ರಾಜ್ಯ

ಎಲ್ಲಿ ಹೋದರು ಅಳಿದುಳಿದ ನಕ್ಸಲರು?

ಮರಳಿ ಕೇರಳದ ಕಾಡು ಸೇರಿಕೊಂಡಿರುವ ಶಂಕೆ ಕಾರ್ಕಳ : ನಕ್ಸಲ್‌ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿಯಾದ ಬಳಿಕ ಅಳಿದುಳಿದ ನಕ್ಸಲರೆಲ್ಲ ಮರಳಿ ಕೇರಳದತ್ತ ಪಲಾಯನ ಮಾಡಿರುವ ಶಂಕೆಯಿದೆ. ವಿಕ್ರಂ ಗೌಡ ಎನ್‌ಕೌಂಟರ್‌ ಆದ ಬಳಿಕ ಕಾರ್ಕಳ, ಚಿಕ್ಕಮಗಳೂರು ಮತ್ತಿತರೆಡೆ ನಕ್ಸಲ್‌ ನಿಗ್ರಹ ಪಡೆಯವರು ಪೊಲೀಸರೊಂದಿಗೆ ತೀವ್ರ ಹುಡುಕಾಟ ನಡೆಸಿದರೂ ನಕ್ಸಲರ ಜಾಡು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಕಾಡಿನಿಂದ ನಾಡಿಗಿಳಿದು ವಾಹನದ ಮೂಲಕ ಪರಾರಿಯಾಗುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಸಂಪಾಜೆ, ಕೊಪ್ಪ ಸೇರಿದಂತೆ ಆಯಕಟ್ಟಿನ ಜಾಗಗಳಲ್ಲಿ ನಾಕಾಬಂಧಿ ಹಾಕಿ ತಪಾಸಣೆಯನ್ನೂ […]

ಎಲ್ಲಿ ಹೋದರು ಅಳಿದುಳಿದ ನಕ್ಸಲರು? Read More »

3 ಕೋ. ರೂ. ಮೌಲ್ಯದ ಮೊಬೈಲ್‌ ಫೋನ್‌ ದಾರಿಮಧ್ಯೆ ಕಳ್ಳತನ

ಬೇರೊಂದು ಟ್ರಕ್‌ಗೆ ಲೋಡ್‌ ಮಾಡಿಕೊಂಡು ಹೋಗಿರುವ ಅನುಮಾನ ಬೆಂಗಳೂರು: ದಿಲ್ಲಿಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 3 ಕೋ. ರೂ. ಮೌಲ್ಯದ ಮೊಬೈಲ್‌ ಫೋನ್‌ಗಳನ್ನು ಕಂಟೈನರ್‌ ಚಾಲಕನೇ ಕದ್ದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಖಾಲಿ ಕಂಟೈನರ್‌ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ಪತ್ತೆಯಾಗಿದೆ. ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ ಮೊಬೈಲ್​ ಫೋನ್‌ಗಳನ್ನು ದಿಲ್ಲಿಯಿಂದ ಬೆಂಗಳೂರಿಗೆ ಕಂಟೈನರ್‌ನಲ್ಲಿ ಸಾಗಿಸಲಾಗುತ್ತಿತ್ತು. ಎನ್​ಎಲ್ 01 ಎಎಫ್ 2743 ನೋಂದಣಿಯ ಕಂಟೇನರ್​ನಲ್ಲಿ ದಿಲ್ಲಿಯಿಂದ ಬೆಂಗಳೂರಿಗೆ ಮೊಬೈಲ್ ಸಾಗಣೆ ಮಾಡುವಾಗ ಕಳ್ಳತನವಾಗಿದೆ. ಪೆರೇಸಂದ್ರೆ

3 ಕೋ. ರೂ. ಮೌಲ್ಯದ ಮೊಬೈಲ್‌ ಫೋನ್‌ ದಾರಿಮಧ್ಯೆ ಕಳ್ಳತನ Read More »

ಸಚಿವ ಮಧು ಬಂಗಾರಪ್ಪಗೆ ಏಕವಚನದಲ್ಲಿ ನಿಂದನೆ : ದೂರು ದಾಖಲು

ಶಿವಮೊಗ್ಗ : ಕೆಲದಿನಗಳ ಹಿಂದೆಯಷ್ಟೇ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ಸಚಿವ ಮಧು ಬಂಗಾರಪ್ಪ ಎದುರೇ ಹೇಳಿದ್ದು ಭಾರಿ ವಿವಾದಕ್ಕೊಳಗಾಗಿತ್ತು. ಈಗ ಮಧು ಬಂಗಾರಪ್ಪನವರ ಊರಿನ ವ್ಯಕ್ತಿಯೇ ಅವರನ್ನು ನಿಂದಿಸಿದ ವೀಡಿಯೊ ಸದ್ದು ಮಾಡುತ್ತಿದೆ. ಸೋಷಿಯಲ್‌ ಮೀಡಿಯಾ ಎಕ್ಸ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮೋಹಿತ್ ನರಸಿಂಹ ಮೂರ್ತಿ ಎಂಬಾತನ ವಿರುದ್ಧ ಶಿವಮೊಗ್ಗದ ವಿನೋಬ ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮಧು ಬಂಗಾರಪ್ಪ ವಿದ್ಯಾರ್ಥಿಗಳ

ಸಚಿವ ಮಧು ಬಂಗಾರಪ್ಪಗೆ ಏಕವಚನದಲ್ಲಿ ನಿಂದನೆ : ದೂರು ದಾಖಲು Read More »

ಈ ಸಲ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆಯಿಲ್ಲ

ಕಳೆದ ವರ್ಷದಂತೆಯೇ ಪ್ರಶ್ನೆ ಪತ್ರಿಕೆ ಇರಲಿದೆ ಎಂದು ಸ್ಪಷ್ಟನೆ ಬೆಂಗಳೂರು: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಕಳೆದ ವರ್ಷದ ಮಾದರಿಯಲ್ಲೇ ಪ್ರಶ್ನೆಪತ್ರಿಕೆ ಇರುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಶ್ನೆ ಪತ್ರಿಕೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುರುವ ಸುದ್ದಿ ಸುಳ್ಳು. 2024-25ನೇ ಸಾಲಿನ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಮಂಡಳಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ ಎಂದು ಕರ್ನಾಟಕ

ಈ ಸಲ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆಯಿಲ್ಲ Read More »

ಮತ್ತೊಂದು ಭ್ರಷ್ಟಾಚಾರ ಪ್ರಕರಣದ ಸುಳಿಯಲ್ಲಿ ಸಚಿವ ಚಲುವರಾಯಸ್ವಾಮಿ

ಬಾರ್‌ ಲೈಸೆನ್ಸ್‌ ನೀಡಲು ನಡೆದ ಲಂಚದ ಮಾತುಕತೆಯಲ್ಲಿ ಸಚಿವರ ಹೆಸರು ಉಲ್ಲೇಖ ಬೆಂಗಳೂರು: ಕೃಷಿ ಸಚಿವ ಚಲುವರಾಯಸ್ವಾಮಿ ಮತ್ತೊಂದು ಲಂಚದ ಸುಳಿಯಲ್ಲಿ ಸಿಲುಕಿದ್ದಾರೆ. ಬಾರ್‌ ಲೈಸೆನ್ಸ್‌ ನೀಡಲು ಕಾಂಗ್ರೆಸ್‌ ಕಾರ್ಯಕರ್ತರೊಬ್ಬರಿಂದಲೇ ಅಬಕಾರಿ ಅಧಿಕಾರಿಗಳು ಲಕ್ಷಗಟ್ಟಲೆ ಲಂಚ ಕೇಳಿದ ಪ್ರಕರಣದಲ್ಲಿ ಮಂಡ್ಯದ ಉಸ್ತುವಾರಿ ಸಚಿವರೂ ಆಗಿರುವ ಚಲುವರಾಯಸ್ವಾಮಿಯ ಹೆಸರೂ ಪ್ರಸ್ತಾಗೊಂಡಿದ್ದು, ಈಗ ಈ ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಮಂಡ್ಯದ ಚಂದೂಪುರದಲ್ಲಿ ಬಾರ್‌​​ಗೆ ಲೈಸೆನ್ಸ್‌ ನೀಡಲು ಲಂಚ ಕೇಳಿದ ಪ್ರಕರಣ ಸಂಬಂಧ ನೀಡಲಾಗಿರುವ ದೂರಿನ ಜತೆ

ಮತ್ತೊಂದು ಭ್ರಷ್ಟಾಚಾರ ಪ್ರಕರಣದ ಸುಳಿಯಲ್ಲಿ ಸಚಿವ ಚಲುವರಾಯಸ್ವಾಮಿ Read More »

ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದ ಸ್ವಾಮೀಜಿ ವಿರುದ್ಧ ಕೇಸ್‌

ಭಾರಿ ವಿವಾದಕ್ಕೀಡಾಗಿದ್ದ ಸ್ವಾಮೀಜಿಯ ಹೇಳಿಕೆ ಬೆಂಗಳೂರು: ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಹೊರಿಸಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸ್ವಾಮೀಜಿಯ ಹೇಳಿಕೆಗಳು ಪ್ರಚೋದನಕಾರಿಯಾಗಿದ್ದು, ಕೋಮು ಸೌಹಾರ್ದಕ್ಕೆ ಧಕ್ಕೆ ತರಬಹುದು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.ನವೆಂಬರ್ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ವತಿಯಿಂದ ವಕ್ಫ್ ಬೋರ್ಡ್ ವಿರುದ್ಧ ನಡೆದ ಪ್ರತಿಭಟನಾ

ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದ ಸ್ವಾಮೀಜಿ ವಿರುದ್ಧ ಕೇಸ್‌ Read More »

ಸಂಪುಟ ಸರ್ಜರಿಗೆ ಹೈಕಮಾಂಡ್‌ ನಕಾರ : ಸಚಿವರಾಗಲು ಕಾಯುತ್ತಿದ್ದವರಿಗೆ ನಿರಾಶೆ

ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲಷ್ಟೇ ಅನುಮತಿ ಬೆಂಗಳೂರು: ಸದ್ಯಕ್ಕೆ ಸಂಪುಟ ಪುನರ್‌ ರಚನೆ ಬೇಡ ಎಂದು ಹೈಕಮಾಂಡ್‌ ಹೇಳಿರುವುದರಿಂದ ಮಂತ್ರಿಯಾಗಲು ಕಾಯುತ್ತಿದ್ದವರಿಗೆ ಭಾರಿ ನಿರಾಶೆಯಾಗಿದೆ. ಸಂಪುಟ ಪುನರ್‌ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಹೈಕಮಾಂಡ್‌ ಜೊತೆ ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಿನ್ನೆ ದಿಲ್ಲಿಗೆ ಹೋಗಿದ್ದರು. ಈ ಮಾತುಕತೆಯಲ್ಲಿ ಹೈಕಮಾಂಡ್‌ ನಾಯಕರು ಸಂಪುಟ ಪುನರ್‌ ರಚನೆ ಈಗ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟ ಸರ್ಜರಿಗೆ ಹೈಕಮಾಂಡ್‌ ನಕಾರ : ಸಚಿವರಾಗಲು ಕಾಯುತ್ತಿದ್ದವರಿಗೆ ನಿರಾಶೆ Read More »

ಟಾಯ್ಲೆಟ್‌ ಕಮೋಡ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆ

ರಾಮನಗರ: ಜಿಲ್ಲೆಯ ಹಾರೋಹಳ್ಳಿ ಸಮೀಪದ ದಯಾನಂದ ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆಯಾಗಿರುವ ಅಮಾನವೀಯ ಘಟನೆಯೊಂದು ನಡೆದಿದೆ. ಆಸ್ಪತ್ರೆಯ ರೇಡಿಯಾಲಜಿ ಡಿಪಾರ್ಟ್‌ಮೆಂಟ್ ಬ್ಲಾಕ್‌ನ ಶೌಚಗುಂಡಿಯಲ್ಲಿ ಮಗು ಶವ ಪತ್ತೆಯಾಗಿದೆ. ಆಗ ತಾನೇ ಜನಿಸಿದ ಮಗುವನ್ನು ಟಾಯ್ಲೆಟ್ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಲಾಗಿದೆ. ಬಳಿಕ ಶೌಚಾಲಯದಲ್ಲಿ ನೀರು ಹೋಗದೆ ಬ್ಲಾಕ್‌ ಆದಾಗ ಹೌಸ್ ಕೀಪಿಂಗ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶೌಚಗುಂಡಿಯಲ್ಲಿ ಮಗು ಶವ ಪತ್ತೆಯಾಗಿದೆ. ಮಗುವಾಗಿದ್ದನ್ನು ಮರೆಮಾಚಲು ಯಾರೋ ಈ ಕೃತ್ಯವೆಸಗಿರುವ ಶಂಕೆ

ಟಾಯ್ಲೆಟ್‌ ಕಮೋಡ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆ Read More »

ಮೋಸದಿಂದ ಲಪಟಾಯಿಸಿದ ಭೂಮಿ ಸಿದ್ದರಾಮಯ್ಯ ಪತ್ನಿಗೆ ಉಡುಗೊರೆ

ಮುಡಾ ಹಗರಣದ ಬಳಿಕ ಪಾರ್ವತಮ್ಮ ವಿರುದ್ಧ ಇನ್ನೊಂದು ಕೇಸ್‌ ಮೈಸೂರು: ಭೂ ವಿವಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆನ್ನುಬಿಡುತ್ತಿಲ್ಲ. ಮುಡಾ ಹಗರಣದ ಮಧ್ಯೆ ಈಗ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ ಅವರ ವಿರುದ್ಧ ಮತ್ತೊಂದು ಕೇಸು ದಾಖಲಾಗಿದೆ. ಪಾರ್ವತಮ್ಮ ಹಾಗೂ ಸಿದ್ದರಾಮಯ್ಯನವರ ಬಾಮೈದ ಸೇರಿ ಒಟ್ಟು 10 ಜನರ ಮೇಲೆ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ಭೂ ವ್ಯಾಜ್ಯ ಸಂಬಂಧ ಕೇಸ್ ದಾಖಲಾಗಿದೆ. ಪಾರ್ವತಮ್ಮಗೆ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ತವರಿನ ಉಡುಗೊರೆ ರೀತಿ ಕೊಟ್ಟ ಕೆಸರೆ ಭಾಗದ ಮೂರೂವರೆ ಎಕರೆ

ಮೋಸದಿಂದ ಲಪಟಾಯಿಸಿದ ಭೂಮಿ ಸಿದ್ದರಾಮಯ್ಯ ಪತ್ನಿಗೆ ಉಡುಗೊರೆ Read More »

ಸಂಪುಟ ಪುನಾರಚನೆ, ಆಪರೇಷನ್‌ ಹಸ್ತ ಸಿದ್ದರಾಮಯ್ಯ ಗುರಿ

ಹೈಕಮಾಂಡ್‌ ನಾಯಕರ ಜೊತೆ ಇಂದು ಮಹತ್ವದ ಮಾತುಕತೆ ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ ಬಳಿಕ ಬಲಿಷ್ಠರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸಂಪುಟಕ್ಕೆ ಸರ್ಜರಿ ಮಾಡುವ ಉತ್ಸಾಹದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಂದು ದಿಲ್ಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲಿದ್ದಾರೆ. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ದಿಲ್ಲಿಗೆ ತೆರಳುತ್ತಿರುವುದರಿಂದ ರಾಜ್ಯದಲ್ಲಿ ಸಂಪುಟ ಪುನಾರಚನೆಯೂ ಸೇರಿದಂತೆ ಸರಕಾರದ ಮಟ್ಟದಲ್ಲಿ ದೊಡ್ಡ ಬದಲಾವಣೆ ನಡೆಯುವ ಬಗ್ಗೆ ಕುತೂಹಲ ಗರಿಗೆದರಿದೆ. ಈಗಾಗಲೇ ಮಂತ್ರಿಗಳಿಗೆ ಸಂದೇಶ ಕೊಟ್ಟಿದ್ದೇವೆ ಎನ್ನುವ

ಸಂಪುಟ ಪುನಾರಚನೆ, ಆಪರೇಷನ್‌ ಹಸ್ತ ಸಿದ್ದರಾಮಯ್ಯ ಗುರಿ Read More »

error: Content is protected !!
Scroll to Top