ಮರದಿಂದ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು
ಪುತ್ತೂರು: ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅರಿಯಡ್ಕ ದಲ್ಲಿ ನಡೆದಿದೆ. ಅರಿಯಡ್ಕದ ದಿ.ಅಣ್ಣಯ್ಯ ನಾಯ್ಕರ ಪುತ್ರ ಕೃಷ್ಣಪ್ಪ (55) ಮೃತಪಟ್ಟವರು. ಮನೆಯ ಹತ್ತಿರದ ತೋಟದಲ್ಲಿ ಮರವೊಂದರ ಗೆಲ್ಲು ಕಡಿಯುತ್ತಿರುವ ಸಂದರ್ಭ ಮರದಿಂದ ಬಿದ್ದು ಗಾಯಗೊಂಡಿದ್ದರು. ಬಳಿಕ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಮೃತರು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮರದಿಂದ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »