ಶಾಲಾ ಆವರಣಗಳಲ್ಲಿ ಕಾರ್ಯಕ್ರಮ ನಿಷೇಧಿಸಲು ಜಗದೀಶ್ ಶೆಟ್ಟರ್ ಸುತ್ತೋಲೆ ಹೊರಡಿಸಿದ್ದಕ್ಕೆ ಸಾಕ್ಷಿ ಇಲ್ಲ : ಆರ್. ಅಶೋಕ್
ಕಾಂಗ್ರೆಸ್ ಸರ್ಕಾರದಿಂದ ರೌಡಿಯಿಸಂ, ಬೆದರಿಕೆ ತಂತ್ರ ಎಂದು ಆರೋಪ ಬೆಂಗಳೂರು : ಶಾಲಾ ಆವರಣದಲ್ಲಿ ಹೊರಗಿನ ಸಂಘಟನೆಗಳಿಂದ ಕಾರ್ಯಕ್ರಮ ಮಾಡುವುದನ್ನು ನಿಷೇಧಿಸುವ ಬಗ್ಗೆ ಹಿಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆದೇಶ ಮಾಡಿರುವುದಕ್ಕೆ ಸಾಕ್ಷಿ ಇಲ್ಲ. ಇದು ಅಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಚರ್ಚೆಯಾಗಿರಲಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಚಾಮರಾಜಪೇಟೆಯ ಒಂದು ಶಾಲೆಗೆ ಸಂಬಂಧಿಸಿದಂತೆ ಒಂದು ಆದೇಶವಾಗಿತ್ತು. ಇದನ್ನು ಎಲ್ಲದ್ದಕ್ಕೂ ಅನ್ವಯಿಸಿ ಮಾರ್ಪಾಡು ಮಾಡಿ ಈಗಿನ ಸರ್ಕಾರ ಆದೇಶ ಮಾಡಿದೆ. ಜಗದೀಶ್ ಶೆಟ್ಟರ್ ಅಥವಾ […]









