ರಾಜ್ಯ

ಮುಡಾ ಹಗರಣ : ಇ.ಡಿಯಿಂದ ಸಿದ್ದರಾಮಯ್ಯ ವಿರುದ್ಧ ಮಹತ್ವದ ಸಾಕ್ಷ್ಯ ಸಂಗ್ರಹ

ಸೈಟ್‌ ಹಂಚಿಕೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವುದಕ್ಕೆ ಸಿಕ್ಕಿದೆ ಹಲವು ಪುರಾವೆ ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹಲವು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಮುಡಾದಲ್ಲಿ ಹಗರಣ ನಡೆದೇ ಇಲ್ಲ, ಎಲ್ಲ ವಿಪಕ್ಷಗಳ ಅಪಪ್ರಚಾರ ಎನ್ನುತ್ತಿರುವ ಸಿದ್ದರಾಮಯ್ಯನವರಿಗೆ ಈ ಸಾಕ್ಷ್ಯಗಳು ಉರುಳಾಗಿ ಪರಿಣಮಿಸಲಿವೆ ನ್ನಲಾಗಿದೆ. ಮುಡಾದ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಬಿ.ಎಂ ಪಾರ್ವತಿ ಅವರಿಗೆ ಹಸ್ತಾಂತರಿಸಿರುವ ಹಿಂದೆ ಹಲವಾರು ಅವ್ಯವಹಾರಗಳು ನಡೆದಿರುವುದಕ್ಕೆ ಹಲವು ಪುರಾವೆಗಳನ್ನು ಜಾರಿ […]

ಮುಡಾ ಹಗರಣ : ಇ.ಡಿಯಿಂದ ಸಿದ್ದರಾಮಯ್ಯ ವಿರುದ್ಧ ಮಹತ್ವದ ಸಾಕ್ಷ್ಯ ಸಂಗ್ರಹ Read More »

ಜಿಲ್ಲಾ ಸಮಿತಿಗಳಿಗೆ ಮರಳು ಬ್ಲಾಕ್‌ ಹಂಚಿಕೆ ಹೊಣೆ

ಹೊಸ ಮರಳು ನೀತಿ ಕುರಿತು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾಹಿತಿ ಬೆಂಗಳೂರು : ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರಗಳಲ್ಲಿ ಮರಳು ಸಿಗಲಿ ಎಂಬ ಉದ್ದೇಶದಿಂದ ಸರಕಾರ ಹೊಸ ಮರಳು ನೀತಿ ಜಾರಿಗೊಳಿಸಿದ್ದು, ಆಯವ್ಯಯದಲ್ಲಿ ಘೋಷಿಸಿರುವಂತೆ ಈ ಸಮಗ್ರ ಮರಳು ನೀತಿಯನ್ನು ಗಣಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಮರಳು ಪೂರೈಸುವ ಉದ್ದೇಶದಿಂದ ಮರಳು ಬ್ಲಾಕ್‌ಗಳನ್ನು ಹಂಚಿಕೆ ಮಾಡುವ ಹೊಣೆಗಾರಿಕೆಯನ್ನು ಜಿಲ್ಲಾ ಸಮಿತಿಗಳಿಗೆ ನೀಡಲು ನಿರ್ಧರಿಸಲಾಗಿದೆ.

ಜಿಲ್ಲಾ ಸಮಿತಿಗಳಿಗೆ ಮರಳು ಬ್ಲಾಕ್‌ ಹಂಚಿಕೆ ಹೊಣೆ Read More »

ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ವಿಸ್ತರಣೆ

ಮೊಬೈಲ್‌ ಫೋನ್‌ ಮೂಲಕವೇ ಟಿಕೆಟ್‌ನ ಹಣ ಪಾವತಿಸಬಹುದು ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಜತೆ ಚಿಲ್ಲರೆಗಾಗಿ ಜಗಳ ಮಾಡಬೇಕಿಲ್ಲ. ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಬಹುತೇಕ ಎಲ್ಲ ಕೆಎಸ್​ಆರ್​​ಟಿಸಿ ಬಸ್​ಗಳಿಗೂ ಇದೀಗ ವಿಸ್ತರಣೆಯಾಗಿದ್ದು, ಯುಪಿಐ ಆ್ಯಪ್ ಮೂಲಕವೇ ಟಿಕೆಟ್ ಹಣ ಪಾವತಿ ಮಾಡಬಹುದಾಗಿದೆ. ಸುಮಾರು 9,000 ಬಸ್‌ಗಳಲ್ಲಿ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆಯನ್ನು ನ.6ರಂದು ಕೆಎಸ್​ಆರ್​​ಟಿಸಿ ಬಸ್​​ಗಳಲ್ಲಿ ಆರಂಭಿಸಲಾಗಿತ್ತು. ಸದ್ಯ ನಿಗಮದ ಎಲ್ಲ 8,941 ಬಸ್‌ಗಳಿಗೆ ಈ ವ್ಯವಸ್ಥೆಯನ್ನು

ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ವಿಸ್ತರಣೆ Read More »

ಸಚಿವ ಜಮೀರ್‌ ಕೈ ಹಿಡಿದು ಕರೆತಂದ ಪಂಜುರ್ಲಿ ದೈವ ವೇಷಧಾರಿಗಳು : ತುಳುನಾಡಿನವರ ಆಕ್ರೋಶ

ಮನೋರಂಜನಾ ಕಾರ್ಯಕ್ರಮದಲ್ಲಿ ದೈವಾರಾಧನೆಯ ಅಣಕು ಬೆಂಗಳೂರು: ಕಾಂತಾರ ಸಿನೆಮಾ ಬಂದ ಬಳಿಕ ತುಳುನಾಡಿನ ಪವಿತ್ರ ದೈವಾರಾಧನೆಯನ್ನು ನಕಲು ಮಾಡಿ ಅದೇ ರೀತಿಯ ವೇಷಭೂಷಣ ಧರಿಸಿ ನೃತ್ಯ ಮಾಡುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಈ ಬಗ್ಗೆ ತುಳುನಾಡಿನವರು ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇದೇ ಮಾದರಿಯ ಘಟನೆಯೊಂದು ನಡೆದಿದ್ದು, ಇದರ ವೀಡಿಯೊ ವೈರಲ್‌ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಂಜುರ್ಲಿ ದೈವದಂತೆ ವೇಷ ಧರಿಸಿದ ಇಬ್ಬರು

ಸಚಿವ ಜಮೀರ್‌ ಕೈ ಹಿಡಿದು ಕರೆತಂದ ಪಂಜುರ್ಲಿ ದೈವ ವೇಷಧಾರಿಗಳು : ತುಳುನಾಡಿನವರ ಆಕ್ರೋಶ Read More »

ಕರಾವಳಿಯಲ್ಲಿ ಫೆಂಗಲ್‌ ಪ್ರಭಾವದಿಂದ ಭಾರಿ ಮಳೆ : ಸಿಡಿಲಿಗೆ ಓರ್ವ ಬಲಿ

ಅಕಾಲಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ; ಕಾರ್ಯಕ್ರಮಗಳೆಲ್ಲ ರದ್ದು ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಕರಾವಳಿಯಲ್ಲಿ ನಿನ್ನೆ ಸಂಜೆಯಿಂದೀಚೆಗೆ ಗುಡುಗು ಮಿಂಚಿನೊಂದಿಗೆ ಧಾರಾಕಾರ ಮಳೆ ಸುರಿಯುತ್ತಿದೆ. ಅಕಾಲಿಕ ಮಳೆ ಹಲವು ಅನಾಹುತಗಳನ್ನೂ ಸೃಷ್ಟಿಸಿದೆ. ಸಿಡಿಲು ಬಡಿದು ಪುತ್ತೂರಿನ ಕೆಯ್ಯೂರು ಸಮೀಪ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಬಂಟ್ವಾಳದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಹಾನಿಯಾಗಿದೆ. ಮನೆ ಮಂದಿ ಅದೃಷ್ಟವಶಾತ್‌ ಪಾರಾಗಿದ್ದಾರೆ. ಉಡುಪಿ ಜಿಲ್ಲೆಯ ಕೆಲವೆಡೆಗಳಲ್ಲಿ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿಯಾಗಿ ಜನರು ಸಮಸ್ಯೆ ಅನುಭವಿಸಿದ್ದಾರೆ. ನಿನ್ನೆ ರಾತ್ರಿಯಿಂದೀಚೆಗೆ ಎಡೆಬಿಡದೆ ಮಳೆ

ಕರಾವಳಿಯಲ್ಲಿ ಫೆಂಗಲ್‌ ಪ್ರಭಾವದಿಂದ ಭಾರಿ ಮಳೆ : ಸಿಡಿಲಿಗೆ ಓರ್ವ ಬಲಿ Read More »

ಬಲೂನು ಗಂಟಲಲ್ಲಿ ಸಿಲುಕಿ ಬಾಲಕ ಸಾವು

ಕಾರವಾರ: ಬಲೂನು ಗಂಟಲಲ್ಲಿ ಸಿಲುಕಿ 13 ವರ್ಷದ ಬಾಲಕ ಮೃತಪಟ್ಟ ಘಟನೆ ಉತ್ತನರ ಕನ್ನಡದ ಹಳಿಯಾಳ ಎಂಬಲ್ಲಿ ಸಂಭವಿಸಿದೆ. ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದ ನವೀನ ನಾರಾಯಣ ಬೆಳಗಾಂವಕರ್ (13) ಎಂಬ ವಿದ್ಯಾರ್ಥಿ ಮನೆಯಲ್ಲಿ ಆಟವಾಡುವಾಗುವಾಗ ಬಾಯಿಯಿಂದ ಬಲೂನು ಊದಿದ್ದು, ಆದರೆ ಈ ಬಲೂನು ಬಾಯಿಯೊಳಗೆ ಹೋಗಿ ಗಂಟಲಲ್ಲಿ ಸಿಲುಕಿತ್ತು. ಉಸಿರುಗಟ್ಟಿ ಒದ್ದಾಡುತಿದ್ದ ಈತನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಉಸಿರಾಟವಾಡಲು ಸಾಧ್ಯವಾಗದೆ ಕೊನೆಯುಸಿರೆಳೆದಿದ್ದಾನೆ. ಈತ ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ಬಲೂನು ಗಂಟಲಲ್ಲಿ ಸಿಲುಕಿ ಬಾಲಕ ಸಾವು Read More »

ಪರಿಶೀಲಿಸದೆ ಹೇಳಿಕೆ ನೀಡಿದ ಸಿದ್ದರಾಮಯ್ಯ : ಪೇಜಾವರ ಶ್ರೀ ಸ್ಪಷ್ಟನೆ

ಸಂವಿಧಾನ ಬದಲಿಸುವ ಹೇಳಿಕೆ ನೀಡಿಲ್ಲ; ಹಿಂದೂ ಸಮಾಜವನ್ನು ಹಣಿಯುವ ಪ್ರಯತ್ನ ಎಂದ ಶ್ರೀಗಳು ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಹೇಳದೆ ಇದ್ದ ಮಾತುಗಳಿಗೆ ಪ್ರತಿಕ್ರಿಯೆ ನೀಡಿ ವಿನಾಕಾರಣ ನನ್ನನ್ನು ವಿವಾದದಲ್ಲಿ ಸಿಲುಕಿಸಿದ್ದಾರೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.ಪೇಜಾವರ ಶ್ರೀಗಳು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ ಎಂಬ ಊಹೋಪೋಹಗಳಿಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಪೇಜಾವರ ಶ್ರೀ ಮನುಸ್ಮೃತಿಯ ಪ್ರತಿಪಾದಕರು. ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿದ್ದಾರೆ, ಮೇಲು-ಕೀಳು ಭಾವನೆ ಮಾಡುತ್ತಾರೆ ಎಂದೆಲ್ಲ ಟೀಕಿಸಿದ್ದರು. ಈ ಬಗ್ಗೆ

ಪರಿಶೀಲಿಸದೆ ಹೇಳಿಕೆ ನೀಡಿದ ಸಿದ್ದರಾಮಯ್ಯ : ಪೇಜಾವರ ಶ್ರೀ ಸ್ಪಷ್ಟನೆ Read More »

ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು? – ಯತ್ನಾಳ್‌ಗೆ ಹೈಕಮಾಂಡ್‌ ಪ್ರಶ್ನೆ

ಭಿನ್ನಮತೀಯ ಚಟುವಟಿಕೆ ನಡೆಸಿದ್ದಕ್ಕೆ ಶೋಕಾಸ್‌ ನೋಟಿಸ್‌ ಬೆಂಗಳೂರು: ಕರ್ನಾಟಕ ಬಿಜೆಪಿ ಬಣ ಜಗಳ ತಾರಕಕ್ಕೇರಿದ ಬೆನ್ನಲ್ಲೇ ಹೈಕಮಾಂಡ್ ಜಗಳ ಬಗೆಹರಿಸಲು ಮುಂದಾಗಿದೆ. ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ದಿಲ್ಲಿಯಲ್ಲಿ ವರಿಷ್ಠರನ್ನು ಭೇಟಿಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ರಾಜ್ಯಮಟ್ಟದ ಪಕ್ಷದ ನಾಯಕತ್ವದ ವಿರುದ್ಧ ನೀವು ಮಾಡುತ್ತಿರುವ ನಿರಂತರ ವಾಗ್ದಾಳಿ ಮತ್ತು ಪಕ್ಷದ ನಿರ್ದೇಶನಗಳನ್ನು

ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು? – ಯತ್ನಾಳ್‌ಗೆ ಹೈಕಮಾಂಡ್‌ ಪ್ರಶ್ನೆ Read More »

ಇನ್ನೊಂದು ದೊಡ್ಡ ಚುನಾವಣೆಗೆ ತಯಾರಾಗುತ್ತಿರುವ ಕಾಂಗ್ರೆಸ್‌

ಸೋಲು, ಒಳಜಗಳದಿಂದ ಕಳೆಗುಂದಿರುವ ಬಿಜೆಪಿ ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ನಾನಾ ಕಾರಣಗಳಿಂದಾಗಿ ಬಾಕಿಯಿರುವ ತಾಲೂಕು ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ ಚುನಾವಣೆ ಮುಂದಿನ ವರ್ಷ ನಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಸ್ವತಹ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಜಿಪಂ ಮತ್ತು ತಾಪಂ ಚುನಾವಣೆ ನಡೆಸುವ ಬಗ್ಗೆ ಸುಳಿವು ನೀಡಿದ್ದಾರೆ.ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್‌ ಡಿ.5ರಂದು ಹಾಸನದಲ್ಲಿ ನಡೆಯಲಿರುವ ಕಾಂಗ್ರೆಸ್‌ ಸಮಾವೇಶದ ಕುರಿತು ಮಾಹಿತಿ ನೀಡುವ ವೇಳೆ, ನಾವು ಯಾವುದೋ ಒಂದು ಉದ್ದೇಶ ಇಟ್ಟುಕೊಂಡು ವೇದಿಕೆ ಸಿದ್ಧ

ಇನ್ನೊಂದು ದೊಡ್ಡ ಚುನಾವಣೆಗೆ ತಯಾರಾಗುತ್ತಿರುವ ಕಾಂಗ್ರೆಸ್‌ Read More »

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಗಡುವು ಮತ್ತೆ ವಿಸ್ತರಣೆ

ಡಿ.31ರೊಳಗೆ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಲು ಸೂಚನೆ ಬೆಂಗಳೂರು: ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ನೀಡಿದ್ದ ಗಡುವನ್ನು ಸರ್ಕಾರ ಮತ್ತೆ ವಿಸ್ತರಿಸಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಡಿಸೆಂಬರ್ 4 ಕೊನೆ ದಿನವಾಗಿತ್ತು. ಈಗ ಡಿಸೆಂಬರ್ 31ರ ವರೆಗೆ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸಾರಿಗೆ ಇಲಾಖೆ ಈ ವರ್ಷದ ಕೊನೆಯ ದಿನದ ವರೆಗೆ ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಿಸಿದೆ. ರಾಜ್ಯದಲ್ಲಿ ಸುಮಾರು 2 ಕೋಟಿಯಷ್ಟು ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿತ್ತು. ಇಷ್ಟರ

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಗಡುವು ಮತ್ತೆ ವಿಸ್ತರಣೆ Read More »

error: Content is protected !!
Scroll to Top