ಉಡುಪಿ

ಉಡುಪಿ ಮಾಜಿ ಶಾಸಕರ ಪತ್ನಿ ಪದ್ಮಪ್ರಿಯ ನಾಪತ್ತೆ, ಆತ್ಮಹತ್ಯೆ ಪ್ರಕರಣ | ಆರೋಪಿ ಅತುಲ್ ರಾವ್‍ ಗೆ ಜೈಲು ಶಿಕ್ಷೆ ವಿಧಿಸಿದ ಉಡುಪಿ ನ್ಯಾಯಾಲಯ

ಉಡುಪಿ: ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಆರೋಪದಲ್ಲಿ ಅತುಲ್ ರಾವ್‌ಗೆ ಒಂದು ವರ್ಷ ಜೈಲುಶಿಕ್ಷೆ, ದಂಡ ವಿಧಿಸಿ ಉಡುಪಿ ನ್ಯಾಯಾಲಯ ಆದೇಶ ನೀಡಿದೆ. 15 ವರ್ಷಗಳ ಹಿಂದೆ ನಡೆದ ಈ ಪ್ರಕರಣದಲ್ಲಿ ಸಿಒಡಿ ಪರ ವಿಶೇಷ ಸರಕಾರಿ ಅಭಿಯೋಜಕರಾಗಿ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಪುತ್ತೂರಿನ ಕೆ.ಶಿವಪ್ರಸಾದ್ ಆಳ್ವ ಅವರು ವಾದ ಮಂಡನೆ ಮಾಡಿ […]

ಉಡುಪಿ ಮಾಜಿ ಶಾಸಕರ ಪತ್ನಿ ಪದ್ಮಪ್ರಿಯ ನಾಪತ್ತೆ, ಆತ್ಮಹತ್ಯೆ ಪ್ರಕರಣ | ಆರೋಪಿ ಅತುಲ್ ರಾವ್‍ ಗೆ ಜೈಲು ಶಿಕ್ಷೆ ವಿಧಿಸಿದ ಉಡುಪಿ ನ್ಯಾಯಾಲಯ Read More »

ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿ ದೀಪಾ ಕಾಣೆ | ಪ್ರಕರಣ ದಾಖಲು

ಕಾರ್ಕಳ : ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿಯೋರ್ವಳು ಕಾಣೆಯಾದ ಘಟನೆ ಕಾರ್ಕಳ ನಂದಳಿಕೆಯಲ್ಲಿ ನಡೆದಿದೆ. ನಂದಳಿಕೆ ಗ್ರಾಮದ ಮಾವಿನಕಟ್ಟೆಯ ದೀಪಾ (21) ಕಾಣೆಯಾದ ವಿದ್ಯಾರ್ಥಿನಿ. ದೀಪಾ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಎ. ವಿದ್ಯಾಭ್ಯಾಸ ಮಾಡುತ್ತಿದ್ದು, ನ. 6 ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿರುತ್ತಾಳೆ. ಆದರೆ ಕಾಲೇಜಿಗೂ ಹೋಗದೆ ಅತ್ತ ವಾಪಾಸು ಮನೆಗೂ ಬಾರದೇ ಜೊತೆಗೆ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ. ಈ ಬಗ್ಗೆ ದೀಪಾಳ ಅಣ್ಣ ದಿಲೀಪ್ ಪೂಜಾರಿ ನೀಡಿದ ದೂರಿನಂತೆ

ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿ ದೀಪಾ ಕಾಣೆ | ಪ್ರಕರಣ ದಾಖಲು Read More »

ಫ್ಲ್ಯಾಟ್ ನಿಂದ ಜಿಗಿದು ಬಾಲಕಿ ಆತ್ಮಹತ್ಯೆ

ಉಡುಪಿ: ಬಾಲಕಿಯೊಬ್ಬಳು ಫ್ಲ್ಯಾಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಉಡುಪಿ ಜಿಲ್ಲೆಯ ಹೆರ್ಗ ಸಮೀಪದ ಫ್ಲ್ಯಾಟ್ ಒಂದರಲ್ಲಿ ನಡೆದಿದೆ. ಪ್ರಜ್ಞಾ(13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಮಣಿಪಾಲದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಪ್ರಜ್ಞಾ, ಬಾಲಕಿ ಇತ್ತೀಚಿನ ಕೆಲ ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಲಾಗಿದೆ. ಫ್ಲ್ಯಾಟ್ ಒಂದರ ಎಂಟನೇ ಮಹಹಡಿಯಿಂದ ಜಿಗಿದ ಬಾಲಕಿ ನೆಲಕ್ಕೆ ಅಪ್ಪಳಿಸಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಪೋಷಕರು ಆಕೆಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ

ಫ್ಲ್ಯಾಟ್ ನಿಂದ ಜಿಗಿದು ಬಾಲಕಿ ಆತ್ಮಹತ್ಯೆ Read More »

ತುಲಾಭಾರ ವೇಳೆ ತಕ್ಕಡಿ ಹಗ್ಗ ಕಳಚಿ ಕೆಳಗೆ ಬಿದ್ದ ಪೇಜಾವರ ಶ್ರೀಗಳು

ದೆಹಲಿ: ದೆಹಲಿ ಪ್ರವಾಸದಲ್ಲಿರುವ ಪೇಜಾವರ ಮಠದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿಗಳು ತುಲಾಭಾರದ ವೇಳೆ ತಕ್ಕಡಿಯ ಹಗ್ಗ ಕಳಚಿ ಕೆಳಗೆ ಬಿದ್ದ ಘಟನೆ ನಡೆದಿದೆ. ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭ ತುಲಾಭಾರ ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ತಕ್ಕಡಿಯ ಹಗ್ಗ ಕಳಚಿ ಬಿದ್ದಿದ್ದು, ತಲೆಗೆ ತರಚಿದ ಗಾಯವಾಗಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಗಾಯಗಳಾಗಿಲ್ಲ ಎಂದು ಸ್ವಾಮೀಜಿಯವರು ತಿಳಿಸಿದ್ದಾರೆ.

ತುಲಾಭಾರ ವೇಳೆ ತಕ್ಕಡಿ ಹಗ್ಗ ಕಳಚಿ ಕೆಳಗೆ ಬಿದ್ದ ಪೇಜಾವರ ಶ್ರೀಗಳು Read More »

ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು ನಿಧನ

ಕಾರ್ಕಳ: ತಾಲೂಕಿನ ಅಜೆಕಾರು ನಿವಾಸಿ ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು (54) ಹೃದಯಾಘಾತದಿಂದ ನಿಧನರಾದರು. ಶೇಖರ್ ಅಜೆಕಾರ್ ಅವರು ಮಕ್ಕಳ ಸಾಹಿತ್ಯದ ಕುರಿತು ಹೆಚ್ಚು ಆಸಕ್ತಿ ವಹಿಸಿದ್ದು, ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು ನಿಧನ Read More »

ಮುಂದಿನ ಬಜೆಟ್ ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ : ಮುಖ್ಯಮಂತ್ರಿ ಸಿದ್ಧರಾಮಯ್ಯ

ಉಡುಪಿ: ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಂಟ ಸಮುದಾಯದ ಅಭಿವೃದ್ಧಿಗಾಗಿ ಮುಂದಿನ ಬಜೆಟ್ ನಲ್ಲಿ ‘ಬಂಟರ ಅಭಿವೃದ್ಧಿ ನಿಗಮ’ದ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ ಸಮಾಜಕ್ಕೆ ಭರವಸೆ ನೀಡಿದ್ದಾರೆ. ನಗರದ ಅಜ್ಜರಕಾಡು ಕ್ರೀಡಾಂಗಣದ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ನಡೆದ ನಾಲ್ಕನೇ ವಿಶ್ವ ಬಂಟರ ಸಮ್ಮೇಳನ-2023ನ್ನು ದೀಪ ಪ್ರಜ್ವಲನಗೊಳಿಸಿ, ಹಿಂಗಾರ ಅರಳಿಸಿ, ತೆಂಗಿನ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಬಂಟ ಸಮಾಜದ ಅಭಿವೃದ್ಧಿಗಾಗಿ ಕಳೆದ ನಮ್ಮಚುನಾವಣಾ ಪ್ರಣಾಳಿಕೆ ಯಲ್ಲೇ ಬಂಟರ ಅಭಿವೃದ್ಧಿ

ಮುಂದಿನ ಬಜೆಟ್ ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ : ಮುಖ್ಯಮಂತ್ರಿ ಸಿದ್ಧರಾಮಯ್ಯ Read More »

ಶೀಘ್ರ ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ : ಸಿ.ಎಂ. ಸಿದ್ಧರಾಮಯ್ಯ

ಮಂಗಳೂರು: ರಾಜ್ಯದಲ್ಲಿ ನಿಗಮ ಮಂಡಳಿಗೆ ರಾಜ್ಯದಲ್ಲಿ ಅಧ್ಯಕ್ಷರ ನೇಮಕ ಶೀಘ್ರ ಮಾಡಲಾಗುವುದು. ಮೊದಲ ಹಂತದಲ್ಲಿ ಶಾಸಕರಿಗೆ ಆದ್ಯತೆ ನೀಡಿ, ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಉಡುಪಿಯಲ್ಲಿ ಆಯೋಜಿಸಿರುವ ವಿಶ್ವ ಬಂಟರ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿರುವ ಮುಖ್ಯಮಂತ್ರಿಗಳು, ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿದೆ. ಹೀಗಾಗಿ ಮರು ತನಿಖೆ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಬೇಕು ಎಂದು

ಶೀಘ್ರ ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ : ಸಿ.ಎಂ. ಸಿದ್ಧರಾಮಯ್ಯ Read More »

ನಿವೃತ್ತ ಬ್ಯಾಂಕ್ ಉದ್ಯೋಗಿ ಶವ ಬಾವಿಯಲ್ಲಿ ಪತ್ತೆ

ಉಡುಪಿ: ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರ ಶವ ಅವರ ಮನೆ ಆವರಣದಲ್ಲಿರುವ ಬಾವಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉಡುಪಿ ಒಳಕಾಡು ನಾರಾಯಣ ರಾವ್ ಕಂಪೌಂಡ್ ನ ನಿವೃತ್ತ ಬ್ಯಾಂಕ್ ಉದ್ಯೋಗಿ ಸದಾನಂದ ಕುಂದರ್ (65) ಎಂಬವರ ಶವ ಪತ್ತೆಯಾಗಿರುವುದು. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಎಎಸ್‍ಐ ಅರುಣ್ ಹಂಗಾರಕಟ್ಟೆ, ಹೆಡ್ ಕಾನ್‍ ಸ್ಟೇಬಲ್ ಗಳಾದ ಹರೀಶ್ ನಾಯ್ಕ್‍, ಶಂಕರ್ ಭೇಟಿ ನೀಡಿದ್ದು, ಘಟನೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ನಿವೃತ್ತ ಬ್ಯಾಂಕ್ ಉದ್ಯೋಗಿ ಶವ ಬಾವಿಯಲ್ಲಿ ಪತ್ತೆ Read More »

ಬಾವಿಯಲ್ಲಿ ಪತ್ತೆಯಾದ ಹೆಡ್’ಕಾನ್’ಸ್ಟೇಬಲ್ ಮೃತದೇಹ!

ಕಾರ್ಕಳ: ನಾಪತ್ತೆಯಾಗಿದ್ದ ಹೆಡ್ ಕಾನ್‍ ಸ್ಟೇಬಲ್ ರೊಬ್ಬರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಕಾರ್ಕಳ ನಗರ ಠಾಣೆಯ ಹೆಡ್ ಕಾನ್‍ಸ್ಟೇಬಲ್ ಶೃತಿನ್ ಶೆಟ್ಟಿ (35) ಎಂಬವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.ಶೃತಿನ್ ಶೆಟ್ಟಿ ಅ.19 ರಂದು ನಾಪತ್ತೆಯಾಗಿದ್ದರು. ಸೋಮವಾರ ಕಾರ್ಕಳ ಪುಚ್ಚೇರಿ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾವಿಯಲ್ಲಿ ಪತ್ತೆಯಾದ ಹೆಡ್’ಕಾನ್’ಸ್ಟೇಬಲ್ ಮೃತದೇಹ! Read More »

ಇಸ್ರೇಲ್’ನಲ್ಲಿ ಉಡುಪಿ ಭಾಗದ ಜನರಿಗಾಗಿ ವಿಶೇಷ ಪ್ರಕಟಣೆ | ರಕ್ಷಣೆಗಾಗಿ ಸರಕಾರದ ವಿಶೇಷ ಯೋಜನೆ!!

ಉಡುಪಿ: ಪ್ರಸ್ತುತ ಇಸ್ರೇಲ್ ದೇಶದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್ ದೇಶಕ್ಕೆ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ಭಾರತದಿಂದ ತೆರಳಿರುವ ಉಡುಪಿ ಜಿಲ್ಲೆಗೆ ಸಂಬಂಧಿಸಿದ ಭಾರತ ಪ್ರಜೆಗಳಿದ್ದಲ್ಲಿ ತಕ್ಷಣ ಉಡುಪಿ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಯನ್ನು ಉಡುಪಿ ಜಿಲ್ಲಾಧಿಕಾರಿಯವರ ಕಚೇರಿ, ರಜತಾದ್ರಿ ಮಣಿಪಾಲದಲ್ಲಿ ತೆರೆದಿರುವ ಕಂಟ್ರೋಲ್ ರೂಂ ಸಂಖ್ಯೆ : 1077/0820-2574802 ಗೆ ಕರೆ ಮಾಡಿ ಮಾಹಿತಿ ನೀಡವಂತೆ ತಿಳಿಸಿದೆ. ಅಥವಾ ರಾಜ್ಯ ಸರಕಾರದ ತುರ್ತು ಸಂಖ್ಯೆ : 080-22340676, 080-22253707

ಇಸ್ರೇಲ್’ನಲ್ಲಿ ಉಡುಪಿ ಭಾಗದ ಜನರಿಗಾಗಿ ವಿಶೇಷ ಪ್ರಕಟಣೆ | ರಕ್ಷಣೆಗಾಗಿ ಸರಕಾರದ ವಿಶೇಷ ಯೋಜನೆ!! Read More »

error: Content is protected !!
Scroll to Top