ರಾಜ್ಯ

ಡ್ರಗ್ಸ್‌ ಮಾರಾಟಗಾರರ ಜೊತೆ ಕೈಜೋಡಿಸಿದ್ದ ಇನ್‌ಸ್ಪೆಕ್ಟರ್‌ ಸಹಿತ 10 ಪೊಲೀಸರ ಅಮಾನತು

ತಿಂಗಳಿಗೆ 1ರಿಂದ 1.5 ಲ.ರೂ. ಕಮಿಷನ್‌ ಪಡೆಯುತ್ತಿದ್ದ ಪೊಲೀಸರು ಬೆಂಗಳೂರು: ಪೊಲೀಸರೇ ಡ್ರಗ್‌ ಪೆಡ್ಲರ್​ಗಳೊಂದಿಗೆ ಕೈಜೋಡಿಸಿರುವ ಆಘಾತಕಾರಿ ವಿಚಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಓರ್ವ ಇನ್‌ಸ್ಪೆಕ್ಟರ್‌ ಸಹಿತ 10 ಪೊಲೀಸರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ. ಆರೋಪಿಗಳ ಜೊತೆ ಸೇರಿ ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾಗಿದ್ದ, ಡ್ರಗ್‌ ಪೆಡ್ಲರ್ಸ್ ಜೊತೆಗೆ ನಂಟು ಆರೋಪದ ಮೇಲೆ ಬೆಂಗಳೂರಿನ ಚಾಮರಾಜಪೇಟೆ ಠಾಣೆಯ ಇನ್‌ಸ್ಪೆಕ್ಟರ್‌ ಟಿ.ಮಂಜಣ್ಣ ಸೇರಿ ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆಯ 10 ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. […]

ಡ್ರಗ್ಸ್‌ ಮಾರಾಟಗಾರರ ಜೊತೆ ಕೈಜೋಡಿಸಿದ್ದ ಇನ್‌ಸ್ಪೆಕ್ಟರ್‌ ಸಹಿತ 10 ಪೊಲೀಸರ ಅಮಾನತು Read More »

ಹಬ್ಬ, ಉತ್ಸವಗಳಿಗೆ ಪೊಲೀಸ್ ಇಲಾಖೆಯಿಂದ ಸಮಸ್ಯೆ ಆಗಿಲ್ಲ: ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು: ಸಾರ್ವಜನಿಕವಾಗಿ ಆಚರಣೆ ಮಾಡುವ ಯಾವುದೇ ಹಬ್ಬಗಳಿಗೆ, ಮೆರವಣಿಗೆಗಳಿಗೆ ಪೊಲೀಸ್ ಇಲಾಖೆ ಅಡ್ಡಿ ಮಾಡಿಲ್ಲ. ಬೇರೆಯವರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ‘ಶಬ್ದದ ಮಿತಿ’ ನಿಗದಿ ಮಾಡಲಾಗಿದ್ದು, ಅದನ್ನು ಅನುಸರಿಸಿಕೊಂಡು ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವಾರು ಗಣೇಶೋತ್ಸವ ಮೆರವಣಿಗೆಗಳು ತಂಡ ರಾತ್ರಿಯ ವರೆಗೆ ನಡೆದಿದ್ದು, ಅಲ್ಲಿ ಯಾವ ಸಮಸ್ಯೆಯೂ ಆಗಿಲ್ಲ. ಪೊಲೀಸರು ಸಮಸ್ಯೆ ಮಾಡಿಲ್ಲ. ಆದರೆ ಶಬ್ದ ಮಿತಿಯನ್ನು ಮಾತ್ರ ಹಾಕಲಾಗಿತ್ತು ಎಂದು ತಿಳಿಸಿದ್ದಾರೆ.

ಹಬ್ಬ, ಉತ್ಸವಗಳಿಗೆ ಪೊಲೀಸ್ ಇಲಾಖೆಯಿಂದ ಸಮಸ್ಯೆ ಆಗಿಲ್ಲ: ಸುಧೀರ್ ಕುಮಾರ್ ರೆಡ್ಡಿ Read More »

ಹಾಸನ ದುರಂತ : ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ

ಸಾವಿನ ಸಂಖ್ಯೆ 9ಕ್ಕೇರಿಕೆ : ಮೃತರಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಅಧಿಕ ಹಾಸನ : ಗಣೇಶ ಮೆರವಣಿಗೆ ವೇಳೆ ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ. 17ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತಕ್ಕೆ ಕ್ಯಾಂಟರ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹೇಳಿದ್ದಾರೆ. ಮೃತರ ಪೈಕಿ ಬಹುತೇಕರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳಾಗಿದ್ದಾರೆ.

ಹಾಸನ ದುರಂತ : ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ Read More »

ಹಾಸನ : ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ಹರಿದ ಟ್ರಕ್‌; ಮೃತರ ಸಂಖ್ಯೆ 8ಕ್ಕೇರಿಕೆ

ಮೃತರ ಕುಟುಂಬಗಳಿಗೆ ಸರ್ಕಾರದಿಂದ 5 ಲ.ರೂ. ಪರಿಹಾರ; ಗಾಯಾಳುಗಳಿಗೆ ಚಿಕಿತ್ಸೆ ವೆಚ್ಚ ಹಾಸನ : ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಹಾಸನದಲ್ಲಿ ಸಂಭವಿಸದ ಭೀಕರ ದುರಂತದಲ್ಲಿ ಮೃತಪಟ್ರ ಸಂಖ್ಯ 8ಕ್ಕೇರಿದೆ. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಹೋಗುತ್ತಿದ್ದ ಜನರ ಮೇಲೆ ಟ್ರಕ್‌ ಹರಿದು ಈ ದುರಂತ ಸಂಭವಿಸಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನು ನಾಲ್ವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವವರಿಗೆ ಚಿಕಿತ್ಸೆ ಮುಂದುವರಿದಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹಾಸನ ತಾಲೂಕಿನ

ಹಾಸನ : ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ಹರಿದ ಟ್ರಕ್‌; ಮೃತರ ಸಂಖ್ಯೆ 8ಕ್ಕೇರಿಕೆ Read More »

ಆನೆ ಮಾವುತನ ಕೊಲೆ ಪ್ರಕರಣ ಮರು ತನಿಖೆ ಆಗ್ರಹಿಸಿ ಎಸ್‌ಐಟಿಗೆ ದೂರು

2012ರಲ್ಲಿ ಧರ್ಮಸ್ಥಳ ಸಮೀಪ ಬೂರ್ಜೆಯಲ್ಲಿ ನಡೆದ ಅವಳಿ ಕೊಲೆ ಪ್ರಕರಣ ಧರ್ಮಸ್ಥಳ : ಧರ್ಮಸ್ಥಳದ ಆನೆ ಮಾವುತ ನಾರಾಯಣ ಹಾಗೂ ತಂಗಿ ಯಮುನಾ ಕೊಲೆ ಕೇಸ್ ಸಂಬಂಧ ಕೊಲೆಯಾಗಿರುವ ನಾರಾಯಣ ಅವರ ಪುತ್ರ ಗಣೇಶ ಹಾಗೂ ಪುತ್ರಿ ಭಾರತಿ ಎಸ್‌ಐಟಿಗೆ ಮತ್ತೆ ದೂರು ನೀಡಿದ್ದಾರೆ. ಹೈಕೋರ್ಟ್‌ನಲ್ಲಿ‌ ಕೇಸ್ ಇದ್ದ ಹಿನ್ನೆಲೆಯಲ್ಲಿ ದೂರು ತೆಗೆದುಕೊಳ್ಳಲು ಆಗವುದಿಲ್ಲ ಅಂತ ಎಸ್​ಐಟಿ ಈ ಮೊದಲು ದೂರು ನೀಡಲು ಬಂದಾಗ ಹೇಳಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಿಂದ ದೂರು ಹಿಂಪಡೆದು ಮತ್ತೆ ಎಸ್‌ಐಟಿಗೆ ದೂರು

ಆನೆ ಮಾವುತನ ಕೊಲೆ ಪ್ರಕರಣ ಮರು ತನಿಖೆ ಆಗ್ರಹಿಸಿ ಎಸ್‌ಐಟಿಗೆ ದೂರು Read More »

ನಿರ್ದೇಶಕ, ನಟ ಎಸ್‌.ನಾರಾಯಣ್‌ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲು

ಸೊಸೆಗೆ ವರದಕ್ಷಿಣೆ ತರಲು ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ ಆರೋಪ ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಟ ಎಸ್​. ನಾರಾಯಣ್ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಾಗಿದೆ. ಸೊಸೆ ಪವಿತ್ರಾ ಅವರು ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ದೂರು ನೀಡಿದ್ದು, ಇದರನ್ವಯ ಎಫ್​ಐಆರ್ ದಾಖಲಾಗಿದೆ. 2021ರಲ್ಲಿ ಎಸ್.ನಾರಾಯಣ್​ ಅವರ ಪುತ್ರ ಪವನ್ ಹಾಗೂ ಪವಿತ್ರಾ ಮದುವೆ ನಡೆದಿತ್ತು. ನಾಲ್ಕು ವರ್ಷ ಕಳೆಯುವುದರೊಳಗೆ ಸಂಸಾರ ಹಳಿತಪ್ಪದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.

ನಿರ್ದೇಶಕ, ನಟ ಎಸ್‌.ನಾರಾಯಣ್‌ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲು Read More »

ಕೊಲ್ಲೂರು ಮೂಕಾಂಬಿಕೆಗೆ 4 ಕೋ.ರೂ. ಮೌಲ್ಯದ ವಜ್ರ ಕಿರೀಟ ಸಮರ್ಪಿಸಿದ ಇಳಯರಾಜ

ದೇವಿಯ ಪರಮ ಭಕ್ತರಾಗಿರುವ ಇಳಯರಾಜ ಉಡುಪಿ: ಕೊಲ್ಲೂರು ಮೂಕಾಂಬಿಕೆ ದೇವಿಗೆ ದಕ್ಷಿಣ ಭಾರತ ಖ್ಯಾತ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಇಳಯರಾಜ ಬರೋಬ್ಬರಿ 4 ಕೋಟಿ ರೂ. ಮೌಲ್ಯದ ವಜ್ರದ ಕಿರೀಟವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತರಾಗಿರುವ ಇಳಯರಾಜ ಈ ಹಿಂದೆಯೂ ಮೂಕಾಂಬಿಕೆ ದೇವಿಗೆ ಬಗೆಬಗೆಯ ಆಭರಣ ನೀಡಿ ಭಕ್ತಿ ತೋರಿದ್ದರು. ಈ ಬಾರಿ ದೇವಿಗೆ ವಜ್ರದ ಕಿರೀಟ ಸಹಿತ ಆಭರಣಗಳನ್ನು ಅರ್ಪಿಸಿದ್ದಾರೆ. ಜೊತೆಗೆ ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗ ಸಮರ್ಪಿಸಿದ್ದಾರೆ.

ಕೊಲ್ಲೂರು ಮೂಕಾಂಬಿಕೆಗೆ 4 ಕೋ.ರೂ. ಮೌಲ್ಯದ ವಜ್ರ ಕಿರೀಟ ಸಮರ್ಪಿಸಿದ ಇಳಯರಾಜ Read More »

ಮದ್ದೂರಿನಲ್ಲಿಂದು ಗಣೇಶ ವಿಸರ್ಜನೆ ಬೃಹತ್‌ ಮೆರವಣಿಗೆ

ವಿಜಯೇಂದ್ರ ಸಹಿತ ಹಲವು ಬಿಜೆಪಿ ನಾಯಕರು ಭಾಗಿ ಬೆಂಗಳೂರು: ಭಾನುವಾರ ಗಣೇಶ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಿದ ಘಟನೆಯ ಬಳಿಕ ಬೂದಿ ಮುಚ್ಚಿದ ಕೆಂಡದಂತಿರುವ ಮಂಡ್ಯದ ಮದ್ದೂರಿನಲ್ಲಿ ಇಂದು ಮತ್ತೆ ಗಣೇಶ ವಿಸರ್ಜನೆಯ ಬೃಹತ್‌ ಮೆರವಣಿಗೆ ನಡೆಯಲಿದೆ. ಮದ್ದೂರಿನಲ್ಲಿಂದು ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, 28ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಸಾಗಲಿವೆ. 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆಯಿದೆ. ಬೆಳಗ್ಗೆ 10.30ಕ್ಕೆ ಮದ್ದೂರು ಪಟ್ಟಣದಿಂದ ಮೆರವಣಿಗೆ ಆರಂಭವಾಗಿ ಮೂರು ಕಿ.ಮೀ ಸಾಗಿ

ಮದ್ದೂರಿನಲ್ಲಿಂದು ಗಣೇಶ ವಿಸರ್ಜನೆ ಬೃಹತ್‌ ಮೆರವಣಿಗೆ Read More »

ಐದಕ್ಕೂ ಅಧಿಕ ಬೆಟ್ಟಿಂಗ್‌ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದ ಕಾಂಗ್ರೆಸ್‌ ಶಾಸಕ

ಇ.ಡಿ ದಾಳಿಯಲ್ಲಿ ಶಾಸಕನ ಅಪಾರ ಸಂಪತ್ತಿನ ರಹಸ್ಯ ಬಯಲು ಬೆಂಗಳೂರು: ಅಕ್ರಮ ಆನ್‌ಲೈನ್‌ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗ ಚಳ್ಳಕೆರೆಯ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಐದಕ್ಕೂ ಹೆಚ್ಚು ಆನ್‌ಲೈನ್‌ ಬೆಟ್ಟಿಂಗ್‌ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದುದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪತ್ತೆಹಚ್ಚಿದೆ. ಕಿಂಗ್ 567, ರಾಜ 567, ಲಯನ್ 567, ಪ್ಲೇ 567, ಪ್ಲೇವಿನ್ 567 ಎನ್ನುವ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್ ನಡೆಸುತ್ತಿದ್ದರು ಎಂದು ಇ.ಡಿ. ಬಹಿರಂಗಪಡಿಸಿದೆ. ವೀರೇಂದ್ರ ಪಪ್ಪಿ ಆನ್‌ಲೈನ್‌ ಬೆಟ್ಟಿಂಗ್‌

ಐದಕ್ಕೂ ಅಧಿಕ ಬೆಟ್ಟಿಂಗ್‌ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದ ಕಾಂಗ್ರೆಸ್‌ ಶಾಸಕ Read More »

ದಕ್ಷಿಣ ಕನ್ನಡ, ಕೊಡಗು ಅಭಿವೃದ್ಧಿ ಸಂಘದ ಕಾರ್ಯನಿರ್ವಾಹಕ ಸದಸ್ಯರ ಸಭೆ | ದೈವಜ್ಞರ ಮೂಲಕ ಚಿಂತನೆ ನಡೆಸಿ ಮುಂದಿನ ಅಭಿವೃದ್ಧಿ ಕೆಲಸಗಳು

ಕೊಡಗು: ದಕ್ಷಿಣಕನ್ನಡ ಕೊಡಗು ಅಭಿವೃದ್ಧಿ ಸಂಘ ರಿ ಸುಳ್ಳ್ಯ ಇದರ ಸಂಘದ ಕಾರ್ಯನಿರ್ವಾಹಕ ಸದಸ್ಯರ ಸಭೆ ಮಡಿಕೇರಿಯ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಪೈಕೇರ ಮನೋಹರ ಮಾದಪ್ಪನವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ಸುಳ್ಳ್ಯದ ನಿವೇಶನ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗಿದ್ದು ದೈವಜ್ಞರ ಮೂಲಕ ಚಿಂತನೆ ನಡೆಸಿ ಮುಂದಿನ ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದು ಎಂದು ನಿರ್ಣಯಿಸಲಾಯಿತು. ನಿವೇಶನವನ್ನು ಸ್ವಚ್ಛಗೊಳಿಸುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ದುಗ್ಗಳ ಕಪಿಲ ಕುಮಾರ್ ಬಿ. ಡಿ,ನಿರ್ದೇಶಕರಾದ

ದಕ್ಷಿಣ ಕನ್ನಡ, ಕೊಡಗು ಅಭಿವೃದ್ಧಿ ಸಂಘದ ಕಾರ್ಯನಿರ್ವಾಹಕ ಸದಸ್ಯರ ಸಭೆ | ದೈವಜ್ಞರ ಮೂಲಕ ಚಿಂತನೆ ನಡೆಸಿ ಮುಂದಿನ ಅಭಿವೃದ್ಧಿ ಕೆಲಸಗಳು Read More »

error: Content is protected !!
Scroll to Top