ಆಟೋ ಚಾಲಕ ಕೃಷ್ಣ ಆತ್ಮಹತ್ಯೆ
ಪುತ್ತೂರು : ಪರಿಯತ್ತೋಡಿ ನಿವಾಸಿಯಾದ ಆಟೋ ಚಾಲಕನೋರ್ವ ಮನೆಯ ಬಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಡೆದಿದೆ. ಪೆರಿಯತ್ತೋಡಿ ದಿ.ಹುಕ್ರಪ್ಪ ಗೌಡ ಅವರ ಪುತ್ರ ಕೃಷ್ಣ(40)ರವರು ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾಗಿದೆ. ಬೆಳಿಗ್ಗೆ ಅವರು ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ದಿದ್ದರು. ಮಧ್ಯಾಹ್ನದ ವೇಳೆ ಸಾಲ ವಸೂಲಿಗಾರರ ಕರೆ ಬಂದಿತ್ತು. ಅದಾದ ಬಳಿಕ ಮೃತ ಕೃಷ್ಣ ಅವರು ಮನೆಯ ಬಳಿಯ ಮರವೊಂದರ ಗೆಲ್ಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಸಹೋದರರಾದ ಕುಶಾಲಪ್ಪ, ರಿಕ್ಷಾ ಚಾಲಕ ಶಿವರಾಮ, […]
ಆಟೋ ಚಾಲಕ ಕೃಷ್ಣ ಆತ್ಮಹತ್ಯೆ Read More »










