ರಾಜ್ಯ

ಪಶ್ಚಿಮ ಘಟ್ಟ ನದಿಗಳ ನೀರಿನ ಮೇಲೆ ಸೆಸ್‌! | ಅರಣ್ಯ ಸಂರಕ್ಷಣೆಗೆ ಹಣ ಸಂಗ್ರಹಿಸಲು ನೀರಿನ ಮೇಲೆ ಮೇಲ್ತೆರಿಗೆ ವಿಧಿಸಲು ಮುಂದಾದ ಸರಕಾರ

ಬೆಂಗಳೂರು: ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳ ನೀರು ಪೂರೈಕೆಯಾಗುವ ನಗರ, ಪಟ್ಟಣಗಳ ಜನರು ಬಳಸುವ ನೀರಿನ ಮೇಲೆ ಮೇಲ್ತೆರಿಗೆ (ಸೆಸ್‌) ಹಾಕಲು ಸರಕಾರ ಮುಂದಾಗಿದೆ. ಈ ಕುರಿತು ಅರಣ್ಯ ಸಚಿವ ಈಶ್ವರ್‌ ಖಂಡ್ರೆಯವರೇ ಆದೇಶ ಹೊರಡಿಸಿದ್ದಾರೆ.ಪಶ್ಚಿಮ ಘಟ್ಟ ಸಂರಕ್ಷಣೆಗೆ ʻಕಾಪುನಿಧಿʼ ಸಂಗ್ರಹ ಗುರಿ ಹೊಂದಿದ್ದು, ನೀರಿನ ಬಿಲ್‌ನಲ್ಲೇ ʻಹಸಿರು ಸೆಸ್ʼ ಸಂಗ್ರಹಕ್ಕೆ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರಕಟಣೆ ನೀಡಿದ್ದಾರೆ. ಪಶ್ಚಿಮ ಘಟ್ಟ ತುಂಗಾ, […]

ಪಶ್ಚಿಮ ಘಟ್ಟ ನದಿಗಳ ನೀರಿನ ಮೇಲೆ ಸೆಸ್‌! | ಅರಣ್ಯ ಸಂರಕ್ಷಣೆಗೆ ಹಣ ಸಂಗ್ರಹಿಸಲು ನೀರಿನ ಮೇಲೆ ಮೇಲ್ತೆರಿಗೆ ವಿಧಿಸಲು ಮುಂದಾದ ಸರಕಾರ Read More »

ಸಚಿವ ಜಮೀರ್‌ಗೆ ಜೀವ ಬೆದರಿಕೆ : ಪುನೀತ್‌ ಕೆರೆಹಳ್ಳಿ ಬಂಧನ

ಕರಿಯ ಎಂದರೆ ಹಾಸನ, ಮಂಡ್ಯ ಗಡಿ ದಾಟಲು ಬಿಡುವುದಿಲ್ಲ ಎಂದು ಧಮಕಿ ಬೆಂಗಳೂರು: ಸಚಿವ ಜಮೀರ್‌ ಅಹ್ಮದ್‌ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಪುನೀತ್‌ ಕೆರೆಹಳ್ಳಿ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ಬೆನ್ನಲ್ಲೇ ಅವರನ್ನು ಬಂಧಿಸಲಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ನ್ಯಾಯಾದೀಶರ ಮುಂದೆ ಹಾಜರು ಪಡಿಸಲಾಗಿತ್ತು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ

ಸಚಿವ ಜಮೀರ್‌ಗೆ ಜೀವ ಬೆದರಿಕೆ : ಪುನೀತ್‌ ಕೆರೆಹಳ್ಳಿ ಬಂಧನ Read More »

ಕಡಬ : ಮನೆ ಕೆಡವಿದ ಅಧಿಕಾರಿಗಳು; ದಯಾಮರಣ ಯಾಚಿಸಿದ ವೃದ್ಧ ದಂಪತಿ

ಆರು ವರ್ಷಗಳಿಂದ ವಾಸವಾಗಿದ್ದ ಮನೆಯನ್ನು ದಿಢೀರ್‌ ತೆರವುಗೊಳಿಸಿದ ಕಾರಣ ವೃದ್ಧರು ಅತಂತ್ರ ಮಂಗಳೂರು : ಅಧಿಕಾರಿಗಳು ದಿಢೀರ್‌ ಎಂದು ಮನೆಯನ್ನು ಧ್ವಂಸ ಮಾಡಿದ ಕಾರಣ ಅತಂತ್ರವಾಗೊರುವ ವೃದ್ಧ ದಂಪತಿ ಮನೆ ನಿರ್ಮಿಸಕೊಡಿ ಅಥವಾ ಸಾಯಲು ಅನುಮತಿ ಕೊಡಿ ಎಂದು ಯಾಚಿಸಿ ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ಕಡಬದಲ್ಲಿ ಸಂಭವಿಸಿದೆ.ಕಡಬ ತಾಲೂಕಿನ ಕೌಕ್ರಾಡಿಯಲ್ಲಿ ವಾಸವಾಗಿರುವ ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿಯ ಮನೆಯನ್ನು ಇಂದು ಏಕಾಏಕಿ ಧ್ವಂಸಗೊಳಿಸಲಾಗಿದೆ. ಇದರಿಂದ ಕಂಗಾಲು ಆಗಿರುವ ದಂಪತಿ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ದಂಪತಿ

ಕಡಬ : ಮನೆ ಕೆಡವಿದ ಅಧಿಕಾರಿಗಳು; ದಯಾಮರಣ ಯಾಚಿಸಿದ ವೃದ್ಧ ದಂಪತಿ Read More »

ನಕ್ಸಲರಿಗೆ ಅಸ್ತ್ರವಾಗಿ ಸಿಕ್ಕಿದ ಕಸ್ತೂರಿ ರಂಗನ್‌ ವರದಿ ಜಾರಿ ವಿಷಯ

ಮುಂಡಗಾರು ಲತಾ ನೇAತೃತ್ವದ ನಕ್ಸಲ್‌ ತಂಡ ಸಕ್ರಿಯ ಕಾರ್ಕಳ : ಪಶ್ಚಿಮ ಘಟ್ಟದ ಕಾಡಿನಂಚಿನಲ್ಲಿ ಕೊಂಚ ಸಮಯ ತಣ್ಣಗಾಗಿದ್ದ ನಕ್ಸಲ್‌ ಚಟುವಟಿಕೆ ಮತ್ತೆ ಜೀವ ಪಡೆದುಕೊಂಡಿರುವುದು ಕಳೆದ ಒಂದು ವಾರದ ಬೆಳವಣಿಗೆಯಿಂದ ದೃಢಪಟ್ಟಿದೆ. ಹೋರಾಡಲು ಗಟ್ಟಿಯಾದ ವಿಷಯ ಇಲ್ಲದೆ ಮತ್ತು ನಿರಂತರವಾದ ಪ್ರತಿರೋಧದಿಂದಾಗಿ ಕಳೆದ ಕೆಲ ವರ್ಷಗಳಿಂದ ಪಶ್ಚಿಮ ಘಟ್ಟದ ಅಂಚಿನ ಪ್ರದೇಶಗಳಲ್ಲಿ ನಕ್ಸಲರು ಹೆಚ್ಚು ಚಟುವಟಿಕೆ ನಡೆಸುತ್ತಿರಲಿಲ್ಲ. ಆದರೆ ಯಾವಾಗ ಸರಕಾರ ಕುದುರೆಮುಖ ರಾಷ್ಟ್ರೀಯ ಅರಣ್ಯದ ಒತುವರಿ ತೆರವಿಗೆ ಆದೇಶಿಸಿತೋ ಆಗಲೇ ಎದ್ದು ಕುಳಿತ ನಕ್ಸಲರು

ನಕ್ಸಲರಿಗೆ ಅಸ್ತ್ರವಾಗಿ ಸಿಕ್ಕಿದ ಕಸ್ತೂರಿ ರಂಗನ್‌ ವರದಿ ಜಾರಿ ವಿಷಯ Read More »

ಮುಂದಿನ ತಿಂಗಳು ಸಂಪುಟಕ್ಕೆ ಸರ್ಜರಿ?

ಸರಕಾರದ ಇಮೇಜ್‌ ಸುಧಾರಣೆಗೆ 7-8 ಸಚಿವರನ್ನು ಕೈಬಿಡಲು ಚಿಂತನೆ ಬೆಂಗಳೂರು : ಉಪಚುನಾವಣೆ ಮುಗಿದ ಬಳಿಕ ಸಂಪುಟಕ್ಕೆ ಮೇಜರ್‌ ಸರ್ಜರಿ ಮಾಡಿ ಸರಕಾರದ ಇಮೇಜ್‌ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡಲಾರಂಭಿಸಿದೆ. ಬರೀ ಒಂದೂವರೆ ವರ್ಷದ ಆಡಳಿತದಲ್ಲಿ ಕಾಂಗ್ರೆಸ್‌ ಸರಕಾರ ಇನ್ನಿಲ್ಲದ ಹಿನ್ನಡೆಯನ್ನು ಅನುಭವಿಸಿದೆ. ಭ್ರಷ್ಟಾಚಾರದ ಕಳಂಕ ಸರಕಾರಕ್ಕೆ ಮೆತ್ತಿಕೊಂಡಿದ್ದು, ಹಲವು ಸಚಿವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನವಿದೆ. ಈ ಹಿನ್ನೆಲೆಯಲ್ಲಿ ನಿಷ್ಕ್ರಿಯ ಮತ್ತು ಆರೋಪ ಹೊತ್ತಿರುವ ಸಚಿವರನ್ನು ಬದಲಾಯಿಸಿ ಆಡಳಿತವನ್ನು ಚುರುಕುಗೊಳಿಸಲು

ಮುಂದಿನ ತಿಂಗಳು ಸಂಪುಟಕ್ಕೆ ಸರ್ಜರಿ? Read More »

ಸಂಪುಟದಿಂದ ಜಮೀರ್‌ ಖಾನ್‌ರನ್ನು ಕಿತ್ತು ಹಾಕಲು ಒಕ್ಕಲಿಗರ ಸಂಘ ಒತ್ತಾಯ

ಕುಮಾರಸ್ವಾಮಿಯವರನ್ನು ಕರಿಯ ಎಂದು ಹೀಯಾಳಿಸಿದ್ದ ಜಮೀರ್‌ ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿಯವರ ಮೈಬಣ್ಣದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಒಕ್ಕಲಿಗರ ಸಂಘ ಒತ್ತಾಯಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘ ಹಾಗೂ ಸಭಾದ ಪದಾಧಿಕಾರಿಗಳು, ಕುಮಾರಸ್ವಾಮಿ ಅವರ ಮೈಬಣ್ಣದ ಬಗ್ಗೆ ಜಮೀರ್‌ ಆಡಿರುವ ಮಾತು ಅದು ಇಡೀ ಒಕ್ಕಲಿಗ ಜನಾಂಗಕ್ಕೆ ಮಾಡಿರುವ ಅವಹೇಳನ. ಇಂತಹ ಮಾತುಗಳು ಸಚಿವರಾದವರಿಗೆ

ಸಂಪುಟದಿಂದ ಜಮೀರ್‌ ಖಾನ್‌ರನ್ನು ಕಿತ್ತು ಹಾಕಲು ಒಕ್ಕಲಿಗರ ಸಂಘ ಒತ್ತಾಯ Read More »

ಇಂದು ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ

ಕೊನೇ ಕ್ಷಣದವರೆಗೂ ಮತದಾರರನ್ನು ಒಲಿಸಲು ಕಸರತ್ತು ಮಾಡಿದ ಪಕ್ಷಗಳು ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆ ಮತದಾನ ನಡೆಯಲಿದೆ. ಮೂರು ಕ್ಷೇತ್ರಗಳ ಶಾಸಕರು ಲೋಕಸಭೆಗೆ ಸ್ಪರ್ಧಿಸಿ ಗೆದ್ದ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಬಂದಿದೆ. ಮೂರೇ ಕ್ಷೇತ್ರವಾಗಿದ್ದರೂ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿನ ಹೋರಾಟದ ಪರಿಣಾಮವಾಗಿ ಈ ಉಪಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.ಹಗರಣಗಳ ಸುಳಿಯಲ್ಲಿ ಸಿಲುಕಿರುವ ಕಾಂಗ್ರೆಸ್‌ ತನ್ನ ಜನಪ್ರಿಯತೆ ಇನ್ನೂ ಕುಸಿದಿಲ್ಲ ಎನ್ನುವುದನ್ನು ಈ ಉಪಚುನಾವಣೆಯ ಮೂರೂ ಸ್ಥಾನಗಳನ್ನು ಗೆದ್ದು

ಇಂದು ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ Read More »

ಯಡಿಯೂರಪ್ಪ ವಿರುದ್ಧ ತನಿಖೆಗೆ ಇನ್ನೊಂದು ಸಮಿತಿ ರಚನೆ

ಕೆಕೆಆರ್‌ಡಿಬಿಯ 300 ಕೋ. ರೂ. ಅನುದಾನ ದುರ್ಬಳಕೆ ಆರೋಪ ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ 2020-2023ರಲ್ಲಿ ಕೆಕೆಆರ್‌ಡಿಬಿಗೆ ಬಿಡುಗಡೆ ಮಾಡಿದ 300 ಕೋಟಿ ಅನುದಾನದಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಆರೋಪದ ಕುರಿತು ತನಿಖೆ ನಡೆಸಲು ಸಮಿತಿ ರಚಿಸುವ ಮೂಲಕ ಕಾಂಗ್ರೆಸ್‌ ಸರಕಾರ ಬಿಜೆಪಿಯನ್ನು ಹಣಿಯಲು ಇನ್ನೊಂದು ಅಸ್ತ್ರ ರೆಡಿ ಮಾಡಿದೆ. ಕಲ್ಯಾಣ-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಅಕ್ರಮದ ಕುರಿತು ತನಿಖೆಗೆ ಆದೇಶ ಹೊರಡಿಸಿ ಕೋವಿಡ್ ಹಗರಣದ ತನಿಖೆಗೆ ಬಳಿಕ ಯಡಿಯೂರಪ್ಪ ವಿರುದ್ಧ ಮತ್ತೊಂದು ಹಗರಣದ ತನಿಖೆಗೆ

ಯಡಿಯೂರಪ್ಪ ವಿರುದ್ಧ ತನಿಖೆಗೆ ಇನ್ನೊಂದು ಸಮಿತಿ ರಚನೆ Read More »

ಕೊಪ್ಪದ ಮನೆಯೊಂದರಲ್ಲಿ ಮೂರು ಬಂದೂಕು ಪತ್ತೆ : ನಕ್ಸಲರು ನುಸುಳಿರುವ ಶಂಕೆ

ಅರಣ್ಯ ಒತ್ತುವರಿ ತೆರವು ಆದೇಶದ ಬಳಿಕ ನಕ್ಸಲರು ಸಕ್ರಿಯ? ಕೊಪ್ಪ : ಕಾರ್ಕಳ ಮತ್ತು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಕ್ಸಲ್‌ ಓಡಾಟದ ಶಂಕೆ ವ್ಯಕ್ತವಾದ ಬೆನ್ನಲ್ಲೇ ನಕ್ಸಲ್‌ ನಿಗ್ರಹ ಪಡೆಯವರು ಚಿಕ್ಕಮಗಳೂರಿನ ಕೊಪ್ಪದಲ್ಲಿ ಕಾಡಂಚಿನಲ್ಲಿರುವ ಮನೆಯೊಂದರಿಂದ ಮೂರು ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ಈ ಭಾಗದಲ್ಲಿ ನಕ್ಸಲರು ಓಡಾಡಿದ ಅನುಮಾನವನ್ನು ದೃಢಪಡಿಸುತ್ತದೆ ಎನ್ನಲಾಗಿದೆ. ಚಿಕ್ಕಮಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಕ್ಸಲರು ಓಡಾಡಿದ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಇದಕ್ಕೂ ಎರಡು ದಿನ ಮೊದಲು ಕಾರ್ಕಳದ ಈದು ಪರಿಸರದಲ್ಲೂ ಇದೇ ಮಾದರಿಯ ಸುದ್ದಿ

ಕೊಪ್ಪದ ಮನೆಯೊಂದರಲ್ಲಿ ಮೂರು ಬಂದೂಕು ಪತ್ತೆ : ನಕ್ಸಲರು ನುಸುಳಿರುವ ಶಂಕೆ Read More »

ಉಪಚುನಾವಣೆ ಪ್ರಚಾರ ಇಂದು ಸಂಜೆ ಅಂತ್ಯ

ಘಟಾನುಘಟಿಗಳಿಂದ ಭರ್ಜರಿ ಮತಯಾಚನೆ ಬೆಂಗಳೂರು: ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರ ಇಂದು ಸಂಜೆ 6 ಗಂಟೆಗೆ ಅಂತ್ಯವಾಗಲಿದೆ. ನಂತರ ಮನೆ ಮನೆಗೆ ತೆರಳಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಅವಕಾಶವಿದೆ.ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ನಿರತರಾಗಿವೆ. ಶಿಗ್ಗಾಂವಿಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ ಖಾನ್ ಪಠಾಣ್ ಪರ ಪ್ರಚಾರ ಸಭೆ ನಡೆಸಲಿದ್ದಾರೆ.ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.

ಉಪಚುನಾವಣೆ ಪ್ರಚಾರ ಇಂದು ಸಂಜೆ ಅಂತ್ಯ Read More »

error: Content is protected !!
Scroll to Top