Uncategorized

ಪ್ರಿಯತಮನ ಜೊತೆ ಸೇರಿ ಅತ್ತೆಯನ್ನೇ ಕೊಂದ ಖತರ್ನಾಕ್ ಸೊಸೆ ಪೊಲೀಸ್ ವಶಕ್ಕೆ

ಚಿಕ್ಕಮಗಳೂರು: ರಾಗಿ ಮುದ್ದೆಯಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ತೆಯನ್ನು ಸೊಸೆಯೊಬ್ಬಳು ಹತ್ಯೆ ಮಾಡಿದ ಘಟನೆ ಅಜ್ಜಂಪುರದ ತಡಗ ಗ್ರಾಮದಲ್ಲಿ ನಡೆದಿದೆ. ಪ್ರಿಯಕರ ಆಂಜನೇಯ ಎಂಬಾತನ ಜೊತೆ ಸೇರಿ ಸೊಸೆ ಅಶ್ವಿನಿ ಎಂಬಾಕೆ ಈ ಕುಕೃತ್ಯ ಎಸಗಿದ್ದು, ಬಳಿಕ ಚಿನ್ನಾಭರಣ ಕಳವು ಮಾಡಿದ್ದು, ಸದ್ಯ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ದೋಚಿದ್ದ ಚಿನ್ನಾಭರಣವನ್ನು ಪೊಲೀಸರು ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅಶ್ವಿನಿಯ ಅತ್ತೆ ದೇವೀರಮ್ಮ ಮೃತಪಟ್ಟಿದ್ದು, ಇದನ್ನು ಸಹಜ ಮರಣ ಎಂದು ಭಾವಿಸಿ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ […]

ಪ್ರಿಯತಮನ ಜೊತೆ ಸೇರಿ ಅತ್ತೆಯನ್ನೇ ಕೊಂದ ಖತರ್ನಾಕ್ ಸೊಸೆ ಪೊಲೀಸ್ ವಶಕ್ಕೆ Read More »

ಲೀಥಿಯಂ ಐಯಾನ್ ಬ್ಯಾಟರಿ ಉತ್ಪಾದನಾ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಲೀಥಿಯಂ ಐಯಾನ್ ಬ್ಯಾಟರಿ ಉತ್ಪಾದನಾ ಘಟಕವನ್ನು ಅಹಮದಾಬಾದ್‌ನಲ್ಲಿ ಉದ್ಘಾಟಿಸಿದ ‌ಪ್ರಧಾನಿ ಮೋದಿ ಅವರು ಇದು ಮೇಕ್ ಇನ್ ಇಂಡಿಯಾ ಯಾನಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದಾರೆ. ಮೇಕ್ ಇನ್ ಇಂಡಿಯಾ’ ಮತ್ತು ‘ಮೇಕ್ ಫಾರ್ ದಿ ವರ್ಲ್ಡ್’ ಎಂಬ ಗುರಿಗಳತ್ತ ಭಾರತದ ದೊಡ್ಜ ಜಿಗಿತ ಇದಾಗಿದೆ. ಭಾರತ ಈಗ 100 ದೇಶಗಳಿಗೆ ವಿದ್ಯುತ್‌ ವಾಹನಗಳನ್ನು ರಫ್ತು ಮಾಡಲಿದೆ ಮತ್ತು ದೇಶದಲ್ಲಿ ಹೈಬ್ರಿಡ್ ಬ್ಯಾಟರಿ ಎಲೆಕ್ಟೋಲೈಟ್ ಉತ್ಪಾದನೆ ಪ್ರಾರಂಭವಾಗಿದೆ ಎಂದಿದ್ದಾರೆ. ಗಣೇಶೋತ್ಸವದ ಶುಭ

ಲೀಥಿಯಂ ಐಯಾನ್ ಬ್ಯಾಟರಿ ಉತ್ಪಾದನಾ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ Read More »

ಡಿಕೆಶಿ ಬಗ್ಗೆ ಹೈಕಮಾಂಡ್‌ ಮೃದು ಧೋರಣೆ ತಾಳಿದೆ: ಸತೀಶ್ ಜಾರಕಿಹೊಳಿ

ಬಾಗಲಕೋಟೆ: ರಾಜ್ಯದಲ್ಲಿ ನಡೆಯುವ ಎಲ್ಲಾ ವಿಷಯಗಳು ರಾಹುಲ್ ಗಾಂಧಿಯನ್ನು ತಲುಪುವುದಿಲ್ಲ. ಕೆಲವು ವಿಷಯಗಳಷ್ಟೇ ತಲುಪುತ್ತವೆ. ಎಲ್ಲಾ ವಿಷಯಗಳು ಹೈಕಮಾಂಡ್‌ಗೆ ತಿಳಿಯುವಂತಾಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಡಿಕೆಶಿ ಅವರು ಸದನದಲ್ಲಿ RSS ಗೀತೆ ಹಾಡಿರುವುದಕ್ಕೆ ಅವರೇ ಉತ್ತರಿಸಬೇಕು. ನಾನು ಈ ಬಗ್ಗೆ ಮಾತನಾಡಲು ಆಗುವುದಿಲ್ಲ. ಈ ಬಗ್ಗೆ ಸಿ ಎಂ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್ ಚರ್ಚೆ ಮಾಡಬೇಕು. ನಮ್ಮ ಮಟ್ಟದಲ್ಲಿ ಆಗಬೇಕಾದ ಚರ್ಚೆಯಲ್ಲ. ಈ ಎಲ್ಲ ವಿಷಯಗಳನ್ನು ರಾಹುಲ್ ಗಾಂಧಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು

ಡಿಕೆಶಿ ಬಗ್ಗೆ ಹೈಕಮಾಂಡ್‌ ಮೃದು ಧೋರಣೆ ತಾಳಿದೆ: ಸತೀಶ್ ಜಾರಕಿಹೊಳಿ Read More »

ನನ್ನ ಗಂಡನ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿಲ್ಲ: ಮಾಸ್ಕ್ ಮ್ಯಾನ್ ಚೆನ್ನಯ್ಯನ ಎರಡನೇ ಪತ್ನಿ ಹೇಳಿಕೆ

ಚಾಮರಾಜನಗರ: ಧರ್ಮಸ್ಥಳ ಪ್ರಕರಣದ ಮಾಸ್ಕ್‌ಮ್ಯಾನ್ ಚೆನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಮಾತನಾಡಿದ್ದು, ನಾನು ಮತ್ತು ನನ್ನ ಗಂಡ ಯಾವುದೇ ಧರ್ಮಕ್ಕೂ ಮತಾಂತರ ಆಗಿಲ್ಲ. ಧರ್ಮಸ್ಥಳದಲ್ಲಿ ಶವ ಹೂಳಿರುವುದಕ್ಕೆ ‌ಸಂಬಂಧಿಸಿದ ಹಾಗೆ ಅವರು ನನ್ನ ಬಳಿ ಏನನ್ನೂ ಹೇಳಿಲ್ಲ. ಅವರ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿದಿಲ್ಲ ಎಂದು ಹೇಳಿದ್ದಾರೆ. ಚೆನ್ನಯ್ಯ ತನ್ನ ಎರಡನೇ ಪತ್ನಿ ಮಲ್ಲಿಕಾ ಜೊತೆಗೆ ತಮಿಳುನಾಡಿನಲ್ಲಿ ವಾಸವಿದ್ದು, ಕಳೆದ ಎರಡೂವರೆ ತಿಂಗಳ ಹಿಂದೆ ಕೂಲಿ ಕೆಲಸಕ್ಕೆಂದು ಹೋದವನು ಮತ್ತೆ ಬಂದಿರಲಿಲ್ಲ. ಅವರ ಅಣ್ಣ ಕ್ರೈಸ್ತ ಪಾದ್ರಿಯಾಗಿದ್ದು,

ನನ್ನ ಗಂಡನ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಿಲ್ಲ: ಮಾಸ್ಕ್ ಮ್ಯಾನ್ ಚೆನ್ನಯ್ಯನ ಎರಡನೇ ಪತ್ನಿ ಹೇಳಿಕೆ Read More »

ದಸರಾ ಉದ್ಘಾಟನೆಗೆ ‌ವಿರೋಧ: ಬಾನು ಮುಷ್ತಾಕ್ ಹೇಳಿದ್ದೇನು?

ಹಾಸನ: ಯಾರು ಏನು ಬೇಕಾದರೂ ಮಾತನಾಡಲಿ, ನಾನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ದಸರಾ ಉದ್ಘಾಟನೆಗೆ ಸಂಬಂಧಿಸಿದ ಹಾಗೆ ಎದ್ದಿರುವ ಗೊಂದಲಗಳಿಗೆ ಪ್ರತಿಷ್ಟಿತ ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ತಿಳಿಸಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ ತಮ್ಮನ್ನು ಆಮಂತ್ರಿಸಿರುವ ಬಗ್ಗೆ ಎದ್ದಿರುವ ವಿರೋಧಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ನಾನು ಈ ಹಿಂದೆ ಏನು ಮಾತನಾಡಿದ್ದೇನೆ ಎನ್ನುವುದನ್ನು ತಿಳಿದುಕೊಂಡು ಮಾತನಾಡಲಿ. ಯಾರದ್ದೋ ವಿರೋಧಕ್ಕೆ ನಾನು ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ. ಮಾತನಾಡುವವರು ಮಾತನಾಡಲಿ.

ದಸರಾ ಉದ್ಘಾಟನೆಗೆ ‌ವಿರೋಧ: ಬಾನು ಮುಷ್ತಾಕ್ ಹೇಳಿದ್ದೇನು? Read More »

ಭಾರತ – ಫಿಜಿ ಸ್ನೇಹ ಸಂಬಂಧ ಕೊಂಡಾಡಿದ ಪ್ರಧಾನಿ ಮೋದಿ

ನವದೆಹಲಿ: ಭಾರತ ಮತ್ತು ಫಿಜಿ ದೇಶಗಳ ಆಕಾಂಕ್ಷೆಗಳು ಒಂದೇ ದೋಣಿಯಲ್ಲಿ ಸಾಗುತ್ತವೆ ಎಂದು ಉಭಯ ರಾಷ್ಟ್ರಗಳ ಸ್ನೇಹ ಸಂಬಂಧವನ್ನು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ. ಫಿಜಿ ಪ್ರಧಾನಿ ಸಿತಿವೇನಿ ರಬುಕಾ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮಕ್ಕೆ ಸೇರಲು ಆಸಕ್ತಿ ವ್ಯಕ್ತಪಡಿಸಿದ ನಂತರ, ಪ್ರಧಾನ ಮಂತ್ರಿ ಮೋದಿ ಅವರು ದಕ್ಷಿಣ ಪೆಸಿಫಿಕ್ ಸಾಗರ ರಾಷ್ಟ್ರವನ್ನು ಭಾರತವು 2019 ರಲ್ಲಿ ಪ್ರಾರಂಭಿಸಿದ ಸಮಾನ ಮನಸ್ಕ ದೇಶಗಳೊಂದಿಗೆ ಕಡಲ ಪ್ರದೇಶವನ್ನು ನಿರ್ವಹಿಸಲು, ಸಂರಕ್ಷಿಸಲು ಮತ್ತು ಉಳಿಸಿಕೊಳ್ಳಲು ಬಯಸುವ ಪಾಲುದಾರಿಕೆಗೆ ಸೇರಲು ಸ್ವಾಗತಿಸಿದರು. “ನಾವು

ಭಾರತ – ಫಿಜಿ ಸ್ನೇಹ ಸಂಬಂಧ ಕೊಂಡಾಡಿದ ಪ್ರಧಾನಿ ಮೋದಿ Read More »

ಶಿವರಾಜ್ ಕುಮಾರ್ ಬಳಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು

ಬೆಂಗಳೂರು: ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಟ ಮಡೆನೂರು ಮನು ಇಂದು ನಟ ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ನಟಿಗೆ ‌ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜೈಲು ಸೇರಿದ್ದ ಸಂದರ್ಭದಲ್ಲಿ ಮನು ಅವರದ್ದು ಎನ್ನಲಾದ ಅಡಿಯೋ ಒಂದು ಸದ್ದು ಮಾಡಿತ್ತು. ಅದರಲ್ಲಿ ಶಿವರಾಜ್ ಕುಮಾರ್, ಧ್ರುವ ಸರ್ಜಾ, ದರ್ಶನ್ ಬಗ್ಗೆ ಕೆಟ್ಟದಾಗಿ ಮಾತುಗಳನ್ನಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮನು ಇಂದು ಶಿವರಾಜ್ ಕುಮಾರ್ ಅವರ ಕಾಲಿಗೆ ಬಿದ್ದು

ಶಿವರಾಜ್ ಕುಮಾರ್ ಬಳಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು Read More »

ಎರಡನೇ ದಿನ ವಿಚಾರಣೆಗೆ ಹಾಜರಾದ ಯೂಟ್ಯೂಬರ್ ಸಮೀರ್

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿ. ವಿರುದ್ಧ ದಾಖಲಾದ ಪ್ರಕರಣ ಕ್ಕೆ ಸಂಬಂಧಿಸಿದ ವಿಚಾರಣೆಗೆ ತನ್ನ ವಕೀಲರ ಜೊತೆಗೆ ಎರಡನೇ ದಿನ ವಿಚಾರಣೆಗೆ ಹಾಜರಾಗಿದ್ದಾನೆ. ಆ. 24 ರಂದು ಮಧ್ಯಾನ 1.30 ರಿಂದ ಸಂಜೆ 6 ರ ವರೆಗೆ ಸಮೀರ್ ‌ವಿಚಾರಣೆ ನಡೆದಿದ್ದು, ಇಂದು ಸಹ ಮುಂದುವರೆದಿದೆ. ಇಂದು ಆತನಿಂದ ಕೆಲವು ದಾಖಲೆಗಳಿಗೆ ಸಹಿ ಹಾಕಿಸಿಕೊಂಡು ಕಳುಹಿಸಿದ್ದಾಗಿ ತಿಳಿದು ಬಂದಿದೆ.

ಎರಡನೇ ದಿನ ವಿಚಾರಣೆಗೆ ಹಾಜರಾದ ಯೂಟ್ಯೂಬರ್ ಸಮೀರ್ Read More »

ಧರ್ಮಸ್ಥಳ ಪ್ರಕರಣ NIA ಗೆ ವಹಿಸುವ ಅಗತ್ಯ ಇಲ್ಲ: ಡಾ. ಜಿ. ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಪೊಲೀಸರು ತನಿಖೆಗೆ ಅಗತ್ಯವಾದ ಎಲ್ಲವನ್ನೂ ಮಾಡುತ್ತಾರೆ. ಅದು ಮಾಡಿ, ಇದು ಮಾಡಿ ಎನ್ನಲು ನಾವು ಯಾರು? ಮಂಪರು ಪರೀಕ್ಷೆ ಬೇಕೋ ಬೇಡವೋ ಎನ್ನುವುದನ್ನು ನಾನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. SIT ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿದೆ. ಅದನ್ನು NIA ಗೆ ವಹಿಸುವ ಅಗತ್ಯ ಇಲ್ಲ. ಮೊದಲು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ. ಅದರಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಹಾಗೆಯೇ ತನಿಖೆಯನ್ನು ಮಾಡಲು ಸಮಯ ನಿಗದಿ ಮಾಡಲು

ಧರ್ಮಸ್ಥಳ ಪ್ರಕರಣ NIA ಗೆ ವಹಿಸುವ ಅಗತ್ಯ ಇಲ್ಲ: ಡಾ. ಜಿ. ಪರಮೇಶ್ವರ್ Read More »

ಧನ್ಕರ್ ರಾಜೀನಾಮೆ ಬಗ್ಗೆ ಅಮಿತ್ ಶಾ ಹೇಳಿದ್ದೇನು?

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆಗೆ ‌ಸಂಬಂಧಿಸಿದ ಹಾಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಧನ್ಕರ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಅನಾರೋಗ್ಯದ ಕಾರಣಗಳನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಜೊತೆಗೆ ತಮ್ಮ ಹುದ್ದೆ, ಪ್ರಧಾನಿ ಮೋದಿ ಅವರಿಗೆ ಮತ್ತು ಇತರ ಸಚಿವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ ಎನ್ನುವ ಮೂಲಕ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎನ್ನುವ ವಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸತ್ಯ ಮತ್ತು ಸುಳ್ಳಿನ ವ್ಯಾಖ್ಯಾನಗಳು ವಿಪಕ್ಷಗಳ ಹೇಳಿಕೆಗಳನ್ನು

ಧನ್ಕರ್ ರಾಜೀನಾಮೆ ಬಗ್ಗೆ ಅಮಿತ್ ಶಾ ಹೇಳಿದ್ದೇನು? Read More »

error: Content is protected !!
Scroll to Top