ರಾಜ್ಯ

ಆರ್‌ಎಸ್‌ಎಸ್‌ ಗೀತೆ ವಿವಾದ : ಕ್ಷಮೆ ಕೇಳಿದ ಡಿಕೆಶಿ

ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಇಂಡಿ ಒಕ್ಕೂಟದ ನಾಯಕರಿಂದ ಬಹಿರಂಗ ಕ್ಷಮೆಯಾಚನೆ ಬೆಂಗಳೂರು : ಕರ್ನಾಟಕ ವಿಧಾನಸಭೆಯಲ್ಲಿ ಆರ್​ಎಸ್​ಎಸ್ ಗೀತೆ ಹಾಡಿ ವಿವಾದಕ್ಕೊಳಗಾಗಿದ್ದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಕ್ಷಮೆ ಯಾಚಿಸುವ ಮೂಲಕ ಈ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ವಿರೋಧ ಪಕ್ಷದ ಸಿದ್ಧಾಂತದ ಅರಿವಿದೆ ಎಂಬುದನ್ನು ನಿರೂಪಿಸಿವುದಕ್ಕಾಗಿ ಹಾಗೆ ಹೇಳಿದೆ ಅಷ್ಟೆ. ಆದರೂ ಒಂದು ವೇಳೆ ತಪ್ಪು ಮಾಡಿದ್ದೇನೆ ಎಂದು ನೀವು ಭಾವಿಸುವುದೇ ಆದರೆ, ಎಲ್ಲ ಕಾಂಗ್ರೆಸ್ ನಾಯಕರ-ಕಾರ್ಯಕರ್ತರ, ಇಂಡಿ ಒಕ್ಕೂಟದ […]

ಆರ್‌ಎಸ್‌ಎಸ್‌ ಗೀತೆ ವಿವಾದ : ಕ್ಷಮೆ ಕೇಳಿದ ಡಿಕೆಶಿ Read More »

ದಿನೇಶ್‌ ಅಮೀನ್‌ ಮಟ್ಟು ಅವರಿಗಿಲ್ಲ ವಿಧಾನ ಪರಿಷತ್‌ ಸ್ಥಾನ

ಭಾರಿ ಹಗ್ಗ ಜಗ್ಗಾಟದ ಬಳಿಕ ನಾಲ್ವರ ನಾಮನಿರ್ದೇಶನಕ್ಕೆ ಹೈಕಮಾಂಡ್‌ ಒಪ್ಪಿಗೆ ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಹಲವು ತಿಂಗಳಿಂದ ಖಾಲಿ ಇದ್ದ ನಾಲ್ಕು ಸದಸ್ಯ ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮಾಂಡ್‌ ಒಪ್ಪಿಗೆ ನೀಡಿದೆ. ಈ ಹಿಂದೆ ಫೈನಲ್ ಆಗಿದ್ದ ನಾಲ್ವರ ನಾಮನಿರ್ದೇಶನ ಪಟ್ಟಿ ಬದಲಾಗಿದ್ದು, ಇಬ್ಬರನ್ನು ಕೈಬಿಟ್ಟು ಅಚ್ಚರಿಯ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿರುವ ಕರಾವಳಿಯ ದಿನೇಶ್‌ ಅಮೀನ್‌ ಮಟ್ಟು ಅವರಿಗೆ ಮೇಲ್ಮನೆ ಅವಕಾಶ ಕೈತಪ್ಪಿದೆ. ಜಕ್ಕಪ್ಪ, ಆರತಿ ಕೃಷ್ಣ, ರಮೇಶ್ ಬಾಬು ಹಾಗೂ ಪತ್ರಕರ್ತ

ದಿನೇಶ್‌ ಅಮೀನ್‌ ಮಟ್ಟು ಅವರಿಗಿಲ್ಲ ವಿಧಾನ ಪರಿಷತ್‌ ಸ್ಥಾನ Read More »

ಬಾನು ಮುಷ್ತಾಕ್‌ ದಸರಾ ಉದ್ಘಾಟಿಸುವುದಕ್ಕೆ ವಿರೋಧ : ವೈರಲ್‌ ಆಗುತ್ತಿದೆ ಹಳೆಯ ವಿಡಿಯೋ

ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿ ದೌರ್ಜನ್ಯ ಎಸಗಿದ್ದೀರಿ ಎಂಬ ಹೇಳಿಕೆಗೆ ಟೀಕೆ ಬೆಂಗಳೂರು: ಕರ್ನಾಟಕದ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಬಿಜೆಪಿ ನಾಯಕರು ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಂಬಿಕೆಯ ನೆಲೆಗಟ್ಟಿನಲ್ಲಿ ಬಾನು ಮುಷ್ತಾಕ್‌ ಅವರ ಆಯ್ಕೆಯನ್ನು ಹಲವರು ಪ್ರಶ್ನಿಸಿದ್ದಾರೆ. ಮಾಜಿ ಸಂಸದ ಪ್ರತಾಪ್‌ ಸಿಂಹ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ, ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ

ಬಾನು ಮುಷ್ತಾಕ್‌ ದಸರಾ ಉದ್ಘಾಟಿಸುವುದಕ್ಕೆ ವಿರೋಧ : ವೈರಲ್‌ ಆಗುತ್ತಿದೆ ಹಳೆಯ ವಿಡಿಯೋ Read More »

ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರದಿಂದ ಆರಂಭದಲ್ಲೇ ತಪ್ಪು ನಡೆ : ಮಾಜಿ ಸಚಿವ ತೀಕ್ಷ್ಣ ಟೀಕೆ

ತಲೆಬುರುಡೆ ಕುರಿತು ಆರಂಭದಲ್ಲಿ ಯಾಕೆ ತನಿಖೆ ಮಾಡದಿರುವುದು ಲೋಪ ಎಂದ ರಾಜಣ್ಣ ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಆರಂಭದಲ್ಲೇ ತಪ್ಪು ಹೆಜ್ಜೆಯಿಟ್ಟಿತ್ತು ಎಂದು ಮಾಜಿ ಸಹಕಾರ ಸಚಿವ ಕೆ. ಎನ್. ರಾಜಣ್ಣ ಭಾನುವಾರ ತಮ್ಮದೇ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ. ದೇವಸ್ಥಾನ ವ್ಯಾಪ್ತಿಯಲ್ಲಿ ಶವ ಹೂತಿದ್ದೇನೆ ಎಂದು ದೂರು ನೀಡಲು‌ ಬಂದ ವ್ಯಕ್ತಿಯು ತಂದಿದ್ದ ತಲೆಬುರುಡೆಯ ಪೂರ್ವಾಪರಗಳನ್ನು ವಿಚಾರಿಸದೆ ತನಿಖೆಗೆ ಆದೇಶಿಸಿದ್ದು ಸರಿಯಾದ ಕ್ರಮವಲ್ಲ. ಭೂಮಿಯಲ್ಲಿ ಹೂತ ಮೃತದೇಹವನ್ನು ಹೊರತೆಗೆಯಲು ಕಾನೂನಿನಲ್ಲಿ ನಿರ್ದಿಷ್ಟ ನಿಯಮಗಳಿವೆ. ತಾಲೂಕು ಮ್ಯಾಜಿಸ್ಟ್ರೇಟ್ ಅನುಮತಿ

ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರದಿಂದ ಆರಂಭದಲ್ಲೇ ತಪ್ಪು ನಡೆ : ಮಾಜಿ ಸಚಿವ ತೀಕ್ಷ್ಣ ಟೀಕೆ Read More »

ಕಾಂಗ್ರೆಸ್‌ನಲ್ಲಿ ಕೋಲಾಹಲ ಎಬ್ಬಿಸಿದ ʼನಮಸ್ತೇ ಸದಾ ವತ್ಸಲೇ…ʼ

ಡಿಕೆಶಿ ಹಾಡಿದ ಆರ್‌ಎಸ್‌ಎಸ್‌ ಗೀತೆಯಿಂದ ಕೈ ಪಡೆಯಲ್ಲಿ ಕಿಡಿ ಬೆಂಗಳೂರು : ವಿಧಾನಸಭೆ ಕಲಾಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಡಿದ ಆರ್‌ಎಸ್‌ಎಸ್‌ನ ಧ್ಯೇಯಗೀತೆ ನಮಸ್ತೆ ಸದಾ ವತ್ಸಲೇ… ಕಾಂಗ್ರೆಸ್‌ನೊಳಗೆ ವಿವಾದದ ಕಿಡಿ ಹೊತ್ತಿಸಿದೆ. ಬಿಜೆಪಿಯವರು ಡಿಕೆಶಿ ನಡೆಯನ್ನು ವ್ಯಂಗ್ಯವಾಗಿಯಾದರೂ ಸ್ವಾಗತಿಸಿದ್ದರೆ, ಸದಾ ಆರ್‌ಎಸ್‌ಎಸ್‌ನ್ನು ದ್ವೇಷಿಸುತ್ತಿರುವ ಕಾಂಗ್ರೆಸ್‌ನ ಕೆಲವು ನಾಯಕರಿಗೆ ಮಾತ್ರ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರ್​​ಸಿಬಿ ವಿಜಯೋತ್ಸವ ಕಾಲ್ತುಳಿತ ಘಟನೆ ಚರ್ಚೆ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ನಮಸ್ತೇ ಸದಾ ವತ್ಸಲೇ… ಎಂದು ಆರ್​​ಎಸ್​ಎಸ್ ಗೀತೆ ಹಾಡಿದ್ದಾರೆ. ಅದು ಸಾಂದರ್ಭಿಕವಾಗಿ

ಕಾಂಗ್ರೆಸ್‌ನಲ್ಲಿ ಕೋಲಾಹಲ ಎಬ್ಬಿಸಿದ ʼನಮಸ್ತೇ ಸದಾ ವತ್ಸಲೇ…ʼ Read More »

ಕೊಲೆ ಆರೋಪಿಯನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ ಮಟ್ಟಣ್ಣವರ್‌

ವಿಡಿಯೋ ಭಾರಿ ವೈರಲ್‌ ಧರ್ಮಸ್ಥಳ : ಧರ್ಮಸ್ಥಳ ವಿರುದ್ಧ ನಡೆಸುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವ ಗಿರೀಶ್‌ ಮಟ್ಟಣ್ಣನವರ್‌ ಕೊಲೆ ಆರೋಪಿಯನ್ನು ತನ್ನ ಜೊತೆ ಇಟ್ಟುಕೊಂಡು ಆತನನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಪರಿಚಯಿಸಿದ ವಿಡಿಯೋ ಒಂದು ನಿನ್ನೆಯಿಂದ ವೈರಲ್‌ ಆಗಿದ್ದು, ಅವರು ನಡೆಸುತ್ತಿರುವ ಹೋರಾಟದ ಸಾಚಾತನವನ್ನು ಬಯಲುಗೊಳಿಸಿದೆ. ಮಾಧ್ಯಮಗಳ ಜೊತೆಗೆ ಮಾತನಾಡುವಾಗ ರೌಡಿಶೀಟರ್‌ ಒಬ್ಬನನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಗಿರೀಶ್ ಮಟ್ಟಣ್ಣನವರ್ ಪರಿಚಯಿಸಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ತಮ್ಮ ಪಕ್ಕದಲ್ಲಿ ನಿಂತಿದ್ದ ಮದನ ಬುಗಡಿ

ಕೊಲೆ ಆರೋಪಿಯನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ ಮಟ್ಟಣ್ಣವರ್‌ Read More »

ಸಿದ್ದರಾಮಯ್ಯ ದೇಶದ ಮೂರನೇ ಅತಿ ಶ್ರೀಮಂತ ಮುಖ್ಯಮಂತ್ರಿ

ಎಡಿಆರ್‌ ಪ್ರಕಟಿಸಿದ ಪಟ್ಟಿಯಲ್ಲಿದೆ ಮುಖ್ಯಮಂತ್ರಿಗಳ ಸಂಪತ್ತಿನ ಕುತೂಹಲಕಾರಿ ಮಾಹಿತಿ ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದೇಶದ ಮೂರನೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಈ ಮಾಹಿತಿಯಿದೆ. ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿದ್ದು, ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 30 ಹಾಲಿ ಮುಖ್ಯಮಂತ್ರಿಗಳ ಆಸ್ತಿ ಮಾಹಿತಿ ಇದರಲ್ಲಿದೆ. ಮುಖ್ಯಮಂತ್ರಿಗಳು ಚುನಾವಣೆ ಸಮಯದಲ್ಲಿ ಸಲ್ಲಿಸಿರುವ ಪ್ರಮಾಣಪತ್ರಗಳ ಆಧಾರದಲ್ಲೇ ಅಸೋಸಿಯೇಷನ್ ಫಾರ್

ಸಿದ್ದರಾಮಯ್ಯ ದೇಶದ ಮೂರನೇ ಅತಿ ಶ್ರೀಮಂತ ಮುಖ್ಯಮಂತ್ರಿ Read More »

ಮಾಸ್ಕ್ ಮ್ಯಾನ್ ಚೆನ್ನಯ್ಯ ಬಂಧನ, ನಿಜ ರೂಪ ದರ್ಶನ: 10 ದಿನ SIT ಕಸ್ಟಡಿಗೆ

ಧರ್ಮಸ್ಥಳ: ನೂರಾರು ಶವಗಳನ್ನು ‌ಹೂತಿದ್ದಾಗಿ ಹೇಳಿದ ಅನಾಮಿಕ ದೂರುದಾರ ಮಾಸ್ಕ್‌ಮ್ಯಾನ್ ಯಾರು ಎನ್ನುವ ಸತ್ಯ ಬಯಲಾಗಿದ್ದು, ಇದು ಧರ್ಮಸ್ಥಳದ ಅಭಿಮಾನಿಗಳಿಗೆ ಸಂತಸ ನೀಡಿದೆ. ಮುಸುಕುಧಾರಿಯ ಹೆಸರು ಚೆನ್ನಯ್ಯ ಯಾನೆ ಚೆನ್ನನನ್ನು ‌ಸುಳ್ಳು ದೂರು ನೀಡಿದ ಆರೋಪ ಮತ್ತು ಮೊದಲ ಬುರುಡೆಯನ್ನು ‌ಎಲ್ಲಿಂದ ತಂದ ಎನ್ನುವ ಮಾಹಿತಿ ನೀಡದ ಆರೋಪದಡಿ SIT ಅಧಿಕಾರಿಗಳು ಬಂಧಿಸಿರುವುದಾಗಿದೆ. ಈತ ಕಟ್ಟಿದ ಬುರುಡೆ ಕಥೆ, ನೂರಾರು ಹೆಣಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣ ಇಡೀ ದೇಶವನ್ನೇ ಧರ್ಮಸ್ಥಳದತ್ತ ‌ತಿರುಗುವಂತೆ ಮಾಡಿತ್ತು. ಅಲ್ಲದೆ ಈ ವರೆಗೆ

ಮಾಸ್ಕ್ ಮ್ಯಾನ್ ಚೆನ್ನಯ್ಯ ಬಂಧನ, ನಿಜ ರೂಪ ದರ್ಶನ: 10 ದಿನ SIT ಕಸ್ಟಡಿಗೆ Read More »

ಸುಜಾತ ಭಟ್ ಮನೆಗೆ ಬಿಗು ಪೊಲೀಸ್‌ ಭದ್ರತೆ

ಆರೋಗ್ಯ ಸರಿಯಿಲ್ಲ, ರಕ್ಷಣೆ ಕೊಡಿ ಎಂದು ಮೊರೆಯಿಟ್ಟಿದ್ದ ಸುಜಾತ ಭಟ್‌ ಬೆಂಗಳೂರು: ನಿನ್ನೆಯಿಂದೀಚೆಗೆ ಗಳಿಗೆಗೊಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರುವ ಸುಜಾತ ಭಟ್‌ಗೆ ಪೊಲೀಸ್‌ ರಕ್ಷಣೆ ನೀಡಲಾಗಿದೆ. ನನಗೆ ಆರೋಗ್ಯ ಸರಿಯಿಲ್ಲ, ಬೆದರಿಕೆ ಇದೆ. ನನಗೆ ರಕ್ಷಣೆ ಕೊಡಿ ಎಂದು ಸ್ಥಳೀಯ ಪೊಲೀಸರಿಗೆ ಸುಜಾತ ಭಟ್ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಸುಜಾತ ಭಟ್‌ ಇರುವ ಮನೆಗೆ ಭದ್ರತೆ ಒದಗಿಸಿದ್ದಾರೆ. ಬ್ಯಾರಿಕೇಡ್ ಹಾಕಿ ಹದಿನೈದಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸುಜಾತ ಭಟ್ ಮನವಿ ಹಿನ್ನೆಲೆಯಲ್ಲಿ ಬೆಂಗಳೂರಿನ

ಸುಜಾತ ಭಟ್ ಮನೆಗೆ ಬಿಗು ಪೊಲೀಸ್‌ ಭದ್ರತೆ Read More »

ಮಗಳು ನಾಪತ್ತೆ ಪ್ರಕರಣ ವಾಪಸ್‌ ಪಡೆಯಲು ಮುಂದಾದರಾ ಸುಜಾತ ಭಟ್‌?

ಆಡಿಯೋ ಹರಿಬಿಟ್ಟು ಪ್ರಕರಣ ಬಗ್ಗೆ ಮಾತನಾಡಿದ ವೃದ್ಧೆ ಧರ್ಮಸ್ಥಳ: ತನ್ನ ಮಗಳು ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದು, ಹುಡುಕಿಕೊಡಿ ಎಂದು ಹೇಳಿಕೊಂಡಿದ್ದ ಸುಜಾತ ಭಟ್‌ ಈಗ ದಿಢೀರ್‌ ಎಂದು ಕೇಸನ್ನು ವಾಪಸು ಪಡೆದುಕೊಳ್ಳುವುದಾಗಿ ಹೇಳಿದ್ದು, ಅವರ ಬಗ್ಗೆ ಇರುವ ಅನುಮಾನ ಇನ್ನಷ್ಟು ಹೆಚ್ಚವಾಗುವಂತೆ ಮಾಡಿದೆ. ಇತ್ತೀಚೆಗೆ ಸುಜಾತಾ ಭಟ್ ತಮ್ಮ ಮಗಳೆಂದು ಫೋಟೋವೊಂದನ್ನು​ ತೋರಿಸಿದ್ದರು. ಆದರೆ ಅದು ಅನನ್ಯಾ ಭಟ್ ಅಲ್ಲ, ಬದಲಿಗೆ ವಾಸಂತಿ ಎಂಬ ಸತ್ಯ ಹೊರಬಂದಿತ್ತು. ಹೀಗಿರುವಾಗ ಕೇಸ್ ವಾಪಸ್ ಪಡೆಯುವುದಾಗಿ ಸುಜಾತಾ ಭಟ್

ಮಗಳು ನಾಪತ್ತೆ ಪ್ರಕರಣ ವಾಪಸ್‌ ಪಡೆಯಲು ಮುಂದಾದರಾ ಸುಜಾತ ಭಟ್‌? Read More »

error: Content is protected !!
Scroll to Top