ರಾಜ್ಯ

ಪ್ರತಾಪ್‌ ಸಿಂಹ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗುವುದು ಪಕ್ಕಾ

ಚಾಮರಾಜ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗಲು ತೀರ್ಮಾನಿಸಿದ್ದಾರೆ. ಎರಡು ಬಾರಿ ಮೈಸೂರು-ಕೊಡಗು ಸಂಸದರಾಗಿದ್ದ ಅವರಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿರಲಿಲ್ಲ. ಆದರೆ ಇದೀಗ ಪ್ರತಾಪ್ ಸಿಂಹ ರಾಷ್ಟ್ರ ರಾಜಕಾರಣ ಬಿಟ್ಟು ರಾಜ್ಯ ರಾಜಕಾರಣದತ್ತ ಹೆಜ್ಜೆ ಇಟ್ಟಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ. ಅಲ್ಲದೇ ತಮಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸುವ ಒಲವಿದೆ ಎಂಬ ಕುರಿತೂ ಸಹ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ […]

ಪ್ರತಾಪ್‌ ಸಿಂಹ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗುವುದು ಪಕ್ಕಾ Read More »

ಹೊಗೆಯಿಂದ ಉಸಿರುಕಟ್ಟಿ ಮಂಗಳೂರಿನ ಮಹಿಳೆ ಸಾವು

ಫ್ಲ್ಯಾಟ್‌ಗೆ ಬೆಂಕಿಹತ್ತಿಕೊಂಡಾಗ ಹೊರ ಬರಲಾಗದೆ ಸಾವು ಬೆಂಗಳೂರು: ಬೆಂಕಿ ಹತ್ತಿಕೊಂಡಾಗ ಉಸಿರುಗಟ್ಟಿ ಮಂಗಳೂರು ಮೂಲದ ಮಹಿಳಾ ಟೆಕ್ಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಮಣ್ಯ ಬಡಾವಣೆಯಲ್ಲಿ ನಡೆದಿದ್ದು ತಡವಾಗಿ ವರದಿಯಾಗಿದೆ. ಜನವರಿ 3ರಂದು ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶರ್ಮಿಳಾ (34) ಮೃತ ದುರ್ದೈವಿ. ಶರ್ಮಿಳಾ ಮೂಲತಃ ಮಂಗಳೂರಿನವರು. ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಅಕ್ಸೆಂಚರ್ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಸೇರಿದ್ದರು. ಶರ್ಮಿಳಾ ವಾಸವಿದ್ದ ಫ್ಲ್ಯಾಟ್‌ನ ರೂಮ್‌ನಲ್ಲಿ ಜ.3ರಂದು ರಾತ್ರಿ

ಹೊಗೆಯಿಂದ ಉಸಿರುಕಟ್ಟಿ ಮಂಗಳೂರಿನ ಮಹಿಳೆ ಸಾವು Read More »

ಕೆಎಸ್‌ಆರ್‌ಟಿಸಿ ಪ್ರೀಮಿಯರ್‌ ಬಸ್‌ಗಳ ಟಿಕೆಟ್‌ ದರ ಕಡಿತ

ಬೆಂಗಳೂರು-ಮಂಗಳೂರು ಸೇರಿ ಕೆಲವು ರೂಟ್‌ಗಳಲ್ಲಿ ರಿಯಾಯಿತಿ ದರ ಅನ್ವಯ ಬೆಂಗಳೂರು: ಬೆಂಗಳೂರು-ಮಂಗಳೂರು ಸೇರಿದಂತೆ ಆಯ್ದ ಕೆಲವು ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಮಾರ್ಚ್‌ವರೆಗೆ ಪ್ರೀಮಿಯರ್ ಬಸ್‌ಗಳಲ್ಲಿ ಶೇ.5 ರಿಂದ ಶೇ.15 ಟಿಕೆಟ್ ದರ ಕಡಿತದ ಕೊಡುಗೆ ಸರ್ಕಾರ ಮಾಡಿದೆ. ಕೆಎಸ್‌ಆರ್‌ಟಿಸಿ ನಿಗಮದ ಪ್ರತಿಷ್ಠಿತ ಸಾರಿಗೆಗಳ ಅಥವಾ ಪ್ರೀಮಿಯರ್ ಬಸ್‌ಗಳ ಪ್ರಯಾಣ ದರಗಳಲ್ಲಿ ಶೇ.5-15 ರಿಯಾಯಿತಿ ಘೋಷಿಸಿದೆ. ಜನವರಿಯಿಂದ ಮಾರ್ಚ್‌ವರೆಗೆ ಪ್ರಯಾಣಿಕರ ದಟ್ಟಣೆ ಕಡಿಮೆಯಿರುವ ಹಿನ್ನೆಲೆ ಟಿಕೆಟ್ ದರವನ್ನು ಕಡಿಮೆ ಮಾಡಿದೆ. ಆದರೆ ಈ ದರ ವಾರದ ದಿನಗಳಲ್ಲಿ ಮಾತ್ರ

ಕೆಎಸ್‌ಆರ್‌ಟಿಸಿ ಪ್ರೀಮಿಯರ್‌ ಬಸ್‌ಗಳ ಟಿಕೆಟ್‌ ದರ ಕಡಿತ Read More »

ಸಾರ್ವಜನಿಕ ಸ್ಥಳದಲ್ಲಿ ಮಾರಾಕಾಸ್ತ್ರ ಹಿಡಿದ ಪುಂಡರು: ಆರೋಪಿಗಳ ಬಂಧನ, ಗಾಂಜಾ ವಶ

ದಾವಣಗೆರೆ: ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಹಿಡಿದು ಪುಂಡಾಟ ಮೆರೆದ ಇಬ್ಬರು ರೌಡಿ ಶೀಟರ್‌ಗಳನ್ನು ಕೆಟಿಜೆ ನಗರ ಪೊಲೀಸರು ವಶಕ್ಕೆ ಪಡೆದಿದ್ದು, ಅವರಿಂದ ಭಾರೀ ಪ್ರಮಾಣದ ಗಾಂಜಾ ಜಪ್ತಿ ‌ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ಸಾಹಿಲ್ ಮತ್ತು ರಾಕೇಶ್ ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ನಿಟ್ಟುವಳ್ಳಿ ಶ್ರೀರಾಮ ಬಡಾವಣೆಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು.‌ ಈ ಸಮಯದಲ್ಲಿ ಅಟೋದಲ್ಲಿ ಬಂದ ಆರೋಪಿಗಳಿಬ್ಬರು ಲಾಂಗ್, ಮಚ್ಚು ಹಿಡಿದು ಓಡಾಟ ನಡೆಸಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದಲ್ಲಿ

ಸಾರ್ವಜನಿಕ ಸ್ಥಳದಲ್ಲಿ ಮಾರಾಕಾಸ್ತ್ರ ಹಿಡಿದ ಪುಂಡರು: ಆರೋಪಿಗಳ ಬಂಧನ, ಗಾಂಜಾ ವಶ Read More »

ONGC ಪೈಪ್‌ಲೈನ್ ‌ಸ್ಪೋಟ: ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆ

ಆಂಧ್ರಪ್ರದೇಶ: ರಾಜ್ಯದ ಕೊನಸಿಮಾ ಜಿಲ್ಲೆಯ ಮಾಲಿಕಿಪುರಂ ಮಂಡಲದ ಇರುಸುಮುಂಡ ಗ್ರಾಮದಲ್ಲಿ ಒಎನ್‌ಜಿಸಿ ಪೈಪ್‌ಲೈನ್ ಸ್ಪೋಟವಾದ ಪರಿಣಾಮ ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿದೆ. ಈ ಹಿನ್ನೆಲೆ ಹತ್ತಿರದ ಮೂರು ಗ್ರಾಮಗಳ ಜನರನ್ನು ಸ್ಥಳಾಂತರ ಮಾಡಲಾಗಿದೆ. ಹಾಗೆಯೇ ವಿದ್ಯುತ್ ಉಪಕರಣಗಳು, ಸ್ಟೌ, ಗ್ಯಾಸ್ ಸೇರಿದಂತೆ ಯಾವುದೇ ಬೆಂಕಿ ಹೊತ್ತುವ ಸಲಕರಣೆಗಳನ್ನು ಬಳಕೆ ಮಾಡದಂತೆ ಸೂಚಿಸಲಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಭಾಯಿಸಲು ONGC ತಂಡವನ್ನು ನಿಯೋಜಿಸಲಾಗಿದೆ. ONGC ಬಾವಿ ಮರು ಕೊರೆಯುವ ಕೆಲಸ ನಡೆಯುವ ಸಮಯದಲ್ಲಿ ಈ ದುರಂತ ಸಂಭವಿಸಿದೆ.

ONGC ಪೈಪ್‌ಲೈನ್ ‌ಸ್ಪೋಟ: ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆ Read More »

ಹರಿದ್ವಾರಕ್ಕೆ ಹಿಂದೂಯೇತರರ ನಿಷೇಧ: ಉತ್ತರಾಖಂಡ್ ಸಿಎಂ ಹೇಳಿದ್ದೇನು?

ಡೆಹ್ರಾಡೂನ್: ಹರಿದ್ವಾರ ಮತ್ತು ಇನ್ನಿತರ ಹಿಂದೂಗಳ ಧಾರ್ಮಿಕ ಯಾತ್ರಾ ಸ್ಥಳಗಳಿಗೆ ಹಿಂದೂಯೇತರರ ಪ್ರವೇಶ‌ ನಿರ್ಬಂಧಿಸುವ ಕುರಿತು ಉತ್ತರಾಖಂಡ್ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಅಲ್ಲಿನ ಸಿಎಂ ಪುಷ್ಕರ್ ಸಿಂಗ್ ಧಾಮಿ ಮಾತನಾಡಿದ್ದು, ಪವಿತ್ರ ನಗರ ಹರಿದ್ವಾರ. ಆ ದೇವ ಭೂಮಿಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಸ್ವರೂಪವನ್ನು ಕಾಪಾಡಲು ಸರ್ಕಾರ ಬದ್ಧ.‌ ಅಲ್ಲಿನ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧಕ್ಕೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಹರಿದ್ವಾರದಲ್ಲಿ 2027 ರಲ್ಲಿ ಅರ್ಧ ಕುಂಭ ಮೇಳ ನಡೆಯಲಿದೆ‌.

ಹರಿದ್ವಾರಕ್ಕೆ ಹಿಂದೂಯೇತರರ ನಿಷೇಧ: ಉತ್ತರಾಖಂಡ್ ಸಿಎಂ ಹೇಳಿದ್ದೇನು? Read More »

ಶಾಶ್ವತವಾದದ್ದು ಎಂದಿಗೂ ನಾಶವಾಗುವುದಿಲ್ಲ: ಪ್ರಧಾನಿ ಮೋದಿ

ನವದೆಹಲಿ: ಸಾವಿರಾರು ವರುಷಗಳ ಐಹಿತ್ಯವುಳ್ಳ ಪ್ರಸಿದ್ಧ ಸೋಮನಾಥ ದೇಗುಲದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೇಖನವೊಂದನ್ನು ಬರೆದಿದ್ದಾರೆ. ದೇಗುಲದ ಮೇಲೆ ಘಜ್ನಿ ದಾಳಿ ನಡೆಸಿ ಸಾವಿರ ವರ್ಷಗಳಾಗುತ್ತಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಶ್ರೀ ಸೋಮನಾಥ ಟ್ರಸ್ಟ್ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆ ಅವರು ದೇವಾಲಯದ ಬಗ್ಗೆ ಬರೆದುಕೊಂಡಿದ್ದು, ಇದು ಕೇವಲ ಆರಾಧನಾ ಸ್ಥಳವಲ್ಲ ಬದಲಾಗಿ ಭಾರತದ ಆತ್ಮ, ನಾಗರೀಕತೆಯ ಪ್ರತೀಕ ಎಂದು ವರ್ಣಿಸಿದ್ದಾರೆ. ಸೋಮನಾಥ ಎಂಬ ಹೆಸರು ಕೇಳಿದಾಗ ಹೃದಯದಲ್ಲಿ ಹೆಮ್ಮೆ ಮೂಡುತ್ತದೆ. ಇದು

ಶಾಶ್ವತವಾದದ್ದು ಎಂದಿಗೂ ನಾಶವಾಗುವುದಿಲ್ಲ: ಪ್ರಧಾನಿ ಮೋದಿ Read More »

ಹೀಲಿಯಂ ಗ್ಯಾಸ್ ಸ್ಪೋಟ: ಮೃತರ ಕುಟುಂಬಗಳಿಗೆ ಆರ್ಥಿಕ ಸಹಾಯ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮೈಸೂರು ಅರಮನೆ ಮುಂಭಾಗದಲ್ಲಿ ಸಂಭವಿಸಿದ ಹೀಲಿಯಂ ಗ್ಯಾಸ್ ಸ್ಫೋಟದಲ್ಲಿ ಮೃತರಾದವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಸಿಎಂ ‌ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಕ್ರಿಸ್‌ಮಸ್‌ ದಿನದಂದು ಅರಮನೆ ಮುಂದೆ ಬಲೂನಿಗೆ ತುಂಬುವ ಹೀಲಿಯಂ ಗ್ಯಾಸ್ ಸ್ಪೋಟವಾಗಿತ್ತು. ಈ ದುರ್ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿದ್ದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಾಯಾಳುಗಳ ಪೈಕಿ ಇಬ್ಬರು ಮೃತಪಟ್ಟಿದ್ದರು. ಮೃತರ ನೋವಿಗೆ ಸ್ಪಂದಿಸಿರುವ ಸಿ ಎಂ ಸಿದ್ದರಾಮಯ್ಯ ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ಪರಿಹಾರದ ಭರವಸೆ

ಹೀಲಿಯಂ ಗ್ಯಾಸ್ ಸ್ಪೋಟ: ಮೃತರ ಕುಟುಂಬಗಳಿಗೆ ಆರ್ಥಿಕ ಸಹಾಯ ಘೋಷಿಸಿದ ಸಿಎಂ ಸಿದ್ದರಾಮಯ್ಯ Read More »

ಓಂ ಶಕ್ತಿ ತೇರಿನ ಮೇಲೆ ಕಲ್ಲೆಸೆದವರು ಹುಡುಗರು : ಪರಮೇಶ್ವರ್‌

15-17 ವರ್ಷದ ನಾಲ್ಕು ಮಂದಿಯನ್ನು ಬಂಧಿಸಿದ್ದೇವೆ ಎಂದ ಗೃಹ ಸಚಿವ ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆ ಮೇಲೆ ಕಲ್ಲೆಸೆದವರು ನಾಲ್ಕೈದು ಚಿಕ್ಕ ಹುಡುಗರು, ಅವರನ್ನೆಲ್ಲ ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ಜೆಜೆಆರ್ ನಗರದ ವಿಎಸ್ ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಬಳಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ನಾಲ್ಕೈದು 15-17 ವರ್ಷದವರು ಕಲ್ಲೆಸೆದಿದ್ದಾರೆ. ಎಲ್ಲರನ್ನೂ ಈಗಾಗಲೇ ಅವರನ್ನು ಬಂಧಿಸಲಾಗಿದೆ. ಇದು ಬಾಲಾಪರಾಧದ ವ್ಯಾಪ್ತಿಗೆ ಬರುತ್ತದೆ. ಪೊಲೀಸರು ಮುಂದಿನ ಕ್ರಮ

ಓಂ ಶಕ್ತಿ ತೇರಿನ ಮೇಲೆ ಕಲ್ಲೆಸೆದವರು ಹುಡುಗರು : ಪರಮೇಶ್ವರ್‌ Read More »

ಕೋಗಿಲು ಲೇಔಟ್‌ ಬಿಬಿಎಂಪಿಗೆ ಸೇರಿದ್ದು : ಕೃಷ್ಣ ಬೈರೇಗೌಡ

ಅಕ್ರಮವಾಗಿ ಮನೆ ನಿರ್ಮಿಸಿದ್ದು ನಿಜ ಎಂದ ಸಚಿವ ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣ ಆಗಿದ್ದು ನಿಜ. ಇದು ಬಿಬಿಎಂಪಿ ಜಾಗವಾಗಿದ್ದು, ಕಂದಾಯ ಇಲಾಖೆಯ ಜಾಗವಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಬಿಬಿಎಂಪಿ ಇರಲಿ, ಕಂದಾಯ ಇರಲಿ ಒತ್ತುವರಿಯಾಗಿರುವ ಜಾಗವನ್ನು ನಿರಂತರವಾಗಿ ತೆರವು ಮಾಡಲಾಗುತ್ತದೆ. ಇದು ಆಡಳಿತ ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುವ ಕೆಲಸ. ಕಂದಾಯ ಇಲಾಖೆಯಲ್ಲಿ ಪ್ರತಿ ಶನಿವಾರ ತೆರವು ನಡೆಯುತ್ತಿರುತ್ತದೆ. ಸರ್ಕಾರಿ ಜಾಗದಲ್ಲಿ ಇರಬಹುದು, ಬಿಬಿಎಂಪಿ ಜಾಗದಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ

ಕೋಗಿಲು ಲೇಔಟ್‌ ಬಿಬಿಎಂಪಿಗೆ ಸೇರಿದ್ದು : ಕೃಷ್ಣ ಬೈರೇಗೌಡ Read More »

error: Content is protected !!
Scroll to Top