ರಾಜ್ಯ

ವಿಧಾನಮಂಡಲವನ್ನು ಸುಳ್ಳಿನ ಕಾರ್ಖಾನೆಯಾಗಿ ಮಾಡಿದ ಕಾಂಗ್ರೆಸ್‌ : ಕ್ಯಾ.ಚೌಟ

ರಾಜ್ಯಪಾಲರನ್ನು ಅವಮಾನಿಸಿದ ಸರ್ಕಾರದಿಂದ ಸಂವಿಧಾನದ ಕಗ್ಗೊಲೆ ಮಂಗಳೂರು: ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿಯೇ ಘನವೆತ್ತ ರಾಜ್ಯಪಾಲರನ್ನು ಅವಮಾನಿಸಿದ ಘಟನೆ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ದಿವಾಳಿತನ ಮತ್ತು ಹತಾಶೆಯನ್ನು ಬಿಂಬಿಸುತ್ತಿದೆ. ಸಂವಿಧಾನದಡಿಯಲ್ಲೇ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಅದೇ ಸಂವಿಧಾನದ ಕಗ್ಗೊಲೆಗೆ ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಜಂಟಿ ಅಧಿವೇಶನ ವೇಳೆ ರಾಜ್ಯಪಾಲರನ್ನು ತಡೆದು ಅಗೌರವದಿಂದ ನಡೆದುಕೊಂಡು ಕಾಂಗ್ರೆಸ್‌ನವರ ಮಾನಸಿಕತೆಯನ್ನು ಟೀಕಿಸಿರುವ ಕ್ಯಾ.ಚೌಟ ನಿರಂತರವಾಗಿ ಕೇಂದ್ರ ಸರ್ಕಾರದ ಯೋಜನೆಗಳ […]

ವಿಧಾನಮಂಡಲವನ್ನು ಸುಳ್ಳಿನ ಕಾರ್ಖಾನೆಯಾಗಿ ಮಾಡಿದ ಕಾಂಗ್ರೆಸ್‌ : ಕ್ಯಾ.ಚೌಟ Read More »

ಸರ್ಕಾರಿ ಉದ್ಯೋಗ ನೇಮಕಾತಿ ವಯೋಮಿತಿ 5 ವರ್ಷ ಹೆಚ್ಚಳ : ಸಂಪುಟ ತೀರ್ಮಾನ

ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಹೆಚ್ಚಳ ಬೆಂಗಳೂರು: ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ಮತ್ತು ಅಲೆಮಾರಿ ಸಮುದಾಯಕ್ಕೆ ಸಿಹಿ ಸುದ್ದಿ ನೀಡಲಾಗಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಸಮಾಜದ ಜನರಿಗೆ ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸರ್ಕಾರಿ ಉದ್ಯೋಗ ನೇಮಕಾತಿ ವಯೋಮಿತಿ 5 ವರ್ಷ ಹೆಚ್ಚಳ : ಸಂಪುಟ ತೀರ್ಮಾನ Read More »

ಮೂರನೇ ತಲೆಮಾರಿಗೂ ಮುಂದುವರಿದ ಎಂಡೋಸಲ್ಫಾನ್‌ ದುಷ್ಪರಿಣಾಮ

ಹೊಸದಾಗಿ 543 ಜನರಲ್ಲಿ ಎಂಡೋಸಲ್ಫಾನ್‌ ಅಂಶ ಪತ್ತೆ ಬೆಂಗಳೂರು: ಕರಾವಳಿ ಭಾಗದಲ್ಲಿ ಕಳೆದ ಹಲವು ದಶಕಗಳಿಂದ ಜನರ ಜೀವ ಹಿಂಡುತ್ತಿರುವ ಎಂಡೋಸಲ್ಫಾನ್ ಕ್ರಿಮಿನಾಶಕದ ಪರಿಣಾಮ ಮೂರನೇ ತಲೆಮಾರಿನ ತನಕ ಮುಂದುವರಿದುಕೊಂಡು ಬಂದಿರುವ ಆಘಾತಕಾರಿ ಅಂಶ ಪತ್ತೆಯಾಗಿದೆ. ಎಂಡೋಸಲ್ಫಾನ್‌ ಸಿಂಪಡಣೆಯಿಂದ ಜನರ ವಂಶವಾಹಿಯ ಮೇಲೆ ಪರಿಣಾಮವಾಗಿದ್ದು, ಹುಟ್ಟುವ ಮಕ್ಕಳು ಕೂಡ ಅಂಗವೈಕಲ್ಯಕ್ಕೊಳಗಾಗಿದ್ದರು. ಜನರ ಜೀವವನ್ನೇ ಹಿಂಡುತಿದ್ದ ರೋಗ ಈಗ 3ನೇ ತಲೆಮಾರಿಗೂ ಹಬ್ಬಿದೆ. ಹೊಸದಾಗಿ 543 ಜನರಿಗೆ ಎಂಡೋಸಲ್ಫಾನ್ ಅಂಶ ಇರುವುದು ಪತ್ತೆಯಾಗಿದೆ. ಒಂದೆಡೆ ಅಂಗವೈಕಲ್ಯದಿಂದ ನೋವು ಅನುಭವಿಸುತ್ತಿರುವ

ಮೂರನೇ ತಲೆಮಾರಿಗೂ ಮುಂದುವರಿದ ಎಂಡೋಸಲ್ಫಾನ್‌ ದುಷ್ಪರಿಣಾಮ Read More »

ಕುಖ್ಯಾತ ದಂಡುಪಾಳ್ಯ ಗ್ಯಾಂಗಿನ ಸದಸ್ಯ 29 ವರ್ಷಗಳ ಬಳಿಕ ಸೆರೆ

1997ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಕೊಲೆ, ದರೋಡೆ ಕೃತ್ಯದ ಆರೋಪಿ ಮಂಗಳೂರು : ಕುಖ್ಯಾತ ದಂಡುಪಾಳ್ಯ ಗ್ಯಾಂಗಿನ ಓರ್ವ ಸದಸ್ಯನನ್ನು ಮಂಗಳೂರು ಪೊಲೀಸರು ಬರೋಬ್ಬರಿ 29 ವರ್ಷಗಳ ಬಳಿಕ ಬಂಧಿಸಿದ್ದಾರೆ. ಮಂಗಳೂರಿನ ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಚಿಕ್ಕ ಹನುಮ ಅಲಿಯಾಸ್​ ಚಿಕ್ಕ ಹನುಮಂತಪ್ಪನನ್ನು ಆಂಧ್ರ ಪ್ರದೇಶದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಈವರೆಗೆ ರಾಜ್ಯದಲ್ಲಿ ಸುಮಾರು 13 ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿವೆ. 1997 ಅಕ್ಟೋಬರ್​​ 11ರಂದು ಉರ್ವ ಮಾರಿಗುಡಿ ಕ್ರಾಸ್

ಕುಖ್ಯಾತ ದಂಡುಪಾಳ್ಯ ಗ್ಯಾಂಗಿನ ಸದಸ್ಯ 29 ವರ್ಷಗಳ ಬಳಿಕ ಸೆರೆ Read More »

ಅಕ್ರಮ ವಲಸಿಗರ ಪತ್ತೆ ಕಾರ್ಯ : ಪುನೀತ್‌ ಕೆರೆಹಳ್ಳಿ ಮತ್ತೆ ಬಂಧನ

ಒಂದೇ ವಾರದಲ್ಲಿ ಎರಡನೇ ಸಲ ಬಂಧಿಸಿದ ಪೊಲೀಸರು ಬೆಂಗಳೂರು: ಅಕ್ರಮ ಬಾಂಗ್ಲಾದೇಶ ವಲಸಿಗರ ಪತ್ತೆ ಕಾರ್ಯಾಚರಣೆ ಮಾಡುತ್ತಿರುವ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ ಎಂಬ ಆರೋಪದ ಹಿನ್ನೆಲೆ ಪುನೀತ್ ಕೆರೆಹಳ್ಳಿ ಅಲ್ಲಿಗೆ ತೆರಳಿದ್ದರು. ಹಸನ್ ಎಂಬಾತ ಅಕ್ರಮ ಬಾಂಗ್ಲಾ ವಲಸಿಗ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದಲ್ಲದೆ, ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು

ಅಕ್ರಮ ವಲಸಿಗರ ಪತ್ತೆ ಕಾರ್ಯ : ಪುನೀತ್‌ ಕೆರೆಹಳ್ಳಿ ಮತ್ತೆ ಬಂಧನ Read More »

ಕೆಲಸ ಹುಡುಕಿ ಹೋಗಿದ್ದ ಯುವತಿಯ ಕೊಲೆ: ಆಕೆಯ ಪ್ರಿಯಕರನೇ ಆರೋಪಿ

ಧಾರವಾಡ: ಕೆಲಸ ಹುಡುಕಿ ಜ. 19 ರಂದು ಮನೆಯಿಂದ ಹೋಗಿದ್ದ ಯುವತಿ ಝಕಿಯಾ ಮುಲ್ಲ(19) ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆಕೆಯ ಪ್ರಿಯಕರ ಸಾಬೀರ್ ಮುಲ್ಲಾ‌ನೇ ಶಾಲಿನಿಂದ ಕತ್ತು ಹಿಸುಕಿ, ಕೊಲೆ ನಡೆಸಿದ್ದಾಗಿ ತಿಳಿದು ಬಂದಿದೆ. ಝಕಿಯಾ ಮತ್ತು ಸಾಬೀರ್ ಸಂಬಂಧಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಮದುವೆಗೆ ಮನೆಯವರು ಸಹ ಒಪ್ಪಿದ್ದು, ಮುಂದಿನ ತಿಂಗಳು ನಿಶ್ಚಿತಾರ್ಥ ನಡೆಸುವುದಕ್ಕೂ ಚಿಂತನೆ ನಡೆಸಿದ್ದರು. ಜ. 20 ರಂದು ಆತನ ಜೊತೆ ಆಕೆ ಸುತ್ತಾಡಲು ಹೋಗಿದ್ದಾಳೆ. ಈ ವೇಳೆ ಮದುವೆಗೆ ಸಂಬಂಧಿಸಿದ

ಕೆಲಸ ಹುಡುಕಿ ಹೋಗಿದ್ದ ಯುವತಿಯ ಕೊಲೆ: ಆಕೆಯ ಪ್ರಿಯಕರನೇ ಆರೋಪಿ Read More »

ಭಾಷಣ ಮಾಡದೆ ತೆರಳಿದ ರಾಜ್ಯಪಾಲರು : ವಿಧಾನ ಸಭೆಯಲ್ಲಿ ಹೈಡ್ರಾಮಾ

ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿ ರಾಜ್ಯಪಾಲರ ಭಾಷಣವಿಲ್ಲದೆ ಕಲಾಪ ಬೆಂಗಳೂರು: ನಿರೀಕ್ಷೆಯಂತೆಯೇ ವಿಧಾನ ಮಂಡಲದಲ್ಲಿಂದು ಹೈಡ್ರಾಮಾ ನಡೆದಿದೆ. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅಧಿವೇಶನಕ್ಕೆ ಜಂಟಿ ಭಾಷಣ ಮಾಡುವ ಉದ್ದೇಶದಿಂದ ಬಂದರೂ ಆರಂಭದ ಕೆಲವು ಸಾಲನ್ನು ಹೇಳಿ ಸದನದಿಂದ ಹೊರ ನಡೆದಿದ್ದಾರೆ. ರಾಜ್ಯಪಾಲರು ಹೊರನಡೆಯುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಭಾರೀ ವಿರೋಧ ವ್ಯಕ್ತಪಡಿಸಿ ಧಿಕ್ಕಾರ ಕೂಗಲು ಆರಂಭಿಸಿದರು. ಆಡಳಿತ ಸದಸ್ಯರ ವಿರೋಧದ ನಡುವೆಯೂ ರಾಜ್ಯಪಾಲರು ವಿಧಾನಸೌಧದಿಂದ ಹೊರನಡೆದರು. ಇದೇ ಮೊದಲ ಬಾರಿಗೆ ರಾಜ್ಯದ ಅಧಿವೇಶನ ಇತಿಹಾಸದಲ್ಲಿ ರಾಜ್ಯಪಾಲರು ಭಾಷಣ

ಭಾಷಣ ಮಾಡದೆ ತೆರಳಿದ ರಾಜ್ಯಪಾಲರು : ವಿಧಾನ ಸಭೆಯಲ್ಲಿ ಹೈಡ್ರಾಮಾ Read More »

ಖ್ಯಾತ ಸ್ವಾಮೀಜಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿ 1 ಕೋ.ರೂ.ಗೆ ಬೇಡಿಕೆ : ಮಹಿಳೆ ಸೆರೆ

ಫೋನಿನಲ್ಲಿ ಪರಿಚಯಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಮಹಿಳೆ ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಚಿಕ್ಕಮಗಳೂರು ಮೂಲದ ಸ್ಫೂರ್ತಿ ಎಂಬ ಮಹಿಳೆಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ವಾಮೀಜಿಯಿಂದ ಈಗಾಗಲೇ 4.5 ಲಕ್ಷ ರೂ. ವಸೂಲಿ ಮಾಡಿದ್ದ ಮಹಿಳೆ ಮತ್ತೆ 1 ಕೋಟಿ ರೂ. ನೀಡುವಂತೆ ಒತ್ತಡ ಹೇರಿದ್ದಳು ಎನ್ನಲಾಗಿದೆ. ಐದು ತಿಂಗಳ ಹಿಂದೆ ಸ್ವಾಮೀಜಿಗೆ ಕರೆ ಮಾಡಿದ ಸ್ಫೂರ್ತಿ, ತಿಪಟೂರಿನಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಳು.

ಖ್ಯಾತ ಸ್ವಾಮೀಜಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿ 1 ಕೋ.ರೂ.ಗೆ ಬೇಡಿಕೆ : ಮಹಿಳೆ ಸೆರೆ Read More »

ಬೆಂಕಿ ಅವಘಡ : 13 ಇಲೆಕ್ಟ್ರಿಕ್‌ ಸ್ಕೂಟರ್‌ ಸುಟ್ಟು ಕರಕಲು

ಬೆಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಶೋರೂಂಗೆ ಬೆಂಕಿ ಹೊತ್ತಿಕೊಂಡು 13 ಇಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮವಾಗಿರುವ ಘಟನೆ ಕೆ.ಆರ್ ಪುರದ ಟಿ.ಸಿ ಪಾಳ್ಯ ಸಿಗ್ನಲ್ ಬಳಿ ನಡೆದಿದೆ. ಬುಧವಾರ ರಾತ್ರಿ 9:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿಕೊಳ್ತಿದ್ದಂತೆಯೇ ಶೋರೂಂ ಸಿಬ್ಬಂದಿ ಓಡಿ ಹೊರಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಶೋರೂಂನಲ್ಲಿದ್ದ 13 ಇಲೆಕ್ಟ್ರಿಕ್ ಬೈಕ್‌ಗಳು ಸುಟ್ಟು ಕರಕಲಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ

ಬೆಂಕಿ ಅವಘಡ : 13 ಇಲೆಕ್ಟ್ರಿಕ್‌ ಸ್ಕೂಟರ್‌ ಸುಟ್ಟು ಕರಕಲು Read More »

ಕರ್ನಾಟಕದಲ್ಲೂ ಗವರ್ನರ್‌ V/S ಗವರ್ನಮೆಂಟ್‌ ಸಂಘರ್ಷ

ವಿಶೇಷ ಅಧಿವೇಶನದಲ್ಲಿ ಸರ್ಕಾರ ಬರೆದುಕೊಟ್ಟ ಭಾಷಣ ಓದಲು ನಿರಾಕರಿಸಿದ ರಾಜ್ಯಪಾಲರು ಬೆಂಗಳೂರು: ಇಂದು ಆರಂಭವಾಗಲಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್‌ ನಿರಾಕರಿಸಿರುವುದು ಗಂಭೀರವಾದ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಭಾಷಣದಲ್ಲಿ ಉಲ್ಲೇಖಿಸಲಾಗಿರುವ 11 ಪಾರಾಗಳನ್ನು ತಿದ್ದುಪಡಿ ಮಾಡುವಂತೆ ಅಥವಾ ಕೈಬಿಡುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ರಾಜ್ಯಪಾಲರ ಈ ಷರತ್ತಿಗೆ ನಕಾರ ವ್ಯಕ್ತಪಡಿಸಿದೆ. ಸರ್ಕಾರ ಬರೆದುಕೊಟ್ಟ ಭಾಷಣವನ್ನೇ ರಾಜ್ಯಪಾಲರು ಓದಬೇಕು ಎಂದು ಪಟ್ಟು ಹಿಡಿದಿದೆ. ಈ ವಿಚಾರವಾಗಿ

ಕರ್ನಾಟಕದಲ್ಲೂ ಗವರ್ನರ್‌ V/S ಗವರ್ನಮೆಂಟ್‌ ಸಂಘರ್ಷ Read More »

error: Content is protected !!
Scroll to Top