ರಾಜ್ಯ

ಅಸುರಕ್ಷಿತ ಔಷಧಗಳನ್ನು ನಿಷೇಧಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಕರ್ನಾಟಕ ಸರ್ಕಾರ ಅಸುರಕ್ಷಿತ ಔಷಧಗಳು ಮತ್ತು ಕಾಂತಿವರ್ಧಕಗಳ ಪಟ್ಟಿಯನ್ನು ಮಾಡಿದೆ. ಮೇ ತಿಂಗಳಿನಲ್ಲಿ ಕಾಂತಿವರ್ಧಕ ಔಷಧಗಳು ಮತ್ತು ಕಾಂತಿವರ್ಧಕಗಳ ಸ್ಯಾಂಪಲ್ ಪಡೆದು ಟೆಸ್ಟ್ ಮಾಡಿದ್ದು, ಸದ್ಯ ಅದರ ಫಲಿತಾಂಶಕ್ಕನುಗುಣವಾಗಿ ಅಸುರಕ್ಷಿತ ವಸ್ತುಗಳ ಪಟ್ಟಿ ಮಾಡಿರುವುದಾಗಿದೆ. ರಾಜ್ಯ ಮತ್ತು ಹೊರ ರಾಜ್ಯಗಳ ಕಂಪನಿಗಳ ಔಷಧಿಗಳೂ ಇದರಲ್ಲಿ ಸೇರಿವೆ. ಅವುಗಳನ್ನು ಮಾರಾಟ ಮಾಡದಂತೆಯೂ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇವುಗಳ ಸಾಗಾಟ, ದಾಸ್ತಾನು, ಮಾರಾಟದ ಜೊತೆಗೆ ಬಳಕೆ ಮಾಡುವುದನ್ನೂ ನಿಷೇಧ ಮಾಡಲಾಗಿದೆ. ಅಸುರಕ್ಷಿತ ಔಷಧಗಳ ಪಟ್ಟಿ: ಕಂಪೌಂಡ್ ಸೋಡಿಯಂ ಲ್ಯಾಕ್ಟೇಟ್ […]

ಅಸುರಕ್ಷಿತ ಔಷಧಗಳನ್ನು ನಿಷೇಧಿಸಿದ ಆರೋಗ್ಯ ಇಲಾಖೆ Read More »

ಜೆಲ್ಲಿ ಚಾಕೊಲೇಟ್‌ ರೂಪದಲ್ಲಿ ಗಾಂಜಾ ಮಾರಾಟ : ಇಬ್ಬರ ಬಂಧನ

ಬೆಂಗಳೂರು : ಈಗ ಹೊಸ ಮಾದರಿಯ ಜೆಲ್ಲಿ ಗಾಂಜಾ ಎಂಟ್ರಿ ಕೊಟ್ಟಿದೆ. ಜೆಲ್ಲಿ ಚಾಕೊಲೇಟ್​​ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಮೆಡಿಕಲ್ ಹಾಗೂ ಇಂಜಿನಿಯರಿಂಗ್​​ ವಿದ್ಯಾರ್ಥಿಗಳೇ ಇದರ ಗ್ರಾಹಕರು. ಈ ಬಗ್ಗೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಜೆಲ್ಲಿ ಗಾಂಜಾ ಗ್ಯಾಂಗನ್ನು ಬಂಧಿಸಿದ್ದಾರೆ. ಮೊಹಮದ್ ಜಾಹೀದ್ ಹಾಗೂ ಇಸ್ಮಾಯಿಲ್ ಅದ್ನಾನ್ ಬಂಧಿತ ಆರೋಪಿಗಳು. ತಲೆಮರೆಸಿಕೊಂಡ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಬ್ಯಾಟರಾಯನಪುರ ಇನ್ಸ್‌ಪೆಕ್ಟರ್ ಕೆ.ಜೀವನ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ಮಾಡಿದ್ದು, ಒಟ್ಟು

ಜೆಲ್ಲಿ ಚಾಕೊಲೇಟ್‌ ರೂಪದಲ್ಲಿ ಗಾಂಜಾ ಮಾರಾಟ : ಇಬ್ಬರ ಬಂಧನ Read More »

ಜಾನುವಾರು ರಕ್ಷಣೆ ನೆಪದಲ್ಲಿ ಹಣ ವಸೂಲಿ : ಮಹಿಳೆ ಸಹಿತ ಏಳು ಮಂದಿ ಸೆರೆ

ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರಿಂದ ಹಣ ವಸೂಲಿ ದಂಧೆ ಮೈಸೂರು: ಜಾನುವಾರು ರಕ್ಷಣೆ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ಮಹಿಳೆ ಸೇರಿ ಏಳು ಮಂದಿಯನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲ ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರು ಎನ್ನಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ ಸಹಿತ ಏಳು ಮಂದಿಯನ್ನು ಮೈಸೂರಿನ ಹುಣಸೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಈ ಘಟನೆ ನಡೆದಿದೆ. ಹಿಂದೂ ಸಂಘಟನೆ ಹೆಸರಿನಲ್ಲಿ

ಜಾನುವಾರು ರಕ್ಷಣೆ ನೆಪದಲ್ಲಿ ಹಣ ವಸೂಲಿ : ಮಹಿಳೆ ಸಹಿತ ಏಳು ಮಂದಿ ಸೆರೆ Read More »

ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಕಡ್ಡಾಯ : ತಪ್ಪಿದಲ್ಲಿ ‌ಕಠಿಣ ಕ್ರಮ

ಬೆಂಗಳೂರು: ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಕೆ ಮಾಡುವಂತೆ ರಾಜ್ಯದ ಎಲ್ಲಾ ಇಲಾಖೆಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ 60% ಕನ್ನಡ ಕಡ್ಡಾಯ ಎಂಬ ಆದೇಶ ಈಗಾಗಲೇ ಚಾಲ್ತಿಯಲ್ಲಿದೆ. ಇದು ಸಮರ್ಪಕವಾಗಿ ಇನ್ನೂ ಜಾರಿಯಾಗಿಲ್ಲ. ಹೀಗಿರುವಾಗಲೇ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಇಲಾಖೆಗಳಲ್ಲಿಯೂ ಕನ್ನಡ ಕಡ್ಡಾಯ ಎಂಬ ಸುತ್ತೋಲೆ ಹೊರಡಿಸಿರುವುದಾಗಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ‌ಸರ್ಕಾರ ನೀಡಿದೆ. ಈ ನಿಯಮಾನುಸಾರ ಕನ್ನಡದಲ್ಲಿ ಬರುವ

ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಕಡ್ಡಾಯ : ತಪ್ಪಿದಲ್ಲಿ ‌ಕಠಿಣ ಕ್ರಮ Read More »

ಅಸಮಾಧಾನಿತ ಶಾಸಕರ ಬಾಯಿಗೆ ಬೀಗ ಜಡಿದ ಸಿದ್ದರಾಮಯ್ಯ

ಬಹಿರಂಗ ಹೇಳಿಕೆ ನೀಡಿ ಮುಜುಗರವುಂಟು ಮಾಡದಂತೆ ತಾಕೀತು ಬೆಂಗಳೂರು: ವಸತಿ ಇಲಾಖೆಯ ಭ್ರಷ್ಟಾಚಾರ ಮತ್ತು ಅನುದಾನ ಸಿಗದ ಕುರಿತು ಧ್ವನಿಯೆತ್ತಿದ್ದ ಕಾಂಗ್ರೆಸ್‌ನ ಇಬ್ಬರು ಶಾಸಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಬುಧವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಕೂಡಲೇ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದ ಅಸಮಾಧಾನಿತ ಶಾಸಕ ರಾಜು ಕಾಗೆ ಹಾಗೂ ಭ್ರಷ್ಟಾಚಾರ ಬಾಂಬ್‌ ಸಿಡಿಸಿದ ಶಾಸಕ ಬಿ.ಆರ್‌ ಪಾಟೀಲ್‌ ಅವರನ್ನ ಭೇಟಿಯಾಗಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಿ.ಆರ್ ಪಾಟೀಲ್‌ಗೆ

ಅಸಮಾಧಾನಿತ ಶಾಸಕರ ಬಾಯಿಗೆ ಬೀಗ ಜಡಿದ ಸಿದ್ದರಾಮಯ್ಯ Read More »

ಶಿರಾಡಿ ಘಾಟಿಯಲ್ಲಿ ಭೂಕುಸಿತ : ಮಂಗಳೂರು-ಬೆಂಗಳೂರು ಸಂಚಾರ ಕಡಿತ

ಚಾರ್ಮಾಡಿ, ಸಂಪಾಜೆ ಮಾರ್ಗದಲ್ಲಿ ಸಂಚರಿಸಲು ಸೂಚನೆ ಮಂಗಳೂರು: ಮಳೆ ಅಬ್ಬರಕ್ಕೆ ಸಕಲೇಶಪುರ ಬಳಿ ಶಿರಾಡಿ ಘಾಟಿಯಲ್ಲಿ ಭೂಕುಸಿತವಾಗಿದ್ದು ಬೆಂಗಳೂರು-ಮಂಗಳೂರು ಸಂಪರ್ಕ ಕಡಿತವಾಗಿದೆ.ಸಕಲೇಶಪುರ ತಾಲ್ಲೂಕಿನ, ಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿದ ಪರಿಣಾಮ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ತಡರಾತ್ರಿ ಮರಗಳ ಸಮೇತ ರಸ್ತೆಗೆ ಅಡ್ಡಲಾಗಿ ಗುಡ್ಡ ಕುಸಿದ ಕಾರಣ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದ್ದಾರೆ. ಮಂಗಳೂರು ಕಡೆಗೆ ತೆರಳುವ ವಾಹನಗಳಿಗೆ ಬೇಲೂರು ಮೂಲಕ ಚಾರ್ಮಾಡಿ ಘಾಟ್ ರಸ್ತೆ

ಶಿರಾಡಿ ಘಾಟಿಯಲ್ಲಿ ಭೂಕುಸಿತ : ಮಂಗಳೂರು-ಬೆಂಗಳೂರು ಸಂಚಾರ ಕಡಿತ Read More »

ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ: ಕಾರಣ ಇಲ್ಲಿದೆ

ಮೈಸೂರು: ಕೆಆರ್‌ ಎಸ್ ಡ್ಯಾಮ್‌ ನ ಕೆಳಗಿರುವ ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದ್ದು, ಪ್ರವಾಹದ ಭೀತಿಯಿಂದ ಈ ಕ್ರಮಕ್ಕೆ ಶ್ರೀರಂಗಪಟ್ಟಣ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ. ಪ್ರವಾಸಿ ತಾಣಗಳಾದ ಬಲಮುರಿ, ಎಡಮುರಿ, ಸ್ನಾನಘಟ್ಟ, ಸಂಗಮ, ನಿಮಿಷಾಂಭ ದೇಗುಲ, ಘೋಸಾಯ್ ಘಾಟ್‌ಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಹಾಗೆಯೇ ಕಾವೇರಿ ತಟದಲ್ಲಿ ನಡೆಸುವ ಪಿಂಡ ಪ್ರಧಾನ ಕಾರ್ಯಕ್ಕೂ ನಿರ್ಬಂಧ ಅನ್ವಯವಾಗುತ್ತದೆ. ಕಾವೇರಿ ನದಿಯ ಅಯಕಟ್ಟಿನ ಜಾಗಗಳಲ್ಲಿ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ

ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ: ಕಾರಣ ಇಲ್ಲಿದೆ Read More »

ಶೃಂಗೇರಿಯ ನೆಮ್ಮಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಚಿಕ್ಕಮಗಳೂರು: ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಶೃಂಗೇರಿ ಸಮೀಪದ ನೆಮ್ಮಾರ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿದು ಆತಂಕ ಸೃಷ್ಟಿಯಾಗಿದೆ. ಶೃಂಗೇರಿ – ಕಾರ್ಕಳ ನಡುವಿನ ಸಂಚಾರ ರಸ್ತೆಯನ್ನು ಗುಡ್ಡ ಕುಸಿತದ ಆತಂಕದಿಂದ ಜಿಲ್ಲಾಡಳಿತ ಈಗಾಗಲೇ ಬಂದ್ ಮಾಡಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲೇ ಅಧಿಕಾರಿಗಳು, ಪೊಲೀಸರು, ಜೆ ಸಿ ಬಿ ವ್ಯವಸ್ಥೆ‌ ಬೀಡು ಬಿಟ್ಟಿದ್ದು, ಅನಾಹುತಗಳಾದಲ್ಲಿ ಶೀಘ್ರ ಕಾರ್ಯಾಚರಣೆಗೆ ಸಜ್ಜಾಗಿವೆ. ಹಾಗೆಯೇ ಗುಡ್ಡ ಕುಸಿತದ ಎಚ್ಚರಿಕೆಯಾಗಿ ರೋಡ್ ಜಾಮ್ ಮಾಡಿ ಮಣ್ಣು ತೆರವು ಕಾರ್ಯ

ಶೃಂಗೇರಿಯ ನೆಮ್ಮಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ Read More »

ಫತೇಹಬಾದ್, ಬಾದಶಾಹಿಭಾಗ್ ನಗರಗಳ ಹೆಸರು ಬದಲಾವಣೆಗೆ ಮುಂದಾದ ಯುಪಿ ‌ಸರ್ಕಾರ

ಲಕ್ನೋ: ಉತ್ತರ ಪ್ರದೇಶದ ಆಗ್ರಾ ದಲ್ಲಿನ ಫತೇಹಬಾದ್ ಮತ್ತು ಬಾದಶಾಹಿ ಭಾಗ್‌ ನಗರಗಳ ಹೆಸರನ್ನು ಕ್ರಮವಾಗಿ ಸಿಂಧೂರಪುರಂ ಮತ್ತು ಬ್ರಹ್ಮಪುರಂ ಎಂದು ಮರುನಾಮಕರಣ ಮಾಡಲು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಮುಂದಾಗಿದೆ. ಸೋಮವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಪ್ರಸ್ತಾವನೆ ಬಂದಿದ್ದು, ಇದನ್ನು ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿದೆ. ಇದರ ಅನುಮೋದನೆಗಾಗಿ ‌ರಾಜ್ಯ ಸರ್ಕಾರಕ್ಕೆ ಕಳುಹಿಸಲು ಸಿದ್ಧತೆಗಳು ನಡೆದಿವೆ. ಈಗಿರುವ ಹೆಸರುಗಳು ಗುಲಾಮಗಿರಿಯನ್ನು ಸೂಚಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಸರು ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫತೇಹಬಾದ್, ಬಾದಶಾಹಿಭಾಗ್ ನಗರಗಳ ಹೆಸರು ಬದಲಾವಣೆಗೆ ಮುಂದಾದ ಯುಪಿ ‌ಸರ್ಕಾರ Read More »

13ನೇ ಅಂತಸ್ತಿನಲ್ಲಿ ರೀಲ್ಸ್ | ಕೆಳಗೆ ಬಿದ್ದು ಯುವತಿ ಮೃತ್ಯು

ಬೆಂಗಳೂರು: ಯುವತಿಯೊಬ್ಬಳು ನಿರ್ಮಾಣ ಹಂತದ ಕಟ್ಟಡದ 13ನೇ ಅಂತಸ್ತಿನಲ್ಲಿ ರೀಲ್ಸ್ ಮಾಡುವ ಸಂದರ್ಭ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂದಿನಿ ಮೃತಪಟ್ಟ ಯುವತಿ   ಸ್ನೇಹಿತರೆಲ್ಲಾ ಸೇರಿ ನಿರ್ಮಾಣ ಹಂತದ ಕಟ್ಟಡದ ಬಳಿ ಪಾರ್ಟಿ ಮಾಡಲೆಂದು ಯುವತಿ ನಂದಿನಿ ಹೋಗಿದ್ದಳು. ಈ ಪಾರ್ಟಿಯಲ್ಲಿ ಪ್ರೀತಿ ವಿಚಾರಕ್ಕಾಗಿ ಮಾತುಕತೆ ನಡೆದು ಗಲಾಟೆ ಆಗಿದೆ. 12 ವರ್ಷದ ಲವ್ ಮುರಿದು ಬಿದ್ದಿತ್ತು. ಇದರಿಂದ ಬೇಸರಗೊಂಡಿದ್ದ ಯುವತಿ ಸ್ಯಾಡ್ ರೀಲ್ಸ್ ಮಾಡಲು ಹೋಗಿದ್ದಳು.

13ನೇ ಅಂತಸ್ತಿನಲ್ಲಿ ರೀಲ್ಸ್ | ಕೆಳಗೆ ಬಿದ್ದು ಯುವತಿ ಮೃತ್ಯು Read More »

error: Content is protected !!
Scroll to Top