ನಿಧನ

ಸೋಜಾ ಮೆಟಲ್ ಮರ್ಚೆಂಟ್ ಮಾಲಕ ವಲೇರಿಯನ್ ಡಿ’ಸೋಜಾ ನಿಧನ

ಪುತ್ತೂರು: ಪುತ್ತೂರಿನ ಸೋಜಾ ಮೆಟಲ್ ಮರ್ಚೆಂಟ್ ಮಾಲಕ ಸಾಮೆತ್ತಡ್ಕ ನಿವಾಸಿ ವಲೇರಿಯನ್ ಡಿ’ಸೋಜಾ (87) ಶುಕ್ರವಾರ ನಿಧನರಾದರು. ಸಾಮೆತ್ತಡ್ಕದಲ್ಲಿ ವಾಸಿಸುತ್ತಿದ್ದ ಅವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರ ಓರ್ವ ಪುತ್ರಿ ಲಂಡನ್‍ ನಲ್ಲಿ ಉದ್ಯೋಗದಲ್ಲಿದ್ದಾರೆ. ಮೃತರು ಪತ್ನಿ, ಹಾಗೂ ಆರು ಮಂದಿ ಮಕ್ಕಳನ್ನು ಅಗಲಿದ್ದಾರೆ.

ಸೋಜಾ ಮೆಟಲ್ ಮರ್ಚೆಂಟ್ ಮಾಲಕ ವಲೇರಿಯನ್ ಡಿ’ಸೋಜಾ ನಿಧನ Read More »

ಪೈಂಟರ್ ಬಾಲಕೃಷ್ಣ ಆತ್ಮಹತ್ಯೆ !

ಪುತ್ತೂರು: ಬೆದ್ರಾಳ ನಿವಾಸಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ಪೈಂಟರ್ ಆಗಿರುವ ಬಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡವರು. ಬೆದ್ರಾಳ ರೈಲ್ವೇ ಸೇತುವೆ ಬಳಿ ವಾಸಿಸುತ್ತಿದ್ದ ಅವರು, ಕಳೆದ ಕೆಲ ಸಮಯಗಳಿಂದ ಸಾಮೆತ್ತಡ್ಕದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ.

ಪೈಂಟರ್ ಬಾಲಕೃಷ್ಣ ಆತ್ಮಹತ್ಯೆ ! Read More »

ಉದಯವಾಣಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ನಿಧನ

ಮಂಗಳೂರು: ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಮೂಲತಃ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ ನವಭಾರತ ಪತ್ರಿಕೆಯಿಂದ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಉದಯವಾಣಿ ಪತ್ರಿಕೆಯ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ಬಳಿಕ ಮುಖ್ಯ ವರದಿಗಾರರಾಗಿ, ಸ್ಥಾನೀಯ ಸಂಪಾದಕರಾಗಿದ್ದುಕೊಂಡು 36 ವರ್ಷಗಳ ಕಾಲ ಸೇವೆ ಸಲ್ಲಿಸಿ, ಕಳೆದ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದರು.

ಉದಯವಾಣಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ನಿಧನ Read More »

ಹಾರೂನ್ ಪುರುಷರಕಟ್ಟೆ ನಿಧನ

ಪುತ್ತೂರು: ಪುರುಷರಕಟ್ಟೆ ಹಿಮಾಯತ್ತುಲ್ ಇಸ್ಲಾಂ ಮದ್ರಸದ ಸ್ಥಾಪಕ ಅಧ್ಯಕ್ಷ ಹಾರೂನ್ ಪುರುಷರಕಟ್ಟೆ (65) ಅಲ್ಪ ಕಾಲದ ಅಸೌಖ್ಯದಿಂದ ಫೆ.29 ರಂದು ನಿಧನರಾದರು. ಪುರುಷರಕಟ್ಟೆ ಹಿಮಾಯತ್ತುಲ್ ಇಸ್ಮಾಂ ಮದ್ರಸದಲ್ಲಿ 20 ವರ್ಷಕ್ಕಿಂತ ಅಧಿಕ ವರ್ಷ ಅಧ್ಯಕ್ಷರಾಗಿ, ಮುಕ್ವೆ ರೆಹ್ಮನಿಯ ಜುಮಾ ಮಸೀದಿಯ ಕಾರ್ಯದರ್ಶಿಯಾಗಿ, ಮುಕ್ವೆ ದರ್ಗಾ ಶರೀಫ್‍ ನ ಉರೂಸ್ ಕಮಿಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರಿ, ಸಹೋದರರನ್ನು ಅಗಲಿದ್ದಾರೆ.

ಹಾರೂನ್ ಪುರುಷರಕಟ್ಟೆ ನಿಧನ Read More »

ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ !

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ಎಂಬಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನೆಕ್ಕರೆ ನಿವಾಸಿ ಆಟೋ ನಡೆಸುತ್ತಿದ್ದ ಕೃಷ್ಣಪ್ಪ ಪೂಜಾರಿ (60) ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕೃಷ್ಣಪ್ಪ ಈ ಕೃತ್ಯ ಎಸಗಿದ್ದಾರೆ. ಇತ್ತೀಚೆಗಷ್ಟೇ ಹಳೆ ಆಟೋವನ್ನು ಮಾರಿ ಹೊಸ ಆಟೋ ಖರೀದಿಸಿದ್ದರು ಎನ್ನಲಾಗಿದೆ. ವಿಪರೀತ ಕುಡಿತದ ಚಟ ಹೊಂದಿದ್ದ ಅವರು, ಸಾಲದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ ! Read More »

ಎರಡು ದಿನಗಳ ಹಿಂದೆ ಸಮುದ್ರದಲ್ಲಿ ಕೊಚ್ಚಿಕೊಂಡು ಹೋದ ವಿದ್ಯಾರ್ಥಿಯ ಮೃತದೇಹ ಪತ್ತೆ !

ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಎರಡು ದಿನಗಳ ಹಿಂದೆ ಬೃಹತ್ ಅಲೆಗೆ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ತುಕರಾಮ (13) ಮೃತದೇಹ ತಣ್ಣೀರುಬಾವಿ ಬಳಿ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಬೀಚ್‍ನಲ್ಲಿ ನೀರಾಟವಾಡುತ್ತಿದ್ದಾಗ ಬೃಹತ್ ಅಲೆಗೆ ಕೊಚ್ಚಿಹೋಗಿ ಮುಳುಗಿ ತುಕರಾಮ ನಾಪತ್ತೆಯಾಗಿದ್ದ. ಮೀನುಗಾರರು ಮೃತದೇಹ ತೇಲುತ್ತಿರುವುದನ್ನು ಕಂಡಿದ್ದು, ಧನಪಾಲ್ ಸಾಲ್ಯನ್ ಅವರು ದಡಕ್ಕೆ ಎಳೆದು ತಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೈಕಂಪಾಡಿ ಮೀನಕಳಿಯ ಸರಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ತುಕಾರಾಮ್ ಶಾಲೆ ಬಿಟ್ಟ ಬಳಿಕ ಸ್ನೇಹಿತ

ಎರಡು ದಿನಗಳ ಹಿಂದೆ ಸಮುದ್ರದಲ್ಲಿ ಕೊಚ್ಚಿಕೊಂಡು ಹೋದ ವಿದ್ಯಾರ್ಥಿಯ ಮೃತದೇಹ ಪತ್ತೆ ! Read More »

ಪುತ್ತೂರು ಟೆಕ್ಸ್ ಟೈಲ್ಸ್ ಮಾಲಕ ಯಾಹೀಯಾ ಹಾಜಿ ನಿಧನ

ಪುತ್ತೂರು: ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಟೆಕ್ಸ್ ಟೈಲ್ಸ್ ಸೆಂಟರ್ ಮಾಲಕ ಯಾಹೀಯಾ ಹಾಜಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಚಿಕ್ಕಪುತ್ತೂರು ನಿವಾಸಿಯಾಗಿರುವ ಅವರು ಕಂಬಳಬೆಟ್ಟು ದಿ.ಮಹಮ್ಮದ್ ಮುಸ್ಲಿಯಾರ್ ಅವರ ಪುತ್ರರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.

ಪುತ್ತೂರು ಟೆಕ್ಸ್ ಟೈಲ್ಸ್ ಮಾಲಕ ಯಾಹೀಯಾ ಹಾಜಿ ನಿಧನ Read More »

ಶಿವಸೇನೆ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ

ಮಹಾರಾಷ್ಟ್ರ: ಶಿವಸೇನೆಯ ಹಿರಿಯ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ಇಂದು ವಿಧಿವಶರಾಗಿದ್ದಾರೆ. ಮನೋಹರ್ ಜೋಶಿ ಅವರು ಹೃದಯಾಘಾತದಿಂದ ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ನಸುಕಿನ ಜಾವ 3 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಶಿವಸೇನೆ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ Read More »

ವಿದೇಶದಿಂದ ಊರಿಗೆ ಬಂದಿದ್ದ ಯುವಕ ಅನಾರೋಗ್ಯದಿಂದ ಮೃತ್ಯು !

ವಿಟ್ಲ: ವಿದೇಶದಿಂದ ಮೂರು ದಿನಗಳ ಹಿಂದೆ ಬಂದಿದ್ದ ಯುವಕ ಅನಾರೋಗ್ಯದಿಂದ ಮೃತಪಟ್ಟ ಘಟನೆ ವಿಟ್ಲ ಬಳಿಯ ಕೇಪು ಎಂಬಲ್ಲಿ ನಡೆದಿದೆ. ಕೇಪು ಗ್ರಾಮದ ಅಡ್ಯನಡ್ಕ ನಿವಾಸಿ ಅಶ್ರಫ್ (38) ಮೃತಪಟ್ಟ ಯುವಕ. ಅಬ್ದುಲ್ ರಹಿಮಾನ್ ಎಂಬವರ ಪುತ್ರರಾಗಿರುವ ಅಶ್ರಫ್‍ ಹಲವು ವರ್ಷಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಅನಾರೋಗ್ಯದ ಹಿನ್ನಲೆಯಲ್ಲಿ ಊರಿಗೆ ಬಂದಿದ್ದ ಅವರು ಕೇರಳದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು, ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ, ತಾಯಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ವಿದೇಶದಿಂದ ಊರಿಗೆ ಬಂದಿದ್ದ ಯುವಕ ಅನಾರೋಗ್ಯದಿಂದ ಮೃತ್ಯು ! Read More »

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ, ಖ್ಯಾತ ಕಾದಂಬರಿಕಾರ ಕೆ. ಟಿ. ಗಟ್ಟಿ ನಿಧನ

ಮಂಗಳೂರು: ಕಾದಂಬರಿಕಾರ, ಭಾಷಾತಜ್ಞ, ಪ್ರಾಧ್ಯಾಪಕ, ಹಿರಿಯ ಸಾಹಿತಿ  ಕೆ. ಟಿ. ಗಟ್ಟಿ (86) ನಿಧನ ರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪಡೆದಿರುವ ಖ್ಯಾತ ಕಾದಂಬರಿಕಾರ ಅದರಲ್ಲೂ ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದರು. ಅವರು ಮೂಲತಃ ಕಾಸರಗೋಡಿನ ಕೂಡ್ಲುವಿನಲ್ಲಿ 1938 ರಲ್ಲಿ ಜನಿಸಿದ್ದರು. 1957 ರಿಂದಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ ಗಟ್ಟಿಯವರಿಗೆ ತಂದೆ ತಾಯಿಗಳೇ ಪ್ರೇರಣೆ. ವೃತ್ತಿಯಲ್ಲಿ ಕೃಷಿಕರಾದರೂ ಯಕ್ಷಗಾನ ಪ್ರಿಯರಾದ ಧೂಮಪ್ಪನವರು ಕೂಡ್ಲು ಯಕ್ಷಗಾನ ನಾಟಕ ಮಂಡಳಿಯೊಡನೆ ಊರೂರು ಸುತ್ತುತ್ತಿದ್ದು, ಸಿಕ್ಕಿದ ಪುಸ್ತಕಗಳನ್ನು ಮನೆಗೆ

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ, ಖ್ಯಾತ ಕಾದಂಬರಿಕಾರ ಕೆ. ಟಿ. ಗಟ್ಟಿ ನಿಧನ Read More »

error: Content is protected !!
Scroll to Top