ಕಾಪು ಬಡಗಬೆಟ್ಟು ಪಂಚಾಯಿತಿ ಸಾಮಾನ್ಯ ಸಭೆ
ಕಾಪು: ವಿಧಾನಸಭಾ ಕ್ಷೇತ್ರದ ಬಡಗಬೆಟ್ಟು ಪಂಚಾಯತಿನ ಸಾಮಾನ್ಯ ಸಭೆ ಇಂದು ನಡೆಯಿತು. ಗ್ರಾಮ ಪಂಚಾಯತಿನ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. 8 ಬಾರಿ ಆದರ್ಶ ಪಂಚಾಯತ್ ಪ್ರಶಸ್ತಿ ಪಡೆದಿರುವ ಕುರಿತು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅಭಿನಂದನೆ ಸಲ್ಲಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಪು ಬಡಗಬೆಟ್ಟು ಪಂಚಾಯಿತಿ ಸಾಮಾನ್ಯ ಸಭೆ Read More »