ರಾಜ್ಯ

ಕಾಂತಾರ-1 ಚಿತ್ರತಂಡದ ಬಸ್‌ ಪಲ್ಟಿ : 6 ಮಂದಿಗೆ ಗಾಯ

ಉಡುಪಿ: ರಿಷಬ್‌ ಶೆಟ್ಟಿಯವರ ಕಾಂತಾರ-1 ಚಿತ್ರತಂಡ ಪ್ರಯಾಣಿಸುತ್ತಿದ್ದ ಮಿನಿಬಸ್‌ ಕೊಲ್ಲೂರು ಸಮೀಪ ನಿನ್ನೆ ರಾತ್ರಿ ಪಲ್ಟಿಯಾಗಿ ಆರು ಮಂದಿ ಜೂನಿಯರ್‌ ಕಲಾವಿದರು ಗಾಯಗೊಂಡಿದ್ದಾರೆ.ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಹಾಲ್ಕಲ್‌ನ ಆನೆಝರಿ ಎಂಬಲ್ಲಿ ಬಸ್‌ ಅಪಘಾತಕ್ಕೀಡಾಗಿದೆ. ಸ್ಕೂಟಿ ಅಡ್ಡಬಂದಾಗ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಬಸ್‌ ಮಗುಚಿ ಬಿದ್ದಿದೆ. ಬಸ್‌ನಲ್ಲಿ ಸುಮಾರು 20 ಜ್ಯೂನಿಯರ್ ಕಲಾವಿದರು ಇದ್ದರು. ಈ ಪೈಕಿ 6 ಮಂದಿಗೆ ಗಾಯವಾಗಿದ್ದು, ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. 2025ರ ಅಕ್ಟೋಬರ್​ 2ರಂದು ಈ […]

ಕಾಂತಾರ-1 ಚಿತ್ರತಂಡದ ಬಸ್‌ ಪಲ್ಟಿ : 6 ಮಂದಿಗೆ ಗಾಯ Read More »

ನಿಖಿಲ್‌ ಸೋಲಿನಿಂದ ಮನನೊಂದು ವಿಷ ಸೇವಿಸಿದ ಅಭಿಮಾನಿ

ರಾಮನಗರ : ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದಕ್ಕೆ ಬೇಸರಗೊಂಡು ಅವರ ಕಟ್ಟಾ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರದಲ್ಲಿ ಸಂಭವಿಸಿದೆ. ಆತನನ್ನು ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಪಟ್ಟಣದ ಕೂಡ್ಲೂರು ಬಳಿಯ ಶ್ರೀರಾಂಪುರ ಗ್ರಾಮದ ಮಂಜುನಾಥ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದವ.‘ನಾನು ನಿಖಿಲ್ ಅಭಿಮಾನಿ, ನನ್ನ ಸಾವಿಗೆ ನಾನೇ ಕಾರಣ, ಜೈ ಜೆಡಿಎಸ್’ ಎಂದು ಪತ್ರ ಬರೆದಿಟ್ಟು ಆತ ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕೊಂಡೊಯ್ದ ಕಾರಣ ಪ್ರಾಣ ಉಳಿದಿದೆ. ಪೊಲೀಸರು ಪ್ರಕರಣ ದಾಖಲಿಸಿ

ನಿಖಿಲ್‌ ಸೋಲಿನಿಂದ ಮನನೊಂದು ವಿಷ ಸೇವಿಸಿದ ಅಭಿಮಾನಿ Read More »

ಸಿ.ಪಿ.ಯೋಗೀಶ್ವರ್‌, ಅನ್ನಪೂರ್ಣ ಗೆಲುವು : ಬಿಜೆಪಿಗೆ ತೀವ್ರ ಮುಖಭಂಗ

ರಾಮನಗರ: ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ ಯೋಗೇಶ್ವರ್‌ ಗೆದ್ದು ಬೀಗಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಂಪ್‌ ಆದರೂ ಜನತೆ ಯೋಗೇಶ್ವರ್‌ ಕೈಹಿಡಿದಿದ್ದಾರೆ. ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ಗೆಲುವು ಸಾಧಿಸಿರುವುದರಿಂದ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಮೊದಲ 6 ಸುತ್ತಿನಲ್ಲಿ ನಿಖಿಲ್‌ ಮುನ್ನಡೆಯಲ್ಲಿದ್ದರು. ಆದರೆ ಚನ್ನಪಟ್ಟಣ ನಗರದ ಇವಿಎಂ ಓಪನ್‌ ಆಗುತ್ತಿದ್ದಂತೆ ಯೋಗೇಶ್ವರ್‌ ಅವರಿಗೆ ಭರ್ಜರಿ ಮುನ್ನಡೆ ಸಿಕ್ಕಿತ್ತು. ಈ ಮುನ್ನಡೆಯನ್ನು ಯೋಗೇಶ್ವರ್‌ ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದರು.ಯೋಗೇಶ್ವರ್‌ಗೆ 2 ಬಾರಿ ಸೋಲಿನ ಅನುಕಂಪ

ಸಿ.ಪಿ.ಯೋಗೀಶ್ವರ್‌, ಅನ್ನಪೂರ್ಣ ಗೆಲುವು : ಬಿಜೆಪಿಗೆ ತೀವ್ರ ಮುಖಭಂಗ Read More »

ಭೋವಿ ನಿಗಮ ಹಗರಣ : ತನಿಖಾಧಿಕಾರಿ ಕಿರುಕುಳದಿಂದ ಯುವತಿ ಆತ್ಮಹತ್ಯೆ

ಬೆಂಗಳೂರು: ಭೋವಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಿಐಡಿ ತನಿಖೆ ಎದುರಿಸಿದ್ದ ಯುವತಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಸಂಭವಿಸಿದ್ದು, ತನಿಖೆಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಭೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ಸ್‌ ಪೂರೈಕೆ ಮಾಡಿದ್ದ ಪದ್ಮನಾಭ ನಗರದ ಜೀವಾ (32) ಎಂಬ ಯುವತಿ ಪದ್ಮನಾಭ ನಗರದ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜೀವಾ ಭೋವಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿ ಮೂರು ತಿಂಗಳ ಹಿಂದೆ ಒಮ್ಮೆ ವಿಚಾರಣೆ ಎದುರಿಸಿದ್ದರು. ಬಳಿಕ

ಭೋವಿ ನಿಗಮ ಹಗರಣ : ತನಿಖಾಧಿಕಾರಿ ಕಿರುಕುಳದಿಂದ ಯುವತಿ ಆತ್ಮಹತ್ಯೆ Read More »

ಕೇಂದ್ರ ಸರಕಾರಿ ನೌಕರನಿಂದ 2.5 ಕೋ.ರೂ.ಸುಲಿಗೆ : ಹನಿಟ್ರ್ಯಾಪ್‌ ಗ್ಯಾಂಗ್‌ ಸೆರೆ

ಬೆಂಗಳೂರು: ಖಾಸಗಿ ವೀಡಿಯೊ ಇದೆ ಎಂದು ಬೆದರಿಸಿ ಕೇಂದ್ರ ಸರ್ಕಾರಿ ಊದ್ಯೋಗಿಯೊಬ್ಬರನ್ನು ಬ್ಲಾಕ್‌ಮೇಲ್‌ ಮಾಡಿ 2.5 ಕೋಟಿ ರೂ. ಹಣ ವಸೂಲಿ ಮಾಡಿದ್ದ ಬೆಂಗಳೂರಿನ ಹನಿಟ್ರ್ಯಾಪ್ ಗ್ಯಾಂಗನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ತಬ್ಸಂ ಬೇಗಂ, ಅಜೀಮ್ ಉದ್ದಿನ್, ಆನಂದ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ವಂಚನೆಗೊಳಗಾದ ವ್ಯಕ್ತಿಯನ್ನು ಆರ್‌ಟಿ ನಗರದ ಜಿಮ್ ಒಂದರಲ್ಲಿ ಆರೋಪಿ ತಬ್ಸಂ ಬೇಗಂ ಪರಿಚಯ ಮಾಡಿಕೊಂಡಿದ್ದಳು. ನಂತರದ ದಿನಗಳಲ್ಲಿ ಮಗು ಒಂದನ್ನು ದತ್ತು ಪಡೆದಿದ್ದೇನೆ ಎಂದು ಅವರಿಂದ ಸಹಾಯ ಪಡೆದಿದ್ದಳು.

ಕೇಂದ್ರ ಸರಕಾರಿ ನೌಕರನಿಂದ 2.5 ಕೋ.ರೂ.ಸುಲಿಗೆ : ಹನಿಟ್ರ್ಯಾಪ್‌ ಗ್ಯಾಂಗ್‌ ಸೆರೆ Read More »

ಟ್ರಾಯ್‌ ಹೆಸರಿನಲ್ಲಿ ಐಟಿ ಉದ್ಯೋಗಿಯನ್ನು ಬೆದರಿಸಿ 1.71 ಕೋ. ರೂ. ಲಪಟಾಯಿಸಿದ ಸೈಬರ್‌ ವಂಚಕರು

ಅಮೆರಿಕದಲ್ಲಿ ದುಡಿದು ಗಳಿಸಿದ ಹಣವೆಲ್ಲ ಸೈಬರ್‌ ವಂಚಕರ ಪಾಲು ಮಂಗಳೂರು : ಸೈಬರ್‌ ವಂಚನೆಗಳ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಜನರು ಇನ್ನೂ ಮೋಸ ಹೋಗುವುದು ನಿಂತಿಲ್ಲ. ಅದರಲ್ಲೂ ಬ್ಯಾಂಕ್‌, ಐಟಿ ಉದ್ಯೋಗಿಗಳಂತ ವಿದ್ಯಾವಂತರೇ ಆನ್‌ಲೈನ್‌ ವಂಚಕರ ಬಲೆಗೆ ಬಿದ್ದು ಭಾರಿ ಮೊತ್ತದ ಹಣ ಕಳೆದುಕೊಳ್ಳುತ್ತಿರುವುದು ನಿತ್ಯ ಸಂಭವಿಸುತ್ತಿರುತ್ತದೆ. ಮಂಗಳೂರಿನಲ್ಲಿ ಇತ್ತೀಚೆಗೆ ಇದೇ ಮಾದರಿಯ ವಂಚನೆಯೊಂದು ನಡೆದಿದ್ದು, ಅಮೆರಿಕದಲ್ಲಿ ಐಟಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಮೂಲತಃ ಮುಂಬಯಿಯ ವ್ಯಕ್ತಿಯೊಬ್ಬರು ಬರೋಬ್ಬರಿ 1.71 ಕೋ. ರೂ. ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ನ.

ಟ್ರಾಯ್‌ ಹೆಸರಿನಲ್ಲಿ ಐಟಿ ಉದ್ಯೋಗಿಯನ್ನು ಬೆದರಿಸಿ 1.71 ಕೋ. ರೂ. ಲಪಟಾಯಿಸಿದ ಸೈಬರ್‌ ವಂಚಕರು Read More »

ವಿಕ್ರಂ ಗೌಡ ಸಹಚರರಿಗಾಗಿ ವ್ಯಾಪಕ ಶೋಧ

ಗಡಿಭಾಗಗಳಲ್ಲಿ ನಾಕಾಬಂಧಿ ಹಾಕಿ ವಾಹನ ತಪಾಸಣೆ ಕಾರ್ಕಳ : ಎನ್‌ಕೌಂಟರ್‌ಗೆ ಬಲಿಯಾಗಿರುವ ನಕ್ಸಲ್ ನಾಯಕ ವಿಕ್ರಂ ಗೌಡನ ಸಹಚರರ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹೆಬ್ರಿಯ ಪೀತಬೈಲಿನಲ್ಲಿ ಎನ್‌ಕೌಂಟರ್‌ ನಡೆಯುವ ಸಂದರ್ಭದಲ್ಲಿ ವಿಕ್ರಂ ಗೌಡನ ಜೊತೆಗೆ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಇದ್ದ. ಅವರು ಕಾಡಿನೊಳಗೆ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಎಎನ್‌ಎಫ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಇವರಲ್ಲದೆ ನಕ್ಸಲ್‌ ತಂಡದಲ್ಲಿ ಇನ್ನೂ ಕೆಲವರಿದ್ದು, ಒಟ್ಟು ಆರು ಮಂದಿ ಬಂದಿರುವ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌

ವಿಕ್ರಂ ಗೌಡ ಸಹಚರರಿಗಾಗಿ ವ್ಯಾಪಕ ಶೋಧ Read More »

ವಿಕ್ರಂ ಗೌಡ ಎನ್‌ಕೌಂಟರ್‌ ಕುರಿತು ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆಗೆ ಒತ್ತಾಯ

ಎನ್‌ಕೌಂಟರ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸುಧಾರಿತ ನಕ್ಸಲರು ಬೆಂಗಳೂರು: ನಕ್ಸಲ್‌ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್‌ ನಕಲಿ ಎಂಬ ದಟ್ಟ ಅನುಮಾನಗಳಿರುವ ಹಿನ್ನೆಲೆಯಲ್ಲಿ ಎನ್‌ಕೌಂಟರ್‌ನ ಸಾಚಾತನ ತಿಳಿಯಲು ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕೆಂದು ಸುಧಾರಿತ ನಕ್ಸಲೀಯರು ಒತ್ತಾಯಿಸಿದ್ದಾರೆ. ವಿಕ್ರಂ ಗೌಡ ಅಲಿಯಾಸ್ ವಿಕ್ರಮ್ ಗೌಡ್ಲುವನ್ನು ಸೋಮವಾರ ರಾತ್ರಿ ಹೆಬ್ರಿಯ ಪೀತಬೈಲಿನಲ್ಲಿ ನಕ್ಸಲ್‌ ನಿಗ್ರಹ ಪಡೆಯವರು ಎನ್‌ಕೌಂಟರ್‌ ಮಾಡಿದ್ದಾರೆ. ಈ ಎನ್‌ಕೌಂಟರ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸುಧಾರಿತ ನಕ್ಸಲೀಯರು ಎನ್‌ಕೌಂಟರ್ ನಿಜವೋ ನಕಲಿಯೋ ಎಂದು ತಿಳಿಯಲು ನಿವೃತ್ತ

ವಿಕ್ರಂ ಗೌಡ ಎನ್‌ಕೌಂಟರ್‌ ಕುರಿತು ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆಗೆ ಒತ್ತಾಯ Read More »

ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಬಂಗಾರಪ್ಪ ಕೆಂಡಾಮಂಡಲ

ಆನ್‌ಲೈನ್‌ ಅಭಿಪ್ರಾಯ ಸಂಗ್ರಹ ವೇಳೆ ಸಚಿವರನ್ನು ಕೆಣಕಿದ ವಿದ್ಯಾರ್ಥಿ ಬೆಂಗಳೂರು : ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ಓರ್ವ ವಿದ್ಯಾರ್ಥಿ ಸಚಿವ ಮಧು ಬಂಗಾರಪ್ಪ ಎದುರೇ ಹೇಳಿದ್ದು, ಇದರಿಂದ ಕೆಂಡಾಮಂಡಲವಾದ ಮಧು ಬಂಗಾರಪ್ಪ ಆ ವಿದ್ಯಾರ್ಥಿಯನ್ನು ಹುಡುಕಿ ಕ್ರಮ ಕೈಗೊಳ್ಳಬೇಖೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ ಘಟನೆ ನಡೆದಿದೆ.ಬುಧವಾರ ವಿಧಾನಸೌಧದಲ್ಲಿ ನೀಟ್​ ಕೋಚಿಂಗ್​ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಉದ್ಘಾಟನೆ ಮುಗಿದು ಆನ್‌ಲೈನ್‌ನಲ್ಲಿ ಸಂವಾದ ನಡೆಸುವಾಗ ಓರ್ವ ವಿದ್ಯಾರ್ಥಿ ಶಿಕ್ಷಣ ಸಚಿವ

ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಬಂಗಾರಪ್ಪ ಕೆಂಡಾಮಂಡಲ Read More »

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್‌

ಎರಡು ತಿಂಗಳ ಹಿಂದೆಯಷ್ಟೇ ವರ್ಗಾವಣೆಯಾಗಿದ್ದ ಬಂದಿದ್ದ ಅಧಿಕಾರಿಯ ಮನೆಗೆ ದಾಳಿ ಮಂಗಳೂರು: ಲೋಕಾಯುಕ್ತ ಅಧಿಕಾರಿಗಳ ತಂಡ ಗುರುವಾರ ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಅದರಂತೆ ಮಂಗಳೂರಿನಲ್ಲಿ ಓರ್ವ ಅಧಿಕಾರಿಯ ಮನೆ ಮೇಲೂ ದಾಳಿಯಾಗಿದೆ.ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಬೆಳಗ್ಗೆ ದಾಳಿ ನಡೆಸಿ ಶಾಕ್‌ ನೀಡಲಾಗಿದ್ದು, ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.ಲೋಕಾಯುಕ್ತ ಎಸ್‌ಪಿ ನಟರಾಜ್ ನೇತೃತ್ವದಲ್ಲಿ ಏಕಕಾಲದಲ್ಲಿ ಅಧಿಕಾರಿಗಳ ತಂಡ ಮಂಗಳೂರಿನ

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್‌ Read More »

error: Content is protected !!
Scroll to Top