ನ. 25-26ರಂದು ಬೆಂಗಳೂರಿನಲ್ಲಿ 48 ಗಂಟೆಗಳ ಕಂಬಳ | ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ, ಕಂಬಳದ ರೂಪುರೇಷೆ ಬಿಚ್ಚಿಟ್ಟ ಶಾಸಕ ಅಶೋಕ್ ರೈ
ಪುತ್ತೂರು: ನ.25 ಹಾಗೂ 26ರಂದು ಬೆಂಗಳೂರಿನಲ್ಲಿ ಕಂಬಳ ನಡೆಯಲಿದ್ದು, ಈ ನಿಟ್ಟಿನಲ್ಲಿ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಂಗಳೂರಿನ ಕಂಬಳ ಯಶಸ್ವಿಯಾಗುವ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ನ. 25ರಂದು ಬೆಳಿಗ್ಗೆ 10.30ಕ್ಕೆ ಕೆರೆ ಮುಹೂರ್ತ ನಡೆಯಲಿದೆ. ಕಂಬಳದ ಯಶಸ್ಸಿಗಾಗಿ ಈಗಾಗಲೇ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷ ಮರ್ದಿನಿ ದೇವರ ಅನುಗ್ರಹ ಬೇಡಲಾಗಿದ್ದು, ಇದೀಗ ಸೀಮೆ ದೇವರು ಶ್ರೀ ಮಹಾಲಿಂಗೇಶ್ವರನ ಅನುಗ್ರಹಕ್ಕಾಗಿ […]









