Uncategorized

ಹಮಾಸ್‌ ಉಗ್ರರ ಬೃಹತ್‌ ಸುರಂಗ ಅಡಗುತಾಣ ಪತ್ತೆಹಚ್ಚಿದ ಇಸ್ರೇಲ್‌

7 ಕಿ.ಮೀ. ಉದ್ದ, 80 ಕೊಠಡಿಯ ಸುರಂಗದೊಳಗಿನ ವ್ಯವಸ್ಥೆಯನ್ನು ನೋಡಿ ನಿಬ್ಬೆರಗಾದ ಜಗತ್ತು ಟೆಲ್‌ ಅವೀವ್: ಇಸ್ರೇಲ್ ರಕ್ಷಣಾ ಪಡೆ ಗಾಜಾಪಟ್ಟಿಯಲ್ಲಿ ಹಮಾಸ್ ಉಗ್ರರ ಒಂದು ಬೃಹತ್‌ ಸುರಂಗ ಅಡಗುತಾಣವನ್ನು ಪತ್ತೆಹಚ್ಚಿದೆ. ಈ ಸುರಂಗದ ಗಾತ್ರ ಮತ್ತು ವ್ಯವಸ್ಥೆಯನ್ನು ನೋಡಿ ಜಗತ್ತು ನಿಬ್ಬೆರಗಾಗಿದೆ. ಈ ಸುರಂಗದಲ್ಲಿ ಇತ್ತೀಚೆಗೆ ಭಯೋತ್ಪಾದಕ ಗುಂಪು ಲೆಫ್ಟಿನೆಂಟ್ ಹದರ್ ಗೋಲ್ಡಿನ್ ಅವರ ದೇಹವನ್ನು ಇಟ್ಟುಕೊಂಡಿತ್ತು. 2014ರ ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ಗಾಜಾದಲ್ಲಿ ಹೊಂಚುದಾಳಿಯ ಸಮಯದಲ್ಲಿ ಲೆಫ್ಟಿನೆಂಟ್ ಗೋಲ್ಡಿನ್ ಹತ್ಯೆಗೀಡಾಗಿದ್ದರು. ಈ ತಿಂಗಳ ಆರಂಭದಲ್ಲಿ […]

ಹಮಾಸ್‌ ಉಗ್ರರ ಬೃಹತ್‌ ಸುರಂಗ ಅಡಗುತಾಣ ಪತ್ತೆಹಚ್ಚಿದ ಇಸ್ರೇಲ್‌ Read More »

7.11 ಕೋಟಿ ರೂ. ದರೋಡೆ ಪ್ರಕರಣ : ಕಾನ್‌ಸ್ಟೆಬಲ್‌ ಬಂಧನ

ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಹಾಡಹಗಲೇ ನಡೆದ ದರೋಡೆ ಕೃತ್ಯ ಬೆಂಗಳೂರು : ಬೆಂಗಳೂರಿನಲ್ಲಿ ಹಾಡುಹಗಲೇ ಸಂಭವಿಸಿದ 7.11 ಕೋಟಿ ರೂ. ದರೋಡೆ ಪ್ರಕರಣ ಮಾಸ್ಟರ್‌ಮೈಂಡ್ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಎಂಬ ಶಂಕೆ ವ್ಯಕ್ತವಾಗಿದೆ. ಗೋವಿಂದಪುರ ಠಾಣೆಯ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ್ ಎಂಬಾತನನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ನಾಯ್ಕ್ ದರೋಡೆ ಸಂಚು ರೂಪಿಸಿದಾತ ಎನ್ನಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಈತನ ಪಾತ್ರ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ಗ್ಯಾಂಗ್ ರೆಡಿ ಮಾಡಿದ್ದ ಅಣ್ಣಪ್ಪ ನಾಯ್ಕ್

7.11 ಕೋಟಿ ರೂ. ದರೋಡೆ ಪ್ರಕರಣ : ಕಾನ್‌ಸ್ಟೆಬಲ್‌ ಬಂಧನ Read More »

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ ರದ್ದು

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಪುತ್ತೂರು ಉಪವಿಭಾಗಾಧಿಕಾರಿ 2025ರ ಸೆ. 18ರಂದು ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿರುವುದಾಗಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿರುವುದಾಗಿದೆ. ಹಾಗೆಯೇ ಹೊಸದಾಗಿ ವಿಚಾರಣೆ ನಡೆಸಿ ಸೂಕ್ತ ಕಾರಣ, ಸೆಕ್ಷನ್ ಗಳೊಂದಿಗೆ 15 ದಿನಗಳಲ್ಲಿ ಮತ್ತೆ ಹೊಸ ಆದೇಶ ಹೊರಡಿಸುವಂತೆ ಪುತ್ತೂರು ಉಪವಿಭಾಗಾಧಿಕಾರಿಗೆ ಪೀಠ ಆದೇಶಿಸಿದೆ. ಮಹೇಶ್ ತಿಮರೋಡಿ ವಿರುದ್ಧ ಸುಮಾರು 32 ವಿವಿಧ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ ರದ್ದು Read More »

ಆಪರೇಷನ್‌ ಪಿಂಪಲ್‌ಗೆ ಇಬ್ಬರು ಉಗ್ರರು ಬಲಿ

ಕಾಶ್ಮೀರದ ಕುಪ್ವಾರದಲ್ಲಿ ಬೆಳ್ಳಂಬೆಳಗ್ಗೆ ಉಗ್ರರ ಬೇಟೆಯಾಡಿದ ಸೇನೆ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೆರಾನ್‌ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ಇಂದು ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಸಾವಿಗೀಡಾಗಿದ್ದಾರೆ. ಎನ್‌ಕೌಂಟರ್‌ ಕುರಿತು ಭಾರತೀಯ ಸೇನೆಯ ಚಿನಾರ್‌ ಕಾರ್ಪ್ಸ್‌ ಎಕ್ಸ್‌ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಕೆರಾನ್‌ನಲ್ಲಿ ಒಳನುಸುಳುವಿಕೆ ಬಗ್ಗೆ ಗುಪ್ತಚರ ಮೂಲಗಳಿಂದ ಖಚಿತ ಮಾಹಿತಿ ಪಡೆದ ಸೇನೆ ʻಆಪರೇಷನ್ ಪಿಂಪಲ್ʼ ಹೆಸರಿನಲ್ಲಿ ಶುಕ್ರವಾರದಿಂದ ಕಾರ್ಯಾಚರಣೆ ಶುರು ಮಾಡಿದೆ ಎಂದು ತಿಳಿಸಿದೆ. ಕುಪ್ವಾರದ ಕೆರಾನ್‌ ಸೆಕ್ಟರ್‌ನಲ್ಲಿ ಭದ್ರತಾ

ಆಪರೇಷನ್‌ ಪಿಂಪಲ್‌ಗೆ ಇಬ್ಬರು ಉಗ್ರರು ಬಲಿ Read More »

ಧರ್ಮಸ್ಥಳ ಕೇಸ್‌ಗೆ ಮಹಿಳಾ ಆಯೋಗ ಎಂಟ್ರಿ : ಸಮಗ್ರ ತನಿಖೆಗೆ ಆಗ್ರಹಿಸಿ ಪತ್ರ

ಅಸಹಜ, ಅನುಮಾನಾಸ್ಪದ ಸಾವಿನ ಪ್ರಕರಣಗಳ ತನಿಖೆಗೆ ಒತ್ತಾಯ ಧರ್ಮಸ್ಥಳ : ಧರ್ಮಸ್ಥಳ ಪ್ರಕರಣ ಅಂತಿಮ ಹಂತ ತಲುಪಿದೆ ಎನ್ನುವಾಗ ಈ ಕೇಸ್‌ನಲ್ಲಿ ಮಹಿಳಾ ಆಯೋಗ ಮಧ್ಯೆ ಪ್ರವೇಶ ಮಾಡಿದೆ. ಧರ್ಮಸ್ಥಳ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ) ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅತ್ಯಾಚಾರ, ಕೊಲೆ ಪ್ರಕರಣಗಳ ಜತೆಗೆ ಅಸಹಜ ಮತ್ತು ಅನುಮಾನಾಸ್ಪದ ಸಾವು ಪ್ರಕರಣಗಳ ಬಗ್ಗೆಯೂ ಸಮಗ್ರವಾಗಿ ತನಿಖೆಯನ್ನು ನಡೆಸಬೇಕೆಂದು ಕೋರಿ ರಾಜ್ಯ ಮಹಿಳಾ ಆಯೋಗ ಎಸ್‍ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿದೆ. ಧರ್ಮಸ್ಥಳದಲ್ಲಿ ಕಳೆದ

ಧರ್ಮಸ್ಥಳ ಕೇಸ್‌ಗೆ ಮಹಿಳಾ ಆಯೋಗ ಎಂಟ್ರಿ : ಸಮಗ್ರ ತನಿಖೆಗೆ ಆಗ್ರಹಿಸಿ ಪತ್ರ Read More »

ಬೆಳ್ಳಿ ರಥದ ಮನೋಜ್ಞ ಪುತ್ತೂರು ಪುರಪ್ರವೇಶ

ಪುತ್ತೂರು: ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ, ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ‘ಬಿ’ ಟೀಮ್ ನ ಅಧ್ಯಕ್ಷ ಡಾಕ್ಟರ್ ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ಮತ್ತು ಸುಳ್ಯದ ಗುತ್ಯಮ್ಮ ದೇವಿ ದೇವಸ್ಥಾನದ ಧರ್ಮದರ್ಶಿ ಆಗಿರುವ ಅಪ್ರತಿಮ ನಾಗಕ್ಷೇತ್ರದ ಒಡೆಯ ಶ್ರೀ ಸುಬ್ರಹ್ಮಣ್ಯೇಶರನಿಗೆ ಹರಕೆಯ ರೂಪದಲ್ಲಿ ಸಮರ್ಪಿಸಲಿರುವ ಬೆಳ್ಳಿರಥದ ಧರ್ಮಯಾತ್ರೆಯು ಅಕ್ಟೋಬರ್ 4ರ ಸಂಜೆ ಗಂಟೆ 6.30ಕ್ಕೆ ಪುತ್ತೂರಿನ ಪುರಪ್ರವೇಶ ಮಾಡಿತು. ನೆಹರೂ ನಗರದಲ್ಲಿ ಸ್ವಾಗತಸಾಲಂಕೃತ ಭವ್ಯ ವಾಹನದಲ್ಲಿ ನೂರಾರು ಸಂಖ್ಯೆಯ ವಾಹನಗಳೊಂದಿಗೆ ಕುಂದಾಪುರದ ಕೋಟೇಶ್ವರದಿಂದ

ಬೆಳ್ಳಿ ರಥದ ಮನೋಜ್ಞ ಪುತ್ತೂರು ಪುರಪ್ರವೇಶ Read More »

ಜೈಲು ಸಿಬ್ಬಂದಿಯಿಂದಲೇ ಕೈದಿಗೆ ಮೊಬೈಲ್‌ ಪೂರೈಕೆ

ಮೊಬೈಲ್‌ ಸಮೇತ ಸಿಕ್ಕಿಬಿದ್ದ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಬೆಂಗಳೂರು: ಪರಪ್ಪನ್ನ ಅಗ್ರಹಾರ ಜೈಲಿನಲ್ಲಿ 20 ಸಾವಿರ ರೂ.ಗೆ ಮೊಬೈಲ್‌ ಮಾರಾಟ ಮಾಡಲು ಹೋಗಿ ಜೈಲು ಸಿಬ್ಬಂದಿಯೇ ಸಿಕ್ಕಿಬಿದ್ದ ಘಟನೆ ನಡೆದಿದೆ.ಕೈದಿಗಳಿಗೆ ಮೊಬೈಲ್ ಸರಬರಾಜು ಮಾಡುತ್ತಿದ್ದ ಜೈಲು ವೀಕ್ಷಕ (ವಾರ್ಡನ್) ‌ಅಮರ್ ಪ್ರಾಂಜೆಯನ್ನು (29) ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಮೊಬೈಲ್‌ ಮಾರಾಟ ಮಾಡುತ್ತಿದ್ದಾಗಲೇ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದಿಂದ ಕಾರಾಗೃಹದಲ್ಲಿ ಅಕ್ರಮಗಳಿಗೆ ಜೈಲು ಸಿಬ್ಬಂದಿಗಳೇ ಸಾಥ್‌ ನೀಡ್ತಿದ್ದಾರೆ ಅನ್ನೋದು ಮತ್ತೊಮ್ಮೆ ಬಯಲಾಗಿದೆ. ಅಮರ್‌ ಅಕ್ಟೋಬರ್‌ 23ರಂದು

ಜೈಲು ಸಿಬ್ಬಂದಿಯಿಂದಲೇ ಕೈದಿಗೆ ಮೊಬೈಲ್‌ ಪೂರೈಕೆ Read More »

ವೈದ್ಯರ ಘೋರ ಪ್ರಮಾದ : ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ರಕ್ತ ವರ್ಗಾವಣೆ ಮಾಡುವಾಗ ಸಂಭವಿಸಿದ ತಪ್ಪು ನವದೆಹಲಿ : ವೈದ್ಯರ ನಿರ್ಲಕ್ಷ್ಯಕ್ಕೆ ಐದು ಮಕ್ಕಳು ಎಚ್‌ಐವಿ ಪಾಸಿಟಿವ್ ಆಗಿರುವ ಬೆಚ್ಚಿ ಬೀಳಿಸುವ ಪ್ರಮಾದವೊಂದು ಜಾರ್ಖಂಡ್‌ನಲ್ಲಿ ನಡೆದಿದೆ. ಈ ಮಕ್ಕಳು ಥಲಸ್ಸೆಮಿಯಾ ರೋಗ ಪೀಡಿತರಾಗಿದ್ದರು. ಮಕ್ಕಳಿಗೆ ಚೈಬಾಸಾದಲ್ಲಿರುವ ಸ್ಥಳೀಯ ರಕ್ತ ನಿಧಿಯಿಂದ ಎಚ್‌ಐವಿ ಸೋಂಕಿತರ ರಕ್ತ ನೀಡಲಾಗಿದೆ ಎಂದು ಏಳು ವರ್ಷದ ಮಗುವಿನ ಕುಟುಂಬ ಆರೋಪಿಸಿದೆ. ರಾಂಚಿಯ ಐದು ಸದಸ್ಯರ ವೈದ್ಯಕೀಯ ತಂಡವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದೆ. ಮಕ್ಕಳಿಗೆ HIV ಸೋಂಕಿತ ರಕ್ತ ಹೇಗೆ ದೊರೆತಿದೆ

ವೈದ್ಯರ ಘೋರ ಪ್ರಮಾದ : ಐದು ಮಕ್ಕಳಿಗೆ ಎಚ್‌ಐವಿ ಸೋಂಕು Read More »

ಮುರಿದು ಬಿದ್ದ ಪ್ರೇಮ: ಮಾಜಿ ಪ್ರೇಯಸಿಯ ಕತ್ತು‌ಸೀಳಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ

ಮುಂಬೈ: ತನ್ನ ಮಾಜಿ ಗೆಳತಿಯ ಕತ್ತು ಸೀಳಿದ ಬಳಿಕ ವ್ಯಕ್ತಿಯೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಬೈಕುಲ್ಲಾ ‌ಪ್ರದೇಶದಲ್ಲಿ ನಡೆದಿದೆ. ಸೋನು ಬರೈ ‌ಎಂಬಾತನೇ ಆರೋಪಿ. ಈತ ತನ್ನ ಮಾಜಿ ಪ್ರೇಯಸಿ ಮನೀಷಾ ಯಾದವ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಅವಳ ಮೇಲೆ ಹಲ್ಲೆ ನಡೆಸಿರುವುದಾಗಿದೆ. ಇವರಿಬ್ಬರ ನಡುವಿನ ಸಂಬಂಧ ಹಳಸಿದ ಎರಡು ವಾರಗಳ ಬಳಿಕ ಈ ಘಟನೆ ನಡೆದಿದ್ದು, ಮನೀಷಾ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ.

ಮುರಿದು ಬಿದ್ದ ಪ್ರೇಮ: ಮಾಜಿ ಪ್ರೇಯಸಿಯ ಕತ್ತು‌ಸೀಳಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ Read More »

ಬಹುಮಹಡಿ ವಸತಿ ಸಂಕೀರ್ಣದಲ್ಲಿ ಬೆಂಕಿ ಅವಘಡ : 4 ಮಂದಿ ಸಾವು

ಮುಂಬೈ: ಮುಂಬೈ ಸಮೀಪದ ನವಿಮುಂಬೈಯ ವಾಶೀಯಲ್ಲಿರುವ ಟೌನ್‌ಶಿಪ್‌ನಲ್ಲಿರುವ ಬಹುಮಹಡಿ ವಸತಿ ಕಟ್ಟಡದಲ್ಲಿ ಸೋಮವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಶಿಯ 14ರಲ್ಲಿರುವ ರಹೇಜಾ ರೆಸಿಡೆನ್ಸಿಯ ಎಂಜಿಎಂ ಕಾಂಪ್ಲೆಕ್ಸ್‌ನ 10ನೇ ಫ್ಲೋರ್‌ನಲ್ಲಿರುವ ಫ್ಲಾಟ್‌ನಲ್ಲಿ ಸೋಮವಾರ ಮಧ್ಯರಾತ್ರಿ 12.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ 11 ಮತ್ತು 12ನೇ ಮಹಡಿಗೂ ಹರಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವಘಡದಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು 6 ವರ್ಷದ

ಬಹುಮಹಡಿ ವಸತಿ ಸಂಕೀರ್ಣದಲ್ಲಿ ಬೆಂಕಿ ಅವಘಡ : 4 ಮಂದಿ ಸಾವು Read More »

error: Content is protected !!
Scroll to Top