ಅಪಘಾತ

ಕಣ್ಣೂರಿನಲ್ಲಿ ರೈಲಿನಿಂದ ಬಿದ್ದು ಕಡಬದ ಯುವಕ ಸುರೇಶ್ ಮೃತ್ಯು

ಕಡಬ: ಕಡಬ ಮೂಲಕ ಯುವಕನೋರ್ವ ಕಣ್ಣೂರಿನಲ್ಲಿ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಇಂದು ಸಂಭವಿಸಿದೆ. ಕಡಬ ತಾಲೂಕಿನ ಮರ್ದಾಳ ಬಂಟ್ರ ಗ್ರಾಮದ ನೀರಾಜೆ ನಿವಾಸಿ ಸುರೇಶ್ (34) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಸುರೇಶ್ ಕೇರಳದಲ್ಲಿ ಟಿಂಬರ್ ಕೆಲಸ ಮಾಡುತ್ತಿದ್ದು, ಗುರುವಾರ ರಾತ್ರಿ ರೈಲಿನಲ್ಲಿ ಊರಿಗೆ ಬರುತ್ತಿದ್ದರು. ಬರುವ ಮೊದಲು ತನ್ನ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದರು. ಇಂದು ಮುಂಜಾನೆ ಮನೆಯವರು ಸುರೇಶ್ ಅವರ ಮೊಬೈಲ್‍ ಗೆ ಕರೆ ಮಾಡಿದಾಗ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ವಿಚಾರ ತಿಳಿಸಿದ್ದಾರೆ. […]

ಕಣ್ಣೂರಿನಲ್ಲಿ ರೈಲಿನಿಂದ ಬಿದ್ದು ಕಡಬದ ಯುವಕ ಸುರೇಶ್ ಮೃತ್ಯು Read More »

ಬೈಕ್ ಚಕ್ರಕ್ಕೆ ಸಿಲುಕಿದ ಸೀರೆ:  ಮಹಿಳೆಗೆ ಗಂಭೀರ ಗಾಯ

ಸುಳ್ಯ: ಬೈಕಿನಲ್ಲಿ ತೆರಳುತ್ತಿದ್ದಾಗ ಬೈಕ್ ಚಕ್ರಕ್ಕೆ ಮಹಿಳೆಯೊಬ್ಬರ ಸೀರೆ ಸೆರಗು ಸುತ್ತಿಕೊಂಡ ಪರಿಣಾಮ ಬೈಕ್‍ನಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಇಂದು ನಡೆದಿದೆ. ಎಲಿಮಲೆ ನಿವಾಸಿ ಶಾಂಭವಿ ಘಟನೆಯಿಂದ ಗಂಭೀರ ಗಾಯಗೊಂಡವರು ಬೈಕ್‍ನಲ್ಲಿ ಹಿಂಬದಿ ಕುಳಿತು ಸುಳ್ಯಕ್ಕೆ ಬರುತ್ತಿದ್ದ ಸಂದರ್ಭ ಅವರ ಸೀರೆ ಬೈಕ್‍ ಚಕ್ರಕ್ಕೆ ಸುತ್ತಿಕೊಂಡಿದೆ. ಬೈಕ್‍ನಿಂದ ಬಿದ್ದ ಅವರನ್ನು ಸ್ಥಳೀಯರು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿದೆ.

ಬೈಕ್ ಚಕ್ರಕ್ಕೆ ಸಿಲುಕಿದ ಸೀರೆ:  ಮಹಿಳೆಗೆ ಗಂಭೀರ ಗಾಯ Read More »

ಟ್ಯಾಂಕರ್ ಪಲ್ಟಿ : ಚಾಲಕನಿಗೆ ಗಾಯ

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾದ ಘಟನೆ ಇಲ್ಲಿನ ಬೈಪಾಸ್ ರಸ್ತೆಯ ಉರ್ಲಾಂಡಿ ಸಮೀಪ ನಡೆದಿದೆ. ಅಪಘಾತದಲ್ಲಿ ಟ್ಯಾಂಕರ್ ಚಾಲಕನಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಹಲವಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ. ಅಪಘಾತದಿಂದಾಗಿ ಟ್ಯಾಂಕರ್ ನಲ್ಲಿದ್ದ ಆಯಿಲ್ ರಸ್ತೆಯಲ್ಲೆಲ್ಲಾ ಚೆಲ್ಲಿದೆ.

ಟ್ಯಾಂಕರ್ ಪಲ್ಟಿ : ಚಾಲಕನಿಗೆ ಗಾಯ Read More »

ಫುಟ್ ಪಾತ್ ಮೇಲೆರಗಿದ ಕಾರು: ಯುವತಿ ಸಾವು!

ಮಂಗಳೂರು: ಕುದ್ರೋಳಿ ದೇವಸ್ಥಾನಕ್ಕೆ ಬಂದು ನಡೆದುಕೊಂಡು ತೆರಳುತ್ತಿದ್ದ ಹುಡುಗಿಯರ ಮೇಲೆ ಕಾರು ಡಿಕ್ಕಿಯಾಗಿದ್ದು ಯುವತಿಯೊಬ್ಬಳು ಮೃತಪಟ್ಟ ಘಟನೆ ಮಂಗಳೂರಿನ ಮಣ್ಣಗುಡ್ಡದಲ್ಲಿ ನಡೆದಿದೆ. ಬುಧವಾರ ಸಂಜೆ 5.30ರ ವೇಳೆಗೆ ಘಟನೆ ನಡೆದಿದ್ದು ಸುರತ್ಕಲ್ ಕಾನ ಬಾಳ ನಿವಾಸಿ ರೂಪಶ್ರೀ (23) ಮೃತಪಟ್ಟವರು. ಸ್ವಾತಿ(26), ಹಿತ್ನವಿ (16), ಕೃತಿಕಾ (16), ಯತಿಕಾ(12) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ರೂಪಶ್ರೀ ಇತರ ನಾಲ್ಕು ಹುಡುಗಿಯರ ಜೊತೆಗೆ ಕುದ್ರೋಳಿ ದೇವಸ್ಥಾನಕ್ಕೆ ಬಂದಿದ್ದರು. ಸಂಜೆ ದೇವಸ್ಥಾನ ಕಡೆಯಿಂದ ಲೇಡಿಹಿಲ್ ಕಡೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ

ಫುಟ್ ಪಾತ್ ಮೇಲೆರಗಿದ ಕಾರು: ಯುವತಿ ಸಾವು! Read More »

ಪಿಕಪ್ ವಾಹನ ಡಿಕ್ಕಿ : ಬಾಲಕ ಮಹಮ್ಮದ್ ರಂಝೀನ್ ಮೃತ್ಯು

ಬೆಳ್ತಂಗಡಿ: ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಮೃತಪಟ್ಟ ಘಟನೆ ಬುಧವಾರ ಬೆಳ್ತಂಗಡಿ ಲಾಯಿಲ ವೃತ್ತದ ಬಳಿ ಸಂಭವಿಸಿದೆ. ಪಾರಂಕಿ ಗ್ರಾಮದ ಅರ್ತಿಲ ನಿವಾಸಿ ಮಹಮ್ಮದ್ ರಫೀಕ್ ಎಂಬವರ ಪುತ್ರ ಮಹಮ್ಮದ್ ರಂಝೀನ್ (10) ಮೃತಪಟ್ಟ ಬಾಲಕ. ಶಾಲೆಗೆ ರಜೆಯಿದ್ದರಿಂದ ಲಾಯಿಲದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಬಾಲಕ ಅಂಗಡಿಗೆ ಹೋಗಿ ಲಾಯಿಲ ವೃತ್ತದ ಬಳಿ ರಸ್ತೆ ದಾಟುತ್ತಿದ್ದ ವೇಳೆ ಉಜಿರೆಯಿಂದ ಬಂದ ಪಿಕಪ್ ಢಿಕ್ಕಿ ಹೊಡೆದಿದೆ. ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಬಾಲಕನನ್ನು ಸ್ಥಳೀಯರ ಸಹಕಾರದಿಂದ

ಪಿಕಪ್ ವಾಹನ ಡಿಕ್ಕಿ : ಬಾಲಕ ಮಹಮ್ಮದ್ ರಂಝೀನ್ ಮೃತ್ಯು Read More »

ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ!

ಸಿಲಿಂಡರ್ ಸ್ಫೋಟಗೊಂಡು ಕೆಫೆಯೊಂದಕ್ಕೆ ಬೆಂಕಿ ಹತ್ತಿಕೊಂಡಿದ್ದು, ವ್ಯಕ್ತಿಯೋರ್ವರು ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ. ನಾಲ್ಕನೇ ಮಹಡಿಯಿಂದ ಹಾರಿದ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಕೋರಮಂಗಲ ನೆಕ್ಸಾ ಶೋ ರೂಂ ಕಟ್ಟಡದ ಮೇಲ್ಭಾಗದ ಕೆಫೆಯೊಂದರಲ್ಲಿ ಬುಧವಾರ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ಬೆಂಕಿ ಕೆನ್ನಾಲಿಗೆ ಕಟ್ಟಡವನ್ನು ವ್ಯಾಪಿಸಿದ್ದು, ಇದರಿಂದ ತಪ್ಪಿಸಿಕೊಳ್ಳಲು ವ್ಯಕ್ತಿ ಕಟ್ಟಡದಿಂದ ಕೆಳಗೆ ಧುಮುಕಿದ್ದಾನೆ.

ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ! Read More »

ಸಿಡಿಲು ಬಡಿದು ಮನೆಗೆ ಹಾನಿ!

ಪುತ್ತೂರು: ಸಿಡಿಲು ಬಡಿದು ಮನೆಗೆ ಹಾನಿಯಾದ ಘಟನೆ ಸಾಲ್ಮರ ಸಮೀಪ ಮಂಗಳವಾರ ಸಂಭವಿಸಿದೆ. ಸಾಲ್ಮರ ಜಿಡೆಕಲ್ಲು ನಿವಾಸಿ ಜೆ.ಕೆ ಅಶ್ರಫ್ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಅಪಾರ ಹಾನಿ ಸಂಭವಿಸಿದೆ. ಪಕ್ಕದ ತೆಂಗಿನಮರಕ್ಕೂ ಹಾನಿಯುಂಟಾಗಿದೆ. ಮಂಗಳವಾರ ಸಂಜೆ ಸುರಿದ ಮಳೆಯೊಂದಿಗೆ ಸಿಡಿಲಿನ ಆರ್ಭಟವೂ ಇತ್ತು. ಇದರಿಂದ ಹಲವೆಡೆ ಹಾನಿ ಸಂಭವಿಸಿದೆ.

ಸಿಡಿಲು ಬಡಿದು ಮನೆಗೆ ಹಾನಿ! Read More »

ಮಂಗಳೂರು : ಮನೆಗೆ ಸಿಡಿಲು ಬಡಿದು ತಾಯಿ ಮತ್ತು ಮಗುವಿಗೆ ಗಾಯ

ಮಂಗಳೂರು : ಮನೆಗೆ ಸಿಡಿಲು ಬಡಿದು ಮನೆಯಲ್ಲಿದ್ದ ತಾಯಿ ಮತ್ತು ಮಗು ಗಾಯಗೊಂಡ ಘಟನೆ ಮಂಗಳೂರು ನಗರದ ಹೊರವಲಯದ ವಾಮಾಂಜೂರಿನಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಶ್ವೇತಾ ಹಾಗೂ 5 ವರ್ಷದ ಮಗುವಿನ ಕಿವಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಸಂದರ್ಭ ಮನೆಯಲ್ಲಿದ್ದ ನಾಲ್ವರು ಸದಸ್ಯರಿದ್ದು ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು : ಮನೆಗೆ ಸಿಡಿಲು ಬಡಿದು ತಾಯಿ ಮತ್ತು ಮಗುವಿಗೆ ಗಾಯ Read More »

ಸಿಡಿಲಿಗೆ ಸುಟ್ಟು ಹೋದ ಫೊಟೋ ಸ್ಟುಡಿಯೋ: ಲಕ್ಷಾಂತರ ರೂ. ಹಾನಿ!

ಪುತ್ತೂರು: ಪುತ್ತೂರು  ಮುಖ್ಯ ರಸ್ತೆಯಲ್ಲಿರುವ ಪೋಟೋ ಡೆವಲಪ್ ಸ್ಟುಡಿಯೋ ಆಡ್ ಲ್ಯಾಬ್ ಮಂಗಳವಾರ ಮಧ್ಯಾಹ್ನ ಬಂದ ಸಿಡಿಲಿಗೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಸರಣಿ ಸಿಡಿಲು ಬಂದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಕಂಪ್ಯೂಟರ್ ಸೇರಿ ಎಲ್ಲಾ ಉಪಕರಣಗಳು ಸುಟ್ಟು ಹೋಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಅಂಗಡಿಯವರು ಬೆಂಕಿ ಶಮನ ಮಾಡುವ ಕಾರ್ಯ ಮಾಡಿದ್ದು, ಅಗ್ನಿಶಾಮಕ ದಳ ಆಗಮಿಸಿ ಸುಟ್ಟವಸ್ತುಗಳನ್ನು ಹಾಗೂ ಬೆಂಕಿಗೆ ತೀವ್ರ ಗೊಳ್ಳಲು ಸಹಕರಿಸುವ ವಸ್ತುಗಳನ್ನು ಹೊರ ಹಾಕುವ ಕಾರ್ಯ ಮಾಡಿದರು. ಅವಘಡದಿಂದ ಲಕ್ಷಾಂತರ ರೂಪಾಯಿ

ಸಿಡಿಲಿಗೆ ಸುಟ್ಟು ಹೋದ ಫೊಟೋ ಸ್ಟುಡಿಯೋ: ಲಕ್ಷಾಂತರ ರೂ. ಹಾನಿ! Read More »

ಸಿಎನ್‍ಜಿ ಆಟೋ ರಿಕ್ಷಾಕ್ಕೆ ಬೆಂಕಿ: ಇಬ್ಬರು ಸಜೀವ ದಹನ

ಆಟೋ ರಿಕ್ಷಾವೊಂದಕ್ಕೆ ಹಠಾತ್ತನೇ ಬೆಂಕಿ ತಗುಲಿ ಇಬ್ಬರು ಸಜೀವ ದಹನವಾದ ಘಟನೆ ಕಣ್ಣೂರಿನ ಕತಿರೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಚಾಲಕ ಅಭಿಲಾಷ್ (37) ಮತ್ತು ಆತನ ಸ್ನೇಹಿತ ಸಜೀಶ್ (36) ಸುಟ್ಟು ಕರಕಲಾಗಿದ್ದಾರೆ. ಆಟೋರಿಕ್ಷಾ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಟೋ ಪಲ್ಟಿಯಾಗಿದ್ದು, ಸಿಎನ್ ಜಿ ಸಿಲಿಂಡರ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಆಟೋ ರಿಕ್ಷಾದ ಹತ್ತಿರಕ್ಕೂ ಹೋಗಲು ಆಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದು, ಪೊಲೀಸರು ಮೃತದೇಹಗಳನ್ನು  ಹೊರ

ಸಿಎನ್‍ಜಿ ಆಟೋ ರಿಕ್ಷಾಕ್ಕೆ ಬೆಂಕಿ: ಇಬ್ಬರು ಸಜೀವ ದಹನ Read More »

error: Content is protected !!
Scroll to Top