ರಾಜ್ಯ

ಗಂಡಸರಿಗೂ ಸಿಗಲಿದೆಯೇ ಉಚಿತ ಪ್ರಯಾಣ ಭಾಗ್ಯ?

ಡಿ.ಕೆ. ಶಿವಕುಮಾರ್‌ ಹೇಳಿಕೆ ಹಿನ್ನೆಲೆಯಲ್ಲಿ ಗರಿಗೆದರಿದ ನಿರೀಕ್ಷೆ ಬೆಂಗಳೂರು: ಸರಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಭಾಗ್ಯ ಪುರುಷರಿಗೂ ಸಿಗಲಿದೆಯೇ? ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಯೊಂದು ಈ ನಿಟ್ಟಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಶಕ್ತಿ ಯೋಜನೆಯಡಿ ವಯೋಮಿತಿಗೊಳಪಡಿಸಿ ಗಂಡಸರಿಗೂ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಬಳಿಕ ಗಂಡಸರಿಗೂ ಫ್ರೀ ಬಸ್‌ ಪ್ರಯಾಣ ಸೌಲಭ್ಯ ಸಿಗುವ ಸಾಧ್ಯತೆ ಇದೆ ಎಂಬ ಆಶಾಭಾವನೆ ಗರಿಗೆದರಿದೆ.ವಿಧಾನಸೌಧದಲ್ಲಿ ನಿನ್ನೆ ಔಪಚಾರಿಕವಾಗಿ […]

ಗಂಡಸರಿಗೂ ಸಿಗಲಿದೆಯೇ ಉಚಿತ ಪ್ರಯಾಣ ಭಾಗ್ಯ? Read More »

ಪೀಠ ಪತನಗೊಳ್ಳುವ ಭೀತಿಯಲ್ಲಿ ಬೆಚ್ಚಿಬೀಳುತ್ತಿರುವ ಸಿದ್ದರಾಮಯ್ಯ : ಸುನಿಲ್‌ ಕುಮಾರ್‌ ಲೇವಡಿ

ಉಪಚುನಾವಣೆ ಸೋಲಿನ ವಾಸನೆ ಬಡಿದು ಬಡಬಡಿಕೆ ಎಂದು ಟೀಕೆ ಕಾರ್ಕಳ : ಉಪಚುನಾವಣೆ ಫಲಿತಾಂಶ ಬರುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೀತಿಗೊಂಡಿದ್ದಾರೆ. ಪೀಠದಿಂದ ಪತನಗೊಳ್ಳುವ ಕನಸು ಬೀಳುತ್ತಿರುವುದರಿಂದ ಪದೇಪದೆ ಬೆಚ್ಚಿ ಬೀಳುತ್ತಿದ್ದಾರೆ. ನಿರಾಯಾಸವಾಗಿ ಸಿಕ್ಕಿದ ಮುಖ್ಯಮಂತ್ರಿ ಗಾದಿಯನ್ನು ತಮ್ಮದೇ ಪಕ್ಷದವರು ಇನ್ನು ಕೆಲವೇ ದಿನಗಳಲ್ಲಿ ಕಸಿದುಕೊಳ್ಳುತ್ತಾರೆ ಎಂಬ ವಾಸನೆ ಬಡಿಯುತ್ತಿದ್ದಂತೆ ಪ್ರತಿಪಕ್ಷದ ಹೆಗಲ ಮೇಲೆ ಬಂದೂಕು ಇಟ್ಟು ಸ್ವಪಕ್ಷೀಯರನ್ನು ಬೆದರಿಸಲು ಹೊರಟಿದ್ದಾರೆ ಎಂದು ಶಾಸಕ ಸುನೀಲ್‌ ಕುಮಾರ್‌ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‌ನ ಒಬ್ಬೊಬ್ಬ ಶಾಸಕರಿಗೆ ಬಿಜೆಪಿ ತಲಾ

ಪೀಠ ಪತನಗೊಳ್ಳುವ ಭೀತಿಯಲ್ಲಿ ಬೆಚ್ಚಿಬೀಳುತ್ತಿರುವ ಸಿದ್ದರಾಮಯ್ಯ : ಸುನಿಲ್‌ ಕುಮಾರ್‌ ಲೇವಡಿ Read More »

ಬಂದೂಕು ತೋರಿಸಿ ಬೆದರಿಸಿ ಊಟ ಮಾಡಿಕೊಂಡು ಹೋಗಿದ್ದ ನಕ್ಸಲರು

ತೀವ್ರಗೊಂಡ ಕೂಂಬಿಂಗ್‌ ಕಾರ್ಯಾಚರಣೆ, ವಾಹನ ತಪಾಸಣೆ ಕೊಪ್ಪ: ಕೊಪ್ಪದ ಕಾಡಂಚಿನ ಗ್ರಾಮದ ಮನೆಯೊಂದಕ್ಕೆ ಭೇಟಿ ನೀಡಿದ್ದ ನಕ್ಸಲರು ಬಂದೂಕು ತೋರಿಸಿ ಮನೆಯವರನ್ನು ಬೆದರಿಸಿ ಅಡುಗೆ ತಯಾರಿಸಲು ಹೇಳಿ ಊಟ ಮಾಡಿಕೊಂಡು ಹೋಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಸುಬ್ಬೇ ಗೌಡ ಎಂಬವರ ಮನೆಯಲ್ಲಿ ನಕ್ಸಲರಿಗೆ ಸೇರಿದ್ದು ಎನ್ನಲಾಗಿರುವ ಮೂರು ಬಂದೂಕುಗಳು ಸಿಕ್ಕಿದ ಬಳಿಕ ಪೊಲೀಸರು ಮನೆಯವರನ್ನು ವಿಚಾರಣೆಗೊಳಪಡಿಸಿದ್ದು, ಆಗ ಮನೆಯವರು ತಮ್ಮನ್ನು ಬಂದೂಕು ತೋರಿಸಿ ಹೆದರಿಸಿರುವ ವಿಚಾರ ತಿಳಿಸಿದ್ದಾರೆ.ನಕ್ಸಲರ ಓಡಾಟದ

ಬಂದೂಕು ತೋರಿಸಿ ಬೆದರಿಸಿ ಊಟ ಮಾಡಿಕೊಂಡು ಹೋಗಿದ್ದ ನಕ್ಸಲರು Read More »

ಮುಡಾ ಹಗರಣದಲ್ಲಿ ಇಬ್ಬರು ಸಚಿವರೂ ಭಾಗಿ?

ವಿಚಾರಣೆ ವೇಳೆ ಒತ್ತಡ ಹಾಕಿದವರ ಹೆಸರು ಬಾಯಿಬಿಟ್ಟ ಮುಡಾ ಅಧಿಕಾರಿಗಳು ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯ ಆರೋಪಿಯಾಗಿರುವ ಮುಡಾ ಹಗರಣ ಈಗ ಇಬ್ಬರು ಸಚಿವರಿಗೂ ಸುತ್ತಿಕೊಳ್ಳುವ ಸಾಧ್ಯತೆ ಗೋಚರಿಸಿದೆ. ಜಾರಿ ನಿರ್ದೇಶನಾಲಯದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಮುಡಾದ ಅಧಿಕಾರಿಗಳು ಸೈಟ್‌ ನೀಡಲು ತಮ್ಮ ಮೇಲೆ ಒತ್ತಡ ಹಾಕಿದವರ ಹೆಸರು ಬಾಯಿಬಿಟ್ಟಿದ್ದು, ಈ ಪೈಕಿ ಇಬ್ಬರು ಸಚಿವರೂ ಇದ್ದಾರೆ ಎನ್ನಲಾಗುತ್ತಿದೆ.ಇ.ಡಿ ಮುಡಾದಲ್ಲಿ ಹಿಂದೆ ಕೆಲಸ ಮಾಡಿದ ಉನ್ನತ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ 50:50 ಅನುಪಾತದಲ್ಲಿ ಸೈಟ್ ಹಂಚಿಕೆ

ಮುಡಾ ಹಗರಣದಲ್ಲಿ ಇಬ್ಬರು ಸಚಿವರೂ ಭಾಗಿ? Read More »

ಬೀದರ್‌ನಲ್ಲಿ 13 ಸಾವಿರ ಎಕರೆಗೂ ಅಧಿಕ ಜಮೀನು ವಕ್ಫ್‌ ಪಾಲು | ಐತಿಹಾಸಿಕ ಸ್ಮಾರಕ, ಪ್ರವಾಸಿ ತಾಣ, ಸರ್ಕಾರಿ ಆಸ್ಪತ್ರೆಯೂ ವಕ್ಫ್‌ ಗೆ

ಬೆಂಗಳೂರು: ವಿಜಯಪುರದ ಬಳಿಕ ಈಗ ವಚನಕಾರ ಬಸವಣ್ಣನವರ ಕರ್ಮಭೂಮಿ ಎಂದೇ ಅರಿಯಲ್ಪಡುವ ಬೀದರ್‌ನಲ್ಲೂ ಸಾವಿರಾರು ಎಕರೆ ಭೂಮಿ ವಕ್ಫ್‌ ಕಬಳಿಸಿರುವುದು ಬಹಿರಂಗವಾಗಿದೆ. ಬೀದರ್‌ನಲ್ಲಿ ಬರೋಬ್ಬರಿ 13,295 ಎಕರೆ ಭೂಮಿ ವಕ್ಫ್ ಪಾಲಾಗಿದೆ. ತಲೆತಲಾಂತರಗಳಿಂದ ಕೃಷಿ ಮಾಡುತ್ತಿದ್ದ ಸಾವಿರಾರು ಎಕರೆ ರೈತರ ಜಮೀನಿನಲ್ಲಿ ವಕ್ಫ್ ಹೆಸರು ಸೇರಿಕೊಂಡಿದೆ. 13,295 ಎಕರೆ ಜಮೀನು ತನ್ನದು ಎಂದು ವಕ್ಫ್ ಬೋರ್ಡ್ ಅಧಿಕೃತ ದಾಖಲೆಯನ್ನು ನೀಡಿದೆ. ಐತಿಹಾಸಿಕ ಸ್ಮಾರಕಗಳು, ಪ್ರವಾಸಿ ತಾಣಗಳು, ಗ್ರಾಮಕ್ಕೆ ಗ್ರಾಮ, ಸರ್ಕಾರಿ ಆಸ್ಪತ್ರೆ, ಸಹಸ್ರಾರು ರೈತರ ಫಲವತ್ತಾದ ಕೃಷಿ

ಬೀದರ್‌ನಲ್ಲಿ 13 ಸಾವಿರ ಎಕರೆಗೂ ಅಧಿಕ ಜಮೀನು ವಕ್ಫ್‌ ಪಾಲು | ಐತಿಹಾಸಿಕ ಸ್ಮಾರಕ, ಪ್ರವಾಸಿ ತಾಣ, ಸರ್ಕಾರಿ ಆಸ್ಪತ್ರೆಯೂ ವಕ್ಫ್‌ ಗೆ Read More »

ಮುಸ್ಲಿಂ ಖದರಸ್ಥಾನಗಳಿಗೆ ಸಾವಿರಾರು ಎಕರೆ ಸರಕಾರಿ ಜಮೀನು ಮಂಜೂರಾತಿಗೆ ಕ್ರಮ

ದೇವಾಲಯಗಳು ದಶಕಗಳಿಂದ ಅರ್ಜಿ ಸಲ್ಲಿಸಿದರೂ ಸಿಗದ ಭೂಮಿ ಬೆಂಗಳೂರು : ರೈತರ, ಮಠ ಮಂದಿರಗಳ ಜಮೀನನನ್ನು ವಕ್ಫ್‌ ಮಂಡಳಿ ಕಬಳಿಸಿದ ಬೆನ್ನಿಗೆ ಈಗ ಮುಸ್ಲಿಮರ ಖಬರಸ್ಥಾನಗಳಿಗೆ ಸರಕಾರ ಸಾವಿರಾರು ಎಕರೆ ಜಮೀನು ಮಾಡಲು ಮುಂದಾಗಿರುವ ವಿಷಯ ಬಯಲಾಗಿದ್ದು, ಕಾಂಗ್ರೆಸ್‌ ಸರಕಾರ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.ರಾಜ್ಯದ 328 ಖಬರಸ್ಥಾನಗಳಿಗೆ ಸರ್ಕಾರಿ ಭೂಮಿ ನೀಡುವ ಬಗ್ಗೆ ಸರ್ಕಾರ ತೀರ್ಮಾನ ಮಾಡಿದೆ. ಸರ್ಕಾರಿ ಜಮೀನನ್ನು ಮಂಜೂರಾತಿ ನೀಡಲು ಸರ್ಕಾರ ಮುಂದಾಗಿದೆ. ಸುಮಾರು 2750 ಎಕರೆ ಭೂಮಿ ಮಂಜುರಾತಿ ನೀಡಲು ತಯಾರಿ

ಮುಸ್ಲಿಂ ಖದರಸ್ಥಾನಗಳಿಗೆ ಸಾವಿರಾರು ಎಕರೆ ಸರಕಾರಿ ಜಮೀನು ಮಂಜೂರಾತಿಗೆ ಕ್ರಮ Read More »

2025ನೇ ಸಾಲಿನ ಸರ್ಕಾರಿ ರಜೆ ಪಟ್ಟಿ ಬಿಡುಗಡೆ

ಬೆಂಗಳೂರು: ರಾಜ್ಯ ಸರ್ಕಾರ 2025ನೇ ಸಾಲಿನ ಸರ್ಕಾರಿ ರಜೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಇರುವ ಸರ್ಕಾರಿ ರಜೆಯನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ.ಭಾನುವಾರಗಳಂದು ಬರುವ ಗಣರಾಜ್ಯೋತ್ಸವ (26/01/2025), ಯುಗಾದಿ ಹಬ್ಬ (30/03/2025), ಮೂಹರಂ ಕಡೆ ದಿನ (06/07/2025) ಮತ್ತು ಮಹಾಲಯ ಅಮವಾಸ್ಯೆ (21/09/2025) ಹಾಗೂ ಎರಡನೇ ಶನಿವಾರದಂದು ಬರುವ ಕನಕದಾಸ ಜಯಂತಿ (08/11/2025) ನಮೂದಿಸಿರುವುದಿಲ್ಲ.ರಜೆ ದಿನಗಳನ್ನು ಸಾರ್ವತ್ರಿಕ ರಜಾ ದಿನಗಳು, ಪರಿಮಿತ ರಜಾ ದಿನಗಳು ಎಂದು ಎರಡು ಪಟ್ಟಿಯನ್ನು

2025ನೇ ಸಾಲಿನ ಸರ್ಕಾರಿ ರಜೆ ಪಟ್ಟಿ ಬಿಡುಗಡೆ Read More »

ಮುಡಾ ಹಗರಣ : ಹೈಕೋರ್ಟ್​ ವಿಭಾಗೀಯ ಪೀಠಕ್ಕೆ ಸಿದ್ದರಾಮಯ್ಯ ಮೇಲ್ಮನವಿ

ನ.23ರಂದು ವಿಚಾರಣೆಗೆ ದಿನ ನಿಗದಿ ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್​ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳು ತುರ್ತು ವಿಚಾರಣೆಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದಾಗ ತುರ್ತು ಅವಶ್ಯಕತೆ ಸೃಷ್ಟಿಯಾಗಿದೆ ನವೆಂಬರ್ 23ಕ್ಕೆ ವಿಚಾರಣೆ ನಡೆಸಬೇಕೆಂದು ಮುಖ್ಯಮಂತ್ರಿ ಪರ ವಕೀಲ ಅಭಿಷೇಕ್ ಸಿಂಘ್ವಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮನವಿ ಆಲಿಸಿ ವಿಚಾರಣೆಯನ್ನು ನವೆಂಬರ್ 23ಕ್ಕೆ ಹೈಕೋರ್ಟ್​ ವಿಭಾಗೀಯಪೀಠ ನಿಗದಿಪಡಿಸಿದೆ. ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲು

ಮುಡಾ ಹಗರಣ : ಹೈಕೋರ್ಟ್​ ವಿಭಾಗೀಯ ಪೀಠಕ್ಕೆ ಸಿದ್ದರಾಮಯ್ಯ ಮೇಲ್ಮನವಿ Read More »

ಪಶ್ಚಿಮ ಘಟ್ಟ ನದಿಗಳ ನೀರಿನ ಮೇಲೆ ಸೆಸ್‌! | ಅರಣ್ಯ ಸಂರಕ್ಷಣೆಗೆ ಹಣ ಸಂಗ್ರಹಿಸಲು ನೀರಿನ ಮೇಲೆ ಮೇಲ್ತೆರಿಗೆ ವಿಧಿಸಲು ಮುಂದಾದ ಸರಕಾರ

ಬೆಂಗಳೂರು: ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳ ನೀರು ಪೂರೈಕೆಯಾಗುವ ನಗರ, ಪಟ್ಟಣಗಳ ಜನರು ಬಳಸುವ ನೀರಿನ ಮೇಲೆ ಮೇಲ್ತೆರಿಗೆ (ಸೆಸ್‌) ಹಾಕಲು ಸರಕಾರ ಮುಂದಾಗಿದೆ. ಈ ಕುರಿತು ಅರಣ್ಯ ಸಚಿವ ಈಶ್ವರ್‌ ಖಂಡ್ರೆಯವರೇ ಆದೇಶ ಹೊರಡಿಸಿದ್ದಾರೆ.ಪಶ್ಚಿಮ ಘಟ್ಟ ಸಂರಕ್ಷಣೆಗೆ ʻಕಾಪುನಿಧಿʼ ಸಂಗ್ರಹ ಗುರಿ ಹೊಂದಿದ್ದು, ನೀರಿನ ಬಿಲ್‌ನಲ್ಲೇ ʻಹಸಿರು ಸೆಸ್ʼ ಸಂಗ್ರಹಕ್ಕೆ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರಕಟಣೆ ನೀಡಿದ್ದಾರೆ. ಪಶ್ಚಿಮ ಘಟ್ಟ ತುಂಗಾ,

ಪಶ್ಚಿಮ ಘಟ್ಟ ನದಿಗಳ ನೀರಿನ ಮೇಲೆ ಸೆಸ್‌! | ಅರಣ್ಯ ಸಂರಕ್ಷಣೆಗೆ ಹಣ ಸಂಗ್ರಹಿಸಲು ನೀರಿನ ಮೇಲೆ ಮೇಲ್ತೆರಿಗೆ ವಿಧಿಸಲು ಮುಂದಾದ ಸರಕಾರ Read More »

ಸಚಿವ ಜಮೀರ್‌ಗೆ ಜೀವ ಬೆದರಿಕೆ : ಪುನೀತ್‌ ಕೆರೆಹಳ್ಳಿ ಬಂಧನ

ಕರಿಯ ಎಂದರೆ ಹಾಸನ, ಮಂಡ್ಯ ಗಡಿ ದಾಟಲು ಬಿಡುವುದಿಲ್ಲ ಎಂದು ಧಮಕಿ ಬೆಂಗಳೂರು: ಸಚಿವ ಜಮೀರ್‌ ಅಹ್ಮದ್‌ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಪುನೀತ್‌ ಕೆರೆಹಳ್ಳಿ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ಬೆನ್ನಲ್ಲೇ ಅವರನ್ನು ಬಂಧಿಸಲಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ನ್ಯಾಯಾದೀಶರ ಮುಂದೆ ಹಾಜರು ಪಡಿಸಲಾಗಿತ್ತು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ

ಸಚಿವ ಜಮೀರ್‌ಗೆ ಜೀವ ಬೆದರಿಕೆ : ಪುನೀತ್‌ ಕೆರೆಹಳ್ಳಿ ಬಂಧನ Read More »

error: Content is protected !!
Scroll to Top