ರಾಜ್ಯ

ಮಸೀದಿ ಗೋಡೆ ಮೇಲೆ ‘ಜೈ ಶ್ರೀರಾಮ್’ ಎಂದು ಮಗನ ಕೈಯಲ್ಲೇ ಬರೆಸಿದ ತಂದೆ

ಬಾಗಲಕೋಟೆ: ತನ್ನ ಮಗನ ಕೈಯಿಂದ ಮುಸ್ಲಿಂ ತಂದೆಯೊಬ್ಬ ಸೆಕ್ಟರ್ 44 ಮಸೀದಿಯ ಗೋಡೆಯ ಮೇಲೆಯೇ ‘ಜೈ ಶ್ರೀರಾಮ್’ ಎಂದು ಬರೆಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು, ಇದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಶಿವಾಜಿ ಮೆರವಣಿಗೆಯ ಸಮಯದಲ್ಲಿ ನಡೆದ ಕಲ್ಲು ತೂರಾಟ ಘಟನೆಯ ಕಾವು ಕಡಿಮೆಯಾಗುವ ಮೊದಲೇ ಮತ್ತೊಂದು ವಿವಾದಾತ್ಮಕ ಘಟನೆ ನಡೆದಿದ್ದು, ನಗರ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ ಎನ್ನುವುದು ಸತ್ಯ. ಮಗನ ಕೈಯಿಂದ ಗೋಡೆ ಮೇಲೆ ಬರೆಯಿಸಿ ಬಳಿಕ ಅಲ್ಲಿಂದ ಆಟೋ ಹತ್ತಿ ತೆರಳಿದ್ದಾರೆ. ಈ […]

ಮಸೀದಿ ಗೋಡೆ ಮೇಲೆ ‘ಜೈ ಶ್ರೀರಾಮ್’ ಎಂದು ಮಗನ ಕೈಯಲ್ಲೇ ಬರೆಸಿದ ತಂದೆ Read More »

ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಭಟ್ಕಳ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ವೈಯಕ್ತಿಕ ಕಾರಣಗಳ ಬೇಸರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊನ್ನಗದ್ದೆಯಲ್ಲಿ ನಡೆದಿದೆ. ಮೃತನನ್ನು ‌ಕೌಶಿಕ್ ಸುಬ್ರಾಯ ನಾಯ್ಕ ಎಂದು ಗುರುತಿಸಲಾಗಿದೆ. ಕೌಶಿಕ್ ಓದಿನಲ್ಲಿ ಪ್ರತಿಭಾವಂತನಾಗಿದ್ದು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದ. ಆದರೆ ಶುಕ್ರವಾರ ಭೌತಶಾಸ್ತ್ರ ಪರೀಕ್ಷೆ ಬರೆಯಬೇಕಾಗಿದ್ದ ಹುಡುಗ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವೈಯಕ್ತಿಕ ಕಾರಣಗಳಿಂದ ಬೇಸತ್ತು ಆತ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಭಟ್ಕಳ ಗ್ರಾಮೀಣ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ

ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು Read More »

ಸಿಎಂ ಸಿದ್ದರಾಮಯ್ಯ ಅವರ ‘ಬ್ರದರ್ಸ್ ಬಜೆಟ್’ ಬಗ್ಗೆ ಬಿಜೆಪಿ ಟೀಕೆ

ಬೆಂಗಳೂರು: ಸಿ ಎಂ ಸಿದ್ದರಾಮಯ್ಯ ಸರ್ಕಾರದ ಬಜೆಟ್‌ಗೆ ‘ಬ್ರದರ್ಸ್ ಬಜೆಟ್’ ಎಂದು ಕರೆದಿರುವ ಬಿಜೆಪಿ, ಟೀಕೆಗಳ ಸುರಿಮಳೆಯನ್ನೇ ‌ಮಾಡಿದೆ. ಬಿಜೆಪಿ ನಾಯಕರು ಎಕ್ಸ್ ಖಾತೆಯಲ್ಲಿ ಬಜೆಟ್ ವಿರುದ್ಧ ಟೀಕೆಗಳನ್ನು ಮಾಡಿದ್ದು, ಅಲ್ಪಸಂಖ್ಯಾತರ ಶಾಲೆಗಳನ್ನು ಕೆಪಿಎಸ್‌ ಮಾದರಿಯಲ್ಲಿ ಉನ್ನತೀಕರಣಕ್ಕೆ 1000 ಕೋಟಿ ರೂ., ಅಲ್ಪಸಂಖ್ಯಾತರ ವಸತಿ ಶಾಲೆಗಳ ಆರಂಭ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ, ಅಲ್ಪಸಂಖ್ಯಾತ ಕಾಲೋನಿಗಳ ಮೂಲಸೌಕರ್ಯಕ್ಕೆ ನೂರಾರು ಕೋಟಿ ಮೀಸಲು, ಅಲ್ಪಸಂಖ್ಯಾಂತ ನಿರ್ಗತಿಕರಿಗೆ ಎರಡು ವೃದ್ಧಾಶ್ರಮ ಆರಂಭ, ಅಲ್ಪಸಂಖ್ಯಾಂತ ನಿರುದ್ಯೋಗಿಗಳಿಗೆ 3 ಲಕ್ಷ

ಸಿಎಂ ಸಿದ್ದರಾಮಯ್ಯ ಅವರ ‘ಬ್ರದರ್ಸ್ ಬಜೆಟ್’ ಬಗ್ಗೆ ಬಿಜೆಪಿ ಟೀಕೆ Read More »

ಕಾರು – ಬೈಕ್ ಅಪಘಾತ: ಮೂರು ಸಾವು

ಗದಗ: ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೂವರು ಬೈಕ್ ಸವಾರರು ಮೃತಪಟ್ಟ ಘಟನೆ ಮುಂಡರಗಿಯ ಮೇವುಂಡಿ ಎಂಬಲ್ಲಿ ನಡೆದಿದೆ. ಮೃತರನ್ನು ‌ಶಿವಪ್ಪ ಪಾಟ್ಲಿ, ಮುತ್ತಪ್ಪ ‌ಮುದುಗಣ್ಣವರ್, ಆನಂದ ಲಕ್ಷ್ಮೇಶ್ವರಮಠ ಎಂದು ಗುರುತಿಸಲಾಗಿದೆ. ಒಂದೇ ಬೈಕಿನಲ್ಲಿ ಈ ಮೂವರು ಮುಂಡರಗಿಯಿಂದ ಜಂತ್ಲಿ ಗ್ರಾಮಕ್ಕೆ ಹೋಗುತ್ತಿದ್ದರು. ಕಾರು ಡೋಣಿ ಗ್ರಾಮದಿಂದ ಮುಂಡರಗಿಯತ್ತ ಹೋಗುತ್ತಿತ್ತು. ಬೈಕ್ ಸವಾರರ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಈ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ತೀವ್ರತೆಗೆ ಬೈಕ್ ನಜ್ಜುಗುಜ್ಜಾಗಿದೆ. ಕಾರು

ಕಾರು – ಬೈಕ್ ಅಪಘಾತ: ಮೂರು ಸಾವು Read More »

ಹದಿನಾರರೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ: ಸಿಎಂ ಸಿದ್ದರಾಮಯ್ಯ ಅವರ ದಿಟ್ಟ ನಿಲುವು

ಬೆಂಗಳೂರು: ಹದಿನಾರು ವರ್ಷದೊಳಗಿನ ಮಕ್ಕಳಿಗೆ ರಾಜ್ಯದಲ್ಲಿ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸುವಂತಹ ದಿಟ್ಟ ನಿಲುವನ್ನು ಸಿಎಂ ‌ಸಿದ್ದರಾಮಯ್ಕ ಅವರ ನೇತೃತ್ವದ ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಬಗ್ಗೆ ಇಂದಿನ ಬಜೆಟ್ ಮಂಡನೆಯ ವೇಳೆ ಸಿಎಂ ‌ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ. ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಇದು ಅವರ ಮೇಲೆ ಬೀರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ ಹದಿನಾರರ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧದಂತಹ ಕ್ರಮ ಕೈಗೊಳ್ಳಲು ತೀರ್ಮಾನಿಸಿರುವುದಾಗಿ ಅವರು ತಿಳಿಸಿದ್ದಾರೆ. ಹಾಗೆಯೇ ಮಾದಕ

ಹದಿನಾರರೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ: ಸಿಎಂ ಸಿದ್ದರಾಮಯ್ಯ ಅವರ ದಿಟ್ಟ ನಿಲುವು Read More »

ಬಜೆಟ್‌ ಮುಖ್ಯಾಂಶಗಳು : 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ನಿಷೇಧ

ಮೀನುಗಾರಿಕೆ ಪ್ರೋತ್ಸಾಹ ಧನ ಹೆಚ್ಚಳ ಅಡಿಕೆ ಎಲೆಚುಕ್ಕಿ, ಹಳದಿ ಚುಕ್ಕಿ ರೋಗ ನಿವಾರಣೆ 10 ಕೋಟಿ ರೂ. ಮೀಸಲು ಬೆಂಗಳೂರೂ : ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 10.15ಕ್ಕೆರ ಸರಿಯಾಗಿ ಬಜೆಟ್‌ ಮಂಡನೆ ಪ್ರಾರಂಭಿಸಿದ್ದಾರೆ. ಬಜೆಟ್‌ ಘೋಷಣೆಯ ಕೆಲವು ಮುಖ್ಯಾಂಶಗಳು ಇಲ್ಲಿವೆ. *ಮೀನುಗಾರಿಕೆ ಪೋತ್ರಾಹಧನ 20 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಮಂಗಳೂರು ಮೀನುಗಾರಿಕಾ ವಿವಿಯಲ್ಲಿ ಸೆಂಟರ್ ಆಫ್ ಎಕ್ಸ್‌ಲೆನ್ಸ್, ಮೀನು ಮಾರಾಟ ಮಾಡಲು ಮೀನು ಮಾರುಕಟ್ಟೆ ಸ್ಥಾಪನೆ ಮಾಡಲಾಗುವುದು. ಉತ್ತರ ಕನ್ನಡ, ದಕ್ಷಿಣ

ಬಜೆಟ್‌ ಮುಖ್ಯಾಂಶಗಳು : 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ನಿಷೇಧ Read More »

ಪೊಲೀಸ್‌ ಇಲಾಖೆಯ ಆರ್ಡರ್ಲಿ ಪದ್ಧತಿ ಕೊನೆಗೂ ರದ್ದು

ಕಾನ್‌ಸ್ಟೆಬಲ್‌ಗಳನ್ನು ಹಿರಿಯ ಅಧಿಕಾರಿಗಳ ಮನೆಗೆಲಸಕ್ಕೆ ಬಳಸುತ್ತಿದ್ದ ವ್ಯವಸ್ಥೆ ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದೀರ್ಘಕಾಲದಿಂದ ನಡೆದುಬಂದಿದ್ದ ‘ಆರ್ಡರ್ಲಿ’ ಪದ್ಧತಿ ಕೊನೆಗೂ ಅಂತ್ಯಗೊಂಡಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರ ಆದೇಶ ಹಿನ್ನೆಲೆ ಬ್ರಿಟಿಷ್‌ ಯುಗದ ಆರ್ಡರ್ಲಿ ಪದ್ಧತಿ ರದ್ದುಪಡಿಸಲಾಗಿದೆ. ಆರ್ಡರ್ಲಿ ಪದ್ಧತಿ ಬ್ರಿಟಿಷ್ ಕಾಲದಲ್ಲಿ ಆರಂಭವಾದ ವ್ಯವಸ್ಥೆ. ಈ ವ್ಯವಸ್ಥೆಯಡಿ ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಹಿರಿಯ ಅಧಿಕಾರಿಗಳ ಮನೆಗಳಿಗೆ ನಿಯೋಜಿಸಿ, ಅವರ ವೈಯಕ್ತಿಕ ಕೆಲಸಗಳನ್ನು ಮಾಡಿಸುವ ಪದ್ಧತಿ ನಡೆದುಬಂದಿತ್ತು. ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು, ಮಕ್ಕಳನ್ನು ಶಾಲೆಗೆ

ಪೊಲೀಸ್‌ ಇಲಾಖೆಯ ಆರ್ಡರ್ಲಿ ಪದ್ಧತಿ ಕೊನೆಗೂ ರದ್ದು Read More »

ವಿಜಯೇಂದ್ರ, ಸುನಿಲ್‌ ಕುಮಾರ್‌ ವಿರುದ್ಧ ಕೀಳು ಟೀಕೆ : ಡಿಕೆಶಿಗೆ ಹೈಕೋರ್ಟ್‌ ರಿಲೀಫ್‌

ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು ಅವಮಾನ ಮಾಡಿದ್ದ ಡಿಸಿಎಂ ಬೆಂಗಳೂರು: ಬಿಜೆಪಿ ನಾಯಕರನ್ನು ಟೀಕಿಸುವ ಉದ್ದೇಶದಿಂದ ಆಕ್ಷೇಪಾರ್ಹ ಬರಹಗಳಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮರ್ ಅವರಿಗೆ ಹೈಕೋರ್ಟಿನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್

ವಿಜಯೇಂದ್ರ, ಸುನಿಲ್‌ ಕುಮಾರ್‌ ವಿರುದ್ಧ ಕೀಳು ಟೀಕೆ : ಡಿಕೆಶಿಗೆ ಹೈಕೋರ್ಟ್‌ ರಿಲೀಫ್‌ Read More »

ಮದುವೆಯಾಗಲು ನಿರಾಕರಿಸಿದ ಪ್ರೇಮಿ: ಯುವತಿ ಆತ್ಮಹತ್ಯೆ

ತಮಿಳುನಾಡು: ಪ್ರಿಯಕರ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೇಲಂ‌ನಲ್ಲಿ ನಡೆದಿದೆ. ಪದವಿ ಓದುತ್ತಿದ್ದ ವಿದ್ಯಾರ್ಥಿನಿ ದಿನಗೂಲಿ ನೌಕರ ಕಾರ್ತಿಕೇಯನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಇವರಿಬ್ಬರ ಜಾತಿ ಬೇರೆಯಾಗಿತ್ತು. ಪ್ರೀತಿ ಮಾಡುವಾಗ ಅಡ್ಡ ಬಾರದ ಜಾತಿ ಯುವಕನಿಗೆ ಮದುವೆಯಾಗುವಂತೆ ಯುವತಿ ಹೇಳಿದಾಗ ಅಡ್ಡ ಬಂದಿದೆ. ಅದೇ ವಿಷಯವನ್ನಿಟ್ಟುಕೊಂಡು ಆತ ವಿವಾಹ ನಿರಾಕರಿಸಿದ್ದಾನೆ. ಇದರಿಂದಾಗಿ ನೊಂದ ಯುವತಿ ಆತ್ಮಹತ್ಯೆಗೆ ಫೆ. 21 ರಂದು ಪ್ರಯತ್ನಿಸಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ

ಮದುವೆಯಾಗಲು ನಿರಾಕರಿಸಿದ ಪ್ರೇಮಿ: ಯುವತಿ ಆತ್ಮಹತ್ಯೆ Read More »

ಪೋಕ್ಸೋ ಆರೋಪಿ ಮಲ್ಲಿಕಾರ್ಜುನ ಮುತ್ಯಾ ವಿಚಾರಣೆಗೆ ಹಾಜರ್

ಯಾದಗಿರಿ: ಬಾಲಕಿಯರ ಜೊತೆ ಅನುಚಿತವಾಗಿ ‌ವರ್ತಿಸಿ ಫೋಕ್ಸೋ ಪ್ರಕರಣದ ಆರೋಪಿಯಾಗಿರುವ ಸ್ವಯಂಘೋಷಿತ ದೇವಮಾನವ ‌ಮಲ್ಲಿಕಾರ್ಜುನ ಮುತ್ಯಾ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ. ಆತ ಬುಧವಾರ ರಾತ್ರಿ ಶಹಾಪುರ ಸಿಪಿಐ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗಿದ್ದು, ಬುಧವಾರ ಮಧ್ಯಾಹ್ನ 3 ಗಂಟೆಯ ಬಳಿಕವೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಆತನಿಗೆ ಸೂಚಿಸಿದ್ದಾರೆ. ಗುರುವಾರದ ವಿಚಾರಣೆಯ ಬಳಿಕ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ತನಿಖೆಗೆ ಸಹಕರಿಸದೇ ಹೋದಲ್ಲಿ ಆತನ ಬಂಧನದ ಸಾಧ್ಯತೆಗಳೂ ಇವೆ. ಆದ್ದರಿಂದಲೇ ಆತ ವಿಚಾರಣೆಗೆ ಹಾಜರಾಗಿದ್ದಾಗಿ ಹೇಳಲಾಗುತ್ತಿದೆ.

ಪೋಕ್ಸೋ ಆರೋಪಿ ಮಲ್ಲಿಕಾರ್ಜುನ ಮುತ್ಯಾ ವಿಚಾರಣೆಗೆ ಹಾಜರ್ Read More »

error: Content is protected !!
Scroll to Top