ರಾಜ್ಯ

ತಲೆಮರೆಸಿಕೊಂಡಿರುವ ಉಗ್ರನ ಸುಳಿವಿಗೆ 5 ಲ.ರೂ. ಬಹುಮಾನ ಘೋಷಿಸಿದ ಎನ್‌ಐಎ

ಮೂರು ವರ್ಷಗಳಿಂದ ತಪ್ಪಿಸಿಕೊಂಡಿರುವ ಲಷ್ಕರ್‌ನ ಉಗ್ರ ಬೆಂಗಳೂರು: ಮೋಸ್ಟ್‌ ವಾಂಟೆಡ್‌ ಉಗ್ರ ಜುನೈದ್‌ ಅಹಮ್ಮದ್‌ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದೆ. ಮೋಸ್ಟ್ ವಾಂಟೆಡ್ ಲಷ್ಕರ್ ಎ ತೊಯ್ಬಾ ಉಗ್ರನಿಗಾಗಿ ಕಳೆದ ಮೂರು ವರ್ಷದಿಂದ ಎನ್‌ಐಎ ಅಧಿಕಾರಿಗಳು ದೇಶ, ಹೊರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಶಂಕಿತ ಉಗ್ರ ಜುನೈದ್ ಬಗ್ಗೆ ಸುಳಿವು ಸಿಕ್ಕಿಲ್ಲ. ಹಾಗಾಗಿ, ಉಗ್ರನ ಸುಳಿವು ಕೊಟ್ಟರೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ನಗರದ ಜನನಿಬಿಡ […]

ತಲೆಮರೆಸಿಕೊಂಡಿರುವ ಉಗ್ರನ ಸುಳಿವಿಗೆ 5 ಲ.ರೂ. ಬಹುಮಾನ ಘೋಷಿಸಿದ ಎನ್‌ಐಎ Read More »

ಶಿವಾಜಿ ಜಯಂತಿ ಮೇಲೆ ಕಲ್ಲು, ಚಪ್ಪಲಿ ತೂರಿದ ದುಷ್ಕರ್ಮಿಗಳು : ಪರಿಸ್ಥಿತಿ ಉದ್ವಿಗ್ನ

ಮಸೀದಿಯಿಂದ ಕಲ್ಲು ತೂರಾಟ ನಡೆಸಿದ್ದಾರೆಂದು ಆರೋಪ ಬೆಂಗಳೂರು: ಶಿವಾಜಿ ಭಾವಚಿತ್ರ ಮೆರವಣಿಗೆ ಮೇಲೆ ದುಷ್ಕರ್ಮಿಗಳು ಕಲ್ಲು, ಚಪ್ಪಲಿ ತೂರಾಟ ನಡೆಸಿರುವ ಘಟನೆ ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ನಡೆದಿದೆ. ಘಟನೆಯಲ್ಲಿ ಪೊಲೀಸ್​​ ಸಿಬ್ಬಂದಿ ಸೇರಿ ಕೆಲವರು ಗಾಯಗೊಂಡಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆ ನಡೆದ ಮರುಕ್ಷಣವೇ ಜನರನ್ನು ಚದುರಿಸಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದ್ದು, ಮುಂಜಾಗೃತಾ ಕ್ರಮವಾಗಿ ಪಂಕಾ ಮಸೀದಿ ಮತ್ತು ಕೊತ್ತಲೇಶ್ವರ ದೇಗುಲ ಬಳಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಯಾವುದೇ ಅನಾಹುತ ನಡೆಯದಂತೆ ನೋಡಿಕೊಳ್ಳಲು ಪೊಲೀಸ್​​

ಶಿವಾಜಿ ಜಯಂತಿ ಮೇಲೆ ಕಲ್ಲು, ಚಪ್ಪಲಿ ತೂರಿದ ದುಷ್ಕರ್ಮಿಗಳು : ಪರಿಸ್ಥಿತಿ ಉದ್ವಿಗ್ನ Read More »

ಕೆಲಸಕ್ಕೆ ತೆರಳಿದ್ದ ಯುವಕ ಶವವಾಗಿ ಪತ್ತೆ

ಹಾಸನ: ಕೆಲಸಕ್ಕೆಂದು ಫ್ಯಾಕ್ಟರಿಗೆ ಹೋಗಿದ್ದ ಯುವಕ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಹನುಮಂತಪುರ ಸಮೀಪ ನಡೆದಿದೆ. ಮೃತ ಯುವಕನನ್ನು ಪುನೀತ್(27) ಎಂದು ಗುರುತಿಸಲಾಗಿದೆ. ಕಳೆದ ಆರು ತಿಂಗಳಿನಿಂದ ಹನುಮಂತಪುರ ಬಳಿಯ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಕೆಲಸಕ್ಕೆ ಸೇರಿದ್ದ. ಆತ ಎಂದಿನಂತೆ ಬುಧವಾರ ಸಹ ಸಮವಸ್ತ್ರ ಧರಿಸಿ ಕೆಲಸಕ್ಕೆಂದು ಹೋಗಿದ್ದಾಗಿ ತಿಳಿದು ಬಂದಿದೆ. ಪುನೀತ್ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದಿರುವ ಪೊಲೀಸರು, ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸಾವಿಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಕೆಲಸಕ್ಕೆ ತೆರಳಿದ್ದ ಯುವಕ ಶವವಾಗಿ ಪತ್ತೆ Read More »

ಹೆಸರು ಬದಲಾಯಿಸಲು ಹೇಳಿದ ವ್ಯಕ್ತಿಗೆ ಖಡಕ್ ತಿರುಗೇಟು ಕೊಟ್ಟ ಗಾಯಕಿ ಸುಹಾನ ಸೈಯದ್

ಬೆಂಗಳೂರು: ತಮ್ಮ ಹೆಸರನ್ನು ಸವದತ್ತಿ ಎಲ್ಲಮ್ಮ ಎಂದು ಯಾಕೆ ಬದಲಾಯಿಸಿಕೊಳ್ಳಬಾರದು ಎಂದು ಇನ್ಸ್ಟಾ‌ಗ್ರಾಮ್ ಮೂಲಕ ಪ್ರಶ್ನೆ ಕೇಳಿದ ವ್ಯಕ್ತಿಗೆ ಸೂಕ್ತ ತಿರುಗೇಟು ನೀಡಿದ್ದಾರೆ ಗಾಯಕಿ ಸುಹಾನ ಸೈಯದ್. ಸುಹಾನ ಅವರು ಇತ್ತೀಚೆಗಷ್ಟೇ ತಮ್ಮ ಹಿಂದೂ ಗೆಳೆಯನ ಜೊತೆಗೆ ಮಂತ್ರ ಮಾಂಗಲ್ಯದ ಮೂಲಕ ವಿವಾಹವಾಗಿದ್ದರು. ಆ ಬಳಿಕ ತಮ್ಮ ಪತಿಯ ಜೊತೆ ದೇವಾಲಯಗಳಿಗೆ ತೆರಳಿದ ಹಲವಾರು ಫೋಟೋ‌ಗಳನ್ನು ‌ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರಿಂದಾಗಿ ಸುಹಾನಾಗೆ ವ್ಯಕ್ತಿಯೊಬ್ಬ ಇನ್ಸ್ಟಾ ಸೆಷನ್‌ನಲ್ಲಿ ಹೆಸರು ಬದಲಾವಣೆಯ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ

ಹೆಸರು ಬದಲಾಯಿಸಲು ಹೇಳಿದ ವ್ಯಕ್ತಿಗೆ ಖಡಕ್ ತಿರುಗೇಟು ಕೊಟ್ಟ ಗಾಯಕಿ ಸುಹಾನ ಸೈಯದ್ Read More »

ಪತ್ನಿಯನ್ನು ಕತ್ತು ಬಿಗಿದು ಕೊಂದ ಇಸ್ರೋ ನಿವೃತ್ತ ಉದ್ಯೋಗಿ

ತಾನು ಸತ್ತರೆ ಪತ್ನಿ ಅನಾಥಳಾಗುತ್ತಾಳೆ ಎಂದು ಕೃತ್ಯ ಬೆಂಗಳೂರು: ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ಪತ್ನಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯದ ಅವಲಹಳ್ಳಿ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಟವಲ್‌ನಿಂದ ಕತ್ತು ಬಿಗಿದು ನಾಗೇಶ್ವರ್‌ ರಾವ್‌ ಎಂಬಾತ (75) ಪತ್ನಿ ಸಂಧ್ಯಾ (65) ಅವರನ್ನು ಕೊಲೆ ಮಾಡಿದ್ದಾನೆ. ಮೂರು ವರ್ಷಗಳಿಂದ ಅಪಾರ್ಟ್‌ಮೆಂಟ್‌ನಲ್ಲಿ ದಂಪತಿ ವಾಸವಿದ್ದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್‌ ರಾವ್‌ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದ. ತಾನು ಆತ್ಮಹತ್ಯೆ ಮಾಡಿದರೆ ಪತ್ನಿ ಒಂಟಿಯಾಗುತ್ತಾಳೆ. ಆಕೆಯನ್ನು

ಪತ್ನಿಯನ್ನು ಕತ್ತು ಬಿಗಿದು ಕೊಂದ ಇಸ್ರೋ ನಿವೃತ್ತ ಉದ್ಯೋಗಿ Read More »

ಇಂದು ಸಾರಿಗೆ ನೌಕರರ ಬೆಂಗಳೂರು ಚಲೋ ಪ್ರತಿಭಟನೆ

ಸರ್ಕಾರದ ಜೊತೆಗಿನ ಮಾತುಕತೆ ವಿಫಲ; ಮುಷ್ಕರ ಸಾಧ್ಯತೆ ಬೆಂಗಳೂರು: ವಿವಿಧ ಬೇಡಿಕೆಗೆ ಆಗ್ರಹಿಸಿ ಸಿಡಿದೆದ್ದಿರುವ ಸಾರಿಗೆ ನೌಕರರ ಮನವೊಲಿಸುವ ಪ್ರಯತ್ನ ವಿಫಲಗೊಂಡಿದೆ. ಸರ್ಕಾರ ಕೊಟ್ಟಿರುವ ಆಫರ್‌ಗೆ ಬಗ್ಗದ ನೌಕರರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಸಂಪೂರ್ಣ ಬೇಡಿಕೆ ಈಡೇರಲೇಬೇಕು ಏಂಬ ಬೇಡಿಕೆಯೊಂದಿಗೆ ಇಂದು ಬೆಂಗಳೂರು ಚಲೋಗೆ ಮುಂದಾಗಿದ್ದಾರೆ. ಸಾರಿಗೆ ನೌಕರರು ಹೋರಾಟ ಜೋರಾಗುವ ಸಾಧ್ಯತೆ ಕಂಡುಕೊಂಡ ನಿನ್ನೆ ಸರ್ಕಾರ, ನೌಕರರನ್ನು ಸಮಾಧಾನ ಪಡಿಸುವ ಯತ್ನಕ್ಕೆ ಮುಂದಾದರೂ ಪ್ರಯೋಜನ ಆಗಿಲ್ಲ. ನೌಕರರ ಬೇಡಿಕೆ ಪ್ರಕಾರ ಸರ್ಕಾರ 38 ತಿಂಗಳ ಹಿಂಬಾಕಿ

ಇಂದು ಸಾರಿಗೆ ನೌಕರರ ಬೆಂಗಳೂರು ಚಲೋ ಪ್ರತಿಭಟನೆ Read More »

ವಿಧಾನಸೌಧದಲ್ಲಿ ಮಾದ್ಯಮಗಳ ನಿರ್ಬಂಧ: ಬಿ.ವೈ. ವಿಜಯೇಂದ್ರ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಕಿಡಿ ಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಇದೊಂದು ಅಯೋಗ್ಯ ಸರ್ಕಾರ ಎಂದು ಹೇಳಿದ್ದಾರೆ. ವಿಧಾನ ಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದನ್ನು ಖಂಡಿಸಿದ ಅವರು ಇದೊಂದು ನಾಲಾಯಕ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನದ್ದು ಪ್ರಜಾಪ್ರಭುತ್ವವನ್ನು ಅಣಕಿಸುವ ನಡೆ ಎಂದು ಟೀಕಿಸಿರುವ ಅವರು, ಮಾಧ್ಯಮ ನಿರ್ಬಂಧ ಒಂದು ಪ್ರಜಾಪ್ರಭುತ್ವದ ವಿರೋಧಿ ನಡೆ. ಅಧಿವೇಶನದಲ್ಲಿ ದ್ವೇಷ ಭಾಷಣ ವಿರೋಧಿ ಕಾಯ್ದೆ ಜಾರಿಗೆ ತಂದ ಕಾಂಗ್ರೆಸ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕ್ ಪರ

ವಿಧಾನಸೌಧದಲ್ಲಿ ಮಾದ್ಯಮಗಳ ನಿರ್ಬಂಧ: ಬಿ.ವೈ. ವಿಜಯೇಂದ್ರ ಆಕ್ರೋಶ Read More »

ಜನ್ಮದಿನದಂದೇ ಅಪಘಾತದಲ್ಲಿ ಯುವಕ ಮೃತ್ಯು

ಬೆಂಗಳೂರು: ತನ್ನ ಜನ್ಮದಿನದಂದೇ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೆಂಗಳೂರು ಉತ್ತರದ ಐವರಕಂಡಪುರದಲ್ಲಿ ನಡೆದಿದೆ. ಪವನ್ (24) ಎಂಬಾತನೇ ಮೃತ ದುರ್ದೈವಿ. ಗೆಳೆಯರ ಜೊತೆಗೆ ಬರ್ತ್‌ಡೇ ಮಾಡಿ ಪವನ್ ಮನೆಗೆ ತೆರಳುತ್ತಿದ್ದು ಈ ವೇಳೆ ಆತನ ಬೈಕ್‌ಗೆ ಎದುರಿನಿಂದ ಬರುತ್ತಿದ್ದ ಗೂಡ್ಸ್ ‌ವಾಹನ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ‌ಪವನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸೋಲದೇವನಹಳ್ಳಿ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷಾ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜನ್ಮದಿನದಂದೇ ಅಪಘಾತದಲ್ಲಿ ಯುವಕ ಮೃತ್ಯು Read More »

ನಂದಿನಿ ಉತ್ಪನ್ನಗಳು ಸುರಕ್ಷಿತವಾಗಿವೆ: KMF ಸ್ಪಷ್ಟನೆ

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಅವುಗಳು ಸುರಕ್ಷಿತವಲ್ಲ ಎನ್ನುವ ತಪ್ಪು ಸಂದೇಶ ರವಾನೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಸಂಸ್ಥೆಯು ತಮ್ಮ ಉತ್ಪನ್ನಗಳು ಸುರಕ್ಷಿತವಾಗಿವೆ ಎನ್ನುವುದಾಗಿ ಮಾಹಿತಿ ನೀಡಿದೆ. ಹಾಗೆಯೇ ಸುಳ್ಳು ಆರೋಪಗಳನ್ನು ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಹ ಕರ್ನಾಟಕ ಹಾಲು ಒಕ್ಕೂಟ ನೀಡಿದೆ. ನಂದಿನಿ ಉತ್ಪನ್ನಗಳ ವಿಚಾರದಲ್ಲಿ ಸಂಸ್ಥೆಯು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಎಲ್ಲಾ ಸೂಚನೆಗಳನ್ನು, ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದೆ. ನಂದಿನಿ ಹಾಲು

ನಂದಿನಿ ಉತ್ಪನ್ನಗಳು ಸುರಕ್ಷಿತವಾಗಿವೆ: KMF ಸ್ಪಷ್ಟನೆ Read More »

ಕೆಲಸ ಮಾಡುತ್ತಿದ್ದ ಮನೆಯಿಂದ 200 ಗ್ರಾಂ ಚಿನ್ನ ಕದ್ದು ಸೈಟ್ ಖರೀದಿಸಿದ ಕಳ್ಳಿ

ಬೆಂಗಳೂರು: ಕೆಲಸಕ್ಕಿದ್ದ ಮನೆಯಿಂದ 200 ಗ್ರಾಂ ಚಿನ್ನಾಭರಣ ಎಗರಿಸಿ, ಅದರಿಂದ ಸಿಕ್ಕ ಹಣವನ್ನು ಬಳಸಿ ತಮಿಳುನಾಡಿನಲ್ಲಿ ಜಮೀನು ಖರೀದಿಸಿದ್ದ ಕತರ್ನಾಕ್ ಕಳ್ಳಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ದೀಪ ಎಂದು ಗುರುತಿಸಲಾಗಿದೆ. ಈಕೆ ತಮಿಳುನಾಡಿನವಳಾಗಿದ್ದು, ಕೋಣನಕುಂಟೆಯ ಮನೆಯೊಂದರಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಳು. ಕಳ್ಳಿ ‌ಚಿನ್ನಾಭರಣಗಳನ್ನು ಒಂದೇ ಬಾರಿಗೆ ಕಳ್ಳತನ ಮಾಡುತ್ತಿರಲಿಲ್ಲ. ಬದಲಾಗಿ ಒಂದೊಂದಾಗಿಯೇ ಕದ್ದು ಅದರಿಂದ ಸೈಟ್ ಖರೀದಿಸಿದ್ದಳು. ಆಕೆಯ ಕೃತ್ಯದ ಬಗ್ಗೆ ಸಂದೇಹಗೊಂಡ ‌ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು

ಕೆಲಸ ಮಾಡುತ್ತಿದ್ದ ಮನೆಯಿಂದ 200 ಗ್ರಾಂ ಚಿನ್ನ ಕದ್ದು ಸೈಟ್ ಖರೀದಿಸಿದ ಕಳ್ಳಿ Read More »

error: Content is protected !!
Scroll to Top