ರಾಜ್ಯ

ಸಾರಿಗೆ ಸಂಸ್ಥೆಯನ್ನು ನಿಶ್ಶಕ್ತಗೊಳಿಸಿತೇ ಶಕ್ತಿ ಯೋಜನೆ?

ಸರ್ಕಾರದಿಂದ 4 ಸಾವಿರ ಕೋಟಿ ಬಾಕಿಯಾಗಿ ಸಮಸ್ಯೆಯಲ್ಲಿ ಸಂಸ್ಥೆ ಬೆಂಗಳೂರು : ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ದಿನದಿಂದ 2025ರ ನವೆಂಬರ್ 25ರವರೆಗೆ ನಾಲ್ಕು ಸಾರಿಗೆ ನಿಗಮಗಳಿಗೆ ಸರ್ಕಾರ 4 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಒಟ್ಟಾರೆ […]

ಸಾರಿಗೆ ಸಂಸ್ಥೆಯನ್ನು ನಿಶ್ಶಕ್ತಗೊಳಿಸಿತೇ ಶಕ್ತಿ ಯೋಜನೆ? Read More »

ಮಹೇಶ್‌ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ನೋಟಿಸ್‌

ಜಿಲ್ಲೆಯಿಂದ ಒಂದು ವರ್ಷ ಗಡಿಪಾರು ಮಾಡಿ ನೋಟಿಸ್‌ ಹೊರಡಿಸಿದ ಪುತ್ತೂರು ಸಹಾಯಕ ಆಯುಕ್ತೆ ಧರ್ಮಸ್ಥಳ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ನೋಟಿಸ್​​ ಜಾರಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಮಹೇಶ್ ಶೆಟ್ಟಿ ಗಡಿಪಾರು ಮಾಡಲು ಆದೇಶ ನೀಡಲಾಗಿದೆ. ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಈ ಆದೇಶವನ್ನು ನೀಡಿದ್ದಾರೆ. ಮೊನ್ನೆಯಷ್ಟೇ ತಿಮರೋಡಿಗೆ ಗಡಿಪಾರು ನೋಟೀಸ್ ನೀಡಿದ್ದ ಸ್ಟೆಲ್ಲಾ ವರ್ಗೀಸ್ ಇದೀಗ ಮತ್ತೆ ಆದೇಶ ನೀಡಿದ್ದಾರೆ. ಯಾಕೆ ಗಡಿಪಾರು ಮಾಡಬಾರದು ಅಂತ

ಮಹೇಶ್‌ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ನೋಟಿಸ್‌ Read More »

ಇಂದು ಬೆಳಗ್ಗೆ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಬುರುಡೆ ಚಿನ್ನಯ್ಯ

ಸೆಪ್ಟೆಂಬರ್‌ 9ರಿಂದ ಜೈಲಿನಲ್ಲಿದ್ದ ಚಿನ್ನಯ್ಯನನ್ನು ಬಿಡಿಸಿಕೊಂಡು ಹೋದ ಪತ್ನಿ ಧರ್ಮಸ್ಥಳ: ಧರ್ಮಸ್ಥಳ ಷ್ಯಡ್ಯಂತ್ರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಇಂದು ಬೆಳಗ್ಗೆ ಶಿವಮೊಗ್ಗದ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾನೆ. ಸೆಪ್ಟೆಂಬರ್ 9ರಂದು ಶಿವಮೊಗ್ಗ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ಬೆಳ್ತಂಗಡಿ ಜೆಎಂಎಫ್‌ಸಿ ಕೋರ್ಟ್ ಅದೇಶದ ಹಿನ್ನಲೆ ಶಿವಮೊಗ್ಗಕ್ಕೆ ಶಿಫ್ಟ್ ಆಗಿದ್ದ ಚಿನ್ನಯ್ಯ ಕಾರಾಗೃಹದ ಕಾವೇರಿ ಬ್ಯಾರಕ್‌ನಲ್ಲಿದ್ದ. ಚಿನ್ನಯ್ಯನಿಗೆ ಕಳೆದ ನವೆಂಬರ್ 24ರಂದು ಬೆಳ್ತಂಗಡಿ ನ್ಯಾಯಾಲಯ 12 ಷರತ್ತುಗಳನ್ನು ವಿಧಿಸಿ ಒಂದು

ಇಂದು ಬೆಳಗ್ಗೆ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಬುರುಡೆ ಚಿನ್ನಯ್ಯ Read More »

ಸಚಿವ ಕೃಷ್ಣ ಭೈರೇಗೌಡ ಮೇಲೆ ಭೂ ಕಬಳಿಕೆ ಆರೋಪ : ರಾತ್ರಿಯಿಡೀ ತಾಲೂಕು ಕಚೇರಿ ಮುಂದೆ ಕಾವಲು ನಿಂತ ಬಿಜೆಪಿ ಕಾರ್ಯಕರ್ತರು

ರಾತ್ರೋರಾತ್ರಿ ಕಡತಗಳನ್ನು ತಿದ್ದುವ ಅನುಮಾನದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಗೆ ಬಿಜೆಪಿ ಕಾವಲು ಬೆಂಗಳೂರು: ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೋಲಾರ ತಾಲೂಕು ಕಚೇರಿಯಲ್ಲಿ ರಾತ್ರಿಯಿಡೀ ಬಿಜೆಪಿ ಕಾರ್ಯಕರ್ತರು ಕಾವಲು ಕುಳಿತ ಘಟನೆ ನಡೆದಿದೆ. ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ತಾಲೂಕು ಕಚೇರಿಯ ಮುಂದೆ ಜಮಾಯಿಸಿ ದಾಖಲೆಗಳನ್ನು ರಕ್ಷಿಸುವ ಉದ್ದೇಶದಿಂದ ಇಡೀ ರಾತ್ರಿ ಕಾವಲು ಕಾದಿದ್ದಾರೆ. ತನಿಖೆ ನಡೆಯುವವರೆಗೆ ದಾಖಲೆಗಳನ್ನು ತಿದ್ದುವ ಅಥವಾ

ಸಚಿವ ಕೃಷ್ಣ ಭೈರೇಗೌಡ ಮೇಲೆ ಭೂ ಕಬಳಿಕೆ ಆರೋಪ : ರಾತ್ರಿಯಿಡೀ ತಾಲೂಕು ಕಚೇರಿ ಮುಂದೆ ಕಾವಲು ನಿಂತ ಬಿಜೆಪಿ ಕಾರ್ಯಕರ್ತರು Read More »

ಮುಡಾ ಹಗರಣ : ಇಂದು ನ್ಯಾಯಾಲಯದ ತೀರ್ಪು

ಸಿದ್ದರಾಮಯ್ಯನವರನ್ನು ನಿರ್ದೋಷಿ ಎಂದು ಹೇಳಿದ ಲೋಕಾಯುಕ್ತ ತನಿಖೆ ಮೇಲಿನ ತೀರ್ಪು ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಕೊಟ್ಟ ಕ್ಲೀನ್‌ಚಿಟ್‌ ಕುರಿತು ನ್ಯಾಯಾಲಯ ಇಂದು ತೀರ್ಪು ನೀಡಲಿದೆ. ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್‌ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಕೋರ್ಟ್‌ ಮೆಟ್ಟಿಲೇರಿದ್ದರು. ವಾದ ಆಲಿಸಿದ್ದ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಇಂದು ನ್ಯಾಯಾಲಯ ನೀಡುವ ತೀರ್ಪು ಈ ಪ್ರಕರಣಕ್ಕೆ ಸಂಬಂಧಿಸದಂತೆ ಮಹತ್ವದ್ದಾಗಿರಲಿದೆ. ಲೋಕಾಯುಕ್ತ ನೀಡಿದ ಕ್ಲೀನ್‌ಚಿಟ್‌ ಅನ್ನು ನ್ಯಾಯಾಲಯ ಎತ್ತಿ ಹಿಡಿದರೆ ಸಿದ್ದರಾಮಯ್ಯನವರಿಗೆ

ಮುಡಾ ಹಗರಣ : ಇಂದು ನ್ಯಾಯಾಲಯದ ತೀರ್ಪು Read More »

ಗೃಹಲಕ್ಷ್ಮಿಯ 5,500 ಕೋ ರೂ. ಕಬಳಿಸಲು ಯತ್ನಿಸಿತೇ ಕಾಂಗ್ರೆಸ್‌?

ಎರಡು ತಿಂಗಳ ಹಣ ಜಮೆ ಮಾಡದೆ ಮೋಸ ಮಾಡಿದ್ದಾರೆ ಎಂದು ವಿಪಕ್ಷಗಳ ಆರೋಪ ಬೆಳಗಾವಿ: ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿಯಂತೆ ಸಿಗುವ ಗೃಹಲಕ್ಷ್ಮಿ ಹಣದಲ್ಲಿ ಭಾರಿ ಗೋಲ್ಮಾಲ್‌‌ ನಡೆದಿರುವ ಆರೋಪ ಕೇಳಿಬಂದು ಸರ್ಕಾರ ಭಾರಿ ಮುಜುಗರ ಅನುಭವಿಸುತ್ತಿದೆ. ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ನುಂಗಿ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 5,500 ಕೋ. ರೂ.ಯುಷ್ಟು ಹಣ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ ಎನ್ನುವ ವಿಚಾರವನ್ನು ಅಧಿವೇಶನದಲ್ಲೇ ವಿಪಕ್ಷಗಳು ಬಯಲೆಗೆಳೆದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಇದಾದ ಬಳಿಕ

ಗೃಹಲಕ್ಷ್ಮಿಯ 5,500 ಕೋ ರೂ. ಕಬಳಿಸಲು ಯತ್ನಿಸಿತೇ ಕಾಂಗ್ರೆಸ್‌? Read More »

ಸರ್ಕಾರಿ ಉದ್ಯೋಗ ನೇಮಕಾತಿ ನಡೆಯದ ಕಾರಣ ಯುವತಿ ಆತ್ಮಹತ್ಯೆ

4 ವರ್ಷಗಳಿಂದ ತಯಾರಿ ನಡೆಸಿದರೂ ನೇಮಕಾತಿ ಆಗದೆ ಆತ್ಮಹತ್ಯೆ ಬೆಂಗಳೂರು: ಕಳೆದ 4 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿ ಯುವತಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ಶಿವಗಿರಿಯಲ್ಲಿ ನಡೆದಿದೆ. ಬಳ್ಳಾರಿ ಮೂಲದ ವಿದ್ಯಾರ್ಥಿನಿ ಪಲ್ಲವಿ ಕಗ್ಗಲ್ (25) ಆತ್ಮಹತ್ಯೆ ಮಾಡಿಕೊಂಡ ಯುವತಿ. ನೇಮಕಾತಿಗಳು ನಡೆಯುತ್ತಿಲ್ಲ ಏಂದು ಮನನೊಂದು ಶಿವಗಿರಿಯ ರೈಲ್ವೆ ಟ್ರ್ಯಾಕ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಪಲ್ಲವಿ ಕಗ್ಗಲ್ ಕಳೆದ 4 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ಸರ್ಕಾರಿ ಉದ್ಯೋಗ ನೇಮಕಾತಿ ನಡೆಯದ ಕಾರಣ ಯುವತಿ ಆತ್ಮಹತ್ಯೆ Read More »

ಕಲಾಪದಲ್ಲಿ ಮಸೀದಿಗಳ ಆಜಾನ್‌ ಶಬ್ದಮಾಲಿನ್ಯದ ಕುರಿತು ಭಾರಿ ಚರ್ಚೆ

ಡೆಸಿಬಲ್‌ ಮಿತಿ ಉಲ್ಲಂಘಿಸಿದರೂ ಪ್ರಶ್ನಿಸುವ ದಮ್‌ ಸರ್ಕಾರಕ್ಕೆ ಇಲ್ಲ ಎಂದು ಬಿಜೆಪಿ ಆರೋಪ ಬೆಳಗಾವಿ : ಮಸೀದಿಗಳಲ್ಲಿ ಆಜಾನ್ ಕೂಗುವುದರಿಂದ ಆಗುವ ತೊಂದರೆಗಳ ಬಗ್ಗೆ ಮಂಗಳವಾರ ಅಧಿವೇಶನದಲ್ಲಿ ಭಾರಿ ಚರ್ಚೆ ನಡೆದಿದೆ. ಮಸೀದಿಗಳಲ್ಲಿ ಡೆಸಿಬಲ್ ಮಿತಿ ಮೀರಿ ಧ್ವನಿವರ್ಧಕಗಳನ್ನು ಬಳಸುವ ವಿಚಾರವಾಗಿ ವಿಧಾನ ಪರಿಷತ್​​ನಲ್ಲಿ ಬಿಜೆಪಿಯ ಡಿ.ಎಸ್ ಅರುಣ್ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖೆ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ, ದೀಪಾವಳಿಯ ಸಮಯದಲ್ಲಿ ಪಟಾಕಿಗಳು ಮತ್ತು ಧ್ವನಿವರ್ಧಕಗಳು ಸಹ ಅತಿಯಾದ ಶಬ್ದವನ್ನು ಉಂಟುಮಾಡುತ್ತವೆ. ಈ

ಕಲಾಪದಲ್ಲಿ ಮಸೀದಿಗಳ ಆಜಾನ್‌ ಶಬ್ದಮಾಲಿನ್ಯದ ಕುರಿತು ಭಾರಿ ಚರ್ಚೆ Read More »

ನರೇಗಾ ಯೋಜನೆ ಹೆಸರು ಬದಲು : ಸಿದ್ದರಾಮಯ್ಯ ಕಿಡಿ

ಹೊಸ ರೂಪದಲ್ಲಿರುವ ಯೋಜನೆಯಲ್ಲಿ ಉದ್ಯೋಗ ಖಾತರಿಯಿಲ್ಲ ಎಂದು ಆಕ್ರೋಶ ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ-ನರೇಗಾ)ಯ ಹೆಸರು ಮತ್ತು ಸ್ವರೂಪವನ್ನು ಬದಲಾಯಿಸಲು ಹೊರಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರು ಮತ್ತು ಮಹಾತ್ಮ ಗಾಂಧೀಜಿ ಬಗೆಗಿನ ತಮ್ಮ ದ್ವೇಷವನ್ನು ತಾವೇ ಬಯಲು ಮಾಡಿಕೊಂಡಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ನರೇಗಾ ಯೋಜನೆ ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ಮತ್ತು ಬಡತನ ನಿರ್ಮೂಲನೆಯಲ್ಲಿ

ನರೇಗಾ ಯೋಜನೆ ಹೆಸರು ಬದಲು : ಸಿದ್ದರಾಮಯ್ಯ ಕಿಡಿ Read More »

ತುಮಕೂರಿನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ

ತುಮಕೂರು: ಬಾಂಬ್ ಬೆದರಿಕೆಯೊಂದು ಇ-ಮೇಲ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಇಂದು ಬಂದಿದ್ದು, ಇದರಿಂದಾಗಿ ಕೆಲಕಾಲ ಜಿಲ್ಲಾಡಳಿತ ಕಚೇರಿಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಬೆಳಗ್ಗೆ ಸುಮಾರು 7 ಗಂಟೆಯ ಸಮಯಕ್ಕೆ ಈ ಬೆದರಿಕೆ ಇ-ಮೇಲ್ ಡಿಸಿ ಅವರ ಅಧಿಕೃತ ಮೇಲ್ ಐಡಿ‌ಗೆ ಬಂದಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಕಚೇರಿಗೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ, ಹಿರಿಯ ಪೊಲೀಸ್ ಅಧಿಕಾರಿಗಳ ದಳ ಧಾವಿಸಿ ಪರಿಶೀಲನೆ ನಡೆಸಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಕಚೇರಿ ಮತ್ತು ಆಸುಪಾಸಿನಲ್ಲಿ ಶೋಧ

ತುಮಕೂರಿನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ Read More »

error: Content is protected !!
Scroll to Top