ರಾಜ್ಯ

ಟಿಪ್ಪರ್ – ಬೈಕ್ ನಡುವೆ ಅಪಘಾತ: ಮೂರು ಸಾವು

ಬೆಂಗಳೂರು: ಟಿಪ್ಪರ್ – ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ದೇವನಹಳ್ಳಿ ಬಳಿ ನಡೆದಿದೆ. ಮೃತಪಟ್ಟವರು ಹುಣಸಮಾರೇನಹಳ್ಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಓರ್ವನನ್ನು ತೌಸೀಫ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ. ಮೂವರು ವಿದ್ಯಾರ್ಥಿಗಳು ಬೂದಿಗೆರೆ ಕಡೆಗೆ ಹೊರಟಿದ್ದಾಗಿ ತಿಳಿದು ಬಂದಿದೆ. ಈ ಸಂದರ್ಭ ಬೈಕ್ ಡಿವೈಡರ್‌ಗೆ ಢಿಕ್ಕಿ ಹೊಡೆದು ಬಳಿಕ ಎದುರಿನಿಂದ ಬರುತ್ತಿದ್ದ ಟಿಪ್ಪರ್‌ಗೆ ಢಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಮೂರೂ ದೇಹಗಳು ನಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ. ಘಟನೆಯ […]

ಟಿಪ್ಪರ್ – ಬೈಕ್ ನಡುವೆ ಅಪಘಾತ: ಮೂರು ಸಾವು Read More »

ಬೈಕ್ – ಟಿಪ್ಪರ್ ‌ನಡುವೆ ಅಪಘಾತ: ಓರ್ವ ಸಾವು, ಮತ್ತೊಬ್ಬ ಗಂಭೀರ

ಪಾವಗಡ: ಬೈಕ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಂಭೀರ ಪ್ರಮಾಣದ ಗಾಯಗಳಾಗಿರುವ ಘಟನೆ ಪಾವಗಡದಲ್ಲಿ ನಡೆದಿದೆ. ಮೃತನನ್ನು ಬೈಕ್ ಸವಾರ ಅಂಬರೀಶ್ (25) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಭಾಸ್ಕರ್ ಅವರನ್ನು ಚಿಕಿತ್ಸೆಗಾಗಿ ತುಮಕೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬೈಕ್ ಸವಾರರು ಪಾವಗಡದಿಂದ ಮಧುಗಿರಿಯ ಕಡೆಗೆ ಹೊರಟಿದ್ದರು. ಈ ವೇಳೆ ಇವರ ಬೈಕ್‌ಗೆ ಎದುರಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಪರಿಣಾಮ ಅಂಬರೀಶ್ ಮೃತಪಟ್ಟು, ಭಾಸ್ಕರ್‌ಗೆ ಗಂಭೀರ ಗಾಯಗಳಾಗಿರುವುದಾಗಿದೆ. ಪಾವಗಡ ಪೊಲೀಸ್

ಬೈಕ್ – ಟಿಪ್ಪರ್ ‌ನಡುವೆ ಅಪಘಾತ: ಓರ್ವ ಸಾವು, ಮತ್ತೊಬ್ಬ ಗಂಭೀರ Read More »

ಬೀದಿ ದಾಸಯ್ಯನನ್ನು ‌ಸಿಎಂ ಮಾಡಿದ್ರೂ ಒಪ್ಪಿಕೊಳ್ಳಬೇಕಾಗುತ್ತದೆ: ಜಮೀರ್ ಅಹ್ಮದ್ ಹೀಗೆಂದಿದ್ಯಾಕೆ?

ಹುಬ್ಬಳ್ಳಿ: ಸಿದ್ದರಾಮಯ್ಯ ಇವರು 2028 ರ ವರೆಗೂ ಮುಖ್ಯಮಂತ್ರಿಯಾಗಿ ಇರುತ್ತಾರೆ. ಬೀದಿ ದಾಸಯ್ಯನನ್ನು ಸಿಎಂ ಎಂಬುದಾಗಿ ಹೈಕಮಾಂಡ್ ಘೋಷಣೆ ಮಾಡಿದರೂ ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ‌ಸ್ಥಾನ ಸದ್ಯಕ್ಕಂತೂ ಖಾಲಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎನ್ನುವ ಅಚಲ ನಂಬಿಕೆ ನನ್ನದು. ಕೆಲವರು ನವೆಂಬರ್ ಕ್ರಾಂತಿಯಾಗುತ್ತದೆ ಎಂದು ಹೇಳಿದ್ದರು. ಆದರೆ ಯಾವ ಕ್ರಾಂತಿಯೂ ಆಗಲಿಲ್ಲ. ಮುಂದೆ ಯುಗಾದಿ ಬರುತ್ತದೆಯೇ

ಬೀದಿ ದಾಸಯ್ಯನನ್ನು ‌ಸಿಎಂ ಮಾಡಿದ್ರೂ ಒಪ್ಪಿಕೊಳ್ಳಬೇಕಾಗುತ್ತದೆ: ಜಮೀರ್ ಅಹ್ಮದ್ ಹೀಗೆಂದಿದ್ಯಾಕೆ? Read More »

ಅವಧಿ ಮೀರಿದ ಬಿಯರ್‌ ಕುಡಿದು ಯುವಕರು ಅಸ್ವಸ್ಥ

ಜನಪ್ರಿಯ ಬ್ರಾಂಡ್‌ನ ಅವಧಿ ಮೀರಿದ ಬಿಯರ್‌ ಪೂರೈಸಿದ ಬಾರ್‌ನವರು ಬೆಂಗಳೂರು : ಅವಧಿ ಮೀರಿದ ಬಿಯರ್ ಕುಡಿದ ಪರಿಣಾಮ ಕೆಲವರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆ ಪಾಲಾದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿಯ ವೆಂಕಟ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಗುರುವಾರ ಸಂಜೆ ಯುವಕರ ಗುಂಪೊಂದು ಒಂದು ಕೇಸ್ ಬಡ್‌ವೈಸರ್‌ ಬಿಯರ್ ಖರೀದಿಸಿ ಸೇವಿಸಿದ ನಂತರ ವಾಂತಿ ಆಗಿದ್ದು, ಅವರನ್ನು ತಕ್ಷಣ ಮಾಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಬ್ಯುಲೆನ್ಸ್ ಬಳಸಿದರೆ ಮುಜುಗರ ಆಗುತ್ತದೆ ಎಂಬ ಕಾರಣಕ್ಕಾಗಿ

ಅವಧಿ ಮೀರಿದ ಬಿಯರ್‌ ಕುಡಿದು ಯುವಕರು ಅಸ್ವಸ್ಥ Read More »

ಪುನೀತ್‌ ಕೆರೆಹಳ್ಳಿ ಮತ್ತೆ ಬಂಧನ

ವಲಸೆ ಕಾರ್ಮಿಕರ ದಾಖಲೆ ಪತ್ರಗಳನ್ನು ಪರಿಶೀಲಿಸಿದ ಆರೋಪ ಹೊರಿಸಿ ಬಂಧನ ಬೆಂಗಳೂರು: ವಲಸೆ ಕಾರ್ಮಿಕರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದ ಹಿಂದೂ ಪರ ಹೋರಾಟಗಾರ ಪುನೀತ್‌ ಕೆರೆಹಳ್ಳಿಯನ್ನು ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ವಲಸಿಗರಿಗೆ ಬೆದರಿಕೆ ಹಾಗೂ ಭೀತಿಯನ್ನುಂಟುಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸ್ ಠಾಣಾ ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ನಿನ್ನೆ ರಾತ್ರಿ ಪುನೀತ್ ಕೆರೆಹಳ್ಳಿ ಮನೆಯ ಬಳಿಯೇ ಪೊಲೀಸರು ವಶಕ್ಕೆ ಪಡೆದಿದ್ದು, ಪೊಲೀಸ್​ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

ಪುನೀತ್‌ ಕೆರೆಹಳ್ಳಿ ಮತ್ತೆ ಬಂಧನ Read More »

ಹಸೆಮಣೆ ಏರಬೇಕಾಗಿದ್ದ ಯುವಕನನ್ನು ಹತ್ಯೆ ಮಾಡಿದ ಅಣ್ಣ

ಮಂಡ್ಯ: ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಾಗಿದ್ದ ಯುವಕನನ್ನು ಆತನ ಅಣ್ಣ ಮತ್ತು ಮಕ್ಕಳು ಸೇರಿ ಇರಿದು ಹತ್ಯೆ ಮಾಡಿದ ಘಟನೆ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಯೋಗೇಶ್ (30) ಮೃತ ದುರ್ದೈವಿ. ಯೋಗೇಶ್‌ಗೆ ಜ.21 ರಂದು ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಗೂ ಮೊದಲೇ ತನ್ನ ಅಣ್ಣನಿಂದಲೇ ಈತ ಮಸಣ ಸೇರಿದ್ದಾನೆ. ಆರೋಪಿಗಳನ್ನು ಲಿಂಗರಾಜು ಮತ್ತು ಅವನ ಮಕ್ಕಳಾದ ಭರತ್, ದರ್ಶನ್ ಎಂದು ಗುರುತಿಸಲಾಗಿದೆ.. ಅಣ್ಣ ತಮ್ಮಂದಿರ ನಡುವೆ ಹಲವು ವರ್ಷಗಳಿಂದ ಆಸ್ತಿ ಕಲಹ ಇತ್ತು. ಈ ವಿಚಾರವಾಗಿ ಆಗಾಗ್ಗೆ

ಹಸೆಮಣೆ ಏರಬೇಕಾಗಿದ್ದ ಯುವಕನನ್ನು ಹತ್ಯೆ ಮಾಡಿದ ಅಣ್ಣ Read More »

ಅಪ್ರಾಪ್ತೆಗೆ ‌ಮಗು ಕರುಣಿಸಿದ ಬಸ್ ಕ್ಲೀನರ್‌ಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ಕೋರ್ಟ್

ಮಡಿಕೇರಿ: ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು, ಗರ್ಭವತಿಯನ್ನಾಗಿಸಿ ಮಗು ನೀಡಿದ ಆರೋಪದಲ್ಲಿ ಖಾಸಗಿ ಬಸ್ಸಿನ ಕ್ಲೀನರ್‌ಗೆ ಪೋಕ್ಸೋ ಕಾಯಿದೆಯಡಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ವಿರಾಜಪೇಟೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ಆರೋಪಿಯನ್ನು ಎಚ್. ಆರ್. ಮನೋಜ್ (26) ಎಂದು ಗುರುತಿಸಲಾಗಿದೆ. ಮನೋಜ್‌ಗೆ ಈಗಾಗಲೇ ಮದುವೆಯೂ ಆಗಿದೆ. ಈತ ತಾನು ಕೆಲಸ ಮಾಡುತ್ತಿದ್ದ ಬಸ್ಸಿನಲ್ಲಿ ಬರುತ್ತಿದ್ದ 8 ನೇ ತರಗತಿಯ ಹುಡುಗಿಯ

ಅಪ್ರಾಪ್ತೆಗೆ ‌ಮಗು ಕರುಣಿಸಿದ ಬಸ್ ಕ್ಲೀನರ್‌ಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ಕೋರ್ಟ್ Read More »

ಜ.25: ಗೌಡ ಸಮಾಜದಿಂದ ‘ಸಪ್ತಪದಿ – 2026’ ಕಾರ್ಯಕ್ರಮ

ಮಡಿಕೇರಿ: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರು ಇದರ ವತಿಯಿಂದ, ಮಹಿಳಾ ಘಟಕ ಮತ್ತು ಯುವ ಘಟಕದ ಸಹಯೋಗದೊಂದಿಗೆ ಜ. 25 ರಂದು ಭಾನುವಾರ ಬೆಳಗ್ಗೆ ‘ಸಪ್ತಪದಿ -2026’ ಭಾವೀ ವಧೂ ರವರ ಮುಖಾಮುಖಿ ಭೇಟಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವು ಬೆಂಗಳೂರಿನ ‘ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ’ 50 ಅಡಿ, ಅಂದಾನಪ್ಪ ರಸ್ತೆ, 8ನೇ ಅಡ್ಡ ರಸ್ತೆ, ಚೌಡೇಶ್ವರಿ ನಗರ, ಲಾಯರ್ ಶ್ರೀ ಪೂಜಾರಿರ ಎ. ಮೊಣ್ಣಪ್ಪ ಬಡಾವಣೆ, ಲಗ್ಗೆರೆಯಲ್ಲಿ ನಡೆಯಲಿದೆ.

ಜ.25: ಗೌಡ ಸಮಾಜದಿಂದ ‘ಸಪ್ತಪದಿ – 2026’ ಕಾರ್ಯಕ್ರಮ Read More »

ಬಾಂಗ್ಲಾದೇಶದ ಅಕ್ರಮ ವಲಸಿಗರ ಶೆಡ್‌ಗಳು ಬೆಂಕಿಗಾಹುತಿ

ತೆರವು ಮಾಡಿದ ಬಳಿಕ ಮತ್ತೆ ಬಂದು ನೆಲೆಸಿದ್ದ ವಲಸಿಗರು ಬೆಂಗಳೂರು: ಅಕ್ರಮ ಬಾಂಗ್ಲಾದೇಶದ ವಲಸಿಗರು ನೆಲೆಸಿದ್ದ ಶೆಡ್‌ಗಳು ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೆಂಕಿಗಾಹುತಿಯಾದ ಘಟನೆ ಬೆಂಗಳೂರು ಹೊರವಲಯದ ಬೇಗೂರಿನ ಎಳೇನಹಳ್ಳಿಯಳ್ಳಿಯಲ್ಲಿರುವ ಡಂಪಿಂಗ್ ಯಾರ್ಡ್‌ನಲ್ಲಿ ನಡೆದಿದೆ. 5 ಎಕ್ರೆ ಜಾಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಅಕ್ರಮ ಬಾಂಗ್ಲಾದೇಶೀಯರನ್ನು ಕೆಲ ದಿನಗಳ ಹಿಂದೆ ಸ್ಥಳದಿಂದ ತೆರವುಗೊಳಿಸಲಾಗಿತ್ತು. ಆದರೆ ರಾತ್ರೋರಾತ್ರಿ ಮತ್ತೆ ವಲಸಿಗರು ಇಲ್ಲಿಗೆ ಆಗಮಿಸಿ ಶೆಡ್‌ ಹಾಕಿದ್ದರು. ತಡರಾತ್ರಿ ಸಿಲಿಂಡರ್ ಸ್ಫೋಟದಿಂದ ಶೆಡ್‌ಗಳು ಹೊತ್ತಿ ಉರಿದಿದ್ದು ಆಗಸದೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚಿತ್ತು.

ಬಾಂಗ್ಲಾದೇಶದ ಅಕ್ರಮ ವಲಸಿಗರ ಶೆಡ್‌ಗಳು ಬೆಂಕಿಗಾಹುತಿ Read More »

ಶಾಲೆಗಳಲ್ಲಿ ವಾಟರ್‌ ಬೆಲ್‌ ಪದ್ಧತಿ ಅಳವಡಿಸಲು ಆದೇಶ

ಮಕ್ಕಳಿಗೆ ನೀರು ಕುಡಿಯಲು ನೆನಪಿಸುವ ವಾಟರ್‌ ಬೆಲ್‌ ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಲು ಇನ್ಮುಂದೆ `ವಾಟರ್ ಬೆಲ್’ ಸಮಯ ನಿಗದಿ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದೆ. ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಬೇಕೆಂಬ ಅರಿವು ಅಷ್ಟಾಗಿ ಇರುವುದಿಲ್ಲ. ಮಕ್ಕಳ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ನೀರು ಅತ್ಯವಶ್ಯಕವಾಗಿರುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುವುದರ ಜೊತೆಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ರಾಜ್ಯದಲ್ಲಿರುವ ಎಲ್.ಕೆ.ಜಿ, ಯು.ಕೆ.ಜಿ ಒಳಗೊಂಡಂತೆ ಸರ್ಕಾರಿ, ಅನುದಾನಿತ

ಶಾಲೆಗಳಲ್ಲಿ ವಾಟರ್‌ ಬೆಲ್‌ ಪದ್ಧತಿ ಅಳವಡಿಸಲು ಆದೇಶ Read More »

error: Content is protected !!
Scroll to Top