ಅಪಘಾತ

ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ | ಸೋರಿಕೆಯಾಗುತ್ತಿರುವ ಗ್ಯಾಸ್, ಸಂಚಾರ ಅಸ್ತವ್ಯಸ್ತ

ಸುಳ್ಯ: ಗ್ಯಾಸ್ ಸಿಲಿಂಡರ್ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ ಪಲ್ಟಿಯಾದ ಘಟನೆ ಇಂದು ಸಂಜೆ ಕನಕಮಜಲು ಗ್ರಾಮದ ಕೋಡಿ ತಿರುವಿನಲ್ಲಿ ನಡೆದಿದೆ. ಲಾರಿ ಪಲ್ಟಿಯಾದ ಪರಿಣಾಮ ಗ್ಯಾಸ್ ಸೋರೆಯಾಗುತ್ತಿದ್ದು, ಹೆದ್ದಾರಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಮಡಿಕೇರಿ ಕಡೆಯಿಂದ ಮಂಗಳೂರಿಗೆ ಗ್ಯಾಸ್ ಸಿಲಿಂಡರ್ ಸಾಗಾಟ ಮಾಡುತ್ತಿದ್ದ ಲಾರಿ ಜೋರಾಗಿ ಸುರಿಯುವ ಮಳೆಯ ಮಧ್ಯೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗುತ್ತಿರುವುದಾಗಿ ತಿಳಿದುಬಂದಿದೆ. ಇದೀಗ ಸ್ಥಳಕ್ಕೆ ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿಗಳು: […]

ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ | ಸೋರಿಕೆಯಾಗುತ್ತಿರುವ ಗ್ಯಾಸ್, ಸಂಚಾರ ಅಸ್ತವ್ಯಸ್ತ Read More »

ಭಾರೀ ಗಾಳಿ ಮಳೆಗೆ ಧರಾಶಾಹಿಯಾದ ಮರ | ನೆಲಕ್ಕುರುಳಿದ 11 ವಿದ್ಯುತ್ ಕಂಬಗಳು

ಪುತ್ತೂರು: ಭಾನುವಾರ ಸುರಿದ ಭಾರೀ ಗಾಳಿ ಮಳೆಗೆ ನಗರದ ಬಪ್ಪಳಿಗೆಯಲ್ಲಿ ಮೇ ಫ್ಲವರ್ ಮರ ಧರಾಶಾಹಿಯಾದ ಪರಿಣಾಮ 11 ಕರೆಂಟ್ ಕಂಬಗಳು ನೆಲಕ್ಕುರುಳಿವೆ. ಜನನಿಬಿಡ ಪ್ರದೇಶದಲ್ಲೇ ಇದ್ದ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಉರುಳಿ ಬಿದ್ದುದಲ್ಲದೆ ವಾಹನ ಸವಾರರು ಕೂದಳೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ಮರ ಬಿದ್ದ ಪರಿಣಾಮ ಬಲ್ನಾಡು-ವಿಟ್ಲ  ರಸ್ತೆ ಸಂಚಾರಕ್ಕೆ ತಡೆ ಉಂಟಾದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಮನೆಯೊಂದರ ಕಾಂಪೌಂಡ್ ಗೋಡೆಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

ಭಾರೀ ಗಾಳಿ ಮಳೆಗೆ ಧರಾಶಾಹಿಯಾದ ಮರ | ನೆಲಕ್ಕುರುಳಿದ 11 ವಿದ್ಯುತ್ ಕಂಬಗಳು Read More »

ಕಾರು-ಟೆಂಪೋ ಟ್ರಾವೆಲರ್ ಡಿಕ್ಕಿ | ವಾಹನಗಳು ಜಖಂ

ಸುಳ್ಯ: ಕಾರು ಹಾಗೂ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದುಕೊಂಡ ಘಟನೆ ಇದೀಗ ಸುಳ್ಯದ ಪರಿವಾರಕಾನದ ಬಳಿ ನಡೆದಿದೆ. ಅಪಘಾತದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದೆ. ಚಾಲಕ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಇನ್ನಷ್ಟೇ ಬರಬೇಕಿದೆ.

ಕಾರು-ಟೆಂಪೋ ಟ್ರಾವೆಲರ್ ಡಿಕ್ಕಿ | ವಾಹನಗಳು ಜಖಂ Read More »

ವೀರಮಂಗಲ, ಕಾಯರ್ ಮುಗೇರು, ಪಲ್ಲತ್ತೋಡಿ ಪರಿಸರದಲ್ಲಿ ಆನೆ ಪ್ರತ್ಯಕ್ಷ | ಕೃಷಿ ತೋಟಗಳಿಗೆ ಹಾನಿ

ಪುತ್ತೂರು: ವೀರಮಂಗಲ, ಕಾಯರ್ ಮುಗೇರು ಹಾಗೂ ಪಲ್ಲತ್ತೋಡಿ, ಖಂಡಿಗೆ  ಪರಿಸರದಲ್ಲಿ ಇಂದು ಆನೆ ಪ್ರತ್ಯಕ್ಷವಾಗಿದ್ದು, ಕೃಷಿ ತೋಟಗಳಿಗೆ ಹಾನಿ ಮಾಡಿದೆ. ಬಾಳೆಗಿಡ, ಅಡಕೆ ಮರಗಳಿಗೆ ಆನೆ ಹಾನಿ ಮಾಡಿದ್ದು, ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಆನೆಯನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕು ಎಂದು ಸ್ಥಳೀಯರು ವಿನಂತಿಸಿದ್ದಾರೆ. ಸವಣೂರು ಪರಿಸರದಿಂದ ನೇರವಾಗಿ ಗೌರಿ ಹೊಳೆ ದಾಟಿ ಬಂದಿರುವ ಆನೆ  ಅರ್ತಿಕೆರೆ, ಕಾಯರ್ ಮುಗೇರು, ವೀರಮಂಂಗಲ ಮುಂತಾದ ಕಡೆಗಳಲ್ಲಿ ತಿರುಗಾಡುತ್ತಿದೆ. ಪರಿಣಾಮ ಜನರು ಆತಂಕಿತರಾಗಿದ್ದಾರೆ. ಆನೆಯ ಹೆಜ್ಜೆ ಗುರುತು ಕಂಡು

ವೀರಮಂಗಲ, ಕಾಯರ್ ಮುಗೇರು, ಪಲ್ಲತ್ತೋಡಿ ಪರಿಸರದಲ್ಲಿ ಆನೆ ಪ್ರತ್ಯಕ್ಷ | ಕೃಷಿ ತೋಟಗಳಿಗೆ ಹಾನಿ Read More »

ಬೈಕ್ ಕಾರು ಡಿಕ್ಕಿ | ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ನೆಲ್ಯಾಡಿ: ಬೈಕ್‌ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪ ರೆಖ್ಯ ಗ್ರಾಮದ ನೇಲ್ಯಡ್ಕ ಎಂಬಲ್ಲಿ ಜೂ. 5ರಂದು ರಾತ್ರಿ ನಡೆದಿದೆ. ಮೃತಪಟ್ಟವರನ್ನು ಬೆಳ್ತಂಗಡಿ ತಾಲೂಕು ರೆಖ್ಯ ಗ್ರಾಮದ ನಳಾಲು ನಿವಾಸಿ ರವೀಂದ್ರ (48) ಎಂದು ಗುರುತಿಸಲಾಗಿದೆ. ಅವರು ಬೈಕ್‌ನಲ್ಲಿ ಎಂಜಿರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಮನೆ ಕಡೆಗೆ ಬರುತ್ತಿದ್ದ ವೇಳೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿ ಈ ಅಪಘಾತ

ಬೈಕ್ ಕಾರು ಡಿಕ್ಕಿ | ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಸಿಡಿಲು ಬಡಿದು ನಾಯಿ, ಹಸು ಮೃತ್ಯು | ವಿದ್ಯುತ್‍ ಉಪಕರಣಗಳಿಗೂ ಹಾನಿ

ಬೆಳ್ತಂಗಡಿ: ಭಾನುವಾರ ಸಂಜೆ ಭಾರೀ ಸಿಡಿಲಿಗೆ ಮನೆಯೊಂದರ ಸಾಕು ನಾಯಿ ಹಾಗೂ ಹಸು ಮೃತಪಟ್ಟ ಘಟನೆ ರೆಖ್ಯ ಗ್ರಾಮದಲ್ಲಿ ನಡೆದಿದೆ. ಭಾನುವಾರ ಸಂಜೆ ತಾಲೂಕಿನಲ್ಲಿ ಮಳೆಯಾಗಿದ್ದು ಈ ಸಂದರ್ಭದಲ್ಲಿ ರೆಖ್ಯ ಗ್ರಾಮದ ಸುಂದರ ಗೌಡ ಕುರುಡೇಲು ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ವೈಯರುಗಳು, ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಅಲ್ಲದೆ ಹಟ್ಟಿಯಲ್ಲಿದ್ದ ಹಸು ಹಾಗೂ ಮನೆಯ ಅಂಗಳದಲ್ಲಿದ್ದ ನಾಯಿ ಸಿಡಿಲಿಗೆ ಬಲಿಯಾಗಿವೆ. ಕೊಕ್ಕಡದ ಹಳ್ಳಿಂಗೇರಿಯ ನಿತೇಶ್ ರವರ ಮನೆಗೆ ಸಿಡಿಲು ವಿದ್ಯುತ್ ಉಪಕರಣಗಳಾದ ಫ್ಯಾನ್,

ಸಿಡಿಲು ಬಡಿದು ನಾಯಿ, ಹಸು ಮೃತ್ಯು | ವಿದ್ಯುತ್‍ ಉಪಕರಣಗಳಿಗೂ ಹಾನಿ Read More »

ಈಜಲು ತೆರಳಿದ ಮುಂಬೈ ಮೂಲದ ಇಬ್ಬರು ಬಾಲಕಿಯರು ಮೃತ್ಯು

ಚಿಕ್ಕಬಳ್ಳಾಪು: ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಚೇನಹಳ್ಳಿ ಬಳಿ ಇರುವ ದಂಡಿಗಾನಹಳ್ಳಿ ಡ್ಯಾಮ್‌ನಲ್ಲಿ ನಡೆದಿದೆ. ಮಹಾರಾಷ್ಟ್ರದ ಮುಂಬೈ ಮೂಲದ ಆಲಿಯಾ ಪಾಟೀಲ್ (17) ಹಾಗೂ ಜೋಯ ಪಾಟೀಲ್(14) ಮೃತಪಟ್ಟವರು. ಬೇಸಿಗೆಯ ರಜೆ ಹಿನ್ನೆಲೆಯಲ್ಲಿ ಮುಂಬೈ ಮೂಲದ ಬಾಲಕಿಯರು ಗೌರಿಬಿದನೂರು ನಗರದ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಇನ್ನೆರಡು ದಿನಗಳ ನಂತರ ಮುಂಬೈಗೆ ವಾಪಸ್ ಹೊರಡಲಿದ್ದು, ದಂಡಿಗಾನಹಳ್ಳಿ ಜಲಾಶಯವನ್ನು ಕಣ್ಣುಂಬಿಕೊಳ್ಳಬೇಕು ಎಂದು ಜಲಾಶಯಕ್ಕೆ ಹೋದವರು ಜಲಾಶಯದ ಬಳಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈಜಲು ತೆರಳಿದ ಮುಂಬೈ ಮೂಲದ ಇಬ್ಬರು ಬಾಲಕಿಯರು ಮೃತ್ಯು Read More »

ಬೈಕ್-ಟಿಪ್ಪರ್ ಡಿಕ್ಕಿ : ಬೈಕ್ ಸವಾರ ಮೃತ್ಯು

ಬೆಳ್ತಂಗಡಿ : ಬೈಕ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬೆಳ್ತಂಗಡಿ ಹಳೆಕೋಟೆ ಪೆಟ್ರೋಲ್ ಪಂಪ್ ಬಳಿ ಇಂದು ನಡೆದಿದೆ. ಅಪಘಾತದಿಂದ ಗಂಭೀರ ಗಾಯಗೊಂಡ ಬೈಕ್‍ ಸವಾರನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಈ ವೇಳೆ ಮೃತಪಟ್ಟರೆನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಬೈಕ್-ಟಿಪ್ಪರ್ ಡಿಕ್ಕಿ : ಬೈಕ್ ಸವಾರ ಮೃತ್ಯು Read More »

ಗ್ಯಾಸ್ ಟ್ಯಾಂಕರ್ ಪಲ್ಟಿ : ಸಂಚಾರಕ್ಕೆ ಅಡೆತಡೆ

ಬಂಟ್ವಾಳ : ಗ್ಯಾಸ್‌ ಟ್ಯಾಂಕ‌ರ್ ಪಲ್ಟಿಯಾಗಿ ಡಿವೈಡರ್ ಗೆ ಬಿದ್ದ ಘಟನೆ ತುಂಬೆ ಸಮೀಪದ ಕಡೆಗೋಳಿಯಲ್ಲಿ ನಡೆದಿದೆ. ಮಂಗಳೂರಿನಿಂದ ಗ್ಯಾಸ್‌ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕ್‌ಗಳು ಪಲ್ಟಿಯಾಗಿದ್ದು, ಯಾವುದೇ ಲಿಕೇಜ್ ಉಂಟಾಗಿಲ್ಲ. ಬಂಟ್ವಾಳ ಅಗ್ನಿಶಾಮಕ ದಳದವರು, ಸಂಚಾರ ಪೊಲೀಸರು, ಸ್ಥಳೀಯರು ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.

ಗ್ಯಾಸ್ ಟ್ಯಾಂಕರ್ ಪಲ್ಟಿ : ಸಂಚಾರಕ್ಕೆ ಅಡೆತಡೆ Read More »

ಲಾರಿ-ಬೈಕ್ ಅಪಘಾತ : ಬೈಕ್ ಸವಾರ ನೆಲ್ಯಾಡಿಯ ಯುವಕ ಮೃತ್ಯು

ನೆಲ್ಯಾಡಿ : ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನೆಲ್ಯಾಡಿಯ ಯುವಕ ಬೈಕ್ ಸವಾರ ಮೃತಪಟ್ಟ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ನೆಲ್ಯಾಡಿ ಎಂಜಿರ ಪರಕ್ಕಳ ನಿವಾಸಿ ಸ್ನೇರಿಯಾ ಎಂಬವರ ಪುತ್ರ ಥೋಮಸ್ ಮೃತಪಟ್ಟ ಯುವಕ. ಥೋಮಸ್ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, ಮನೆಯಿಂದ ಬೆಂಗಳೂರಿಗೆ ಬೈಕ್‍ ನಲ್ಲಿ ತೆರಳಿದ್ದು, ನೆಲಮಂಗಲ ಸಮೀಪಿಸುತ್ತಿದ್ದಂತೆ ಅಪಘಾತ ಸಂಭವಿಸಿದೆ. ಲಾರಿಯಡಿಗೆ ಬಿದ್ದ ಥೋಮಸ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಲಾರಿ-ಬೈಕ್ ಅಪಘಾತ : ಬೈಕ್ ಸವಾರ ನೆಲ್ಯಾಡಿಯ ಯುವಕ ಮೃತ್ಯು Read More »

error: Content is protected !!
Scroll to Top