ರಾಜ್ಯ

ಬಿಜೆಪಿ ಬಗ್ಗೆ ಹೊಸ ಬಾಂಬ್ ಸಿಡಿಸಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಬಿಜೆಪಿಯ ಹೊಸ ಆಫರ್ ಕುರಿತಂತೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಕೊನೆಯಾಗುವ ಕಾಲದಲ್ಲಿ ಪಕ್ಷಕ್ಕೆ ನಿಷ್ಟೆ ತೋರಿ ಜೈಲು ವಾಸವನ್ನು ಆಯ್ಕೆ ಮಾಡಿಕೊಂಡೆ ಎಂದು ಅವರು ತಿಳಿಸಿದ್ದಾರೆ. ಸುಮಾರು ಹತ್ತು ಮಂದಿ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು‌‌‌. ಆ ಸಮಯದಲ್ಲಿ ಕನಕಪುರದಲ್ಲಿದ್ದ ನಾನು ಬೆಂಗಳೂರಿಗೆ ಬಂದು ಐದಾರು ಜನರನ್ನು ಮತ್ತೆ ಕ್ವಾಟ್ರಸ್‌ಗೆ ಕರೆ ತಂದೆ‌. ಆಗ ನನಗೊಬ್ಬ ಇನ್‌ಕಂ ಟ್ಯಾಕ್ಸ್ ಅಧಿಕಾರಿ ಕರೆ ಮಾಡಿದ್ದರು. […]

ಬಿಜೆಪಿ ಬಗ್ಗೆ ಹೊಸ ಬಾಂಬ್ ಸಿಡಿಸಿದ ಡಿ.ಕೆ. ಶಿವಕುಮಾರ್ Read More »

ಮುಖ್ಯಮಂತ್ರಿಗೆ ಇನ್ನೊಂದು ಪತ್ರ ಬರೆದ ಪ್ರಿಯಾಂಕ್‌ ಖರ್ಗೆ

ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಲು ಆಗ್ರಹ ಬೆಂಗಳೂರು : ಸರ್ಕಾರಿ ಶಾಲೆಯ ಆವರಣ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಬಿಜೆಪಿ ಮತ್ತು ಸಂಘ ಪರಿವಾರದ ಆಕ್ರೋಶಕ್ಕೆ ಗುರಿಯಾಗಿರುವ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಇದೀಗ ಮುಖ್ಯಮಂತ್ರಿಗಳಿಗೆ ಮತ್ತೊಂದು ಪತ್ರ ಬರೆದು ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಆರ್​ಎಸ್​ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಸರ್ಕಾರಿ

ಮುಖ್ಯಮಂತ್ರಿಗೆ ಇನ್ನೊಂದು ಪತ್ರ ಬರೆದ ಪ್ರಿಯಾಂಕ್‌ ಖರ್ಗೆ Read More »

ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಒಡ್ಡಿದ ವ್ಯಕ್ತಿಯ ಗುರುತು ಪತ್ತೆ

ಬೆದರಿಕೆ ಹಿನ್ನೆಲೆ ಸಚಿವರಿಗೆ ಭದ್ರತೆ ಹೆಚ್ಚಳ ಬೆಂಗಳೂರು: ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧಿಸಬೇಕೆಂದು ಪತ್ರ ಬರೆದ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕರೆ ಮಾಡಿದ್ದ ವ್ಯಕ್ತಿಯ ಮೂಲ ಪತ್ತೆ ಹಚ್ಚಿದ್ದಾರೆ. ಕರೆ ಮಾಡಿದ ವ್ಯಕ್ತಿಯನ್ನು ಮಹಾರಾಷ್ಟ್ರದ ಸೋಲಾಪುರ ಮೂಲದ ದಾನೇಶ್ ನರೋಣ ಎಂದು ತಿಳಿದುಬಂದಿದೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದಕ್ಕೆ ವ್ಯಕ್ತಿಯೋರ್ವ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಬೆದರಿಕೆ ಹಾಕಿ ಅವಾಚ್ಯ ಪದಗಳಿಂದ ನಿಂದಿಸಿದ್ದ. ಈ ಕುರಿತು ಪ್ರಿಯಾಂಕ್ ಖರ್ಗೆ ದೂರು ನೀಡಲು

ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಒಡ್ಡಿದ ವ್ಯಕ್ತಿಯ ಗುರುತು ಪತ್ತೆ Read More »

ದೀಪಾವಳಿಗೂ ಇಲ್ಲ ಗೃಹಲಕ್ಷ್ಮೀ ಹಣ

ನಾಲ್ಕು ತಿಂಗಳಿಂದ ಖಾತೆಗೆ ಹಣ ಬಂದಿಲ್ಲ ಎಂದು ಮಹಿಳೆಯರ ದೂರು ಬೆಂಗಳೂರು: ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಕಳೆದ 3-4 ತಿಂಗಳಿಂದ ಮಹಿಳೆಯರ ಅಕೌಂಟ್‌ಗೆ ಜಮೆಯಾಗಿಲ್ಲ. ದೀಪಾವಳಿ ಸಮಯದಲ್ಲಾದರೂ ಗೃಹಲಕ್ಷ್ಮೀ ಹಣ ಸಿಗಬಹುದು ಎಂದು ಕಾದಿದ್ದವರಿಗೆ ನಿರಾಸೆಯಾಗಿದೆ. ಸರ್ಕಾರದಿಂದ ಇನ್ನೂ ಹಣ ಬಿಡುಗಡೆ ಮಾಡುವ ಬಗ್ಗೆ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯೇ ಹೆಚ್ಚು ಜನರನ್ನು ತಲುಪಿತ್ತು. ಮಹಿಳೆಯರ ಮನಗೆದ್ದಿದ್ದ ಈ ಯೋಜನೆ ಈಗ ಕುಂಟಲಾರಂಭಿಸಿದೆ. ಕಳೆದ 4

ದೀಪಾವಳಿಗೂ ಇಲ್ಲ ಗೃಹಲಕ್ಷ್ಮೀ ಹಣ Read More »

ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸ್‌ ಆಗಲು ಶೇ.33 ಅಂಕ ಸಾಕು

ಫಲಿತಾಂಶ ಹೆಚ್ಚಿಸಲು ಕನಿಷ್ಠ ಅಂಕ ಮಿತಿ ಇಳಿಕೆ ಬೆಂಗಳೂರು: ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಶೇ. 33 ಅಂಕ ಪಡೆದರೆ ಸಾಕು. ಸರ್ಕಾರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತೇರ್ಗಡೆಗೆ ಇದ್ದ ಕನಿಷ್ಠ ಅಂಕಮಿತಿಯನ್ನು ಇನ್ನಷ್ಟು ಕಡಿಮೆಗೊಳಿಸಿದ್ದು, ಈ ಮೂಲಕ ಫಲಿತಾಂಶ ಹೆಚ್ಚಿಸುವ ಪ್ರಯತ್ನ ಮಾಡಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.33 ಅಂಕ ಪಡೆದರೆ ಉತ್ತೀರ್ಣ ಎಂದು ಘೋಷಿಸಲಾಗುವುದು. ಈ ವರ್ಷದಿಂದಲೇ ಖಾಸಗಿ ಶಾಲೆಗಳಿಗೂ ಇದು ಅನ್ವಯ ಆಗಲಿದೆ ಎಂದು ಶಿಕ್ಷಣ ಸಚಿವ ಮಧು

ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸ್‌ ಆಗಲು ಶೇ.33 ಅಂಕ ಸಾಕು Read More »

ಜಾತಿ ಗಣತಿಗೆ ಮಾಹಿತಿ ನೀಡಲು ನಿರಾಕರಿಸಿದ ಇನ್ಫೋಸಿಸ್‌ ನಾರಾಯಣ ಮೂರ್ತಿ ದಂಪತಿ

ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ ಎಂದು ಹಿಂದೇಟು ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ನಡೆಸುತ್ತಿರುವ ಜಾತಿ ಗಣತಿಗೆ ಮಾಹಿತಿ ನೀಡಲು ಇನ್ಫೋಸಿಸ್‌ ಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ನಿರಾಕರಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿದ್ದು, ನಾರಾಯಣ ಮೂರ್ತಿ ದಂಪತಿ ಈ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಎನ್‌.ಆರ್‌. ನಾರಾಯಣಮೂರ್ತಿ ಸ್ವಯಂ ದೃಢೀಕರಣ

ಜಾತಿ ಗಣತಿಗೆ ಮಾಹಿತಿ ನೀಡಲು ನಿರಾಕರಿಸಿದ ಇನ್ಫೋಸಿಸ್‌ ನಾರಾಯಣ ಮೂರ್ತಿ ದಂಪತಿ Read More »

ವೈದ್ಯೆ ಪತ್ನಿಯನ್ನು ಪತಿಯೇ ಕೊಂದ ಪ್ರಕರಣ : ಮಗಳ 4 ಕೋಟಿ ರೂ. ಮೌಲ್ಯದ ಮನೆಯನ್ನು ಇಸ್ಕಾನ್‌ಗೆ ದಾನ ಮಾಡಿದ ತಂದೆ

ಅನಾರೋಗ್ಯವಿದ್ದ ಪತ್ನಿಯನ್ನು ಅನೆಸ್ತೇಶಿಯ ಇಂಜೆಕ್ಷನ್‌ ನೀಡಿ ಕೊಂದಿದ್ದ ಟಾಕ್ಟರ್‌ ಪತಿ ಬೆಂಗಳೂರು: ನಗರದಲ್ಲಿ ವೈದ್ಯೆಯೊಬ್ಬರನ್ನು ಆಕೆಯ ಡಾಕ್ಟರ್‌ ಪತಿಯೇ ಅನೆಸ್ತೇಶಿಯ ಇಂಜೆಕ್ಷನ್‌ ಕೊಟ್ಟು ಕೊಲೆ ಮಾಡಿದ ಪ್ರಕರಣ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ಮಗಳ ಸಾವಿನಿಂದ ತೀವ್ರ ನೊಂದಿರುವ ತಂದೆ ಮಗಳಿಗಾಗಿ ಕಟ್ಟಿಸಿದ್ದ 4 ಕೋ.ರೂ. ಮೌಲ್ಯದ ಮನೆಯನ್ನು ಇಸ್ಕಾನ್‌ಗೆ ದಾನ ಮಾಡಿದ್ದಾರೆ. ಮಗಳ ಸಾವಿನ ನೋವಿನಲ್ಲಿ ತಂದೆ ಮುನಿರೆಡ್ಡಿ ಮಗಳು ವಾಸವಿದ್ದ ಮನೆಯನ್ನು ಇಸ್ಕಾನ್‌ಗೆ ದಾನ ಮಾಡಿದ್ದಾರೆ. ಮಗಳಿಗಾಗಿ ನಾಲ್ಕು ಕೋಟಿ ಖರ್ಚು ಮಾಡಿ ಮನೆ ಕಟ್ಟಿದ್ದರು.

ವೈದ್ಯೆ ಪತ್ನಿಯನ್ನು ಪತಿಯೇ ಕೊಂದ ಪ್ರಕರಣ : ಮಗಳ 4 ಕೋಟಿ ರೂ. ಮೌಲ್ಯದ ಮನೆಯನ್ನು ಇಸ್ಕಾನ್‌ಗೆ ದಾನ ಮಾಡಿದ ತಂದೆ Read More »

ಬೆಂಗಳೂರಲ್ಲೇ ಇತ್ತು ಸೈಬರ್‌ ಖದೀಮರ ಡಿಜಿಟಲ್‌ ಅರೆಸ್ಟ್‌ ಕಂಪನಿ

ಡಿಜಿಟಲ್‌ ಅರೆಸ್ಟ್‌ ಮಾಡಿ ಕೋಟಿಗಟ್ಟಲೆ ಹಣ ಸುಲಿಯುತ್ತಿದ್ದ ಆಫೀಸ್‌ ಮೇಲೆ ದಾಳಿ ಬೆಂಗಳೂರು : ದೇಶ ವಿದೇಶಗಳ ಅಮಾಯಕ ಜನರನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಕೋಟಿಗಟ್ಟಲೆ ಹಣ ದೋಚುತ್ತಿದ್ದ ಸೈಬರ್‌ ಖದೀಮರ ಕಚೇರಿ ಬೆಂಗಳೂರಿನಲ್ಲೇ ಇತ್ತು ಎಂಬುದು ಈಗ ಬಯಲಾಗಿದೆ. ಹಲವು ಐಟಿ ಕಂಪನಿಗಳಿರುವ ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಸೈಬರ್ ಕಂಪನಿ ಕೂಡ ಪತ್ತೆಯಾಗಿದೆ. ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಜನರಲ್ಲಿ ಭಯ ಹುಟ್ಟಿಸಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಗಳು ಈ ಕಚೇರಿಗೆ ಜೊತೆಗೆ ನಂಟು ಹೊಂದಿರುವ

ಬೆಂಗಳೂರಲ್ಲೇ ಇತ್ತು ಸೈಬರ್‌ ಖದೀಮರ ಡಿಜಿಟಲ್‌ ಅರೆಸ್ಟ್‌ ಕಂಪನಿ Read More »

ಉದ್ಯಮಗಳು ಕರ್ನಾಟಕವನ್ನೇ ನಿಷೇಧಿಸುತ್ತಿವೆ : ಆರ್‌. ಅಶೋಕ್‌ ವ್ಯಂಗ್ಯ

ಕೈತಪ್ಪಿದ ಗೂಗಲ್‌ AI-ಹಬ್‌ ಹಿನ್ನೆಲೆಯಲ್ಲಿ ಟೀಕೆ ಬೆಂಗಳೂರು: ಇಲ್ಲಿ ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್‌ ನಿಷೇಧ ಮಾಡುವ ಚಿಂತೆಯಲ್ಲಿದ್ದರೆ, ಅಲ್ಲಿ ಉದ್ಯಮಗಳು ಕರ್ನಾಟಕವನ್ನೇ ನಿಷೇಧ ಮಾಡುತ್ತಿವೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಭಾರತದಲ್ಲಿ ಮೊದಲ AI-ಹಬ್‌ಗಾಗಿ Google ಬರೊಬ್ಬರಿ 15 ಶತಕೋಟಿ ಡಾಲರ್ ಹೂಡಿಕೆ ಮಾಡಲಿದ್ದು, ಈ ಬೃಹತ್ ಯೋಜನೆ ಆಂಧ್ರಪ್ರದೇಶದ ಪಾಲಾಗಿದೆ, ಇದರಿಂದ ರಾಜ್ಯಕ್ಕೆ 10,000 ಕೋಟಿ ರೂ ಆದಾಯ ಹಾಗೂ 30,000 ಉದ್ಯೋಗ ಕೈತಪ್ಪಿದಂತಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ

ಉದ್ಯಮಗಳು ಕರ್ನಾಟಕವನ್ನೇ ನಿಷೇಧಿಸುತ್ತಿವೆ : ಆರ್‌. ಅಶೋಕ್‌ ವ್ಯಂಗ್ಯ Read More »

ಬೆಂಗಳೂರಿನಲ್ಲಿ ಕಂಬಳ ನಡೆಸಲು ಹೈಕೋರ್ಟ್‌ ಅನುಮತಿ

ಕರಾವಳಿಯಿಂದ ಹೊರಗೆ ಕಂಬಳ ನಡೆಸಲು ಇದ್ದ ಅಡ್ಡಿ ನಿವಾರಣೆ ಮಂಗಳೂರು : ಕರಾವಳಿಯಿಂದ ಹೊರಗೆ ಕಂಬಳ ನಡೆಸುವುದಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಕಂಬಳ ಆಯೋಜನೆಗೆ ಪೇಟಾದವರು ತಕರಾರು ಮಾಡಿದ ಹಿನ್ನೆಲೆಯಲ್ಲಿ ನಿಂತು ಹೋಗಿದ್ದ ಮೈಸೂರು, ಬೆಂಗಳೂರು ಹಾಗೂ ಶಿವಮೊಗ್ಗ ಕಂಬಳ ನಡೆಸಲು ಹೈಕೋಟ್೯ ನಿನ್ನೆ ಅನುಮತಿ ನೀಡಿದೆ. ಪುತ್ತೂರು ಶಾಸಕ ಅಶೋಕ್‌ ರೈಯವರು ಬೆಂಗಳೂರಿನಲ್ಲಿ ಕಂಬಲ ಆಯೋಜಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಆದರೆ ಅದರ ಮರುವರ್ಷ ಬೆಂಗಳೂರಿನಲ್ಲಿ ಮತ್ತೆ ಕಂಬಳ ನಡೆಸಲು ಮುಂದಾದಾಗ ಪೆಟಾ ತಕರಾರು ತೆಗೆದು

ಬೆಂಗಳೂರಿನಲ್ಲಿ ಕಂಬಳ ನಡೆಸಲು ಹೈಕೋರ್ಟ್‌ ಅನುಮತಿ Read More »

error: Content is protected !!
Scroll to Top