್ತಾಯ ನಿಧನ Read More »

ಜಯಂತ ಶೆಟ್ಟಿ ಕೇರ್ಪಳ ನಿಧನ

ಸುಳ್ಯ : ಹಳೆಗೇಟು ಪ್ರಶಾಂತ್ ಬಾರ್ & ರೆಸ್ಟೋರೆಂಟ್ ಮಾಲಕ ಜಯಂತ್ ಶೆಟ್ಟಿ ಕೇರ್ಪಳ (60) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಜಯಂತ್ ಶೆಟ್ಟಿಯವರು ಗೃಹರಕ್ಷಕದಳದ ಘಟಕಾಧಿಕಾರಿಯಾಗಿ, ಲಯುನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಜಯಂತ ಶೆಟ್ಟಿ ಕೇರ್ಪಳ ನಿಧನ Read More »

ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ ನಿಧನ

ಪುತ್ತೂರು: ಉಪ್ಪಿನಂಗಡಿ ಮಾಲೀಕ್ ಜುಮ್ಮಾ ಮಸೀದಿ ಅಧ್ಯಕ್ಷ, ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ (49) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರನ್ನು ಕೆಲ ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಮಾಜಿಕ, ಧಾರ್ಮಿಕ ಸಂಘಟನೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಉಪ್ಪಿನಂಗಡಿ ಗ್ರಾಪಂ ಮಾಜಿ ಸದಸ್ಯರಾಗಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿ, ಪುತ್ತೂರು ತಾಲೂಕು ಜಮಾಅತ್ ಉಪಾಧ್ಯಕ್ಷರಾಗಿ, ಮಾಡನ್ನೂರು ಹುದಾ ಇಸ್ಲಾಮಿಕ್ ಅಕಾಡೆಮಿ ಉಪಾಧ್ಯಕ್ಷರಾಗಿ, ಕಮ್ಮಾಡಿ

ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ ನಿಧನ Read More »

ಅಟೋ ಚಾಲಕ ಕಮಲಾಕ್ಷ ನಿಧನ

ಕಡಬ : ಕಡಬ ತಾಲೂಕಿನ ಆಲಂಕಾರು ಗ್ರಾಮದ ನೆಕ್ಕಿಲಾಡಿ ನಿವಾಸಿ ಅಟೋ ಚಾಲಕ ಕಮಲಾಕ್ಷ ಗೌಡ(44) ಅಲ್ಪ ಕಾಲದ ಅಸೌಖ್ಯದಿಂದ ಗುರವಾರ ರಾತ್ರಿ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೂರು  ದಿನಗಳ  ಹಿಂದೆ ಬ್ರೈನ್ ಎಮರೇಜ್‌ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಮಲಾಕ್ಷ ಗೌಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜೀವನೋಪಾಯಕ್ಕೆ  ಆಲಂಕಾರಿನಲ್ಲಿ ಅಟೋ ಚಾಲನೆ ಮಡುತ್ತಿದ್ದ  ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅಟೋ ಚಾಲಕ ಕಮಲಾಕ್ಷ ನಿಧನ Read More »

ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಜಯರಾಮ ಕೆ.ನಿಧನ

ಪುತ್ತೂರು : ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಜಯರಾಮ ಕೆ.ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಪೆರ್ಲಂಪಾಡಿ ನಿವಾಸಿಯಾಗಿರುವ ಜಯರಾಮ ಕೆ.ಅವರು ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪಾಲ್ತಾಡಿ ಶಾಖಾವ್ಯವಸ್ಥಾಪಕರಾಗಿದ್ದು, ಬಳಿಕ ಪೆರ್ಲಂಪಾಡಿಯಲ್ಲಿರುವ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಅಸೌಖ್ಯದಿಂದಿದ್ದ ಜಯರಾಮ ಅವರು ಆರೋಗ್ಯದಲ್ಲಿ ಚೇತರಿಕೆಗೊಂಡು ಕರ್ತವ್ಯದಲ್ಲಿದ್ದರು.ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೌಮ್ಯಸ್ವಭಾವದ ವ್ಯಕ್ತಿತ್ವದ ಜಯರಾಮ ಕೆ.ಅವರು ಬ್ಯಾಂಕಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದರು.

ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಜಯರಾಮ ಕೆ.ನಿಧನ Read More »

ಮಹಾಲಿಂಗೇಶ್ವರ ಭಟ್ ನಿಧನ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾಸುಕಿ ನಾಗನ ಸನ್ನಿಧಿಯಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಕೋಟೆ ಮಹಾಲಿಂಗೇಶ್ವರ ಭಟ್ (58) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಬೆಳ್ಳಾರೆ ಕೋಟೆ ಮನೆತನದವರಾದ ಮಹಾಲಿಂಗೇಶ್ವರ ಭಟ್ ಅವರು ಪುತ್ತೂರು ಕೊಡಿಪ್ಪಾಡಿ ಸಮೀಪದ ಬಿರಾವು ಎಂಬಲ್ಲಿ ವಾಸ್ತವ್ಯ ಹೂಡಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮಹಾಲಿಂಗೇಶ್ವರ ಭಟ್ ನಿಧನ Read More »

ಕೌಡಿಚ್ಚಾರು ನಿವಾಸಿ ಕವಿತಾ ನಿಧನ

ಪುತ್ತೂರು: ಕೌಡಿಚ್ಚಾರು ನಿವಾಸಿ ಕವಿತಾ (30) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮೂಲತಃ ಕೆದಂಬಾಡಿಯವರಾದ ಅವರು ವಿವಾಹದ ಬಳಿಕ ಅರಿಯಡ್ಕ ಗ್ರಾಮದ ಕೌಡಿಚ್ಚಾರಿನಲ್ಲಿ ವಾಸವಿದ್ದರು.

ಕೌಡಿಚ್ಚಾರು ನಿವಾಸಿ ಕವಿತಾ ನಿಧನ Read More »

ಚಿಕ್ಕಪುತ್ತೂರು ನಿವಾಸಿ ಮಾಲತಿ ನಿಧನ

ಪುತ್ತೂರು: ಚಿಕ್ಕಪುತ್ತೂರು ನಿವಾಸಿ ಚೇತನ್ ಕುಮಾರ್ ಪತ್ನಿ ಮಾಲತಿ (43) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು. ಕಳೆದ 15 ವರ್ಷಗಳಿಂದ ನೆಲ್ಲಿಕಟ್ಟೆ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಚಿಕ್ಕಪುತ್ತೂರು ನಿವಾಸಿ ಮಾಲತಿ ನಿಧನ Read More »

ಪೆರಿಯಡ್ಕ ಜಕಾರಿಯಾ ನಿಧನ

ಉಪ್ಪಿನಂಗಡಿ: ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ ಜಕಾರಿಯಾ (52) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾಗಿದ್ದಾರೆ. ಪೆರಿಯಡ್ಕ ಎಸ್‍ ಕೆಎಸ್‍ ಎಸ್‍ ಎಫ್ ಘಟಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಅವರ ತಮ್ಮ ಯು.ಕೆ.ಹಮೀದ್ ಅವರ ಸಾವಿನಿಂದ ಕಂಗೆಟ್ಟಿದ್ದರು. ಮೃತರು ತಾಯಿ, ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಹಾಗೂ ಸಹೋದರನನ್ನು ಅಗಲಿದ್ದಾರೆ.

ಪೆರಿಯಡ್ಕ ಜಕಾರಿಯಾ ನಿಧನ Read More »

ಸ್ವಾಗತ್ ಬೇಕರಿ ಮಾಲಕ ಜಯರಾಮ್ ಶೆಟ್ಟಿ ನಿಧನ

ಪುತ್ತೂರು: ಇಲ್ಲಿಯ  ಅರುಣಾ ಥಿಯೇಟರ್ ಬಳಿಯ ಸ್ವಾಗತ್ ಬೇಕರಿ ಮಾಲಕ, ಸಾಮೆತ್ತಡ್ಕ ನಿವಾಸಿ ಜಯರಾಮ್ ಶೆಟ್ಟಿ (72) ಗುರುವಾರ ನಿಧನರಾಗಿದ್ದಾರೆ. ಅವರು ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಮಕ್ಕಳು, ಅಳಿಯ, ಸೊಸೆ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಸ್ವಾಗತ್ ಬೇಕರಿ ಮಾಲಕ ಜಯರಾಮ್ ಶೆಟ್ಟಿ ನಿಧನ Read More »

error: Content is protected !!
Scroll to Top