Uncategorized

ಸೊಸೆ ಮೇಲೆ ಮಾವನಿಂದ ಅನುಚಿತ ವರ್ತನೆ, ಹಲ್ಲೆ, ಬೆದರಿಕೆ: ದೂರು ದಾಖಲು

ಬಂಟ್ವಾಳ: ಅಕ್ರಮವಾಗಿ ಮನೆ ಪ್ರವೇಶಿಸಿ ಮಾವನೇ (ಗಂಡನ ತಂದೆ) ‌ಸೊಸೆಯೊಂದಿಗೆ ಅನುಚಿತವಾಗಿ ‌ವರ್ತಿಸಿ, ಹಲ್ಲೆ ನಡೆಸಿರುವ ಮತ್ತು ಜೀವ ಬೆದರಿಕೆ ಹಾಕಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಈ ವೇಳೆ ಮಹಿಳೆ ಮಾವನಿಂದ ತಪ್ಪಿಸಿಕೊಂಡು ಹೊರಕ್ಕೆ ಓಡಿ ಬಂದಿದ್ದು, ಈ ವೇಳೆ ಪತಿಯೂ ಸಹ ಮಾವನ ಪರವಾಗಿಯೇ ಇದ್ದು, ಹಲ್ಲೆಗೊಳಗಾದ ಪತ್ನಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾನೆ. ಆ ಬಳಿಕ ಮಹಿಳೆಯ ಹೆತ್ತವರು ಆಕೆಗೆ ಸಂಪಾಜೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ […]

ಸೊಸೆ ಮೇಲೆ ಮಾವನಿಂದ ಅನುಚಿತ ವರ್ತನೆ, ಹಲ್ಲೆ, ಬೆದರಿಕೆ: ದೂರು ದಾಖಲು Read More »

ರಾಷ್ಟ್ರಪತಿ, ಪ್ರಧಾನಿಯಿಂದ ಗಣರಾಜ್ಯೋತ್ಸವ ಶುಭಾಶಯ

ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುವ ಸಂದೇಶ ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶದ ಜನತೆಗೆ 77ನೇ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ. ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಭವ್ಯ ಗಣರಾಜ್ಯೋತ್ಸವ ಪರೇಡ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧ್ಯಕ್ಷತೆ ವಹಿಸಿದ್ದಾರೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ X ಖಾತೆಯ ಮೂಲಕ ದೇಶದ ಜನತೆಗೆ ಹೃತ್ಪೂರ್ವಕವಾಗಿ ಶುಭಾಶಯ ಕೋರಿದ್ದಾರೆ. ಭಾರತದ ಗೌರವ, ಹೆಮ್ಮೆ ಮತ್ತು ವೈಭವದ ಸಂಕೇತವಾದ

ರಾಷ್ಟ್ರಪತಿ, ಪ್ರಧಾನಿಯಿಂದ ಗಣರಾಜ್ಯೋತ್ಸವ ಶುಭಾಶಯ Read More »

ಖೈದಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಧಾರವಾಡ: ಪತ್ನಿಯನ್ನು ಹತ್ಯೆಗೈದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಖೈದಿ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತನನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಸಾಪುರದ ಈಶ್ವರಪ್ಪ ಪೂಜಾರ್ ಎಂದು ಗುರುತಿಸಲಾಗಿದೆ. ಪತ್ನಿ ಕೊಲೆಗೆ ಸಂಬಂಧಿಸಿದ ಹಾಗೆ ಈಶ್ವರಪ್ಪ ಅವರಿಗೆ 14 ವರ್ಷಗಳ ಜೈಲು ಶಿಕ್ಷೆಯಾಗಿದ್ದು, ಅದರಲ್ಲಿ 7 ವರ್ಷಗಳನ್ನು ಕಳೆದಿದ್ದರು. ಕೆಲಸ ಮುಗಿದ ಬಳಿಕ ಅವರು ತಮ್ಮ ಸೆಲ್ ‌ಗೆ ಮರಳದೇ ಇದ್ದು ಜೈಲು ಸಿಬ್ಬಂದಿ ಹುಡುಕಾಟ ನಡೆಸಿದಾಗ ನಿರ್ಮಾಣ

ಖೈದಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು Read More »

ಬೆಳ್ತಂಗಡಿಯಲ್ಲಿ ಅರೆಭಾಷಾ ದಿನಾಚರಣೆ

ಉಜಿರೆ: ಬೆಳ್ತಂಗಡಿ ತಾಲೂಕು ಅರೆಭಾಷೆ ಅಭಿಮಾನಿ ಬಳಗದ ವತಿಯಿಂದ ಅರೆಭಾಷೆ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮವು ಉಜಿರೆಯ ಅಮೃತ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮೂಡಿಬಂತು. ಸ್ವಯಂ ತೊಡಗಿಸಿಕೊಳ್ಳುವಿಕೆಯೊಂದೇ ಭಾಷೆಯ ಬೆಳವಣಿಗೆಗೆ ಆಧಾರ – ಸೀತಾರಾಮ ಕೇವಳಯಾವುದೇ ಭಾಷೆಯಾದರೂ ಕೇವಲ ಕಾರ್ಯಕ್ರಮಗಳಿಂದ ಸಶಕ್ತವಾಗಿ ಉಳಿಯಲಾರದು. ಬದಲಾಗಿ ಭಾಷೆಯನ್ನು ನೈಮಿತ್ತಿಕ ಜೀವನದಲ್ಲಿ ಬಳಸಿದಾಗ ಮಾತ್ರವೇ ಅದು ಉಳಿಯಲು ಸಾಧ್ಯ ಎಂದು ಕೇವಳ ಪ್ರತಿಪಾದಿಸಿದರು. ಅಕಾಡೆಮಿಯ ನಿರ್ದೇಶಕರಾದ ತೇಜಕುಮಾರ್ ಬಡ್ಡಡ್ಕ

ಬೆಳ್ತಂಗಡಿಯಲ್ಲಿ ಅರೆಭಾಷಾ ದಿನಾಚರಣೆ Read More »

ಯಕ್ಷಭಾರತಿಯಿಂದ ಕರ್ಣಾರ್ಜುನ ತಾಳಮದ್ದಳೆ

ಕರಾಡ ಬ್ರಾಹ್ಮಣ ಸಂಘ ರಿ. ಬೆಳ್ತಂಗಡಿ ಆಶ್ರಯದಲ್ಲಿ ಸೋಮಂತಡ್ಕದ ಕರಾಡ ಬ್ರಾಹ್ಮಣ ಸಭಾಭವನದಲ್ಲಿ ಯಕ್ಷಭಾರತಿ ಕನ್ಯಾಡಿ ತಂಡದಿಂದ ಕರ್ಣಾರ್ಜುನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಮಹೇಶ ಕನ್ಯಾಡಿ, ಪ್ರಕಾಶ್ ಅಭ್ಯಂಕರ್ ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಅರ್ಜುನ್ ಅಭ್ಯಂಕರ್ ಸಹಕರಿಸಿದರು. ಅರ್ಥಧಾರಿಗಳಾಗಿ ಹರಿದಾಸ ಗಾಂಭೀರ ಧರ್ಮಸ್ಥಳ ಅರ್ಜುನ, ಕರ್ಣನಾಗಿ ಸುರೇಶ ಕುದ್ರೆಂತ್ತಾಯ ಉಜಿರೆ, ಶ್ರೀ ಕೃಷ್ಣನಾಗಿ ಶಶಿಧರ ಕನ್ಯಾಡಿ, ಶಲ್ಯನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಅಶ್ವಸೇನನಾಗಿ ರವೀಂದ್ರ ಶೆಟ್ಟಿ ಬಳೆಂಜ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ವಿಷ್ಣುಮೂರ್ತಿ ಭಟ್, ನಾಗೇಶ್,

ಯಕ್ಷಭಾರತಿಯಿಂದ ಕರ್ಣಾರ್ಜುನ ತಾಳಮದ್ದಳೆ Read More »

ಬಾಲಕನಿಗೆ ಲೈಂಗಿಕ ಕಿರುಕುಳ : ಅಂಗಡಿ ಮಾಲಕನ ವಿರುದ್ಧ ಪೋಕ್ಸೊ ಕೇಸ್‌

ಚಾಕಲೇಟ್‌ ಖರೀದಿಸಲು ಬಂದಿದ್ದ ಬಾಲಕನ ಕೈಕಾಲು ಕಟ್ಟಿ ಹಾಕಿ ಕಿರುಕುಳ ಮಂಗಳೂರು : ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಂಗಡಿ ಮಾಲಕನೊಬ್ಬನನ್ನು ಪೋಕ್ಸೊ ಕಾಯ್ದೆಯಡಿ ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಚೊಕ್ಕಬೆಟ್ಟು ನಿವಾಸಿ ಅಬ್ದುಲ್ ಇಸ್ಮಾಯೀಲ್ ಬಂಧಿತ ಆರೋಪಿ. ಚೊಕ್ಕಬೆಟ್ಟು ಪೇಟೆಯಲ್ಲಿ ಹನಿ ಫ್ಯಾಶನ್ ಮತ್ತು ಜನರಲ್ ಸ್ಟೋರ್ ಎಂಬ ಅಂಗಡಿಯ ಮಾಲಕನಾಗಿರುವ ಆರೋಪಿ ಇಸ್ಮಾಯೀಲ್ ತನ್ನ ಅಂಗಡಿಗೆ ಚಾಕಲೇಟ್‌ ಖರೀದಿಸಲೆಂದು ಬಂದಿದ್ದ 11 ವರ್ಷದ ಬಾಲಕನ ಕೈ-ಕಾಲನ್ನು ಕಟ್ಟಿ ಅಂಗಡಿಯ ಒಂದು ಕೊಠಡಿಯಲ್ಲಿ ಕೂಡಿಹಾಕಿ ಲೈಂಗಿಕ

ಬಾಲಕನಿಗೆ ಲೈಂಗಿಕ ಕಿರುಕುಳ : ಅಂಗಡಿ ಮಾಲಕನ ವಿರುದ್ಧ ಪೋಕ್ಸೊ ಕೇಸ್‌ Read More »

ಡ್ರಗ್ಸ್‌ ಸಾಗಿಸಿದ ಅಪರಾಧಿಗಳಿಗೆ 12ರಿಂದ 14 ವರ್ಷ ಜೈಲು ಶಿಕ್ಷೆ

ವಿದೇಶಿ ಪ್ರಜೆ ಸೇರಿ ಐವರಿಗೆ ಕಠಿಣ ಕಾರಾಗೃಹ ವಾಸ ವಿಧಿಸಿದ ನ್ಯಾಯಾಲಯ ಮಂಗಳೂರು : ಡ್ರಗ್ಸ್‌ ಸಾಗಾಟ ಐವರು ಆರೋಪಿಗಳಿಗೆ 12ರಿಂದ 14 ವರ್ಚಗಳ ಕಠಿಣ ಜೈಲು ಶೀಕ್ಷೆ ವಿಧಿಸಿ ಮಂಗಳೂರಿನ ಜಿಲ್ಲಾ ಪ್ರಧಾನ ನ್ಯಾಯಾಲಯ ಮಹತ್ವದ ತೀರ್ಪ ನೀಡಿದೆ. ಅಪರಾಧಿಗಳಲ್ಲಿ ವಿದೇಶಿ ಪ್ರಜೆಯೂ ಸೇರಿದ್ದಾನೆ. ಬೆಂಗಳೂರಿನಿಂದ ಮಂಗಳೂರಿಗೆ ಎಂಡಿಎಂಎ ಮಾದಕವಸ್ತು ಸಾಗಿಸುವಾಗ ಈ ಅಪರಾಧಿಗಳು ಸಿಕ್ಕಿಬಿದ್ದಿದ್ದರು. ಅಪರಾಧಿಗಳಾದ ಬೆಂಗಳೂರು ವರ್ತೂರಿನ ಗುಂಟೂರ್ ಪಾಳ್ಯದ ಲುವಾಲ್ ಡೇನಿಯಲ್ ಜಸ್ಟಿನ್ ಬೌಲೊ ಅಲಿಯಾಸ್ ಡ್ಯಾನಿ, ಉಪ್ಪಳದ ಮುಹಮ್ಮದ್ ರಮೀಜ್

ಡ್ರಗ್ಸ್‌ ಸಾಗಿಸಿದ ಅಪರಾಧಿಗಳಿಗೆ 12ರಿಂದ 14 ವರ್ಷ ಜೈಲು ಶಿಕ್ಷೆ Read More »

ಗಾಂಜಾ ಸೇವಿಸಿ ತೂರಾಡುತ್ತಿದ್ದ ಹನೀಫ್ ಪೊಲೀಸರ ವಶಕ್ಕೆ

ಮಂಗಳೂರು: ಗಾಂಜಾ ಸೇವಿಸಿ ಕುದ್ರೋಳಿಯ ಗ್ರೀನ್ ಪಾರ್ಕ್ ಸಮೀಪ ತೂರಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂದರು ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂದರು ಅನ್ಸಾರಿ ರೋಡ್ ನಿವಾಸಿ ಮಹಮ್ಮದ್ ಹನೀಫ್ (42) ಎಂಬಾತನೇ ಬಂಧಿತ ಆರೋಪಿ. ಗಾಂಜಾ ಸೇವಿಸಿ ತೂರಾಡಿಕೊಂಡು ಹೋಗುತ್ತಿದ್ದ ಅವನನ್ನು ಗಸ್ತು ಪೊಲೀಸರು ಗಮನಿಸಿ, ವಶಕ್ಕೆ ಪಡೆದಿರುವುದಾಗಿದೆ. ಆತನನ್ನು ವಿಚಾರಣೆ ನಡೆಸಿದಾಗ ಆತ ಗಾಂಜಾ ಸೇವಿಸಿರುವುದು ‌ದೃಢಪಟ್ಟಿದೆ. ಆರೋಪಿಯ ವಿರುದ್ಧ NDPS ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಸೇವಿಸಿ ತೂರಾಡುತ್ತಿದ್ದ ಹನೀಫ್ ಪೊಲೀಸರ ವಶಕ್ಕೆ Read More »

ಕೊಹ್ಲಿ ದಾಖಲೆಯ ಶತಕದಿಂದ ಭಾರತಕ್ಕೆ ಕೊನೆಯ ಓವರ್‌ನಲ್ಲಿ ದಕ್ಕಿದ ಗೆಲುವು

ಕೊನೆಯ ಓವರ್‌ ತನಕ ತುದಿಗಾಲಲ್ಲಿ ನಿಲ್ಲಿಸಿದ ರಾಂಚಿ ಏಕದಿನ ರಾಂಚಿ: ವಿರಾಟ್‌ ಕೊಹ್ಲಿ ಶತಕ, ರೋಹಿತ್‌ ಮತ್ತು ನಾಯಕ ಕೆಎಲ್‌ ರಾಹುಲ್‌ ಅವರ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ 17 ರನ್‌ಗಳಿಂದ ಗೆದ್ದಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹಿರಿಯರಾದ ಕೊಹ್ಲಿ ಮತ್ತು ರೋಹಿತ್‌ ಶರ್ಮ ಅವರ ಬಿರುಸಿನ ಆಟ ಈ ಪಂದ್ಯದ ಹೈಲೈಟ್‌ ಆಗಿತ್ತು. ಇಬ್ಬರೂ ಈ ಮೂಲಕ ತಮ್ಮ ಟೀಕಾಕಾರರಿಗೆ

ಕೊಹ್ಲಿ ದಾಖಲೆಯ ಶತಕದಿಂದ ಭಾರತಕ್ಕೆ ಕೊನೆಯ ಓವರ್‌ನಲ್ಲಿ ದಕ್ಕಿದ ಗೆಲುವು Read More »

ಮನೆ ಮೇಲೆ ಕುಸಿದು ಬಿದ್ದ ಕಾಂಪೌಂಡ್‌; ತಪ್ಪಿದ ಭಾರಿ ದುರಂತ

ನಿರ್ಮಾಣ ಹಂತದಲ್ಲಿದ್ದ ಪಕ್ಕದ ಮನೆಯ ಕಾಂಪೌಂಡ್‌ ಕುಸಿತ ಪುತ್ತೂರು : ಮನೆ ಮೇಲೆ ಪಕ್ಕದ ಮನೆಯ ಕಾಂಪೌಂಡ್ ಗೋಡೆ ಧರೆ ಸಮೇತ ಕುಸಿದು ಬಿದ್ದ ಘಟನೆ ಉಪ್ಪಿನಂಗಡಿಯ 34 ನೆಕ್ಕಿಲಾಡಿ ಸಮೀಪ ಸುಭಾಶ್‌ ನಗರದಲ್ಲಿ ಸಂಭವಿಸಿದೆ. ನವೆಂಬರ್ 24ರಂದಷ್ಟೇ ಕುಟುಂಬವೊಂದು ಸುಭಾಷ್ ನಗರದ ಜನತಾ ಕಾಲೋನಿಯಲ್ಲಿರುವ ಈ ಮನೆಗೆ ಬಾಡಿಗೆಗೆ ಬಂದಿತ್ತು. ಸ್ಥಳದಲ್ಲಿದ್ದ ಮೇಸ್ತ್ರಿಯೊಬ್ಬರ ಸಕಾಲಿಕ ಎಚ್ಚರಿಕೆಯಿಂದಾಗಿ ನಿವಾಸಿಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಜಬ್ಬಾರ್ ಎಂಬವರು ನಂದಾವರದ ಇಲ್ಯಾಸ್ ಎಂಬವರಿಗೆ ಬಾಡಿಗೆಗೆ ನೀಡಿದ್ದು, ಮನೆಗೆ ಇಲ್ಯಾಸ್‌ ಕುಟುಂಬ

ಮನೆ ಮೇಲೆ ಕುಸಿದು ಬಿದ್ದ ಕಾಂಪೌಂಡ್‌; ತಪ್ಪಿದ ಭಾರಿ ದುರಂತ Read More »

error: Content is protected !!
Scroll to Top