ಅಪಘಾತ

ವೇಣೂರು ಬರ್ಕಜೆಯಲ್ಲಿ ನದಿಗೆ ಇಳಿದ ಮೂವರು ನೀರು ಪಾಲು !

ವೇಣೂರು ಬರ್ಕಜೆ ಎಂಬಲ್ಲಿ ಮೂವರು ಯುವಕರು ನೀರುಪಾಲಾದ ಘಟನೆ ಇಂದು ನಡೆದಿದೆ. ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಕಾರ್ಯಕ್ರಮದ ನಿಮ್ಮಿತ ಬಂದು ಮೂಡಬಿದ್ರೆ ತಾಲೂಕಿನ ಎಡಪದವು ನಿವಾಸಿ ಲಾರೆನ್ಸ್(20) , ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್(19) , ಬಂಟ್ವಾಳ ಗ್ರಾಮದ ವಗ್ಗದ ಜೈಸನ್(19) ನೀರು ಪಾಲಾದವರು ಸ್ಥಳೀಯ ಕುಟುಂಬದ ಮನೆಗೆ ನೆಂಟರಾಗಿ ಬಂದಿದ್ದ ಮೂವರು ನದಿಗೆ ಸ್ನಾನ ಮಾಡಲು ತೆರಳಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೂವರು ಮೃತದೇಹ ನೀರಿನಿಂದ ಹೊರತೆಗೆಯಲಾಗಿದ್ದು. […]

ವೇಣೂರು ಬರ್ಕಜೆಯಲ್ಲಿ ನದಿಗೆ ಇಳಿದ ಮೂವರು ನೀರು ಪಾಲು ! Read More »

ಸಾಲ ಬಾಧೆಯಿಂದ ನೇಣಿಗೆ ಶರಣು

ಬೆಳ್ತಂಗಡಿ : ಸಾಲಗಾರರ ಬಾಧೆ ತಡೆಯಲಾಗದೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೆಂಗುಡೇಲು ನಿವಾಸಿ, ಪೂವಾಣಿ  ಗೌಡ ಮೃತ ಪಟ್ಟ ವ್ಯಕ್ತಿ. ಪೂವಣಿ ಗೌಡರವರು ಅವರದ್ದೆ ತೋಟದಲ್ಲಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.  ಪೂವಣಿ ಗೌಡ ಅವರು ಸಾಲ ಬಾಧೆಯಿಂದ ನೊಂದಿದ್ದರು. ಈ ಕಾರಣಕ್ಕಾಗಿ ಆತ್ಮ ಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಾಲ ಬಾಧೆಯಿಂದ ನೇಣಿಗೆ ಶರಣು Read More »

ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ನಿಧನ

ಪುತ್ತೂರು : ಶಿಕ್ಷಕ, ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ಪೂಜಾರಿ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಮಾಣಿಯವರಾಗಿದ್ದು, ಬೊಳುವಾರಿನಲ್ಲಿ ವಾಸವಾಗಿದ್ದರು. ಕೆಲ ವರ್ಷಗಳಿದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಗುಣ ಮುಖರಾಗಿದ್ದು, ಆರೋಗ್ಯವಾಗಿದ್ದರು. ಸುಳ್ಯ ಗಾಂಧಿನಗರ ಶಾಲೆಯಲ್ಲಿ ಮುಖ್ಯಗುರುಗಳಾಗಿದ್ದು, ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ನ.25ರಂದು ಬೆಳಗ್ಗೆ ಬೊಳುವಾರಿನ ವಾಸವಿದ್ದ ರೂಂನಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ತಿಳಿದು ಬಂದಿದೆ.

ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ನಿಧನ Read More »

ಗುಂಡ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ | 20 ಕ್ಕೂ ಅಧಿಕ ಮಂದಿಗೆ ಗಾಯ

ಪುತ್ತೂರು: ಸರಕಾರಿ ಬಸ್, ಖಾಸಗಿ ಬಸ್ ಹಾಗೂ ಕಾರಿನ ನಡುವೆ ನಡೆದ ಸರಣಿ ಅಪಘಾತದಲ್ಲಿ 20 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಬೆಂಗಳೂರು ಮೂಲದ ಕಾಲೇಜು ವಿದ್ಯಾರ್ಥಿಗಳು ಕುಂದಾಪುರಕ್ಕೆ ಪ್ರವಾಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾಗಿ ಕೆಎಸ್ಸಾರ್ಟಿಸಿ ಬಸ್ ಗೆ ಢಿಕ್ಕಿ ಹೊಡೆದಿದೆ. ಈ ಸಂದರ್ಭ ಹಿಂದಿನಿಂದ ಬರುತ್ತಿದ್ದ ಕಾರೊಂದು ಕೆಎಸ್ಸಾರ್ಟಿಸಿ ಬಸ್ ಗೆ ಢಿಕ್ಕಿ ಹೊಡೆದು

ಗುಂಡ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ | 20 ಕ್ಕೂ ಅಧಿಕ ಮಂದಿಗೆ ಗಾಯ Read More »

ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ  ಮೃತ ದೇಹ ಪತ್ತೆ

ಬೆಳ್ತಂಗಡಿ :  ಧರ್ಮಸ್ಥಳ ನೇತ್ರಾವತಿ ನದಿ ನೀರಿನಲ್ಲಿ ಸುಮಾರು 50-55 ವರ್ಷದ ಅಪರಿಚಿತ ಗಂಡಸಿನ ಮೃತ ದೇಹ ನ.21ರಂದು ಪತ್ತೆಯಾಗಿದೆ. ನದಿಯಲ್ಲಿದ್ದ ಮೃತದೇಹವನ್ನು ಎತ್ತುವಲ್ಲಿ ಶೌರ್ಯ ವಿಪತ್ತು ತಂಡ ಸಹಕರಿಸಿದೆ. ಕಪ್ಪು ಬಣ್ಣದ ಒಳಚಡ್ಡಿ ಮಾತ್ರ ಧರಿಸಿಕೊಂಡಿದ್ದು, ಎಡಕಾಲಿನ ಪಾದದ ಬಳಿ ಹಳೆಯ ಗಾಯವಿರುತ್ತದೆ. ಮೃತದೇಹನ್ನು ಮಂಗಳೂರು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಶವಗಾರದ ವಾರೀಸುದಾರರ ಪತ್ತೆಯ ಬಗ್ಗೆ ಇರಿಸಲಾಗಿದೆ, ಮೃತರ ವಾರೀಸುದಾರರು ಪತ್ತೆಯಾದಲ್ಲಿ ಪೋಲಿಸ್‍ ಠಾಣೆ: ೮೨೭೭೯೮೬೪೪೭ ಮತ್ತು ಬೆಳ್ತಂಗಡಿ ಗ್ರಾಮಾಂತರ ವೃತ್ತ

ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ  ಮೃತ ದೇಹ ಪತ್ತೆ Read More »

ಶಾಲಾ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮನೆಗೆ ಡಿಕ್ಕಿ  ಹೊಡೆದ ಬಸ್

ಪುತ್ತೂರು: ಮದುವೆಗೆ ತೆರಳುತ್ತಿದ್ದ ಬಸ್ದೊಂದು ಶಾಲಾ ವಾಹನಕ್ಕೆ ಡಿಕ್ಕಿ ಹೊಡೆಯುದನ್ನು ತಪ್ಪಿಸಲು ಹೋಗಿ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಆಮ್ಮಿನಡ್ಕ ಎಂಬಲ್ಲಿ ಇಂದು ನಡೆದಿದೆ. ಘಟನೆಯ ಪರಿಣಾಮ ಬಸ್ಸಿನಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ. ಮನೆ ಗೋಡೆ ಸಂಪೂರ್ಣ ಕುಸಿದಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಶಾಲಾ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮನೆಗೆ ಡಿಕ್ಕಿ  ಹೊಡೆದ ಬಸ್ Read More »

ಶೇಖಮಲೆ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಖಮಲೆ ಎಂಬಲ್ಲಿ ಸ್ವಿಫ್ಟ್ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ನಡೆದಿದೆ.ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ನೆಲಕ್ಕುರುಳಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಶೇಖಮಲೆ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ Read More »

ಇನೋವಾಕ್ಕೆ ಡಿಕ್ಕಿ ಹೊಡೆದ ಇನ್ಸುಲೇಟರ್ | ಇನೋವಾ ಪ್ರಯಾಣಿಕರಿಗೆ ಗಾಯ

ಉಡುಪಿ: ಇನೋವಾಕ್ಕೆ ಇನ್ಸುಲೇಟರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಪ್ರಯಾಣಿಕರು ಗಂಭೀರ  ಗಾಯಗೊಂಡ ಘಟನೆ ಕುಂಭಾಸಿಯಲ್ಲಿ ಇಂದು ನಡೆದಿದೆ. ಇನೋವಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಲ್ಲೂರಿನಿಂದ  ಉಡುಪಿಗೆ ಹೋಗುವ ಸಂದರ್ಭ ಘಟನೆ ನಡೆದಿದ್ದು,  ಇನ್ಸುಲೇಟರ್ ಪಲ್ಟಿಯಾಗಿದ್ದು, ಇನೋವಾ ಸಂಪೂರ್ಣ ಜಖಂಗೊಂಡಿದೆ ಎನ್ನಲಾಗಿದೆ. ಗಾಯಾಳುಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಇನೋವಾಕ್ಕೆ ಡಿಕ್ಕಿ ಹೊಡೆದ ಇನ್ಸುಲೇಟರ್ | ಇನೋವಾ ಪ್ರಯಾಣಿಕರಿಗೆ ಗಾಯ Read More »

ಕೆದಿಲ ಗ್ರಾಮದ ಗಡಿಯಾರದಲ್ಲಿ ಸಿಡಿಲು ಬಡಿದು ಬಾಲಕ ಮೃತ್ಯು

ಬಂಟ್ವಾಳ: ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗಡಿಯಾರದಲ್ಲಿ ಭಾನುವಾರ ಸಂಜೆ ನಡೆದಿದೆ. ಕೆದಿಲ ಗ್ರಾಮದ ಗಡಿಯಾರ ನಿವಾಸಿ ಸುಭೋದ್ ಸಿ. (14) ಸಿಡಿಲು ಬಡಿದು ಮೃತಪಟ್ಟವರು. ಈ ಕುರಿತು ಕಂದಾಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದು, ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೆದಿಲ ಗ್ರಾಮದ ಗಡಿಯಾರದಲ್ಲಿ ಸಿಡಿಲು ಬಡಿದು ಬಾಲಕ ಮೃತ್ಯು Read More »

ಡಿವೈಡರ್‍ ಗೆ ಕಾರು ಡಿಕ್ಕಿ : ಪ್ರಯಾಣಿಕ ಮೃತ್ಯು

ನೆಲ್ಯಾಡಿ: ಕಾರೊಂದು ಡಿವೈಡರ್‍ ಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ಮೃತಪಟ್ಟ ಘಟನೆ ಇಂದು ಸಂಜೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ನಡೆದಿದೆ. ಮೃತಪಟ್ಟ ಕಾರು ಪ್ರಯಾಣಿಕ ಕುಂಬ್ರ ನಿವಾಸಿ ಎನ್ನಲಾಗಿದೆ. ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಡಿವೈಡರ್‍ ಗೆ ಕಾರು ಡಿಕ್ಕಿ : ಪ್ರಯಾಣಿಕ ಮೃತ್ಯು Read More »

error: Content is protected !!
Scroll to Top