ರಾಜ್ಯ

ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನ ಭೀತಿಯಲ್ಲಿ ತಿಮರೋಡಿ

ಮನೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡ ಪ್ರಕಣ ಧರ್ಮಸ್ಥಳ : ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುರುವಾರ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ. ತನ್ನ ವಿರುದ್ಧ ದಾಖಲಾಗಿರುವ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಕೋರಿದ್ದರು. ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ್ […]

ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನ ಭೀತಿಯಲ್ಲಿ ತಿಮರೋಡಿ Read More »

ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈ ವರ್ಷದಿಂದಲೇ ರದ್ದು

ಉನ್ನತ ಆಯ್ಕೆ ಸಮಿತಿ ಆರಿಸಿದವರಿಗಷ್ಟೇ ಪ್ರಶಸ್ತಿ ಬೆಂಗಳೂರು: ಈ ವರ್ಷದಿಂದಲೇ ಜಾರಿಗೆ ಬರುವಂತೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ನಿಯಮ ಬದಲಾಗಲಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವ ಪ್ರಕ್ರಿಯೆಯನ್ನೇ ರಾಜ್ಯ ಸರ್ಕಾರ ಕೈಬಿಟ್ಟಿದೆ. ವರ್ಷದಿಂದ ವರ್ಷಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಹೊಸ ನಿಯಮ ಜಾರಿಗೊಳಿಸಲಾಗುತ್ತಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸುವ ಪ್ರಕ್ರಿಯೆ ಕೈಬಿಟ್ಟಿದೆ. ಈ ಬಗ್ಗೆ ಕನ್ನಡ

ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈ ವರ್ಷದಿಂದಲೇ ರದ್ದು Read More »

ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡುವಂತೆ ಕೇಂದ್ರಕ್ಕೆ ಸಿಎಂ ‌ಸಿದ್ದರಾಮಯ್ಯ ಮನವಿ

ಬೆಂಗಳೂರು: ನಮ್ಮ ಮೆಟ್ರೋಗೆ ವಾಲ್ಮೀಕಿ ಮಹರ್ಷಿಗಳ ಹೆಸರನ್ನು ಇರಿಸುವಂತೆ ಸಿ ಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನಮ್ಮ ಮೆಟ್ರೋವನ್ನು ನಡೆಸುತ್ತಿವೆ. ಈ ಕಾರಣದಿಂದ ರಾಜ್ಯ ಸರ್ಕಾರದಿಂದ ಬೆಂಗಳೂರಿನ ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡಲು ಸಾಧ್ಯವಿಲ್ಲ. ಹೀಗಾಗಿ ನಾನು ಕೇಂದ್ರ ಸರ್ಕಾರದ ಬಳಿ ಶಿಫಾರಸ್ಸು ಮಾಡಿದ್ದೇನೆ. ಕೇಂದ್ರ ಒಪ್ಪಿಕೊಳ್ಳಬೇಕು. ಮುಂದೇನಾಗುತ್ತದೆ ಎಂಬುದನ್ನು ನಿರೀಕ್ಷಿಸೋಣ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕ ವಿ. ಎಸ್. ಉಗ್ರಪ್ಪ ಅವರು ಪಠ್ಯದಲ್ಲಿ ವಾಲ್ಮೀಕಿ ಮತ್ತು

ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡುವಂತೆ ಕೇಂದ್ರಕ್ಕೆ ಸಿಎಂ ‌ಸಿದ್ದರಾಮಯ್ಯ ಮನವಿ Read More »

RSS ಮುಖಂಡ ಪ್ರೊ. ಕೃ. ನರಹರಿ ನಿಧನ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ, ಮಾಜಿ ಪರಿಷತ್ ಸದಸ್ಯ ಪ್ರೊ. ಕೃ. ನರಹರಿ(93) ಅವರು ನಿಧನರಾಗಿದ್ದಾರೆ‌. ಬೆಂಗಳೂರಿನಲ್ಲಿರುವ ತಮ್ಮ ಸ್ವ ಗೃಹದಲ್ಲಿ ವಯೋಸಹಜ ಸಮಸ್ಯೆಗಳಿಂದ ಅವರು ಇಹಲೋಕ ತ್ಯಜಿಸಿದ್ದಾರೆ. ಅವರು ಈ ಹಿಂದೆ RSS ನ ಕ್ಷೇತ್ರೀಯ ಕಾರ್ಯವಾಹರಾಗಿ, ರಾಷ್ಟ್ರೀಯ ಶಿಕ್ಷಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು. ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ನಡೆಸಿ ಜೈಲು ವಾಸ ಅನುಭವಿಸಿದ್ದರು‌. ಶ್ರೀಯುತರ ನಿಧನಕ್ಕೆ

RSS ಮುಖಂಡ ಪ್ರೊ. ಕೃ. ನರಹರಿ ನಿಧನ Read More »

ಮಚ್ಚಿನಿಂದ ಕೊಚ್ಚಿ ಬಿಜೆಪಿ ನಾಯಕನ ಬರ್ಬರ ಹತ್ಯೆ

ಬೆಂಗಳೂರು : ಸಿನಿಮಿಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ. ವೆಂಕಟೇಶ ಕುರುಬರ (31) ವರ್ಷ ಕೊಲೆಯಾದ ಬಿಜೆಪಿ ನಾಯಕ. ಕೊಪ್ಪಳ ರಸ್ತೆಯ ಲೀಲಾವತಿ ಆಸ್ಪತ್ರೆಯ ಮುಂಭಾಗದಲ್ಲಿ ಬುಧವಾರ ನಸುಕಿನ ಜಾವ 2 ಗಂಟೆಗೆ ಕಾರಿನಲ್ಲಿ ಆಗಮಿಸಿದ್ದ ಗ್ಯಾಂಗ್ ಕೊಲೆ ಮಾಡಿದೆ. ದೇವಿಕ್ಯಾಂಪ್‌ನಿಂದ ಗಂಗಾವತಿಗೆ ವೆಂಕಟೇಶ್‌ ಅವರು ಸ್ನೇಹಿತರ ಜೊತೆ ಊಟ ಮಾಡಿ ಬೈಕಿನಲ್ಲಿ ಬರುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಗ್ಯಾಂಗ್‌

ಮಚ್ಚಿನಿಂದ ಕೊಚ್ಚಿ ಬಿಜೆಪಿ ನಾಯಕನ ಬರ್ಬರ ಹತ್ಯೆ Read More »

ನಿರ್ಮಾಪಕರಿಗೆ ತಲೆನೋವಾದ ಕಾಂತಾರಾ ಪ್ರೇಕ್ಷಕರ ವರ್ತನೆ : ದೈವಾರಾಧನೆಯನ್ನು ನಕಲು ಮಾಡದಂತೆ ಮನವಿ

ಟಾಕೀಸು, ಸಾರ್ವಜನಿಕ ಸ್ಥಳಗಳಲ್ಲಿ ಆವೇಶ ಬಂದಂತೆ ವರ್ತಿಸುತ್ತಿರುವ ಪ್ರೇಕ್ಷಕರು ಬೆಂಗಳೂರು : ಕಾಂತಾರಾ ಚಾಪ್ಟರ್‌-1 ಚಿತ್ರ ನೋಡಿ ಕೆಲವು ಪ್ರೇಕ್ಷಕರು ಮಾಡುತ್ತಿರುವ ಹುಚ್ಚಾಟಗಳು ಚಿತ್ರದ ನಿರ್ಮಾಪಕರಿಗೆ ತಲೆನೋವಾಗಿ ಪರಿಣಮಿಸಿದೆ. ಚಿತ್ರಮಂದಿರದಲ್ಲೇ ದೈವ ಮೈಮೇಲೆ ಆವೇಶ ಆದಂತೆ ವರ್ತಿಸುತ್ತಿರುವ ಪ್ರೇಕ್ಷಕರು ದೈವಾರಾಧನೆಗೆ ಅಪಚಾರ ಮಡುತ್ತಿದ್ದಾರೆ. ಇಂಥ ಅನೇಕ ಹಲವು ವಿಡಿಯೋ ತುಣುಕುಗಳು ವೈರಲ್‌ ಆಗಿದ್ದು, ದೈವಾರಾಧನೆಯ ಮೂಲವಾದ ಕರಾವಳಿಯ ಜನರಿಂದ ಇಂಥ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೈವಾರಾಧನೆ ಅತ್ಯಂತ ಪವಿತ್ರವಾದ ಧಾರ್ಮಿಕ ಸಂಪ್ರದಾಯ. ಅದನ್ನು

ನಿರ್ಮಾಪಕರಿಗೆ ತಲೆನೋವಾದ ಕಾಂತಾರಾ ಪ್ರೇಕ್ಷಕರ ವರ್ತನೆ : ದೈವಾರಾಧನೆಯನ್ನು ನಕಲು ಮಾಡದಂತೆ ಮನವಿ Read More »

ಸರ್ಕಾರಿ, ಅನುದಾನಿತ ಶಾಲೆಗಳಿಗೆ ಅ. 18 ರ ವರೆಗೆ ರಜೆ: ಸಿಎಂ ‌ಸಿದ್ದರಾಮಯ್ಯ ಆದೇಶ

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅ. 18 ರ ವರೆಗೆ ದಸರಾ ರಜೆ ವಿಸ್ತರಣೆ ಮಾಡಿ ಸಿ ಎಂ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗಳು ನಡೆಯುತ್ತಿದ್ದು, ನಿಗದಿ ಮಾಡಿದ ಸಮಯಕ್ಕೆ ಸಮೀಕ್ಷೆ ಮುಗಿಯದ ಹಿನ್ನೆಲೆಯಲ್ಲಿ ಅ. 8 ರಿಂದ ಅ. 18 ರ ವರೆಗೆ ರಜೆಯನ್ನು ನೀಡುವಂತೆ ಆದೇಶ ಹೊರಡಿಸಲಾಗಿದೆ. ಸಿಎಂ ‌ಸಿದ್ದರಾಮಯ್ಯ ನೇತೃತ್ವದಲ್ಲಿ ಶಿಕ್ಷಣ ಸಚಿವರು ಸಭೆ ನಡೆಸಿದ್ದು, ಅದರಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ.

ಸರ್ಕಾರಿ, ಅನುದಾನಿತ ಶಾಲೆಗಳಿಗೆ ಅ. 18 ರ ವರೆಗೆ ರಜೆ: ಸಿಎಂ ‌ಸಿದ್ದರಾಮಯ್ಯ ಆದೇಶ Read More »

ನಟಿಗೆ ಲೈಂಗಿಕ ಕಿರುಕುಳ ಆರೋಪ : ನಿರ್ಮಾಪಕನ ಬಂಧನ

ಸಿನಿಮಾ ಶೂಟಿಂಗ್‌ ವೇಳೆ ನಟಿಗೆ ಕಿರುಕುಳ ನೀಡಿದ ದೂರು ಬೆಂಗಳೂರು : ನಟಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ‘ರಿಚ್ಚಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿ, ನಟಿಸಿ ನಿರ್ಮಾಣವನ್ನೂ ಮಾಡಿದ್ದ ಹೇಮಂತ್ ಎಂಬಾತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ರಿಚ್ಚಿ ಸಿನಿಮಾದ ಶೂಟಿಂಗ್‌ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಿಗ್ ಬಾಸ್ 11 ಸ್ಪರ್ಧಿಯೂ ಆಗಿರುವ ನಟಿ ದೂರು ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೇಮಂತ್‌ ಕುಮಾರ್‌ ಅವರನ್ನು

ನಟಿಗೆ ಲೈಂಗಿಕ ಕಿರುಕುಳ ಆರೋಪ : ನಿರ್ಮಾಪಕನ ಬಂಧನ Read More »

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಹೆಚ್ಚಳ

ಶೇ.5ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದ ಪರೀಕ್ಷಾ ಮಂಡಳಿ ಬೆಂಗಳೂರು : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ತುಸು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಾರಿ 10ನೇ ತರಗತಿ ವಾರ್ಷಿಕ ಪರೀಕ್ಷಾ ಶುಲ್ಕವನ್ನು ಶೇ.5 ಏರಿಕೆ ಮಾಡಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ. ಪ್ರಥಮ ಬಾರಿಗೆ ಹಾಜರಾಗುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ 676 ರೂ.ನಿಂದ 710 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅದರನ್ವಯ 2025-26ನೇ ಸಾಲಿನಲ್ಲಿ ನಡೆಯಲಿರುವ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಹೆಚ್ಚಳ Read More »

ಜಾತಿ ಗಣತಿಗಾಗಿ ಶಾಲಾ ಸಮಯವೇ ಬದಲು : ಬೆಳಗ್ಗೆ 8 ಗಂಟೆಗೆ ಶುರು

ಮಧ್ಯಾಹ್ನದ ತನಕ ಪಾಠ ಬಳಿಕ ಗಣತಿಗಾಗಿ ಮನೆ ಮನೆಗೆ ಭೇಟಿ ಬೆಂಗಳೂರು : ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನ​ ಜಾತಿ ಗಣತಿ ಮುಗಿಯದ ಹಿನ್ನೆಲೆ ಅವಧಿ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯ ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಮಂಗಳವಾರಕ್ಕೆ (ಅ.7) ಅಂತ್ಯವಾಗಬೇಕಿದ್ದ ಸರ್ವೇ ಕಾರ್ಯವನ್ನು ಅ.12ರವರೆಗೂ, ಬೆಂಗಳೂರಿನಲ್ಲಿ 1 ವಾರ ತಡವಾಗಿಶುರುವಾಗಿರುವ ಕಾರಣ ಅ.24ರವರೆಗೂ ವಿಸ್ತರಿಸಲಾಗಿದೆ.

ಜಾತಿ ಗಣತಿಗಾಗಿ ಶಾಲಾ ಸಮಯವೇ ಬದಲು : ಬೆಳಗ್ಗೆ 8 ಗಂಟೆಗೆ ಶುರು Read More »

error: Content is protected !!
Scroll to Top