ಅಪಘಾತ

ಸುರತ್ಕಲ್ ನ ಹೊಸಬೆಟ್ಟು ಸಮುದ್ರಕ್ಕೆ ಪ್ರವಾಸ ಬಂದ ಮೂವರು ನೀರಿನಲ್ಲಿ ಕೊಚ್ಚಿಹೋಗಿ ಮೃತ್ಯು

ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಸಮುದ್ರದ ಜೆಟ್ಟಿ ಬಳಿ ಇರುವ ಬೀಚ್ ಗೆ ಪ್ರವಾಸಕ್ಕೆ ಬಂದು ನೀರಿಗೆ ಇಳಿದ ಮೂವರು ನೀರು ಪಾಲಾದ ಘಟನೆ ಇಂದು ನಡೆದಿದೆ. ಚಿತ್ರದುರ್ಗ ಜಿಲ್ಲೆಯ ುಪ್ಪರಿಗೇನಹಳ್ಳಿ ನಿವಾಸಿ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್ ಹಾಗೂ ಬೆಂಗಳೂರಿನ ಸತ್ಯವೇಲು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟವರು. ಮಂಗಳವಾರ ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿ ಹೊರಟು ಇಂದು ಮಧ್ಯಾಹ್ನ 12.30 ಕ್ಕೆ ಹೊಸಬೆಟ್ಟು ಬಳಿ ಇರುವ ಬೀಚ್ ಗೆ ಪ್ರವಾಸ ನಿಟ್ಟಿನಲ್ಲಿ ಬಂದಿದ್ದರು ಎನ್ನಲಾಗಿದೆ. ಈ ಸಂದರ್ಭ […]

ಸುರತ್ಕಲ್ ನ ಹೊಸಬೆಟ್ಟು ಸಮುದ್ರಕ್ಕೆ ಪ್ರವಾಸ ಬಂದ ಮೂವರು ನೀರಿನಲ್ಲಿ ಕೊಚ್ಚಿಹೋಗಿ ಮೃತ್ಯು Read More »

ರೈಲಿ ನಡಿಗೆ ಸಿಲುಕಿ ವ್ಯಕ್ತಿ ಮೃತ್ಯು..!

ಪುತ್ತೂರು : ರೈಲಿನಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪುತ್ತೂರಿನ ಕಬಕದಲ್ಲಿ ನಡೆದಿದೆ ಮೃತರನ್ನು ಕಲ್ಲಾಜೆ ಕೆದಿಲ ಗ್ರಾಮದ ಭರತ್ ಪೂಜಾರಿ (67) ಎನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ರೈಲ್ವೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ರೈಲಿ ನಡಿಗೆ ಸಿಲುಕಿ ವ್ಯಕ್ತಿ ಮೃತ್ಯು..! Read More »

ಬೈಕ್‍-ಕೆಎಸ್‍ ಆರ್ ಟಿಸಿ ಬಸ್ ಡಿಕ್ಕಿ : ಬೈಕ್‍ ಸವಾರರಿಗೆ ಗಂಭೀರ ಗಾಯ

ಪುತ್ತೂರು: ಬೈಕ್‍ ಹಾಗೂ ಕೆಎಸ್ ಆರ್ ಟಿ ಸಿ ಬಸ್  ಡಿಕ್ಕಿ ಹೊಡೆದ ಘಟನೆ ಪುತ್ತೂರು ಕೊಡಿಮರ ರಸ್ತೆಯ ಕೊಲ್ಯ ಎಂಬಲ್ಲಿ ನಡೆದಿದೆ. ಅಪಘಾತದ ಪರಿಣಾಮ ಬೈಕ್ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಸವಾರರು ಗಂಭೀರ ಗಾಯಗೊಂಡಿದ್ದು ಗಾಯಗೊಂಡವರನ್ನು ವಿದ್ಯಾರ್ಥಿಗಳಾದ ಬೆಳ್ಳಿಪ್ಪಾಡಿಯ ನಿಶಾಂತ್ ಮತ್ತು ಕಾರ್ತಿಕ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬೈಕ್‍-ಕೆಎಸ್‍ ಆರ್ ಟಿಸಿ ಬಸ್ ಡಿಕ್ಕಿ : ಬೈಕ್‍ ಸವಾರರಿಗೆ ಗಂಭೀರ ಗಾಯ Read More »

ಬೀದಿ ನಾಯಿ ದಾಳಿಯಿಂದ ತಪ್ಪಿಸಲು ಹೋಗಿ  ಪಾಳು ಬಾವಿಗೆ ಬಿದ್ದು ಬಾಲಕ ಮೃತ್ಯು

ಕಣ್ಣೂರು: ಬೀದಿ ನಾಯಿ ದಾಳಿಯಿಂದ ತಪ್ಪಿಸಲು ಓಡಿದ ಬಾಲಕ ಆವರಣವಿಲ್ಲದ ಪಾಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಣ್ಣೂರು ತೂವ್ವಕುನ್ನ್ ನಲ್ಲಿ ನಡೆದಿದೆ. ಚೇಲಕ್ಕೋಡ್ ಜುಮ್ಮಾ ಮಸೀದಿ ಬಳಿಯ ಉಸ್ಮಾನ್ ಎಂಬವರ ಪುತ್ರ, ತೂವ್ವಕುನ್ನ್ ಸರಕಾರಿ ಶಾಲೆಯ ನಾಲ್ಕನೆ ತರಗತಿ ವಿದ್ಯಾರ್ಥಿ ಮೊಹಮ್ಮದ್ ಫಸಲ್ (9)) ಮೃತಪಟ್ಟ ಬಾಲಕ. ಮೊಹಮ್ಮದ್ ಫಸಲ್ ಮನೆ ಸಮೀಪ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ‌ ಬೀದಿ ನಾಯಿ ಅವರತ್ತ ಓಡಿ ಬಂದಿದೆ. ಮಕ್ಕಳು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಬಳಿಕ ಫಸಲ್ ನಾಪತ್ತೆಯಾಗಿದ್ದ. ಮೊಹಮ್ಮದ್ ಫಸಲ್

ಬೀದಿ ನಾಯಿ ದಾಳಿಯಿಂದ ತಪ್ಪಿಸಲು ಹೋಗಿ  ಪಾಳು ಬಾವಿಗೆ ಬಿದ್ದು ಬಾಲಕ ಮೃತ್ಯು Read More »

ರಿವಾಲ್ವರ್ ಪರಿಶೀಲಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ತಗುಲಿದ ಗುಂಡು | ವ್ಯಕ್ತಿಯೋರ್ವರಿಗೆ ಗಾಯ

ಮಂಗಳೂರು : ವಾಮಂಜೂರಿನಲ್ಲಿ ವ್ಯಕ್ತಿಯೋರ್ವರಿಗೆ ಆಕಸ್ಮಿಕ ಗುಂಡು ತಗುಲಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಸಫ್ಘಾನ್ ಎಂಬುವರು ಗುಂಡು ತಗುಲಿ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ. ಸಫ್ಘಾನ್ ಎಂಬವರು ವಾಮಂಜೂರಿನ ಅಂಗಡಿಯೊಂದಕ್ಕೆ ಬಂದ ವೇಳೆ ಗ್ರಾಹಕರೊಬ್ಬರು ಇಟ್ಟಿದ್ದ ರಿವಾಲ್ವರ ನ್ನು ಪರಿಶೀಲಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದೆ. ಈ  ಪರಿಣಾಮ ಸಫ್ಘಾನ್ ಹೊಟ್ಟೆಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಇದನ್ನು ಆಕಸ್ಮಿಕ ಘಟನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.

ರಿವಾಲ್ವರ್ ಪರಿಶೀಲಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ತಗುಲಿದ ಗುಂಡು | ವ್ಯಕ್ತಿಯೋರ್ವರಿಗೆ ಗಾಯ Read More »

ಟ್ಯಾಕ್ಟರಿಗೆ ಡಿಕ್ಕಿ ಹೊಡೆದ ಬೈಕ್‍ | ಸ್ಥಳದಲ್ಲೇ ಮೂವರ ಮೃತ್ಯು

ತುಮಕೂರು : ಬೈಕೊಂದು ಮುಂದೆ ಸಾಗುತ್ತಿದ್ದ ಟ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಘಟನೆ ತುಮಕೂರು ತಾಲೂಕಿನ ಓಬಳಾಪುರ ಗೇಟ್ ಬಳಿ ನಡೆದಿದೆ. ಡಿಕ್ಕಿ ಹೊಡೆದ  ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಹಾಗೂ ಇಬ್ಬರು ಪುತ್ರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಮಧುಗಿರಿ ತಾಲೂಕಿನ ಪುರವರ ಹೋಬಳಿ ಗೊಂದಿಹಳ್ಳಿ ಗ್ರಾಮದ ನಿವಾಸಿ ಮುತ್ತಾಝ್ (38), ಅವರ ಪುತ್ರರಾದ ಮುಹಮ್ಮದ್ ಆಸಿಫ್(12) ಹಾಗೂ ಶಾಕಿರ್ ಹುಸೇನ್ (22) ಎಂದು ಗುರುತಿಸಲಾಗಿದೆ. ಈ ಮೂವರು ಇಂದು ಮುಂಜಾನೆ ಬೈಕ್‌ನಲ್ಲಿ ತುಮಕೂರಿನಿಂದ ತಮ್ಮ ಊರಿಗೆ ತೆರಳುತ್ತಿದ್ದು, ಮುಂಜಾನೆ

ಟ್ಯಾಕ್ಟರಿಗೆ ಡಿಕ್ಕಿ ಹೊಡೆದ ಬೈಕ್‍ | ಸ್ಥಳದಲ್ಲೇ ಮೂವರ ಮೃತ್ಯು Read More »

ಉಡುಪಿ : ನೇಣಿಗೆ ಶರಣಾಗಿ ವ್ಯಕ್ತಿ ಆತ್ಮಹತ್ಯೆ

ಉಡುಪಿ : ವ್ಯಕ್ತಿಯೋರ್ವರು ತಮ್ಮ ನಿವಾಸದ ಹೊರಗೆ ನೇಣಿಗೆ ಶರಣಾಗಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಕೊರಂಗ್ರಪಾಡಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ವಸಂತ ಕೋಟ್ಯಾನ್ (59) ಎಂದು ಗುರುತಿಸಲಾಗಿದೆ. ಒಂಟಿ ಜೀವನ ಜೀವನ ಸಾಗಿಸುತ್ತಿದ್ದ ಇವರು ಅಡುಗೆ ವ್ಯಾಪಾರ ನಡೆಸುತ್ತಿದ್ದರು. ಮಾನಸಿಕ ಚಿಂತನೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ  ಶಂಕೆ ವ್ಯಕ್ತವಾಗಿದೆ. ಮೃತರು ಬಿಟ್ಟು ಹೋಗಿದ್ದರು ಎನ್ನಲಾದ ನೋಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪಿಎಸ್‌ಐ ಪುನೀತ್‌ಕುಮಾ‌ರ್, ತನಿಖಾ ಸಹಾಯಕಿ ನೇತ್ರಾವತಿ ಕಾನೂನು ಕ್ರಮಕೈಗೊಂಡಿದ್ದಾರೆ. ಸಾಮಾಜಿಕ

ಉಡುಪಿ : ನೇಣಿಗೆ ಶರಣಾಗಿ ವ್ಯಕ್ತಿ ಆತ್ಮಹತ್ಯೆ Read More »

ಉಜಿರೆ ಬಳಿ ದ್ವಿಚಕ್ರ ವಾಹನ-ಕಾರು ಅಪಘಾತ : ಮಹಿಳೆಗೆ ಗಂಭೀರ ಗಾಯ

ಉಜಿರೆ: ಕಾರು ಹಾಗೂ ದ್ವಿಚಕ್ರ ವಾಹನ ಡಿಕ್ಕಿ ಹೊಡೆದುಕೊಂಡ ಪರಿಣಾಮ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ಚಾರ್ಮಾಡಿ ರಸ್ತೆ ಸಮೀಪದ ವಿಲೇಜ್ ಹೋಟೆಲ್ ಬಳಿ ನಡೆದಿದೆ. ಸ್ಕೂಟರ್‌ ನಲ್ಲಿದ್ದ ಮಹಿಳೆಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿಎ. ಸ್ಕೂಟರ್ ಸವಾರೆ ಉಜಿರೆಯಿಂದ ಚಾರ್ಮಾಡಿ ಕಡೆಗೆ ಬರುತ್ತಿದ್ದು, ಕಾರು ಚಾರ್ಮಾಡಿಯಿಂದ ಉಜಿರೆ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಎರಡು ವಾಹನದ ಮುಂಭಾಗ ಸಂಪೂರ್ಣ ಹಾನಿಯಾಗಿದ್ದು, ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು

ಉಜಿರೆ ಬಳಿ ದ್ವಿಚಕ್ರ ವಾಹನ-ಕಾರು ಅಪಘಾತ : ಮಹಿಳೆಗೆ ಗಂಭೀರ ಗಾಯ Read More »

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ನೆಲ್ಯಾಡಿ: ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ನಡೆದಿದೆ. ಶಿರಾಡಿ ಗ್ರಾಮದ ಪೇರಮಜಲು ಎಡಪ್ಪಾಟ್ ನಿವಾಸಿ ವರ್ಕಿ ಇ.ಪಿ. (59) ಮೃತಪಟ್ಟವರು. ವರ್ಕಿ ಅವರು ಅಡ್ಡಹೊಳೆ ಮಿತ್ತಮಜಲು ಎಂಬಲ್ಲಿರುವ ಸಹೋದರ ಜೋಯಿ ಇ.ಪಿ.ಎಂಬವರ ಮನೆಗೆ ಕೆಲಸಕ್ಕೆ ಹೋದವರು ಅಲ್ಲಿ ತೆಂಗಿನಮರ ಏರಿ ತೆಂಗಿನ ಕಾಯಿ ಕೀಳುತ್ತಿರುದ್ದ ವೇಳೆ ಆಕಸ್ಮಿಕವಾಗಿ ಕೈ ಜಾರಿ ಮರದಿಂದ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ನೆಲ್ಯಾಡಿ ಖಾಸಗಿ ಕರೆತರಲಾಯಿತಾದರೂ

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು Read More »

ಕಂದಕಕ್ಕೆ ಉರುಳಿದ ಕಾರು | ಐವರು ಪ್ರಾಣಾಪಾಯದಿಂದ ಪಾರು

ಪುತ್ತೂರು: ಕಾರೊಂದು ರಸ್ತೆ ಅಂಚಿನ ಕಂದಕಕ್ಕೆ ಉರುಳಿ ಬಿದ್ದು ಸಂಪೂರ್ಣ ಜಖಂಗೊಂಡ ಘಟನೆ ಉಪ್ಪಿನಂಗಡಿ-ಪುತ್ತೂರು ಹೆದ್ದಾರಿಯ ಸೇಡಿಯಾಪು ಸಮೀಪದ ಕಾಪು ಎಂಬಲ್ಲಿ ಇಂದು ನಡೆದಿದೆ. ಕಾರಿನಲ್ಲಿ ತೆರಳಿ ಒತ್ತೆಕೋಲದಲ್ಲಿ ಭಾಗವಹಿಸಿ ವಾಪಸ್ಸು ಮನೆಗೆ ತೆರಳುತ್ತಿದಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದು ಮಾರುತಿ ಕಾರು ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ಚಲಿಸುತ್ತಿದ್ದ ವೇಳೆ ಸೇಡಿಯಾಪು ಜಂಕ್ಷನ್ ನಿಂದ 250 ಮೀ ದೂರದ ಕಾಪು ಎಂಬಲ್ಲಿ ಎಡ ಬದಿಗೆ ಚಲಿಸಿ ತೋಟದ ನೀರು ಹರಿಯುವ ಕಾಲುವೆಗೆ

ಕಂದಕಕ್ಕೆ ಉರುಳಿದ ಕಾರು | ಐವರು ಪ್ರಾಣಾಪಾಯದಿಂದ ಪಾರು Read More »

error: Content is protected !!
Scroll to Top