ರಾಜ್ಯ

ಇಂದು ಮದ್ಯ ಮಾರಾಟ ಬಂದ್‌ ಇಲ್ಲ

ಸಿಎಂ ಜೊತೆ ಮಾತುಕತೆ ನಡೆಸಿದ ಬಳಿಕ ಬಂದ್‌ ಕರೆ ವಾಪಸ್‌ ಬೆಂಗಳೂರು: ಇಂದು ನಡೆಯಬೇಕಿದ್ದ ಬಾರ್‌, ವೈನ್‌ಶಾಪ್‌ ಬಂದ್‌ ನಿರ್ಧಾರವನ್ನು ಹಿಂದೆಗೆದುಕೊಳ್ಳಲಾಗಿದೆ. ಮದ್ಯ ಮಾರಾಟ ಮಳಿಗೆಗಳು ಎಂದಿನಂತೆ ವ್ಯಾಪಾರ ನಡೆಸಲಿವೆ. ಸರ್ಕಾರದ ಮುಂದೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನವೆಂಬರ್ 20ರಂದು ರಾಜ್ಯಾದ್ಯಂತ ಬಾರ್‌ಗಳನ್ನು ಬಂದ್ ಮಾಡುವ ಘೋಷಣೆ ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿಗಳ ಜೊತೆಗಿನ ಸಂಧಾನ ಸಭೆ ಸಫಲವಾಗಿದ್ದು, ಬಾರ್‌ ಬಂದ್ ಕರೆಯನ್ನು ವಾಪಸ್ ಪಡೆಯಲಾಗಿದೆ.ನ.19ರಂದು ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕರುಣಾಕರ ಹೆಗಡೆ ನೇತೃತ್ವದ ನಿಯೋಗ ಮುಖ್ಯಮಂತ್ರಿ […]

ಇಂದು ಮದ್ಯ ಮಾರಾಟ ಬಂದ್‌ ಇಲ್ಲ Read More »

ಕಾಂಗ್ರೆಸ್‌ ಸರಕಾರ ಬಂದ ಬಳಿಕ ನಕ್ಸಲ್‌ ಚಟುವಟಿಕೆ ಹೆಚ್ಚಳ : ಸುನಿಲ್‌ ಕುಮಾರ್‌

ಸಾಹಿತಿ, ಬುದ್ಧಿಜೀವಿಗಳ ಸೋಗಿನಲ್ಲಿ ಇರುವ ನಗರ ನಕ್ಸಲರನ್ನು ಮಟ್ಟ ಹಾಕಲು ಆಗ್ರಹ ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಿಕ್ಕೆ ಬಂದ್ಮೇಲೆ ಮತ್ತೆ ನಕ್ಸಲರ ಚಟುವಟಿಕೆಗಳು ಮತ್ತು ಇನ್ನಿತರ ಅಪರಾಧ ಕೃತ್ಯಗಳು ಹೆಚ್ಚಾಗಿವೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ.ಹೆಬ್ರಿಯ ನಕ್ಸಲ್‌ ಎನ್‌ಕೌಂಟರ್‌ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮತ್ತು ಪೊಲೀಸರ ಕಾರ್ಯಚರಣೆಯನ್ನು ಸ್ವಾಗತ ಮಾಡುತ್ತೇನೆ. ಅನೇಕ ವರ್ಷಗಳಿಂದ ನಕ್ಸಲ್ ಚಟುವಟಿಕೆ ಸ್ತಬ್ದವಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಿಂದ ಮತ್ತೆ ನಕ್ಸಲ್ ಚಟುವಟಿಕೆಗಳು ಶುರುವಾಗಿವೆ.

ಕಾಂಗ್ರೆಸ್‌ ಸರಕಾರ ಬಂದ ಬಳಿಕ ನಕ್ಸಲ್‌ ಚಟುವಟಿಕೆ ಹೆಚ್ಚಳ : ಸುನಿಲ್‌ ಕುಮಾರ್‌ Read More »

ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್‌ : ಗೃಹ ಸಚಿವರು ಹೇಳಿದ್ದಿಷ್ಟು

2-3 ನಕ್ಸಲರಿಗೆ ಎನ್‌ಕೌಂಟರ್‌ನಲ್ಲಿ ಗುಂಡೇಟು? ಬೆಂಗಳೂರು: ವಿಕ್ರಂ ಗೌಡ ಎಂಬ ಗ್ರೇಡೆಡ್ ನಕ್ಸಲ್‌ನನ್ನು ಪೊಲೀಸರು ಸೋಮವಾರ ಸಂಜೆ ಎನ್‌ಕೌಂಟರ್ ಮಾಡಿದ್ದಾರೆ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.ಎನ್‌ಕೌಂಟರ್ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ 20 ವರ್ಷಗಳಿಂದ ವಿಕ್ರಂನನ್ನು ಪೊಲೀಸರು ಹುಡುಕುತ್ತಿದ್ದರು. ಆದರೆ ವಿಕ್ರಂ ತಪ್ಪಿಸಿಕೊಂಡು ಓಡಾಡುತ್ತಿದ್ದ. ಅನೇಕ ಎನ್‌ಕೌಂಟರ್‌ಗಳಲ್ಲಿ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದ. ಸೋಮವಾರ ಸಂಜೆ ವಿಕ್ರಂ ಗೌಡ ಎನ್‌ಕೌಂಟರ್ ಆಗಿದೆ. ಸೋಮವಾರ ಪೊಲೀಸರ ಮೇಲೆ ವಿಕ್ರಂ ಶೂಟ್ ಮಾಡಿದ್ದ. ಪೊಲೀಸರು ಪ್ರತಿದಾಳಿ ನಡೆಸಿ

ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್‌ : ಗೃಹ ಸಚಿವರು ಹೇಳಿದ್ದಿಷ್ಟು Read More »

ಮೂರು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ವಿಕ್ರಂ ಗೌಡ

ದಶಕಗಳ ಬಳಿಕ ಆರಂಭವಾದ ನಕ್ಸಲ್‌ ಚಟುವಟಿಕೆಗೆ ಆರಂಭದಲ್ಲೇ ಹೊಡೆತ ಕೊಟ್ಟ ಎನ್‌ಕೌಂಟರ್‌ ಕಾರ್ಕಳ: ನಕ್ಸಲ್ ನಿಗ್ರಹ ಪಡೆ ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆಸಿದ ಎನ್​ಕೌಂಟರ್​ನಲ್ಲಿ ನಕ್ಸಲ್ ನಾಯಕ‌ ವಿಕ್ರಂ ಗೌಡ ಹತ್ಯೆಯಾಗಿದ್ದಾನೆ. ಇದರೊಂದಿಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆ ಮತ್ತೊಮ್ಮೆ ಶುರುವಾಗಿದ್ದು ನಿಜ ಎನ್ನುವುದು ಸಾಬೀತಾಗಿದೆ. ಹೆಬ್ರಿಯ ಕಬ್ಬಿನಾಲೆ ಸಮೀಪದ ಕಾಡಂಚಿನ ನಿವಾಸಿಯಾಗಿದ್ದ ವಿಕ್ರಂ ಗೌಡ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ನಕ್ಸಲ್‌ ಚಟುವಟಿಕೆಗಳನ್ನು ನಡೆಸುತ್ತಿದ್ದು, ಮೂರು

ಮೂರು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ವಿಕ್ರಂ ಗೌಡ Read More »

ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿ

ಹೆಬ್ರಿ ಬಳಿ ನಕ್ಸಲ್‌ ತಡರಾತ್ರಿ ಪೊಲೀಸರಿಗೆ ಮುಖಾಮುಖಿಯಾದ ನಕ್ಸಲರು ಹೆಬ್ರಿ : ಹೆಬ್ರಿಯ ಸೀತಾಬೈಲು ಎಂಬಲ್ಲಿ ನ.18ರ ತಡರಾತ್ರಿ ನಕ್ಸಲ್‌ ನಿಗ್ರಹ ಪಡೆ (ಎಎನ್ಎಫ್) ನಡೆಸಿದ ಎನ್‌ಕೌಂಟರ್‌ಗೆ ನಕ್ಸಲ್ ನಾಯಕ ವಿಕ್ರಂ ಗೌಡ ಬಲಿಯಾಗಿದ್ದಾನೆ.ಒಂದೂವರೆ ದಶಕದಿಂದ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿದ್ದ ಹೆಬ್ರಿ ಕಬ್ಬಿನಾಲೆ ಮೂಲದ ವಿಕ್ರಂ ಗೌಡ ಪೊಲೀಸರಿಗೆ ತಲೆನೋವಾಗಿದ್ದ. ಅವನನ್ನು ಹಿಡಿಯಲು ಪೊಲೀಸರು ಮತ್ತು ನಕ್ಸಲ್‌ ನಿಗ್ರಹ ಪಡೆಯವರು ಸತತವಾಗಿ ಪ್ರಯತ್ನಿಸುತ್ತಿದ್ದರು. ನಿನ್ನೆ ರಾತ್ರಿ ಹೆಬ್ರಿ ಸಮೀಪ ಸೀತಾಂಬೈಲು ಎಂಬಲ್ಲಿ ಎಎನ್‌ಎಫ್‌ ಪಡೆಗೆ ನಕ್ಸಲರು ಎದುರಾಗಿದ್ದು,

ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿ Read More »

ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್‌ ತೂಗುಗತ್ತಿ | ಬಾಯಿಕ್ಯಾನ್ಸರ್‌ಗೆ ಮುಖ್ಯ ಕಾರಣ ಅಡಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ

ಮಂಗಳೂರು : ಕರಾವಳಿ ಜನರ ಆರ್ಥಿಕತೆಯ ಜೀವನಾಡಿಯಾಗಿರುವ ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್‌ ತೂಗುಗತ್ತಿ ನೇತಾಡಲಾರಂಭಿಸಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಅಂಗ ಸಂಸ್ಥೆ ಇಂಟರ್‌ನ್ಯಾಷನಲ್‌ ಏಜೆನ್ಸಿ ಫಾರ್‌ ರೀಸರ್ಚ್ ಆ್ಯಂಡ್‌ ಕ್ಯಾನ್ಸರ್‌(ಐಎಆರ್‌ಸಿ) ಅಡಿಕೆ ಬಳಕೆ ನಿಯಂತ್ರಿಸಿದರೆ ವಿಶ್ವದಲ್ಲಿ ಬಾಯಿ ಕ್ಯಾನ್ಸರ್‌ ಪ್ರಮಾಣವನ್ನು ಬಹುತೇಕ ತಗ್ಗಿಸಬಹುದು ಎಂದು ಇತ್ತೀಚೆಗೆ ವರದಿ ನೀಡಿದೆ. ಈ ವರದಿ ಅಡಿಕೆ ಬಳಕೆ ಮೇಲೆ ನಿಯಂತ್ರಣ ಹೇರಲು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಬೆಳೆಗಾರರಲ್ಲಿ ಆತಂಕ ಮೂಡಿದೆ. ಇಂಟರ್‌ ನ್ಯಾಷನಲ್‌ ಏಜೆನ್ಸಿ ಫಾರ್‌ ರೀಸರ್ಚ್ ಆ್ಯಂಡ್‌

ಅಡಿಕೆ ಮೇಲೆ ಮತ್ತೆ ಕ್ಯಾನ್ಸರ್‌ ತೂಗುಗತ್ತಿ | ಬಾಯಿಕ್ಯಾನ್ಸರ್‌ಗೆ ಮುಖ್ಯ ಕಾರಣ ಅಡಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ Read More »

ತಹಶೀಲ್ದಾರ್‌ ಕಚೇರಿಯಲ್ಲಿ ಆತ್ಮಹತ್ಯೆ ಪ್ರಕರಣ : ರಾಜ್ಯಪಾಲರಿಗೆ ಬಂದ ಪತ್ರದಲ್ಲಿದೆ ಬೇರೆಯೇ ಮಾಹಿತಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪಿಎ ಆರೋಪಿಯಾಗಿರುವ ಪ್ರಕರಣಕ್ಕೆ ತಿರುವು ಬೆಂಗಳೂರು: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ನ.5ರಂದು ಸಂಭವಿಸಿದ ಎಸ್‌ಡಿಎ ರುದ್ರೇಶ್ (ರುದ್ರಣ್ಣ ಯಡವಣ್ಣವರ) ಆತ್ಮಹತ್ಯೆ ಕೊಲೆ ಪ್ರಕರಣ ಎಂಬುದಾಗಿ ರಾಜ್ಯಪಾಲರಿಗೆ ಅನಾಮಧೇಯ ಪ್ರತವೊಂದು ಬರುವುದರೊಂದಿಗೆ ಈ ಪ್ರಕರಣ ತಿರುವು ಪಡೆದುಕೊಂಡಿದೆ. ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ ಎಂಬ ಒಕ್ಕಣೆಯುಳ್ಳ ಅನಾಮಧೇಯ ಪತ್ರವೊಂದು ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ, ಪ್ರಕರಣದ ತನಿಖಾಧಿಕಾರಿ ಸೇರಿ ಹಲವರಿಗೆ ಬಂದಿದೆ. ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ

ತಹಶೀಲ್ದಾರ್‌ ಕಚೇರಿಯಲ್ಲಿ ಆತ್ಮಹತ್ಯೆ ಪ್ರಕರಣ : ರಾಜ್ಯಪಾಲರಿಗೆ ಬಂದ ಪತ್ರದಲ್ಲಿದೆ ಬೇರೆಯೇ ಮಾಹಿತಿ Read More »

ಅಬಕಾರಿ ಇಲಾಖೆ ಭ್ರಷ್ಟಾಚಾರ ತನಿಖೆಗೆ ಎಸ್‌ಐಟಿ ರಚಿಸಿ : ಅಶೋಕ್‌ ಆಗ್ರಹ | ಮದ್ಯ ಮಾರಾಟಗಾರರ ಆರೋಪ ಸುಳ್ಳಾದರೆ ಲೈಸೆನ್ಸ್‌ ರದ್ದುಮಾಡಿ ಎಂದು ಸವಾಲು

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದಿರುವ 700 ಕೋಟಿ ರೂ. ಭ್ರಷ್ಟಾಚಾರ ಆರೋಪ ಕುರಿತು ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೊರಿಸಿದ್ದ ಶೇ.40ರಷ್ಟು ಕಮಿಷನ್ ಆರೋಪವನ್ನು ಲೋಕಾಯುಕ್ತ ಸಂಸ್ಥೆ ಸುಳ್ಳೆಂದು ಸಾಬೀತು ಮಾಡಿದೆ. ರಾಜ್ಯದ ಜನರಿಗೆ ಶೇ.40 ಪರ್ಸೆಂಟ್‌ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 100 ಪರ್ಸೆಂಟ್‌ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.18 ತಿಂಗಳ ಕಾಂಗ್ರೆಸ್ ಸರ್ಕಾರದ

ಅಬಕಾರಿ ಇಲಾಖೆ ಭ್ರಷ್ಟಾಚಾರ ತನಿಖೆಗೆ ಎಸ್‌ಐಟಿ ರಚಿಸಿ : ಅಶೋಕ್‌ ಆಗ್ರಹ | ಮದ್ಯ ಮಾರಾಟಗಾರರ ಆರೋಪ ಸುಳ್ಳಾದರೆ ಲೈಸೆನ್ಸ್‌ ರದ್ದುಮಾಡಿ ಎಂದು ಸವಾಲು Read More »

ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿವೆಯೇ ಎನ್ನುವ ಪ್ರಶ್ನೆಯೇ ತಪ್ಪು ಎಂದ ಸಿದ್ದರಾಮಯ್ಯ

ಅನರ್ಹ ಕಾರ್ಡ್‌ಗಳು ಮಾತ್ರ ರದ್ದು ಎಂದು ಸ್ಪಷ್ಟನೆ ಬೆಂಗಳೂರು : ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ವಾಪಾಸ್ ಪಡೆಯಬಹುದು. ಅರ್ಹರ ಕಾರ್ಡ್‌ಗಳಿಗೆ ಯಾವುದೇ ತೊಂದರೆ ಇಲ್ಲ.ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿವೆಯೇ ಎನ್ನುವ ಪ್ರಶ್ನೆಯೇ ಪೂರ್ತಿ ತಪ್ಪು. ಅನರ್ಹರ ಕಾರ್ಡ್‌ಗಳನ್ನು ವಾಪಾಸ್ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮದಾಗಿದೆ. ಈ ಬಗ್ಗೆ ಇನ್ನೂ ಆಹಾರ ಇಲಾಖೆ ಪರಿಶೀಲಿಸುತ್ತಿದೆ. ಅಂತಿಮ ತೀರ್ಮಾನ ಆಗಿಲ್ಲ. ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಪಿಎಲ್‌ ಕಾರ್ಡ್‌ಗಳು ರದ್ದಾಗುತ್ತಿರುವ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿವೆಯೇ ಎನ್ನುವ ಪ್ರಶ್ನೆಯೇ ತಪ್ಪು ಎಂದ ಸಿದ್ದರಾಮಯ್ಯ Read More »

ಸುಳ್ಳು ದೂರುಗಳ ಮೂಲಕ ಹೋರಾಟ ದಮನ : ವಿಜಯೇಂದ್ರ ಆರೋಪ

ಹೋರಾಟಗಾರರ ವಿರುದ್ಧ ಛೇಲಾಗಳನ್ನು ಛೂ ಬಿಡುತ್ತಿರುವ ಸಿದ್ದರಾಮಯ್ಯ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ದೂರುಗಳನ್ನು ದಾಖಲಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆದರಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಸ್ನೇಹಮಯಿ ಕೃಷ್ಣ ಅವರನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಜಯೇಂದ್ರ ತೀವ್ರವಾಗಿ ಕಿಡಿಕಾರಿದ್ದಾರೆ.ತಮ್ಮ ಹಾಗೂ ಕುಟುಂಬದ ಭ್ರಷ್ಟಾಚಾರ ಬಯಲು ಮಾಡಿ ನ್ಯಾಯಾಲಯದಲ್ಲಿ ಹೋರಾಡುತ್ತಿರುವ

ಸುಳ್ಳು ದೂರುಗಳ ಮೂಲಕ ಹೋರಾಟ ದಮನ : ವಿಜಯೇಂದ್ರ ಆರೋಪ Read More »

error: Content is protected !!
Scroll to Top