ರಾಜ್ಯ

ಸಿದ್ದರಾಮಯ್ಯನವರ ವರುಣಾ ಕ್ಷೇತ್ರದಲ್ಲೇ ಕಾಂಗ್ರೆಸ್‌ ಮುಖಂಡರಿಗೆ ಬಹಿಷ್ಕಾರ

ಸಿಎಂ ಕ್ಷೇತ್ರವಾದರೂ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಬ್ಯಾನರ್‌ ಹಾಕಿದ ಗ್ರಾಮಸ್ಥರು ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಧಾನಸಭೆ ಕ್ಷೇತ್ರವಾದ ವರುಣಾದಲ್ಲೇ ಜನರು ಕಾಂಗ್ರೆಸ್‌ ನಾಯಕರಿಗೆ ಬಹಿಷ್ಕಾರ ಹಾಕಿದ ಬೆಳವಣಿಗೆಯೊಂದು ನಿನ್ನೆ ನಡೆದಿದೆ. ವರುಣಾದ ನಗರ್ಲೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಗೆ ನಿಷೇಧ ಹೇರಲಾಗಿದೆ ಎಂಬ ಫ್ಲೆಕ್ಸ್‌ಗಳು ಅಲ್ಲಲ್ಲಿ ಕಾಣಿಸಿಕೊಂಡಿದ್ದವು. ಕ್ಷೇತ್ರಕ್ಕೆ ಯಾವುದೇ ಅನುದಾನ ಸಿಗದೆ, ಅಭಿವೃದ್ಧಿಯಾಗದಿರುವುದರಿಂದ ಬೇಸತ್ತ ಜನರು ಕಾಂಗ್ರೆಸ್‌ ಮೇಲೆ ಆಕ್ರೋಶಗೊಂಡು ಬ್ಯಾನರ್‌ಗಳನ್ನು ಹಾಕಿದ್ದರು. ಕಾಂಗ್ರೆಸ್ ಮುಖಂಡರಿಗೆ ನಮ್ಮ ಗ್ರಾಮದ ಒಳಗೆ ಪ್ರವೇಶವಿಲ್ಲ ಎಂದು ಬ್ಯಾನರ್‌ಗಳಲ್ಲಿ ಬರೆಯಲಾಗಿತ್ತು. ಸೋಷಿಯಲ್‌ ಮೀಡಿಯಾದಲ್ಲಿ […]

ಸಿದ್ದರಾಮಯ್ಯನವರ ವರುಣಾ ಕ್ಷೇತ್ರದಲ್ಲೇ ಕಾಂಗ್ರೆಸ್‌ ಮುಖಂಡರಿಗೆ ಬಹಿಷ್ಕಾರ Read More »

ಮಂಗಳೂರು ದರೋಡೆ ಕೃತ್ಯ ಆರೋಪಿಗಳ ಬಂಧನಕ್ಕೆ ನೆರವಾದದ್ದು ಹಳೆ ಫಿಯೆಟ್‌ ಕಾರು

ನಾಲ್ಕೇ ದಿನದಲ್ಲಿ ಪ್ರಕರಣ ಭೇದಿಸಲು ನಡೆಸಿದ ತನಿಖೆ ಥ್ರಿಲ್ಲರ್‌ ಸಿನೆಮಾಗಿಂತಲೂ ರೋಚಕ ಮಂಗಳೂರು: ಉಳ್ಳಾಲ ಸಮೀಪದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖದೀಮರನ್ನು ಮಂಗಳೂರು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತಮಿಳುನಾಡಿನ ತಿರುವನ್ನೇಲಿಯಲ್ಲಿ ಮುರುಗಂಡಿ ಥೇವರ್‌, ಮನಿವೆಣ್ಣನ್ ಹಾಗೂ ಪ್ರಕಾಶ್​ ಅಲಿಯಾಸ್ ಜೋಶ್ವಾ ಎಂಬವರನ್ನು ಬಂಧಿಸಲಾಗಿದೆ. ಮುರುಗಂಡಿ ಥೇವರ್ ಈ ಪ್ರಕರಣದ ಮುಖ್ಯ ಕಿಂಗ್‌ಪಿನ್ ಎನ್ನಲಾಗಿದೆ.ಆದರೆ ಈ ದರೋಡೆ ಕೃತ್ಯದಲ್ಲಿ ಇನ್ನೂ ಏಳು ಮಂದಿ ಇದ್ದಾರೆ. ಈ ಪೈಕಿ ಮೂವರು ನೇರವಾಗಿ ದರೋಡೆ ಕೃತ್ಯದಲ್ಲಿ

ಮಂಗಳೂರು ದರೋಡೆ ಕೃತ್ಯ ಆರೋಪಿಗಳ ಬಂಧನಕ್ಕೆ ನೆರವಾದದ್ದು ಹಳೆ ಫಿಯೆಟ್‌ ಕಾರು Read More »

ರಾಜ್ಯದಲ್ಲಿ ಇನ್ನೊಂದು ದರೋಡೆ : ಉದ್ಯಮಿಯ ಕಾರು, ಹಣ ಕಸಿದುಕೊಂಡು ಪರಾರಿ

ಇನ್ನೊವಾ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಮುಸುಕುಧಾರಿಗಳು ಮೈಸೂರು : ಉಳ್ಳಾಲ ತಾಲೂಕಿನ ಕೋಟೆಕಾರಿನ ಬ್ಯಾಂಕ್‌ ದರೋಡೆ ಮತ್ತು ಬೀದರ್‌ನಲ್ಲಿ ಇಬ್ಬರನ್ನು ಸಾಯಿಸಿ ಎಟಿಎಂಗೆ ತುಂಬಿಸುವ ಹಣ ದರೋಡೆ ಮಾಡಿದ ಕೃತ್ಯಗಳು ಮರೆಯುವ ಮುನ್ನವೇ ರಾಜ್ಯದಲ್ಲಿ ಇದೇ ಮಾದರಿಯ ಇನ್ನೊಂದ ದರೋಡೆ ನಡೆದಿದೆ. ಮೈಸೂರಿನಲ್ಲಿ ಹಾಡಹಗಲೇ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರು ಸಮೇತ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಕೇರಳ ಮೂಲದ ಉದ್ಯಮಿ ಸೂಫಿ ಎಂಬವರಿಗೆ ಸೇರಿದ ಇನ್ನೊವಾ

ರಾಜ್ಯದಲ್ಲಿ ಇನ್ನೊಂದು ದರೋಡೆ : ಉದ್ಯಮಿಯ ಕಾರು, ಹಣ ಕಸಿದುಕೊಂಡು ಪರಾರಿ Read More »

ಉಸ್ತುವಾರಿ ಸುರ್ಜೆವಾಲಾ ವಿರುದ್ಧವೇ ಕಾಂಗ್ರೆಸ್‌ ನಾಯಕರ ಬಂಡಾಯ

ಪಕ್ಷಪಾತಿ ಧೋರಣೆ ಅನುಸರಿಸುತ್ತಿರುವ ಸುರ್ಜೆವಾಲಾ ಬೇಡ ಎಂದು ಹೈಕಮಾಂಡ್‌ಗೆ ಮನವಿ ಬೆಂಗಳೂರು: ಹೈಕಮಾಂಡ್‌ ಎಷ್ಟೇ ಮದ್ದರೆದರೂ ಕಾಂಗ್ರೆಸ್‌ನ ಬಂಡಾಯ ಶಮನವಾಗುತ್ತಿಲ್ಲ. ಈಗ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ನ ಕರ್ನಾಟಕ ಉಸ್ತುವಾರಿಯಾಗಿರುವ ರಣದೀಪ್‌ ಸುರ್ಜೆವಾಲಾ ವಿರುದ್ಧವೇ ಬಂಡಾಯ ಸಾರಿದ್ದಾರೆ. ಕೆಲವು ಸಚಿವರು ಸುರ್ಜೆವಾಲಾ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಹಕ್ತಪಡಿಸಿದ್ದು, ಅವರನ್ನು ವಾಪಸು ಕರೆಸಿಕೊಳ್ಳಲು ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ.ನಮ್ಮ ಹಿನ್ನಡೆಗೆ ಸುರ್ಜೆವಾಲಾ ಕಾರಣರಾಗುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ವೇಳೆ ಕೆಲವು ಮಂದಿ ಸಚಿವರು

ಉಸ್ತುವಾರಿ ಸುರ್ಜೆವಾಲಾ ವಿರುದ್ಧವೇ ಕಾಂಗ್ರೆಸ್‌ ನಾಯಕರ ಬಂಡಾಯ Read More »

ಇಂದಿನಿಂದ ರಾಜ್ಯದಲ್ಲಿ ಬಿಯರ್‌ ಬಹಳ ದುಬಾರಿ

ಬಾಟಲಿಗೆ 15ರಿಂದ 50 ರೂ. ತನಕ ಹೆಚ್ಚಳ ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ಮದ್ಯ ಎಣ್ಣೆಪ್ರಿಯರ ಜೇಬು ಸುಡಲಿದೆ. ಸರ್ಕಾರ ಮತ್ತೊಮ್ಮೆ ಬಿಯರ್‌ ಬೆಲೆ ಪರಿಷ್ಕರಿಸಿದ್ದು, ಹೊಸ ಬೆಲೆ ಇಂದಿನಿಂದ ಜಾರಿಗೆ ಬರಲಿದೆ.ಅಬಕಾರಿ ಇಲಾಖೆಯಿಂದ ನಿರೀಕ್ಷಿತ ಮಟ್ಟದ ಆದಾಯ ಬರದೆ ಇರುವುದರಿಂದ ಸದ್ಯಕ್ಕೆ ಬಿಯರ್‌ ಬೆಲೆಯನ್ನು ಹೆಚ್ಚಿಸಲಾಗಿದೆ. ಪ್ರೀಮಿಯಂ (ಸ್ಟ್ರಾಂಗ್ ಬಿಯರ್‌) ಬಿಯರ್‌ ಬಾಟಲ್​ ಒಂದಕ್ಕೆ ಕನಿಷ್ಠ 15 ರಿಂದ 50 ರೂಪಾಯಿವರೆಗೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಕರ್ನಾಟಕದಲ್ಲಿ ಬಿಯರ್‌ ಬೆಲೆ ಜಾಸ್ತಿ ಮಾಡಬೇಕು ಎನ್ನುವ ಪ್ರಸ್ತಾವನೆ

ಇಂದಿನಿಂದ ರಾಜ್ಯದಲ್ಲಿ ಬಿಯರ್‌ ಬಹಳ ದುಬಾರಿ Read More »

ಕೋಟೆಕಾರು ಬ್ಯಾಂಕ್‌ ದರೋಡೆ : ಸ್ಥಳೀಯ ವ್ಯಕ್ತಿಯ ಕೈವಾಡ ಶಂಕೆ

ಪಕ್ಕಾ ಪ್ಲಾನ್‌ ಮಾಡಿ ನಡೆಸಿದ ಪರ್ಫೆಕ್ಟ್‌ ದರೋಡೆ ಮಂಗಳೂರು: ಇಡೀ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ ಕೋಟೆಕಾರು ಸಹಕಾರಿ ಬ್ಯಾಂಕ್‌ ದರೋಡೆ ಕೃತ್ಯದ ಹಿಂದೆ ಸ್ಥಳೀಯರ ಕೈವಾಡವಿರುವ ಬಲವಾದ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಬಹಳ ವ್ಯವಸ್ಥಿತವಾಗಿ ಪ್ಲಾನ್‌ ರೂಪಿಸಿ ಮಾಡಿದ ದರೋಡೆ. ಸ್ಥಳೀಯ ಎಲ್ಲ ವಿಚಾರಗಳನ್ನು ತಿಳಿದುಕೊಂಡು ಹಾಡಹಗಲೇ ದರೋಡೆ ಮಾಡಲಾಗಿದೆ. ಬ್ಯಾಂಕ್‌ ಇರುವ ಸ್ಥಳ, ಬ್ಯಾಂಕಿನಲ್ಲಿರುವ ಚಿನ್ನ ಮತ್ತು ನಗದು ಹಣದ ಮಾಹಿತಿ ಮತ್ತು ತಪ್ಪಿಸಿಕೊಳ್ಳುವ ದಾರಿ ತಿಳಿದವರು ಯಾರೋ

ಕೋಟೆಕಾರು ಬ್ಯಾಂಕ್‌ ದರೋಡೆ : ಸ್ಥಳೀಯ ವ್ಯಕ್ತಿಯ ಕೈವಾಡ ಶಂಕೆ Read More »

ಥೈರಾಯ್ಡ್‌, ಬಿಪಿ, ಶುಗರ್‌ನಿಂದ ಬಳಲುತ್ತಿದ್ದಾರೆ ಶರಣಾದ ನಕ್ಸಲರು

ವೈದ್ಯಕೀಯ ಪರೀಕ್ಷೆ ವೇಳೆ ತೀವ್ರ ಆರೋಗ್ಯ ಸಮಸ್ಯೆಯಿರುವುದು ಪತ್ತೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಇತ್ತೀಚೆಗೆ ಶರನಾಗಿರುವ ಮಲೆನಾಡಿನ ಆರು ನಕ್ಸಲರು ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಆರು ನಕ್ಸಲರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಅವರು ವೈದ್ಯರ ಬಳಿ ತಮ್ಮ ಅನಾರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ತನಿಖಾಧಿಕಾರಿ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತಿನಲ್ಲಿ ನಕ್ಸಲರನ್ನು ಗುರುವಾರ ರಾತ್ರಿಯೇ

ಥೈರಾಯ್ಡ್‌, ಬಿಪಿ, ಶುಗರ್‌ನಿಂದ ಬಳಲುತ್ತಿದ್ದಾರೆ ಶರಣಾದ ನಕ್ಸಲರು Read More »

ವರದಕ್ಷಿಣೆ ಕಿರುಕುಳ, ಅನೈತಿಕ ಸಂಬಂಧ : ಎಸ್‌ಐ ವಿರುದ್ಧ ಪತ್ನಿ ದೂರು

ಕಾಪು ಠಾಣೆಯಲ್ಲಿರುವಾಗ ಅನೈತಿಕ ಸಂಬಂಧವಿತ್ತು ಎಂದು ಆರೋಪಿಸಿದ ಪತ್ನಿ ಚಿಕ್ಕಮಗಳೂರು: ಕಳಸ ಪಿಎಸ್‌ಐ ನಿತ್ಯಾನಂದ ಗೌಡ ವಿರುದ್ಧ ಅವರ ಪತ್ನಿ ವರದಕ್ಷಿಣೆ ಕಿರುಕುಳ ಮತ್ತು ಅನೈತಿಕ ಸಂಬಂಧದ ಕುರಿತು ದೂರು ನೀಡಿದ್ದಾರೆ. ನ್ಯಾಯ ಕೇಳಿಕೊಂಡು ಪೊಲೀಸ್ ಠಾಣೆಗೆ ಬರುವ ಮಹಿಳೆಯರನ್ನು ನಿತ್ಯಾನಂದ ಗೌಡ ಶೋಷಿಸುತ್ತಾರೆ. ತನಗೆ50 ಲಕ್ಷ ರೂ. ವರದಕ್ಷಿಣೆ ತರಲು ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ಈ ದೂರಿನ ಆಧಾರದ ಮೇಲೆ ಎಸ್‌ಐ ನಿತ್ಯಾನಂದ ಗೌಡ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ

ವರದಕ್ಷಿಣೆ ಕಿರುಕುಳ, ಅನೈತಿಕ ಸಂಬಂಧ : ಎಸ್‌ಐ ವಿರುದ್ಧ ಪತ್ನಿ ದೂರು Read More »

ಕಡಿಮೆ ಮಕ್ಕಳಿರುವ ಶಾಲೆಗಳಿಗೆ ಬೀಗ?

ಶಾಲೆಗಳನ್ನು ಸಂಯೋಜಿಸಲು ಸುತ್ತೋಲೆ ಹೊರಡಿಸಿದ ಶಿಕ್ಷಣ ಇಲಾಖೆ ಬೆಂಗಳೂರು: ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನುವ ಅನುಮಾನವೊಂದು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಿಂದ ಉಂಟಾಗಿದೆ. ಕಡಿಮೆ ಮಕ್ಕಳು ಇರುವ ಶಾಲೆಯನ್ನು ಹತ್ತಿರದ ಮತ್ತೊಂದು ಶಾಲೆ ಜೊತೆ ಸಂಯೋಜಿಸಲು ಶಿಕ್ಷಣ ಇಲಾಖೆ ಸಿದ್ಧತೆ ಶುರು ಮಾಡಿದೆ. ಅದಕ್ಕಾಗಿ ಸಮಿತಿಯೊಂದನ್ನು ರಚನೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಇದು ಭಾರಿ ಕಳವಳಕ್ಕೆ ಕಾರಣವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಕಡಿಮೆ ಮಕ್ಕಳಿರುವ 2-3 ಶಾಲೆಗಳನ್ನು

ಕಡಿಮೆ ಮಕ್ಕಳಿರುವ ಶಾಲೆಗಳಿಗೆ ಬೀಗ? Read More »

ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಕುಂದಾಪುರ : ಬಳ್ಳೂರು ಸಮೀಪದ ಹೊಳೆಯ ಬದಿಗೆ ಹೋಗಿದ್ದು ಅಲ್ಲಿ ಸ್ಕೂಟಿಯನ್ನು ನಿಲ್ಲಿಸಿ, ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ. ಶೃತಿ ಹಾಗೂ ವಿನಯ್ ಅಂತರ್ಜಾತಿ ವಿವಾಹವಾಗಿದ್ದು, ಸಾಲಿಗ್ರಾಮದ ಮೂಲದ  ಶೃತಿ ಬ್ರಾಹ್ಮಣರಾಗದ್ದರು, ಕಾಲೇಜಲ್ಲಿರುವಾಗ ವಿನಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರಸ್ತುತವಾಗಿ ಬಳ್ಳೂರು ಸಮೀಪದ ಬಿಹೆಚ್ ನಲ್ಲಿ ನೆಲೆಸಿದ್ದ ವಿನಯ್ ಹಾಗೂ ಶೃತಿ ದಂಪತಿ, ಬಳ್ಳೂರಿನಲ್ಲಿ ಜಾಗ ಖರೀದಿ ಮಾಡಿದ್ದರು  ಈ ಸಂಬಂಧ ಬುಧವಾರ ಜಾಗದ ನೋಂದಣಿಗೆ ಹೋಗಿ ಮರುಳಿದ ಬಳಿಕ ಶ್ರುತಿ ಅವರು

ನದಿಗೆ ಹಾರಿ ಮಹಿಳೆ ಆತ್ಮಹತ್ಯೆ Read More »

error: Content is protected !!
Scroll to Top