ರಾಜ್ಯ

ಕೊನೆಗೂ ಫಲಿಸುತ್ತಾ ಡಿಕೆಶಿ ಪ್ರಾರ್ಥನೆ?

ಟ್ವೀಟ್‌ನಲ್ಲಿ ಕೊಟ್ಟರು ಡಿ.ಕೆ.ಶಿವಕುಮಾರ್‌ ದೊಡ್ಡದೊಂದು ಸುಳಿವು ಬೆಂಗಳೂರು : ಸಂಕ್ರಾಂತಿ ದಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಾಲಿಗೆ ಶುಭದಿನವಾಗುತ್ತಾ? ಹೀಗೊಂದು ಕುತೂಹಲ ರಾಜ್ಯದ ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾಗಿರುವುದು ಡಿಕೆಶಿ ಇಂದು ಮಾಡಿರುವ ಒಂದು ಟ್ವೀಟ್‌. ಬುಧವಾರ ಬೆಳಗ್ಗೆಯೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿರುವ ಡಿ.ಕೆ ಶಿವಕುಮಾರ್ “ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ನಿನ್ನೆ ಮೈಸೂರಿನಲ್ಲಿ ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಮತ್ತೊಮ್ಮೆ ಊಹಾಪೋಹಗಳು ದಟ್ಟವಾಗಿದ್ದು, […]

ಕೊನೆಗೂ ಫಲಿಸುತ್ತಾ ಡಿಕೆಶಿ ಪ್ರಾರ್ಥನೆ? Read More »

ಕಾರು-ಬಸ್‌ ಡಿಕ್ಕಿ : ಮಗು ಸಹಿತ ಮೂವರು ಸಾವು

ಶಿವಮೊಗ್ಗ: ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಡಿಕ್ಕಿ ಸಂಭವಿಸಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ ಭೀಕರ ಅಪಘಾತ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಕ್ರಾಸ್ ಬಳಿ ನಡೆದಿದೆ. ಮಗು, ಕಾರಿನ ಚಾಲಕ ಮತ್ತು ಪಕ್ಕದ ಸೀಟಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದು ಕಾರಿನಲ್ಲಿದ್ದ ಉಳಿದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ರಿಹಾನ್ (15), ರಾಹಿಲ್ (9) ಮತ್ತು ಫಾತಿಮಾ (76) ಎಂದು ಗುರುತಿಸಲಾಗಿದೆ. ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ

ಕಾರು-ಬಸ್‌ ಡಿಕ್ಕಿ : ಮಗು ಸಹಿತ ಮೂವರು ಸಾವು Read More »

ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಆರು ಮಂದಿ ಉಪನ್ಯಾಸಕರು ಕರ್ತವ್ಯದಿಂದ ವಜಾ

ಬೆಂಗಳೂರು: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನ ಆರು ಮಂದಿ ಉಪನ್ಯಾಸಕರನ್ನು ವಜಾ ಮಾಡಲಾಗಿದೆ. ಜ. 8 ರಂದು ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಸಾವಿಗೆ ಕಾಲೇಜಿನ ಉಪನ್ಯಾಸಕರೇ ಕಾರಣ ಎಂದು ಉಪನ್ಯಾಸಕರು ಮತ್ತು ಆಕೆಯ ಸಹಪಾಠಿಗಳು ಆರೋಪಿಸಿದ್ದರು. ಉಪನ್ಯಾಸಕರು ಮಾಡಿದ ಜನಾಂಗೀಯ ನಿಂದನೆ, ಕಿರುಕುಳದಿಂದ ‌ನೊಂದು, ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಸಹ ಕೇಳಿ ಬಂದಿತ್ತು. ಈ ಹಿನ್ನೆಲೆ ಕಾಲೇಜಿನ ಪ್ರಾಂಶುಪಾಲರೂ ‌ಸೇರಿದಂತೆ ಒಟ್ಟು ಐವರು

ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಆರು ಮಂದಿ ಉಪನ್ಯಾಸಕರು ಕರ್ತವ್ಯದಿಂದ ವಜಾ Read More »

ಅಜ್ಮೀರ್ ದರ್ಗಾ ಕುರಿತು ಹೊಸ ವಿವಾದ ಸೃಷ್ಟಿ: ಶಿವಾಲಯವನ್ನು ದರ್ಗಾವಾಗಿ ಪರಿವರ್ತಿಸಲಾಗಿದೆ ಎಂದು ಕೋರ್ಟ್‌ಗೆ ಅರ್ಜಿ

ರಾಜಸ್ಥಾನ: ಅಜ್ಮೀರ್ ದರ್ಗಾ ಪ್ರದೇಶವು ಮೂಲತಃ ಶಿವನಿಗೆ ಸಮರ್ಪಿತವಾದ ದೇವಾಲಯವಾಗಿತ್ತು ಎಂಬ ಹೇಳಿಕೆಯೊಂದಿಗೆ ಅಜ್ಮೀರ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿಯೊಂದು ‌ಸಲ್ಲಿಕೆಯಾಗಿದ್ದು, ಇದು ಸದ್ಯ ಹೊಸ ವಿವಾದವೊಂದನ್ನು ಸೃಷ್ಠಿ ಮಾಡಿದೆ. ಬಲಪಂಥೀಯ ಸಂಘಟನೆ ಮಹಾರಾಣಾ ಪ್ರತಾಪ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜವರ್ಧನ್ ಸಿಂಗ್ ಪರ್ಮಾರ್ ಈ ಅರ್ಜಿ ಸಲ್ಲಿಕೆ ಮಾಡಿರುವುದಾಗಿದೆ. ಅಜ್ಮೀರ್ ಶಿವ ದೇವಾಲಯವನ್ನು ನಂತರದ ಕಾಲದಲ್ಲಿ ದರ್ಗಾ‌ವಾಗಿ ಪರಿವರ್ತನೆ ಮಾಡಲಾಗಿದೆ. ಬಹುಕಾಲದಿಂದಲೂ ನಾನು ಈ ವಿಚಾರವನ್ನು ಮುಂದಿಟ್ಟುಕೊಂಡು ಬಂದಿದ್ದು, ಆ ಪ್ರದೇಶದಲ್ಲಿ ಪುರಾತತ್ವ ಸಮೀಕ್ಷೆ ನಡೆಸುವಂತೆಯೂ ಅವರು

ಅಜ್ಮೀರ್ ದರ್ಗಾ ಕುರಿತು ಹೊಸ ವಿವಾದ ಸೃಷ್ಟಿ: ಶಿವಾಲಯವನ್ನು ದರ್ಗಾವಾಗಿ ಪರಿವರ್ತಿಸಲಾಗಿದೆ ಎಂದು ಕೋರ್ಟ್‌ಗೆ ಅರ್ಜಿ Read More »

ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಜಿ.ಪರಮೇಶ್ವರ ಹೆಸರು : ಬಿಜೆಪಿ ವಿರೋಧ

ಸದ್ದಿಲ್ಲದೆ ಕ್ರೀಡಾಂಗಣದ ಹೆಸರು ಬದಲಾವಣೆ ; ಕಾಂಗ್ರೆಸ್‌ಗೆ ತೀವ್ರ ಮುಜುಗರ ಬೆಂಗಳೂರು: ತುಮಕೂರಿನ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಕಾಂಗ್ರೆಸ್ ನಾಯಕ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರ ಹೆಸಟ್ಟಿರುವುದು ವಿವಾದದ ಸ್ವರೂಪ ಪಡೆದುಕೊಂಡಿದೆ. ನರೇಗಾ ಯೋಜನೆಯಲ್ಲಿ ಮಹಾತ್ಮಾ ಗಾಂಧಿ ಹೆಸರು ಕೈ ಬಿಟ್ಟು ರಾಮನ ಹೆಸರಿಟ್ಟಿದ್ದಕ್ಕೆ ಇಡೀ ದೇಶದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವಾಗಲೇ ಕರ್ನಾಟಕದಲ್ಲಿ ಸದ್ದಿಲ್ಲದೆ ಗಾಂಧೀಜಿ ಹೆಸರು ಬದಲಾಯಿಸುರುವುದು ಕಾಂಗ್ರೆಸ್‌ ಪಾಲಿಗೆ ತೀವ್ರ ಮುಜುಗರವುಂಟು ಮಾಡಿದೆ. ಈ ಮೂಲಕ ವಿರೋಧ ಪಕ್ಷ ಬಿಜೆಪಿ ಕೈಗೆ

ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಜಿ.ಪರಮೇಶ್ವರ ಹೆಸರು : ಬಿಜೆಪಿ ವಿರೋಧ Read More »

ಇಸ್ರೋದ PSLV – C62 ರಾಕೆಟ್‌ ಹಾರಾಟದ ಕೊನೆಯ ಹಂತದಲ್ಲಿ ತಾಂತ್ರಿಕ ವ್ಯತ್ಯಯ

ಬೆಂಗಳೂರು: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಉಡಾವಣೆ ಮಾಡಿದ PSLV – C62 ರಾಕೆಟ್‌ ಹಾರಾಟದ ಕೊನೆಯ ಹಂತದಲ್ಲಿ ತಾಂತ್ರಿಕ ವ್ಯತ್ಯಯಗಳು ಕಂಡುಬಂದಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ವಿವರವಾದ ವಿಶ್ಲೇಷಣೆಗೆ ಇಸ್ರೋ ವಿಜ್ಞಾನಿಗಳು ಮುಂದಾಗಿದ್ದಾರೆ. ಆರಂಭಿಕ ಹಂತಗಳಲ್ಲಿ ರಾಕೆಟ್ ಯಶಸ್ವಿ ಹಾರಾಟ ನಡೆಸಿದೆ. ಆದರೆ ಮೂರನೇ ಹಂತದ ಕೊನೆಯಲ್ಲಿ ನಿರೀಕ್ಷಿತ ಪಥದಲ್ಲಿ ಹಾರಾಟ ನಡೆದಿಲ್ಲ ಎಂದು ಸಂಸ್ಥೆ ಮಾಹಿತಿ ನೀಡಿದೆ. ಈ ಹಿನ್ನೆಲೆ ಉಡಾವಣೆಯ ನಂತರದ ಟೆಲಿಮೆಟ್ರಿ ಮಾಹಿತಿ ಪರಿಶೀಲನೆ ನಡೆಸಲಾಗುವುದಾಗಿಯೂ

ಇಸ್ರೋದ PSLV – C62 ರಾಕೆಟ್‌ ಹಾರಾಟದ ಕೊನೆಯ ಹಂತದಲ್ಲಿ ತಾಂತ್ರಿಕ ವ್ಯತ್ಯಯ Read More »

ಸಭ್ಯ ಬಟ್ಟೆ ಧರಿಸುವಂತೆ ಬುದ್ಧಿ ಹೇಳಿದ್ದಕ್ಕೆ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವತಿ ಪೊಲೀಸರ ವಶಕ್ಕೆ

ಬೆಂಗಳೂರು: ಯುವತಿಯನ್ನು ಕೆಲವು ಯುವಕರು ಚುಡಾಯಿಸುತ್ತಿದ್ದಾಗ, ಅಸಭ್ಯ ಬಟ್ಟೆ ಧರಿಸಿ ರಸ್ತೆಗೆ ಬರಬೇಡಮ್ಮ ಎಂದು ಬುದ್ಧಿ ಹೇಳಿದ ಹೋಂ ಗಾರ್ಡ್ ಮೇಲೆಯೇ ಆಕೆ ಹಲ್ಲೆ ನಡೆಸಿದ ಘಟನೆ ಕೆ. ಆರ್. ಪುರಂ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದು ಆರೋಪಿಯನ್ನು ರಾಮಮೂರ್ತಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮೋಹಿನಿ ಎಂದು ಗುರುತಿಸಲಾಗಿದ್ದು, ಗಾಯಾಳು ಹೋಂ ಗಾರ್ಡ್ ಲಕ್ಷ್ಮೀ ನರಸಮ್ಮ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 12 ವರ್ಷಗಳಿಂದ ಲಕ್ಷ್ಮೀ ನರಸಮ್ಮ ಹೋಂ ಗಾರ್ಡ್ ಆಗಿ ಕೆಲಸ

ಸಭ್ಯ ಬಟ್ಟೆ ಧರಿಸುವಂತೆ ಬುದ್ಧಿ ಹೇಳಿದ್ದಕ್ಕೆ ಹೋಂ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವತಿ ಪೊಲೀಸರ ವಶಕ್ಕೆ Read More »

ಆರು ವರ್ಷದ ಬಾಲಕಿಯರ ಕಿಡ್ನಾಪ್, ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸರು ಹೇಳಿದ್ದೇನು ಗೊತ್ತಾ?

ಬೆಂಗಳೂರು: ಆರು ವರ್ಷದ ವಲಸೆ ಬಾಲಕಿಯ ಕಿಡ್ನಾಪ್ ಮತ್ತು ಕೊಲೆ ಪ್ರಕರಣ ವೈಟ್‌ ಫೀಲ್ಡ್ ನಲ್ಲಿ ನಡೆದಿದ್ದು, ಈ ಪ್ರಕರಣದ ಬಗ್ಗೆ ಮತ್ತೊಂದು ಶಾಕಿಂಗ್ ಹೇಳಿಕೆಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಹತ್ಯೆ ನಡೆಸುವುದಕ್ಕೂ ಮುನ್ನ ಆರೋಪಿ ಯೂಸುಫ್ ಮೀರ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ವಿಚಾರಣೆಯ ದೃಷ್ಟಿಯಿಂದ ಆರೋಪಿಯನ್ನು ಹೆಚ್ಚುವರಿ 10 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದು, ಸ್ಕ್ರ್ಯಾಪ್ ಸಂಗ್ರಹಿಸುವ ಕೆಲಸ

ಆರು ವರ್ಷದ ಬಾಲಕಿಯರ ಕಿಡ್ನಾಪ್, ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸರು ಹೇಳಿದ್ದೇನು ಗೊತ್ತಾ? Read More »

EOS-N1 ‘ಅನ್ವೇಷಾ’ ನಭಕ್ಕೆ: ಇಸ್ರೋ ಮುಡಿಗೆ ಮತ್ತೊಂದು ಹೆಮ್ಮೆಯ ಗರಿ

ಬೆಂಗಳೂರು: ದೇಶದ ಹೆಮ್ಮೆಯ ಇಸ್ರೋ ಮತ್ತೊಂದು ಮಹತ್ವದ ಮೈಲಿಗಲ್ಲು ದಾಖಲಿಸಿದೆ. 2026 ರ ಮೊದಲ ಬಾಹ್ಯಾಕಾಶ ಮಿಷನ್ ‘ಅನ್ವೇಷಾ’ ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಕಳುಹಿಸಿದೆ. PSLV -C62 ರಾಕೆಟ್ ಮೂಲಕ EOS-N1 ‘ಅನ್ವೇಷಾ’ ಉಪಗ್ರಹವನ್ನು ಉಡಾಯಿಸಲಾಗಿದೆ. ಇದನ್ನು ಡಿಆರ್‌ಡಿಒ ಅಭಿವೃದ್ಧಿ ಮಾಡಿದ್ದು, ಕಣ್ಗಾವಲು ಮತ್ತು ರಕ್ಷಣಾ ಉದ್ದೇಶಗಳಿಗೆ ಇದು ಬಳಕೆಯಾಗಲಿದೆ. 600 km ಎತ್ತರದ ಕಕ್ಷೆಯಲ್ಲಿ 400 kg ತೂಕದ ಈ ಉಪಗ್ರಹ ಭೂಮಿಯನ್ನು ಸುತ್ತಲಿದೆ. ಈ ಉಪಗ್ರಹ

EOS-N1 ‘ಅನ್ವೇಷಾ’ ನಭಕ್ಕೆ: ಇಸ್ರೋ ಮುಡಿಗೆ ಮತ್ತೊಂದು ಹೆಮ್ಮೆಯ ಗರಿ Read More »

ಟೋಲ್‌ಗೇಟ್‌ ವಿರುದ್ಧ ಭಾರಿ ಪ್ರತಿಭಟನೆ : ಕಾಸರಗೋಡು-ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

ಆರಿಕ್ಕಾಡಿಯಲ್ಲಿ ಟೋಲ್‌ ವಸೂಲಿ ಶುರುವಾದ ದಿನವೇ ಪ್ರತಿಭಟನೆಯ ಬಿಸಿ ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂಬಳೆ ಸಮೀಪ ಆರಿಕ್ಕಾಡಿಯಲ್ಲಿ ಟೋಲ್‌ ವಸೂಲು ಮಾಡುವುದನ್ನು ಪ್ರತಿಭಟಿಸಲು ಸೋಮವಾರ ಬೆಳಗ್ಗೆಯೇ ಸಾವಿರಾರು ಜನರು ಜಮಾಯಿಸಿದ ಪರಿಣಾಮವಾಗಿ ಮಂಗಳೂರು-ಕಾಸರಗೋಡು ನಡುವೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಆರಿಕ್ಕಾಡಿಯಲ್ಲಿ ಇಂದಿನಿಂದ ಟೋಲ್‌ ವಸೂಲಿ ಶುರುವಾಗಿದೆ. ಈಗಾಗಲೇ ಕೇರಳ-ಕರ್ನಾಟಕ ಗಡಿಯಾಗಿರುವ ತಲಪ್ಪಾಡಿಯಲ್ಲಿ ಟೋಲ್‌ಗೇಟ್‌ ಇದ್ದು, ಇಲ್ಲಿಂದ ಬರೀ 20 ಕಿ.ಮೀ. ದೂರದಲ್ಲಿರುವ ಆರಿಕ್ಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನೊಂದು ಟೋಲ್‌ಗೇಟ್‌ ಹಾಕಿದೆ. ಎರಡು ಟೋಲ್‌ಗೇಟ್‌ಗಳ

ಟೋಲ್‌ಗೇಟ್‌ ವಿರುದ್ಧ ಭಾರಿ ಪ್ರತಿಭಟನೆ : ಕಾಸರಗೋಡು-ಮಂಗಳೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ Read More »

error: Content is protected !!
Scroll to Top