ಭಾರೀ ಗಾಳಿಮಳೆ : ಮನೆ ಮೇಲೆ ಬಿದ್ದ ತೆಂಗಿನಮರ
ಪುತ್ತೂರು: ಇಂದು ಸಂಜೆ ಸುರಿದ ಭಾರೀ ಗಾಳಿ ಮಳೆಗೆ ನಗರಸಭಾ ವ್ಯಾಪ್ತಿಯ ಗುಂಪಕಲ್ಲು ಎಂಬಲ್ಲಿ ಮನೆಯೊಂದರ ಮೇಲೆ ತೆಂಗಿನಮರ ಬಿದ್ದು ಮನೆಗೆ ಹಾನಿ ಉಂಟಾದ ಘಟನೆ ನಡೆದಿದೆ. ಅಕ್ಕಪಕ್ಕದಲ್ಲಿದ್ದ ಶ್ವೇತಾ ಹಾಗೂ ವಿಜಯ ಎಂಬವರ ಮನೆ ಮೇಲೆ ತೆಂಗಿ ಮರ ಬಿದ್ದು ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಪರಿಶೀಲನೆ ಮಾಡಿ ಮನೆ ಮೇಲೆ ಬಿದ್ದ ತೆಂಗಿನ ಮರವನ್ನು ತೆರವುಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾರೀ ಗಾಳಿಮಳೆ : ಮನೆ ಮೇಲೆ ಬಿದ್ದ ತೆಂಗಿನಮರ Read More »