ಅಪಘಾತ

ಕಾರ್ಕಳದ ಉದ್ಯಮಿಗೆ 2 ಕೋಟಿ ರೂ. ವಂಚನೆ

ಪಾಲುದಾರಿಕೆ ವ್ಯವಹಾರದಲ್ಲಿ ಬೆನ್ನಿಗಿರಿದ ಪರಂಗಿಪೇಟೆಯ ಸ್ನೇಹಿತರು ಉಡುಪಿ : ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುವ ಭರವಸೆ ನೀಡಿ ಉದ್ಯಮಿಯೋರ್ವರಿಗೆ 2 ಕೋಟಿ ರೂ. ವಂಚಿಸಿದ ಪ್ರಕರಣ ಕಾರ್ಕಳದಲ್ಲಿ ಸಂಭವಿಸಿದೆ. ಈ ಕುರಿತು ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ ಮಾರ್ಕೆಟ್‌ ರಸ್ತೆಯಲ್ಲಿರುವ ಮಹಾಲಕ್ಷ್ಮೀ ಪ್ರಭಾ ಕಾಂಪ್ಲೆಕ್ಸ್‌ನಲ್ಲಿ ಮೊಬೈಲ್‌ ಅಂಗಡಿ ಹೊಂದಿರುವ ಮರ್ಣೆಯ ದಾವುದುಲ್‌ ಹಕೀಂ ಎಂಬವರಿಗೆ ಕಳೆದ 20 ವರ್ಷಗಳಿಂದ ಪರಿಚಯಸ್ಥರಾಗಿರುವ ಫರಂಗಿಪೇಟೆಯ ಅಬ್ದುಲ್‌ ರಹಿಮಾನ್‌, ಹಫೀಜ್ ಟಿ.ಎ., ಅಯ್ಯೂಬ್‌, ಸದಕತ್ತುಲ್ಲಾ, ಮೊಹಮ್ಮದ್‌ ಎಂಬವರು ವಂಚನೆ […]

ಕಾರ್ಕಳದ ಉದ್ಯಮಿಗೆ 2 ಕೋಟಿ ರೂ. ವಂಚನೆ Read More »

ಸೇತುವೆಯಿಂದ ನದಿ ನೀರಿಗೆ ಬಿದ್ದು ಮಹಿಳೆ ಮೃತ್ಯು

ಮಂಗಳೂರು: ಸೇತುವೆಯಿಂದ ನದಿ ನೀರಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳೂರಿನ ಮರವೂರು ಬಳಿಯ ಸೇತುವೆ ಬಳಿ ಭಾನುವಾರ ನಡೆದಿದೆ. ಕುಂಜತ್ತಬೈಲು ನಿವಾಸಿ ರೇವತಿ (60) ಮೃತಪಟ್ಟ ಮಹಿಳೆ. ಭಾನುವಾರ ಬೆಳಿಗ್ಗೆ 7.30 ರಿಂದ 8.30ರ ಸುಮಾರಿಗೆ ಅಂಗಡಿಗೆ ಹೋಗುತ್ತಿದ್ದ ರೇವತಿ ಅವರು ಮರವೂರು ಸೇತುವೆಯ ಬಳಿ ಏಕಾಏಕಿ ನದಿಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯರು ಅವರ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂಗಡಿಗೆ ಹೋಗಿದ್ದ ರೇವತಿಯನ್ನು ಕಾಣದಾದಾಗ ಮನೆಯವರು ಅವರನ್ನು ಹುಡುಕುತ್ತಾ ಬಂದಿದ್ದರು.

ಸೇತುವೆಯಿಂದ ನದಿ ನೀರಿಗೆ ಬಿದ್ದು ಮಹಿಳೆ ಮೃತ್ಯು Read More »

ಟ್ರಕ್ – ಬೈಕ್‍ ಡಿಕ್ಕಿ | ಬೈಕ್ ಸವಾರ ಸ್ಥಳದಲ್ಲೇ ಮೃತ್ಯು ; ಟ್ರಕ್ ಬೆಂಕಿಗಾಹುತಿ

ಉಡುಪಿ : ಬೈಕ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ  ಟ್ರಕ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿ ಬೈಕ್‍ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜ.10ರ ಶುಕ್ರವಾರ ಮದ್ಯರಾತ್ರಿ ರಾ.ಹೆ. 66 ರ ಉದ್ಯಾವರ ಕೊರಂಗ್ರಪಾಡಿ ಬಳಿ ನಡೆದಿದೆ. ಕೊರಂಗ್ರಪಾಡಿಯಿಂದ ಉದ್ಯಾವರ ಮೂಲಕವಾಗಿ ಪಣಿಯರಿಗೆ ಬರುತ್ತಿದ್ದ ಬೈಕ್ ಸವಾರ ಪಣಿಯೂರು ನಿವಾಸಿ ಅವಿನಾಶ್ ಆಚಾರ್ಯ (19) ಮೃತ ಯುವಕ ಎನ್ನಲಾಗಿದೆ. ಉಡುಪಿಯಲ್ಲಿ ಪ್ಯಾರಾ ಮೆಡಿಕಲ್ ಕಲಿಯುತ್ತಿದ್ದ ಅವಿನಾಶ್ ಆಚಾರ್ಯ ರಾತ್ರಿ ಪರಿಚಯಸ್ಥರ ಮನೆಯ ಕಾರ್ಯಕ್ರಮಕ್ಕೆ ತೆರಳಿ, ಅಲ್ಲಿಂದ ಹಿಂತಿರುಗುತ್ತಿದ್ದ

ಟ್ರಕ್ – ಬೈಕ್‍ ಡಿಕ್ಕಿ | ಬೈಕ್ ಸವಾರ ಸ್ಥಳದಲ್ಲೇ ಮೃತ್ಯು ; ಟ್ರಕ್ ಬೆಂಕಿಗಾಹುತಿ Read More »

ಹೆಜ್ಜೇನು ಕಡಿತ : ಇಬ್ಬರಿಗೆ ಗಂಭೀರ ಗಾಯ

ನೆಲ್ಯಾಡಿ: ಹೆಜ್ಜೇನು ದಾಳಿ ನಡೆಸಿ ಇಬ್ಬರು ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಿನ್ನೆ ಬೆಳಿಗ್ಗೆ ನೆಲ್ಯಾಡಿ ಗ್ರಾಮದ ಮಾದೇರಿ ಸಮೀಪದ ತುಂಬೆತ್ತಡ್ಕ ಎಂಬಲ್ಲಿ ನಡೆದಿದೆ. ಗಾಯಗೊಂಡವರು ಮಾದೇರಿ ತುಂಬೆತ್ತಡ್ಕ ನಿವಾಸಿ ರೂಪಾವತಿ(30) ಹಾಗೂ ತಿಮ್ಮಪ್ಪ ಕುಂಬಾರ(49) ಎನ್ನಲಾಗಿದೆ. ರೂಪಾವತಿ ಎಂಬವರಿಗೆ ಮನೆ ಸಮೀಪವೇ ಏಕಾಏಕಿ ಹೆಜ್ಜೇನುಗಳು ದಾಳಿ ಮಾಡಿವೆ. ಇದರಿಂದ ವಿಚಲಿತಗೊಂಡ ರೂಪಾವತಿ ಜೋರಾಗಿ ಕಿರುಚಿದ್ದಾರೆ.  ರೂಪಾವತಿಯವರ ಬೊಬ್ಬೆ ಕೇಳಿ ಪಕ್ಕದ ಮನೆಯ ತಿಮ್ಮಪ್ಪ ಕುಂಬಾರ ಎನ್ನುವವರು ರಕ್ಷಣೆಗಾಗಿ ಗೋಣಿ ಚೀಲ ಹಿಡಿದು ಬಂದಿದ್ದರು.

ಹೆಜ್ಜೇನು ಕಡಿತ : ಇಬ್ಬರಿಗೆ ಗಂಭೀರ ಗಾಯ Read More »

ಬೈಕ್ ಅಪಘಾತದಲ್ಲಿ ಗಾಯಗೊಂಡ ನಿಶಾಂತ್, ಕಾರ್ತಿಕ್ ಅವರಿಗೆ ವಜ್ರತೇಜಸ್ ತಂಡದಿಂದ ಧನಸಹಾಯ ಹಸ್ತಾಂತರ

ಪುತ್ತೂರು : ದಾರಂದಕುಕ್ಕು ಸಮೀಪ ನಿನ್ನೆ ನಡೆದ ಬೈಕ್ ಮತ್ತು ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ವಿದ್ಯಾರ್ಥಿಗಳಾದ ಬೆಳ್ಳಿಪ್ಪಾಡಿಯ ನಿಶಾಂತ್ ಮತ್ತು ಕಾರ್ತಿಕ್ ಅವರಿಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಇದರ ಸೇವಾ ಪ್ರಕಲ್ಪವಾದ ವಜ್ರತೇಜಸ್ ತಂಡದಿಂದ ಧನಸಹಾಯ ನೀಡಲಾಯಿತು. ಗುರುವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ವಜ್ರತೇಜಸ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಂಗ್ರಹವಾದ ಮೊದಲ ಕಂತಿನ ಮೊತ್ತವನ್ನು ಅವರ ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಜ್ರತೇಜಸ್ ಅಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ, ವಿಶ್ವ

ಬೈಕ್ ಅಪಘಾತದಲ್ಲಿ ಗಾಯಗೊಂಡ ನಿಶಾಂತ್, ಕಾರ್ತಿಕ್ ಅವರಿಗೆ ವಜ್ರತೇಜಸ್ ತಂಡದಿಂದ ಧನಸಹಾಯ ಹಸ್ತಾಂತರ Read More »

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಧ್ವಂಸ

ಕಡಬ : ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಮನೆ ಸಂಪೂರ್ಣವಾಗಿ ಸುಟ್ಟಿರುವ ಘಟನೆ ಕಡಬ ತಾಲೂಕು ಆಲಂಕಾರು ಗ್ರಾಮದ ನೆಕ್ಕಿಲಾಡಿಯಲ್ಲಿ ನಡೆದಿದೆ. ವಿನೋದಾ ಎಂಬವರ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸುಮಾರು ರಾತ್ರಿ 8 ರ ವೇಳೆ ವಿದ್ಯುತ್ ಶಾರ್ಟ್ ಸಕ್ಯೂಟ್‌  ಸಂಭವಿಸಿದೆ. ಈ ವೇಳೆ  ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಿನೋದ ಅವರ ಮನೆ ಕಡೆ ತೆರಳಿ ನೋಡಿದಾಗ  ಬೆಂಕಿ ಮನೆಯೊಳಗೆ ಆವರಿಸಿಕೊಂಡಿರುವುದು  ಬೆಳಕಿಗೆ ಬಂದಿದೆ. ತಕ್ಷಣ ಮನೆಯೊಡತಿಗೆ ವಿಚಾರ ತಿಳಿಸಿ ಮನೆ ಬಾಗಿಲು ಮುರಿದು

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಧ್ವಂಸ Read More »

ಸುರತ್ಕಲ್ ನ ಹೊಸಬೆಟ್ಟು ಸಮುದ್ರಕ್ಕೆ ಪ್ರವಾಸ ಬಂದ ಮೂವರು ನೀರಿನಲ್ಲಿ ಕೊಚ್ಚಿಹೋಗಿ ಮೃತ್ಯು

ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಸಮುದ್ರದ ಜೆಟ್ಟಿ ಬಳಿ ಇರುವ ಬೀಚ್ ಗೆ ಪ್ರವಾಸಕ್ಕೆ ಬಂದು ನೀರಿಗೆ ಇಳಿದ ಮೂವರು ನೀರು ಪಾಲಾದ ಘಟನೆ ಇಂದು ನಡೆದಿದೆ. ಚಿತ್ರದುರ್ಗ ಜಿಲ್ಲೆಯ ುಪ್ಪರಿಗೇನಹಳ್ಳಿ ನಿವಾಸಿ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್ ಹಾಗೂ ಬೆಂಗಳೂರಿನ ಸತ್ಯವೇಲು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟವರು. ಮಂಗಳವಾರ ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿ ಹೊರಟು ಇಂದು ಮಧ್ಯಾಹ್ನ 12.30 ಕ್ಕೆ ಹೊಸಬೆಟ್ಟು ಬಳಿ ಇರುವ ಬೀಚ್ ಗೆ ಪ್ರವಾಸ ನಿಟ್ಟಿನಲ್ಲಿ ಬಂದಿದ್ದರು ಎನ್ನಲಾಗಿದೆ. ಈ ಸಂದರ್ಭ

ಸುರತ್ಕಲ್ ನ ಹೊಸಬೆಟ್ಟು ಸಮುದ್ರಕ್ಕೆ ಪ್ರವಾಸ ಬಂದ ಮೂವರು ನೀರಿನಲ್ಲಿ ಕೊಚ್ಚಿಹೋಗಿ ಮೃತ್ಯು Read More »

ರೈಲಿ ನಡಿಗೆ ಸಿಲುಕಿ ವ್ಯಕ್ತಿ ಮೃತ್ಯು..!

ಪುತ್ತೂರು : ರೈಲಿನಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪುತ್ತೂರಿನ ಕಬಕದಲ್ಲಿ ನಡೆದಿದೆ ಮೃತರನ್ನು ಕಲ್ಲಾಜೆ ಕೆದಿಲ ಗ್ರಾಮದ ಭರತ್ ಪೂಜಾರಿ (67) ಎನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ರೈಲ್ವೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ರೈಲಿ ನಡಿಗೆ ಸಿಲುಕಿ ವ್ಯಕ್ತಿ ಮೃತ್ಯು..! Read More »

ಬೈಕ್‍-ಕೆಎಸ್‍ ಆರ್ ಟಿಸಿ ಬಸ್ ಡಿಕ್ಕಿ : ಬೈಕ್‍ ಸವಾರರಿಗೆ ಗಂಭೀರ ಗಾಯ

ಪುತ್ತೂರು: ಬೈಕ್‍ ಹಾಗೂ ಕೆಎಸ್ ಆರ್ ಟಿ ಸಿ ಬಸ್  ಡಿಕ್ಕಿ ಹೊಡೆದ ಘಟನೆ ಪುತ್ತೂರು ಕೊಡಿಮರ ರಸ್ತೆಯ ಕೊಲ್ಯ ಎಂಬಲ್ಲಿ ನಡೆದಿದೆ. ಅಪಘಾತದ ಪರಿಣಾಮ ಬೈಕ್ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಸವಾರರು ಗಂಭೀರ ಗಾಯಗೊಂಡಿದ್ದು ಗಾಯಗೊಂಡವರನ್ನು ವಿದ್ಯಾರ್ಥಿಗಳಾದ ಬೆಳ್ಳಿಪ್ಪಾಡಿಯ ನಿಶಾಂತ್ ಮತ್ತು ಕಾರ್ತಿಕ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬೈಕ್‍-ಕೆಎಸ್‍ ಆರ್ ಟಿಸಿ ಬಸ್ ಡಿಕ್ಕಿ : ಬೈಕ್‍ ಸವಾರರಿಗೆ ಗಂಭೀರ ಗಾಯ Read More »

ಬೀದಿ ನಾಯಿ ದಾಳಿಯಿಂದ ತಪ್ಪಿಸಲು ಹೋಗಿ  ಪಾಳು ಬಾವಿಗೆ ಬಿದ್ದು ಬಾಲಕ ಮೃತ್ಯು

ಕಣ್ಣೂರು: ಬೀದಿ ನಾಯಿ ದಾಳಿಯಿಂದ ತಪ್ಪಿಸಲು ಓಡಿದ ಬಾಲಕ ಆವರಣವಿಲ್ಲದ ಪಾಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಣ್ಣೂರು ತೂವ್ವಕುನ್ನ್ ನಲ್ಲಿ ನಡೆದಿದೆ. ಚೇಲಕ್ಕೋಡ್ ಜುಮ್ಮಾ ಮಸೀದಿ ಬಳಿಯ ಉಸ್ಮಾನ್ ಎಂಬವರ ಪುತ್ರ, ತೂವ್ವಕುನ್ನ್ ಸರಕಾರಿ ಶಾಲೆಯ ನಾಲ್ಕನೆ ತರಗತಿ ವಿದ್ಯಾರ್ಥಿ ಮೊಹಮ್ಮದ್ ಫಸಲ್ (9)) ಮೃತಪಟ್ಟ ಬಾಲಕ. ಮೊಹಮ್ಮದ್ ಫಸಲ್ ಮನೆ ಸಮೀಪ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ‌ ಬೀದಿ ನಾಯಿ ಅವರತ್ತ ಓಡಿ ಬಂದಿದೆ. ಮಕ್ಕಳು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಬಳಿಕ ಫಸಲ್ ನಾಪತ್ತೆಯಾಗಿದ್ದ. ಮೊಹಮ್ಮದ್ ಫಸಲ್

ಬೀದಿ ನಾಯಿ ದಾಳಿಯಿಂದ ತಪ್ಪಿಸಲು ಹೋಗಿ  ಪಾಳು ಬಾವಿಗೆ ಬಿದ್ದು ಬಾಲಕ ಮೃತ್ಯು Read More »

error: Content is protected !!
Scroll to Top