ನಿಧನ

ರವೀಂದ್ರ ಕಲಾಕ್ಷೇತ್ರದಲ್ಲಿ ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ವ್ಯವಸ್ಥೆ | ಮಧ್ಯಾಹ್ನದ ಬಳಿಕ ಅಂತ್ಯಕ್ರಿಯೆ

ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ನಿಧನರಾಗಿರುವ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ 5:30 ಕ್ಕೆ ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಬಳಿಕ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.  ನಟಿ ಲೀಲಾವತಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಡಿ. 8ರಂದು ಸಂಜೆ ಕೊನೆಯುಸಿರೆಳೆದರು. ನೆಲಮಂಗಲದ ಜ್ಯೂನಿಯರ್ ಕಾಲೇಜು ಎದುರಿನ ಅಂಬೇಡ್ಕರ್ ಮೈದಾನದಲ್ಲಿ ಪಾರ್ಥಿವ […]

ರವೀಂದ್ರ ಕಲಾಕ್ಷೇತ್ರದಲ್ಲಿ ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ವ್ಯವಸ್ಥೆ | ಮಧ್ಯಾಹ್ನದ ಬಳಿಕ ಅಂತ್ಯಕ್ರಿಯೆ Read More »

ರಮಾನಾಥ ಬೈಲಾಡಿ ನಿಧನ

ಪುತ್ತೂರು: ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಸಿಬ್ಬಂದಿ, ಸಂಪ್ಯದ ಬೈಲಾಡಿ ನಿವಾಸಿ ರಮಾನಾಥ ಬೈಲಾಡಿ (61) ಬುಧವಾರ ವಿಷ ಪದಾರ್ಥ ಸೇವಿಸಿ ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾದವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರರು ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ರಮಾನಾಥ ಬೈಲಾಡಿ ನಿಧನ Read More »

ಮಹಾಲಿಂಗೇಶ್ವರ ದೇವಸ್ಥಾನದ ದಂಡ್ ಶಿಲಾಲ್ ಪರಿಚಾರಕ ನಿಧನ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂದರ್ಭ ದಂಡ್ ಶಿಲಾಲ್ ಪರಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆರೆಮೂಲೆ ನಿವಾಸಿ ಸಂಪತ್ ಪೂಜಾರಿ (31) ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಮೃತರು ತಂದೆ, ತಾಯಿ, ಸಹೋದರನ್ನು ಅಗಲಿದ್ದಾರೆ.

ಮಹಾಲಿಂಗೇಶ್ವರ ದೇವಸ್ಥಾನದ ದಂಡ್ ಶಿಲಾಲ್ ಪರಿಚಾರಕ ನಿಧನ Read More »

ರಿಕ್ಷಾ ಚಾಲಕ ವಿನೋದ್ ನಿಧನ

ಪುತ್ತೂರು: ಭಕ್ತಕೋಡಿ ಪಾಲೆತ್ತಗುರಿ ನಿವಾಸಿ ಆಟೋ ರಿಕ್ಷಾ ಚಾಲಕ ವಿನೋದ್ (23) ಸೋಮವಾರ ನಿಧನರಾದರು. ಭಕ್ತಕೋಡಿಯಲ್ಲಿ ರಿಕ್ಷಾ ಚಾಲನೆ ಮಾಡುತ್ತಿದ್ದ ವಿನೋದ್ ಅವರಿಗೆ ಎರಡು ತಿಂಗಳ ಜ್ವರ ಕಾಣಿಸಿದ್ದು, ಔಷಧಿ ತೆಗೆದುಕೊಳ್ಳುತ್ತಿದ್ದರು.  ಭಾನುವಾರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ ಆದಾಗಲೇ ಅವರು ಕೊನೆಯುಸಿರೆಳೆದಿದ್ದರು. ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ರಿಕ್ಷಾ ಚಾಲಕ ವಿನೋದ್ ನಿಧನ Read More »

ಅಸ್ವಸ್ಥಗೊಂಡು ಮಹಿಳೆ ಮೃತ್ಯು

ಬೆಳ್ತಂಗಡಿ: ದಿಢೀರ್ ಅಸ್ವಸ್ಥಗೊಂಡು ವಿವಾಹಿತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ಎಂಬಲ್ಲಿ ನಡೆದಿದೆ. ಚಿಬಿದ್ರೆ ಗ್ರಾಮದ ಅನ್ನಾರು ನಿವಾಸಿ ಚಂದ್ರಕಲಾ (31) ಮೃತಪಟ್ಟವರು. ಹಲವು ವರ್ಷಗಳಿಂದ ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿ ಅನಾರೋಗ್ಯದಿಂದ ಚಂದ್ರಕಲಾ ಅವರು ಬಳಲುತ್ತಿದ್ದರು. ಸಂಜೆ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ.

ಅಸ್ವಸ್ಥಗೊಂಡು ಮಹಿಳೆ ಮೃತ್ಯು Read More »

ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಮಹಿಳೆ ಹೃದಯಾಘಾತದಿಂದ ಮೃತ್ಯು

ಸುಬ್ರಹ್ಮಣ್ಯ: ಬೆಂಗಳೂರಿನ ಮಹಿಳೆಯೊಬ್ಬರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದಿದ್ದ ಸಂದರ್ಭ ಹೃದಯಾತಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನ ಎಂವಿ ಗಾರ್ಡನ್ ನಿವಾಸಿ ಶಿವಕುಮಾರ್ ಅವರ ಪತ್ನಿ ಲಕ್ಷ್ಮೀ (32) ಮೃತಪಟ್ಟವರು. ಶಿವಕುಮಾ‌ರ್ ಅವರು ಪತ್ನಿ, ಮಕ್ಕಳೊಂದಿಗೆ ಸಕಲೇಶಪುರದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಲಕ್ಷ್ಮೀ ಹಾಗೂ ಮಕ್ಕಳು ಸಂಬಂಧಿಕರ ಜತೆ ಧರ್ಮಸ್ಥಳಕ್ಕೆ ತೆರಳಿ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ರಾತ್ರಿ ಲಕ್ಷ್ಮೀ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದು, ಬಳಿಕ ಪುತ್ತೂರು

ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಮಹಿಳೆ ಹೃದಯಾಘಾತದಿಂದ ಮೃತ್ಯು Read More »

ನಿವೃತ್ತ ಆರೋಗ್ಯ ಸಹಾಯಕಿ ಗಾಯತ್ರಿ ನಿಧನ

ಪುತ್ತೂರು: ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ  ನಿವೃತ್ತ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಗಾಯತ್ರಿ (63) ಮಂಗಳವಾರ ನಿಧನರಾದರು. ಸುಮಾರು 30 ವರ್ಷಗಳ ಕಾಲ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಗಾಯತ್ರಿ ಸೇವಾ ಅವಧಿಯಲ್ಲಿ ಉತ್ತಮ ಸೇವೆ ನೀಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮೃತರು ಇಬ್ಬರು ಪುತ್ರಿಯರು, ಅಳಿಯ, ಬಂಧು ಬಳಗವನ್ನು ಅಗಲಿದ್ದಾರೆ.

ನಿವೃತ್ತ ಆರೋಗ್ಯ ಸಹಾಯಕಿ ಗಾಯತ್ರಿ ನಿಧನ Read More »

ಕ್ಯಾಪ್ಟನ್ ಪ್ರಾಂಜಲ್ ಅಮರ್ ರಹೇ | ಬೆಂಗಳೂರಿನಲ್ಲಿ ಅಂತಿಮ ನಮನ

ಬೆಂಗಳೂರು: ಮಂಗಳೂರಿನ ಸುರತ್ಕಲಿನಲ್ಲಿ ಬೆಳೆದಿದ್ದ ಕ್ಯಾಪ್ಟನ್ ‍ಪ್ರಾಂಜಲ್ ಅಮರರಾಗಿದ್ದಾರೆ. ಉಗ್ರರೊಂದಿಗೆ ನಡೆದ ಕಾಳಗದಲ್ಲಿ ವೀರ ಮರಣವನ್ನಪ್ಪಿದ್ದಾರೆ. ಅವರ ಪಾರ್ಥಿವ ಶರೀರ ಬೆಂಗಳೂರಿನ ಅವರ ನಿವಾಸಕ್ಕೆ ಶುಕ್ರವಾರ ರಾತ್ರಿ ತಲುಪಿದ್ದು, ಅಂತಿಮ ನಮನ ಸಲ್ಲಿಸಲಾಗುತ್ತಿದೆ. 29 ವರ್ಷದ ಪ್ರಾಂಜಲ್ ಅವರ ಅಂತ್ಯಕ್ರಿಯೆ ಇಂದು ಅಂದರೆ ಶನಿವಾರ ಬೆಂಗಳೂರಿನಲ್ಲಿ ನಡೆಯಲಿದೆ. ಅಂತ್ಯಕ್ರಿಯೆಯ ಮುನ್ನ ನಡೆಯುವ ವಿಧಿವಿಧಾನ ನಡೆದು ಬಳಿಕ ಮೆರವಣಿಗೆಯಲ್ಲಿ ವೀರ ಯೋಧನ ಪಾರ್ಥಿವ ಶರೀರವನ್ನು 23 ಕಿಲೋ ಮೀಟರ್ ದೂರದಲ್ಲಿರುವ ಸೋಮಸುಂದರ ಪಾಳ್ಯದ ಚಿತಾಗಾರಕ್ಕೆ ಕೊಂಡೊಯ್ಯಲಾಗುವುದು ಎಂದು ತಿಳಿದುಬಂದಿದೆ.

ಕ್ಯಾಪ್ಟನ್ ಪ್ರಾಂಜಲ್ ಅಮರ್ ರಹೇ | ಬೆಂಗಳೂರಿನಲ್ಲಿ ಅಂತಿಮ ನಮನ Read More »

ರೋಟರಿಯ ಸಕ್ರೀಯ ಸದಸ್ಯ ಡಾ. ಕುಶಾಲಪ್ಪ ಅಭಿಕಾರ್ ನಿಧನ

ಪುತ್ತೂರು: ಇಲ್ಲಿನ ದರ್ಬೆ ನಿವಾಸಿ ಡಾ. ಕುಶಾಲಪ್ಪ ಅಭಿಕಾರ್ (90 ವ.) ಅವರು ಅಲ್ಪಕಾಲದ ಅನಾರೋಗ್ಯದಿಂದ ನ. 22ರಂದು ಮಗಳ ಮನೆಯಾದ ಇಡ್ಯಡ್ಕದಲ್ಲಿ ನಿಧನರಾದರು. ಮೂಲತಃ ಚಾರ್ವಕಾದ ಅಭಿಕಾರ್ ಕುಟುಂಬದವರಾದ ಡಾ. ಕುಶಾಲಪ್ಪ ಅಭಿಕಾರ್ ಅವರು ಕೆನಡಾದಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗ ಮುಗಿಸಿದ್ದರು. ನಂತರ ಅಲ್ಲೇ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ನಿವೃತ್ತಿಯ ಬಳಿಕ ಪುತ್ತೂರಿಗೆ ಆಗಮಿಸಿ ರೋಟರಿ ಸೇರಿದಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಪುತ್ತೂರು ರೋಟರಿ ಕ್ಲಬ್ಬಿನ ಸಕ್ರೀಯ ಸದಸ್ಯರಾಗಿದ್ದ ಡಾ. ಕುಶಾಲಪ್ಪ ಗೌಡ ಅಭಿಕಾರ್ ಅವರು, ಕೊಡುಗೈ

ರೋಟರಿಯ ಸಕ್ರೀಯ ಸದಸ್ಯ ಡಾ. ಕುಶಾಲಪ್ಪ ಅಭಿಕಾರ್ ನಿಧನ Read More »

ಯಕ್ಷಗುರು, ಸಂಘಟಕ, ಅಧ್ಯಾಪಕ, ವೈದ್ಯ, ಕೈರಂಗಳ ನಾರಾಯಣ ಹೊಳ್ಳ ನಿಧನ

ಮಂಗಳೂರು: ಯಕ್ಷಗುರು, ಸಂಘಟಕ, ಕಲಾವಿದ, ಅಧ್ಯಾಪಕ, ವೈದ್ಯ, ಕೈರಂಗಳ ನಾರಾಯಣ ಹೊಳ್ಳ ಅವರು ನ. 21ರ ಮಂಗಳ ನಿಧನರಾದರು. ಮೂಲತಃ ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರಾದ ನಾರಾಯಣ ಹೊಳ್ಳರು ಮುಂದೆ ಕೈರಂಗಳ ನಾರಾಯಣ ಹೊಳ್ಳ ಎಂದೇ ಪ್ರಸಿದ್ಧರಾದವರು. ಉಳ್ಳಾಲ ತಾಲೂಕಿನ ಕೈರಂಗಳದಲ್ಲಿ 1954ರಲ್ಲಿ ಗೋಪಾಲಕೃಷ್ಣ ಯಕ್ಷಗಾನ ಸಂಘವನ್ನು ಸ್ಥಾಪಿಸಿ ದಶಕಗಳ ಕಾಲ ಹಲವಾರು ಯಕ್ಷ ಪ್ರತಿಭೆಗಳ ಬೆಳವಣಿಗೆಗೆ ನೆರಳಾದವರು. ಕೈರಂಗಳ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ನಾರಾಯಣ ಹೊಳ್ಳರು, ಹೋಮಿಯೋಪತಿ ಚಿಕಿತ್ಸಾ ಪದ್ಧತಿಯನ್ನು ಖಾಸಗಿಯಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರೂ ಹೌದು. ಯಕ್ಷಗಾನದ

ಯಕ್ಷಗುರು, ಸಂಘಟಕ, ಅಧ್ಯಾಪಕ, ವೈದ್ಯ, ಕೈರಂಗಳ ನಾರಾಯಣ ಹೊಳ್ಳ ನಿಧನ Read More »

error: Content is protected !!
Scroll to Top