ಹೃದಯಾಘಾತದಿಂದ ಮೃತ್ಯು : ಸಿಡಿಲಾಘಾತ ಶಂಕೆ
ಪುತ್ತೂರು : ಹೃದಯಾಘಾತದಿಂದ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ನಿವಾಸಿ ಪಿ.ಬಾಬು (55) ಮೃತಪಟ್ಟಿದ್ದಾರೆ. ಬಾಬು ಅವರು ಮನೆಯ ಹೊರಗೆ ಮಳೆಯಲ್ಲಿ ಕೆಲಸ ಮಾಡಿ ಬಳಿಕ ಒಳ ಹೋದವರು ನೀರು ಕುಡಿದ ತಕ್ಷಣ ಹೃದಯಾಘಾತವಾಗಿ ಮೃತಪಟ್ಟರು ಎನ್ನಲಾಗಿದೆ. ಸಿಡಿಲಾಘಾತ ಶಂಕೆ : ಬಾಬು ಅವರು ಮನೆಯ ಹೊರಗೆ ಮಳೆಯಲ್ಲಿ ಕೆಲಸ ಮಾಡುತ್ತಿದ್ದು, ಸಿಡಿಲಾಘಾತದಿಂದ ಮೃತಪಟ್ಟಿದ್ದರು ಎಂದು ಮೊದಲು ಸುದ್ದಿಯಾಗಿತ್ತು. ವೈದ್ಯಕೀಯ ರಿಪೋರ್ಟ್ ಬಂದ ಬಳಿಕವಷ್ಟೇ ತಿಳಿದುಬರಬೇಕಿದೆ ಎಂದು ತಹಶೀಲ್ದಾರ್ ಕುಂಞಿ ಅಹಮ್ಮದ್ ತಿಳಿಸಿದ್ದಾರೆ.
ಹೃದಯಾಘಾತದಿಂದ ಮೃತ್ಯು : ಸಿಡಿಲಾಘಾತ ಶಂಕೆ Read More »