ರಾಜ್ಯ

ದೇಶದ ಎರಡನೇ ಅತಿ ಉದ್ದದ ಕೇಬಲ್‌ ಸೇತುವೆ ಸಿಗಂದೂರಿನಲ್ಲಿ ಇಂದು ಲೋಕಾರ್ಪಣೆ

ಶರಾವತಿ ಹಿನ್ನೀರಿನ ಜನರ ಆರು ದಶಕಗಳ ಕನಸು ನನಸಾಗುವ ಕ್ಷಣ ಶಿವಮೊಗ್ಗ : ದೇಶದ ಎರಡನೇ ಅತಿ ಉದ್ದದ ಮತ್ತು ರಾಜ್ಯದ ಅತಿ ಉದ್ದದ ಕೇಬಲ್‌ ಸೇತುವೆ ಇಂದು ಸಿಗಂದೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಶರಾವತಿ ಹಿನ್ನೀರಿಗೆ ನಿರ್ಮಿಸಿದ ಈ ಕೇಬಲ್‌ ಬ್ರಿಜ್‌ ಅನೇಕ ವಿಶೇಷತೆಗಳನ್ನು ಒಳಗೊಂಡಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇತುವೆ ಉದ್ಘಾಟಿಸಲಿದ್ದಾರೆ. ಈ ಮೂಲಕ ಶರಾವತಿ ನದಿ ದಡದ ಜನರ 6 ದಶಕಗಳ ಕನಸು ನನಸಾಗುತ್ತಿದೆ. ಗುಜರಾತ್‌ನ ಓಖಾದಿಂದ ಬೇಯ್ ದ್ವಾರಕೆ ದ್ವೀಪಕ್ಕೆ […]

ದೇಶದ ಎರಡನೇ ಅತಿ ಉದ್ದದ ಕೇಬಲ್‌ ಸೇತುವೆ ಸಿಗಂದೂರಿನಲ್ಲಿ ಇಂದು ಲೋಕಾರ್ಪಣೆ Read More »

ಎಂಆರ್‌ಪಿಎಲ್‌ ವಿಷಾನಿಲ ದುರಂತ : ಮೃತದೇಹ ಒಯ್ದ ಸಿಬ್ಬಂದಿಗೆ ದಿಗ್ಬಂಧನ

ಸಂಸ್ಥೆ ಸರಿಯಾಗಿ ಸ್ಪಂದಿಸಿಲ್ಲ, ಪರಿಹಾರದ ಬಗ್ಗೆ ಮಾತನಾಡಿಲ್ಲ ಎಂದು ಆರೋಪಿಸಿದ ಕುಟುಂಬಸ್ಥರು ಮಂಗಳೂರು : ಮಂಗಳೂರಿನ ಸಮೀಪ ಸುರತ್ಕಲ್​ನಲ್ಲಿರುವ ಎಂಆರ್​ಪಿಎಲ್​​ ಘಟಕದಲ್ಲಿ ಶನಿವಾರ ವಿಷಾನಿಲ ಸೋರಿಕೆಯಾಗಿ ಮೃತಪಟ್ಟ ಸಿಬ್ಬಂದಿಯ ಶವವನ್ನು ಅವರ ಹುಟ್ಟೂರಿಗೆ ಒಯ್ದ ಐದು ಮಂದಿಯನ್ನು ಅಲ್ಲಿನ ಗ್ರಾಮಸ್ಥರು ದಿಗ್ಬಂಧನದಲ್ಲಿ ಇರಿಸಿಕೊಂಡಿದ್ದಾರೆ. ಎಂಆರ್​ಪಿಎಲ್​​ನ ಒಎಂಎಸ್ ವಿಭಾಗದ ಟ್ಯಾಂಕ್ ಎಫ್.ಬಿ.7029ರಲ್ಲಿ ಶನಿವಾರ ವಿಷಾನಿಲ ಸೋರಿಕೆಯಾಗಿ ಇಬ್ಬರು ಸಿಬ್ಬಂದಿ ಮೃತಪಟ್ಟು ಓರ್ವ ಅಸ್ವಸ್ಥರಾಗಿದ್ದರು. ಪ್ರಯಾಗ್ ರಾಜ್ ಮೂಲದ ವರ್ಷದ ದೀಪ್ ಚಂದ್ರ ಭಾರ್ತಿಯಾ (33), ಕೇರಳದ ವರ್ಷದ ಬಿಜಿಲ್

ಎಂಆರ್‌ಪಿಎಲ್‌ ವಿಷಾನಿಲ ದುರಂತ : ಮೃತದೇಹ ಒಯ್ದ ಸಿಬ್ಬಂದಿಗೆ ದಿಗ್ಬಂಧನ Read More »

ಮಾದಕವಸ್ತು ಸಾಗಾಟ : ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತ ಸೆರೆ

ಭಾರಿ ಪ್ರಮಾಣದ ನಿಷೇಧಿತ ಡ್ರಗ್ಸ್‌ ವಶ ಬೆಂಗಳೂರು: ಮಾದಕವಸ್ತು ಸಾಗಾಟ ಮಾಡಿದ ಆರೋಪದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್‌ ಶಾಸಕ ಅಲ್ಲಮಪ್ರಭು ಪಾಟೀಲ್ ಆಪ್ತನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿಯನ್ನು ಮಹಾರಾಷ್ಟ್ರದ ಕಲ್ಯಾಣ್‌ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಥಾಣೆ ನಗರದಲ್ಲಿ ಮಾದಕದ್ರವ್ಯ ಮಾರಾಟ ಮಾಡುವ ವೇಳೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆತನ ಬಳಿ ನಿಷೇಧಿತ 120 ಬಾಟಲಿ ಕೊಡೆನೈನ್ ಸಿರಪ್ ಇತ್ತು ಎಂಬ ಆರೋಪ ಕೇಳಿ ಬಂದಿದೆ.

ಮಾದಕವಸ್ತು ಸಾಗಾಟ : ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತ ಸೆರೆ Read More »

ರಾಜ್ಯ ಸರ್ಕಾರ ಧೈರ್ಯ ಇದ್ದರೆ ಚರ್ಚ್, ಮಸೀದಿಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿ: ತೇಜಸ್ವಿ ಸೂರ್ಯ

ಬೆಂಗಳೂರು: ರಾಜ್ಯ ಸರ್ಕಾರ ಹಿಂದೂ ದೇವಾಲಯಗಳಿಗೆ ಅಪಚಾರ ಮಾಡುತ್ತಿದ್ದು, ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿ ದೇವಾಲಯವನ್ನು ಸುಪರ್ದಿಗೆ ಪಡೆಯಲು ಮುಂದಾಗಿರುವುದು ಖಂಡನೀಯ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರದ ಈ ಕ್ರಮಕ್ಕೆ ಭಕ್ತರು ವಿಚಲಿತರಾಗುವ ಅಗತ್ಯ ಇಲ್ಲ. ಸರ್ಕಾರ ಇಂತಹ ನಿಲುವನ್ನು ಹಿಂಪಡೆಯುವ ವರೆಗೂ ನಮ್ಮ ಹೋರಾಟ ನಡೆಯುತ್ತದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯ ಭಕ್ತರಿಗೆ ಸೇರಿದ್ದಾಗಿದೆ ಎಂದು ಅವರು ನುಡಿದಿದ್ದಾರೆ. ಸರ್ಕಾರ ಯಾವುದೇ ಕಾರಣವಿಲ್ಲದೆ ಇಂತಹ ನಿರ್ಧಾರಕ್ಕೆ

ರಾಜ್ಯ ಸರ್ಕಾರ ಧೈರ್ಯ ಇದ್ದರೆ ಚರ್ಚ್, ಮಸೀದಿಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿ: ತೇಜಸ್ವಿ ಸೂರ್ಯ Read More »

ತಾರಕಕ್ಕೇರಿದ ಕೈ-ಕೈ ಕಿತ್ತಾಟ : ಶಾಸಕರ ಆಪರೇಷನ್‌ ಗುಸುಗುಸು

ಕಿಡಿ ಹಚ್ಚಿದ ಶಾಸಕರ ಬೆಂಬಲವಿಲ್ಲ ಎಂಬ ಹೇಳಿಕೆ ಬಲಾಬಲ ಸಾಬೀತುಪಡಿಸಲು ಉಭಯ ಬಣಗಳ ರಹಸ್ಯ ಕಾರ್ಯಾಚರಣೆ ಬೆಂಗಳೂರು: ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಬಹಳ ಆತ್ಮವಿಶ್ವಾಸದಿಂದಲೇ ಹೇಳುತ್ತಿದ್ದರೂ ಇದರೊಂದಿಗೆ ಕಾಂಗ್ರೆಸ್‌ನೊಳಗಿನ ಒಳಜಗಳ ಮತ್ತು ತುಮುಲ ಮುಗಿಯಿತು ಎಂದು ಭಾವಿಸಬೇಕಾಗಿಲ್ಲ. ಕೈ ಹೈಕಮಾಂಡ್‌ ಯಾವುದನ್ನೂ ಸ್ಪಷ್ಟವಾಗಿ ಹೇಳದ ಕಾರಣ ಕೈ ಕಿತ್ತಾಟ ಅಷ್ಟು ಬೇಗ ಮುಗಿಯುವುದಿಲ್ಲ ಎನ್ನುವುದು ಗ್ಯಾರಂಟಿಯಾಗಿದೆ. ಅದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತೆ ದಿಲ್ಲಿಗೆ ದೌಡಾಯಿಸಿರುವುದೇ ಸಾಕ್ಷಿ. ಏನೆಲ್ಲ ತಿಪ್ಪರಲಾಗ ಹಾಕಿದರೂ ಸಿದ್ದರಾಮಯ್ಯ ಅವರನ್ನು

ತಾರಕಕ್ಕೇರಿದ ಕೈ-ಕೈ ಕಿತ್ತಾಟ : ಶಾಸಕರ ಆಪರೇಷನ್‌ ಗುಸುಗುಸು Read More »

ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಅನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಸಾವು

ತ್ಯಾಜ್ಯ ತೈಲ ಘಟಕದಲ್ಲಿ ಸೋರಿಕೆಯಾದ ವಿಷಾನಿಲ ಮಂಗಳೂರು: ಸುರತ್ಕಲ್‌ ಸಮೀಪವಿರುವ ಕೇಂದ್ರ ಸ್ವಾಮ್ಯದ ಎಂಆರ್‌ಪಿಎಲ್‌ನ ಒಂದು ಘಟಕದಲ್ಲಿ ಅನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟು, ಇನ್ನೊಬ್ಬ ಅಸ್ವಸ್ಥರಾದ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ. ಎಂಆರ್‌ಪಿಎಲ್‌ನ OM‌‌‌‌&S ತ್ಯಾಜ್ಯ ತೈಲ ಸಂಗ್ರಹ ಘಟಕದಲ್ಲಿ ಇಂದು ಬೆಳಗ್ಗೆ ಅನಿಲ ಸೋರಿಕೆಯಾಗಿದೆ. ಘಟಕದಲ್ಲಿ ಲೆವೆಲ್‌ ಪರಿಶೀಲನೆ ಮಾಡಲು ತೆರಳಿದ ಕಾರ್ಮಿಕ ವಾಪಸಾಗದೆ ಇರುವುದನ್ನು ನೋಡಿ ಇನ್ನಿಬ್ಬರು ಅಲ್ಲಿಗೆ ತೆರಳಿದ್ದಾರೆ. ಮೂವರೂ ಅಲ್ಲಿ ಅನಿಲ ಸೋರಿಕೆಯಿಂದ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಅನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಸಾವು Read More »

ವೈದ್ಯನಿಂದಲೇ ಡ್ರಗ್ಸ್‌ ದಂಧೆ : ಬೃಹತ್‌ ಮಾದಕ ವಸ್ತು ಜಾಲ ಬಯಲಿಗೆಳೆದ ಮಂಗಳೂರು ಪೊಲೀಸರು

ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಡಾಕ್ಟರ್‌ ಮಂಗಳೂರು: ಕೆಲದಿನಗಳ ಹಿಂದೆಯಷ್ಟೇ ಉಗ್ರನಿಗೆ ನೆರವು ನೀಡಿದ ಆರೋಪದಲ್ಲಿ ಮನೋವ್ಯದ್ಯ ಸೆರೆಯಾಗಿದ್ದ. ಇದೀಗ ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್‌ ಪೂರೈಸಿದ ಆರೋಪದಲ್ಲಿ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬೀದರ್ ಮೂಲದ ವೈದ್ಯನನ್ನು ಬಂಧಿಸಿದ್ದಾರೆ. ವೈದ್ಯ ಬಂಧನದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದ ಅನೇಕ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಬೀದರ್ ಮೂಲದ, ಪ್ರಸ್ತುತ ಬೆಂಗಳೂರಿನ ಕೋಡಿಪಾಳ್ಯ ನಿವಾಸಿಯಾಗಿರುವ ಪ್ರಜ್ವಲ್

ವೈದ್ಯನಿಂದಲೇ ಡ್ರಗ್ಸ್‌ ದಂಧೆ : ಬೃಹತ್‌ ಮಾದಕ ವಸ್ತು ಜಾಲ ಬಯಲಿಗೆಳೆದ ಮಂಗಳೂರು ಪೊಲೀಸರು Read More »

ಮಹಿಳೆಯರು ಸ್ನಾನ ಮಾಡುವುದನ್ನು ವಿಡಿಯೋ ಶೂಟ್‌ ಮಾಡಿದ ಕಾಮುಕ ಅರೆಸ್ಟ್‌

ಬೆಂಗಳೂರು: ಮಹಿಳೆಯರು ಸ್ನಾನ ಮಾಡುವುದನ್ನು ಕದ್ದು ವಿಡಿಯೋ ಮಾಡುತ್ತಿದ್ದ ವಿಕೃತ ಕಾಮುಕನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಹಾಜ ಮೊಯಿನುದ್ದಿನ್ ಸೆರೆಯಾಗಿರುವ ಆರೋಪಿ. ಇಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ ಚನ್ನಸಂದ್ರ ಮೂಲದ ಮೊಯಿನುದ್ದಿನ್ ಮಹಿಳೆಯರು ಸ್ನಾನ ಮಾಡುವುದನ್ನು ಕದ್ದು ಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ. ಕಳೆದ ಮಂಗಳವಾರ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ತಾಯಿ-ಮಗಳು ಬಾತ್‌ರೂಮ್‌ಗೆ ಸ್ನಾನಕ್ಕೆ ತೆರಳಿದ್ದರು. ಇದನ್ನು ಗಮನಿಸಿದ ಕಾಮುಕ ಮೊಯಿನುದ್ದಿನ್ ಕಿಟಕಿ ಮೂಲಕ ಕದ್ದು ಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಈತ ವಿಡಿಯೋ

ಮಹಿಳೆಯರು ಸ್ನಾನ ಮಾಡುವುದನ್ನು ವಿಡಿಯೋ ಶೂಟ್‌ ಮಾಡಿದ ಕಾಮುಕ ಅರೆಸ್ಟ್‌ Read More »

ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕದ ಕುರಿತು ಸಿಎಂ ಏನಂದ್ರು ಗೊತ್ತಾ?

ಬೆಂಗಳೂರು: ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಕುರಿತಂತೆ ಸಿಎಂ ‌ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ನಾನು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಿಗಮ ಮಂಡಳಿಗಳಿಗೆ ಅಧ್ಯಕ್ಷರುಗಳನ್ನು ನೇಮಕ ಮಾಡುವುದಕ್ಕೆ ಸಂಬಂಧಿಸಿದ ಹಾಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಜೊತೆ ಮಾತನಾಡಿರುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರುಗಳನ್ನೇ ನಿಗಮ ಮಂಡಳಿ ಅಧ್ಯಕ್ಷರುಗಳನ್ನಾಗಿ ಮಾಡುವ ಬಗ್ಗೆ ಚರ್ಚಿಸಿದ್ದು, ಈ ನೇಮಕ ಪೂರ್ಣಗೊಂಡಿಲ್ಲ. ಸುರ್ಜೇವಾಲಾ ಅವರು ಜುಲೈ 16 ಕ್ಕೆ ಮತ್ತೆ ಬೆಂಗಳೂರಿಗೆ ಬರಲಿದ್ದು, ಆಗ ನಾವು ಎಲ್ಲಾ ನಿಗಮ

ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕದ ಕುರಿತು ಸಿಎಂ ಏನಂದ್ರು ಗೊತ್ತಾ? Read More »

ಅಭಿಪ್ರಾಯ ಹೇಳಲು ಹಿರಿಯರು ಕಿರಿಯರೆಂಬ ಬೇಧ ಇಲ್ಲ: ಡಾ. ಜಿ. ಪರಮೇಶ್ವರ್

ಮೈಸೂರು: ನಮ್ಮ ಗಮನಕ್ಕೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದ ವಿಷಯಗಳನ್ನು ತಂದಿದ್ದರೆ ಇಷ್ಟು ಗೊಂದಲಗಳು ‌ಸೃಷ್ಟಿಯಾಗುತ್ತಿರಲಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಸಿಎಂ ಬದಲಾವಣೆಗೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅವರವರೇ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದರು. ಏನು ಒಪ್ಪಂದ ಆಗಿದೆ ಎನ್ನುವುದು ನಮಗೆ ಗೊತ್ತಿಲ್ಲ. ಇದರಿಂದಲೇ ಗೊಂದಲಗಳು ಆರಂಭವಾಯಿತು. ಈಗ ಎಲ್ಲವೂ ತಿಳಿಯಾಗಿದೆ. ಇದಕ್ಕೆ ಸಂಬಂಧಿಸಿದ ಹಾಗೆ ಅಭಿಪ್ರಾಯ ಹೇಳಲು ಹಿರಿಯರು – ಕಿರಿಯರು ಎನ್ನುವ

ಅಭಿಪ್ರಾಯ ಹೇಳಲು ಹಿರಿಯರು ಕಿರಿಯರೆಂಬ ಬೇಧ ಇಲ್ಲ: ಡಾ. ಜಿ. ಪರಮೇಶ್ವರ್ Read More »

error: Content is protected !!
Scroll to Top