ರಾಜ್ಯ

ಜನರಿಗೆ ಮತ್ತೆ ಕರೆಂಟ್‌ ಶಾಕ್‌ : ಸದ್ದಿಲ್ಲದೆ ವಿದ್ಯುತ್‌ ದರ ಹೆಚ್ಚಳ

ಯೂನಿಟ್‌ಗೆ 36 ಪೈಸೆಯಂತೆ ಹೆಚ್ಚಿಸಿ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಬೆಂಗಳೂರು : ಈಗಾಗಲೇ ಎಲ್ಲ ಅಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ಸರಕಾರ ಮತ್ತೆ ವಿದ್ಯುತ್‌ ದರ ಏರಿಕೆಯ ಶಾಕ್‌ ಕೊಟ್ಟಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರ ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳ ಮಾಡಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಮ‌್ ಸಿಬ್ಬಂದಿಯ ಪಿಂಚಿಣಿ, ಗ್ರಾಚ್ಯುಟಿ ಹೆಚ್ಚಳದ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಲು ಕೆಇಆರ್​ಸಿ ಮುಂದಾರುವುದರ ಪರಿಣಾಮವಾಗಿ […]

ಜನರಿಗೆ ಮತ್ತೆ ಕರೆಂಟ್‌ ಶಾಕ್‌ : ಸದ್ದಿಲ್ಲದೆ ವಿದ್ಯುತ್‌ ದರ ಹೆಚ್ಚಳ Read More »

ಮಂಡ್ಯದವರನ್ನು ಛತ್ರಿಗಳು ಎಂದು ಕರೆದು ಅವಮಾನಿಸಿದ ಡಿಕೆಶಿ

ಉಪಮುಖ್ಯಮಂತ್ರಿ ಹೇಳಿಕೆಗೆ ಮಂಡ್ಯ ಜಿಲ್ಲೆಯಲ್ಲಿ ಭಾರಿ ಜನಾಕ್ರೋಶ ಮಂಡ್ಯ: ಮಂಡ್ಯದವರು ಛತ್ರಿಗಳು ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಜಿಲ್ಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆ ಜನರಿಗೆ ಡಿಕೆಶಿ ಅವಮಾನ ಮಾಡಿದ್ದಾರೆ. ಮಂಡ್ಯ ಜನರ ಭಿಕ್ಷೆಯಿಂದ ಕಾಂಗ್ರೆಸ್‍ಗೆ ಅಧಿಕಾರ ಸಿಕ್ಕಿದೆ. 7ರಲ್ಲಿ 5 ಕ್ಷೇತ್ರಗಳು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಡಿಕೆಶಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಕ್ಕಾಗಿ ಮಂಡ್ಯ ಜನರ ಬಳಿ ಬಂದು ಪೆನ್ನು, ಪೇಪರ್ ಕೊಡಿ ಎಂದು ಅಂಗಲಾಚಿದ್ದು ಮರೆತು

ಮಂಡ್ಯದವರನ್ನು ಛತ್ರಿಗಳು ಎಂದು ಕರೆದು ಅವಮಾನಿಸಿದ ಡಿಕೆಶಿ Read More »

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 38 ಕೋ. ರೂ. ಮೌಲ್ಯದ ಕೊಕೇನ್‌ ವಶ

75 ಕೋ. ರೂ. ಮಾದಕ ವಸ್ತು ವಶವಾದ ಬೆನ್ನಲ್ಲೇ ಇನ್ನೊಂದು ಪ್ರಕರಣ ಬೆಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ರಾಜ್ಯದಲ್ಲೇ ಅತಿದೊಡ್ಡ ಪ್ರಕರಣವಾದ 75 ಕೋ.ಟಿ ರೂ. ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡ ಬೆನ್ನಲ್ಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 38 ಕೋ.ರೂ. ಮೌಲ್ಯದ ಕೊಕೇನ್‌ ವಶವಾಗಿದೆ.ವಿಮಾನ ನಿಲ್ದಾಣದ ಕಂದಾಯ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಘಾನಾ ದೇಶದ ಮಹಿಳೆಯೊಬ್ಬಳನ್ನು ಬಂಧಿಸಿ 38.4 ಕೋಟಿ ರೂ. ಮೌಲ್ಯವಿರುವ 3.186 ಕೆಜಿ ಕೊಕೇನ್‌ ಮಾದಕ ವಸ್ತು

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 38 ಕೋ. ರೂ. ಮೌಲ್ಯದ ಕೊಕೇನ್‌ ವಶ Read More »

ಮರಕ್ಕೆ ಕಟ್ಟಿ ಹಾಕಿ ಮಹಿಳೆಗೆ ಹಲ್ಲೆ : ಸಿದ್ದರಾಮಯ್ಯ ದಿಗ್ಭ್ರಮೆ

ದೇಶಾದ್ಯಂತ ಸುದ್ದಿಯಾದ ಮಲ್ಪೆ ಬಂದರಿನಲ್ಲಿ ನಡೆದ ಘಟನೆ ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ವೀಡಿಯೊ ಕಂಡು ದಿಗ್ಭ್ರಮೆಯಾಯಿತು. ಕಾರಣವೇನೆ ಇರಲಿ ಒಬ್ಬ ಮಹಿಳೆಗೆ ಈ ರೀತಿ ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧವೂ ಹೌದು. ಇಂತಹ

ಮರಕ್ಕೆ ಕಟ್ಟಿ ಹಾಕಿ ಮಹಿಳೆಗೆ ಹಲ್ಲೆ : ಸಿದ್ದರಾಮಯ್ಯ ದಿಗ್ಭ್ರಮೆ Read More »

ಅಬ್ಬಬ್ಬಾ ಈ ಶ್ವಾನದ ಬೆಲೆ 49 ಕೋ.ರೂ.!

ಜಗತ್ತಿನ ದುಬಾರಿ ನಾಯಿಯನ್ನು ಖರೀದಿಸಿದ ಬೆಂಗಳೂರಿನ ಶ್ವಾನಪ್ರೇಮಿ ಬೆಂಗಳೂರು: ಬೆಂಗಳೂರಿನ ಶ್ವಾನಪ್ರೇಮಿ ಎಸ್. ಸತೀಶ್ ಎಂಬುವರು ಜಗತ್ತಿನ ಅತಿ ದುಬಾರಿ ನಾಯೊಂದನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಈ ನಾಯಿಯ ಬೆಲೆ ಕೇಳಿದರೆ ಬೆಚ್ಚಿಬೀಳುವುದು ಖಂಡಿತ. ಇದು ಬರೋಬ್ಬರಿ 49 ಕೋಟಿ ರೂ. (4.4 ಮಿಲಿಯನ್ ಪೌಂಡ್‌ಗಳು) ಬೆಲೆಬಾಳುವ ಅತ್ಯಂತ ಅಪರೂಪದ ನಾಯಿ. ವೂಲ್ಫ್ ಡಾಗ್ ಎಂಬ ವಿಶೇಷ ತಳಿಯ ಶ್ವಾನವನ್ನು ಅವರು ಇಷ್ಟು ದುಬಾರಿ ಬೆಲೆಕೊಟ್ಟು ಖರೀದಿಸಿ ಬೆಂಗಳೂರಿಗೆ ತಂದಿದ್ದಾರೆ. ಕ್ಯಾಡಬಾಮ್ ಒಕಾಮಿ ಎಂದು ಕರೆಯಲ್ಪಡುವ ಈ

ಅಬ್ಬಬ್ಬಾ ಈ ಶ್ವಾನದ ಬೆಲೆ 49 ಕೋ.ರೂ.! Read More »

ಮೀನಿನ ಬರಕ್ಕೆ ಲೈಟ್‌ ಫಿಶಿಂಗ್‌ ಕಾರಣ : ಸಿಕ್ಕಾಪಟ್ಟೆ ಬೆಲೆ ಏರಿಕೆಯಿಂದ ಮತ್ಸ್ಯಪ್ರಿಯರು ಕಂಗಾಲು

ಕೊನೆಗೂ ಕಾರ್ಯಾಚರಣೆಗಿಳಿದ ಮೀನುಗಾರಿಕೆ ಇಲಾಖೆ ಉಡುಪಿ : ಈ ವರ್ಷ ಕಂಡುಬಂದಿರುವ ಮೀನಿನ ಕೊರತೆಗೆ ಸಮುದ್ರದಲ್ಲಿ ನಡೆಯುತ್ತಿರುವ ಲೈಟ್‌ಫಿಶಿಂಗ್‌ ಕಾರಣ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಮೀನುಗಾರಿಕೆ ಇಲಾಖೆ ಕರಾವಳಿ ರಕ್ಷಣಾ ಪಡೆಯ ಸಹಯೋಗದಲ್ಲಿ ಲೈಟ್‌ ಫಿಶಿಂಗ್‌ ಮಟ್ಟ ಹಾಕಲು ತೀವ್ರ ಕಾರ್ಯಾಚರಣೆ ಪ್ರಾರಂಭಿಸಿದೆ. ಈ ವರ್ಷ ಮಾರ್ಚ್‌ಗಾಗುವಾಗಲೇ ಮೀನಿನ ತೀವ್ರ ಬರ ಕಂಡುಬಂದಿದ್ದು, ಸಾಕಷ್ಟು ಮೀನು ದೊರೆಯದೆ ಹಾಕಿದ ಡೀಸೆಲ್‌ನ ಖರ್ಚು ಕೂಡ ಹುಟ್ಟುತ್ತಿಲ್ಲ ಎಂಬ ಕಾರಣಕ್ಕೆ ಆಳ ಸಮುದ್ರ ಮೀನುಗಾರಿಕೆಯ ಮೀನುಗಳೆಲ್ಲ

ಮೀನಿನ ಬರಕ್ಕೆ ಲೈಟ್‌ ಫಿಶಿಂಗ್‌ ಕಾರಣ : ಸಿಕ್ಕಾಪಟ್ಟೆ ಬೆಲೆ ಏರಿಕೆಯಿಂದ ಮತ್ಸ್ಯಪ್ರಿಯರು ಕಂಗಾಲು Read More »

ಠಾಣೆಯಲ್ಲೇ ಇಸ್ಪೀಟ್‌ ಆಡಿದ ಪೊಲೀಸರು!

ಎಎಸ್‌ಐ ಸಹಿತ ಐವರು ಅಮಾನತು ಬೆಂಗಳೂರು: ಜೂಜಾಡುವವರನ್ನು ಹಿಡಿದು ತಂದು ರುಬ್ಬಿ ಪಾಠ ಕಲಿಸಬೇಕಾದ ಪೊಲೀಸರು ತಾವೇ ಠಾಣೆಯಲ್ಲಿ ಯೂನಿಫಾರ್ಮ್‌ ಧರಿಸಿಕೊಂಡು ಜೂಜಾಡಿದರೆ ಹೇಗೆ? ಇಂಥ ಒಂದು ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪೊಲೀಸ್‌ ಠಾಣೆಯಲ್ಲಿ ಸಂಭವಿಸಿದೆ. ಜೂಜಾಡಿದ ಐವರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಠಾಣೆಯ ಎಎಸ್​ಐ ಮಹಿಮೂದ್ ಮಿಯಾ, ಹೆಡ್​ಕಾನ್ಸ್‌ಟೆಬಲ್‌ಗಳಾದ ನಾಗರಾಜ್, ಸಾಯಿಬಣ್ಣ, ಇಮಾಮ್ ಮತ್ತು ಕಾನ್‌ಸ್ಟೆಬಲ್‌ ನಾಗಭೂಷಣ್

ಠಾಣೆಯಲ್ಲೇ ಇಸ್ಪೀಟ್‌ ಆಡಿದ ಪೊಲೀಸರು! Read More »

ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಮತ್ತೆ ಹನಿಟ್ರ್ಯಾಪ್‌ ಗುಸುಗುಸು

ಪ್ರಭಾವಿ ಸಚಿವರನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಲು ಇನ್ನೋರ್ವ ಸಚಿವರಿಂದ ಪ್ರಯತ್ನ ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಹನಿಟ್ರ್ಯಾಪ್‌ ಗುಸುಗುಸು ಕೇಳಿಸಲಾರಂಭಿಸಿದೆ. ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಪ್ ಖೆಡ್ಡಾದಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ತುಮಕೂರು ಕಡೆಯ ಸಚಿವರನ್ನು ಹನಿಟ್ರ್ಯಾಪ್‌ ಜಾಲಕ್ಕೆ ಬೀಳಿಸಿ ಮಟ್ಟ ಹಾಕಲು ಪ್ರಯತ್ನಿಸಲಾಗಿದೆ. ಈ ಹನಿಟ್ರ್ಯಾಪ್‌ ಜಾಲ ಹೆಣೆದಿರುವುದು ಕಾಂಗ್ರೆಸಿನವರೇ ಆದ ಇನ್ನೊಬ್ಬ ಪ್ರಭಾವಿ ಸಚಿವರು ಎಂಬ ವದಂತಿಗಳು ಕಳೆದ ಎರಡು ದಿನಗಳಿಂದ ಹರಿದಾಡುತ್ತಿವೆ. ಕೆಲ ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ

ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಮತ್ತೆ ಹನಿಟ್ರ್ಯಾಪ್‌ ಗುಸುಗುಸು Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಯತ್ನಾಳ್‌ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಗೋಲ್ಡ್‌ ಸ್ಮಗ್ಲಿಂಗ್‌ ಮಾಡಿ ಸಿಕ್ಕಿಬಿದ್ದರುವ ನಟಿ ರನ್ಯಾ ರಾವ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.ಅಕುಲ ಅನುರಾಧ ಎಂಬವರು ಯತ್ನಾಳ್‌ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಯತ್ನಾಳ್‌ ಅವರು ಅವಾಚ್ಯ ಪದ ಬಳಸಿ ನಟಿಯ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನನ್ವಯ ಬಿಎನ್‌ಎಸ್‌ ಸೆಕ್ಷನ್‌ 79 ಅಡಿ ಎಫ್‌ಐಆರ್‌ ದಾಖಲಾಗಿದೆ.ಆಕೆ ದೇಹದಾದ್ಯಂತ ಚಿನ್ನವನ್ನು ಹೊಂದಿದ್ದಳು, ರಂಧ್ರಗಳನ್ನು ಹೊಂದಿರುವಲ್ಲೆಲ್ಲಾ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಯತ್ನಾಳ್‌ ವಿರುದ್ಧ ಎಫ್‌ಐಆರ್‌ Read More »

ಮತ್ತೆ ಮುನ್ನೆಲೆಗೆ ಬಂದ ಸೌಜನ್ಯಾ ಪ್ರಕರಣ : 14 ವರ್ಷವಾದರೂ ತಗ್ಗದ ಕಾವು

ಹೋರಾಟಗಾರರ ಸಭೆಗೆ ಮತ್ತೊಮ್ಮೆ ಅನುಮತಿ ನಿರಾಕರಿಸಿದ ಪೊಲೀಸರು ಮಂಗಳೂರು : ಕೆಲ ಸಮಯದಿಂದ ತಣ್ಣಗಾದಂತೆ ಕಾಣಿಸುತ್ತಿದ್ದ ಸೌಜನ್ಯಾ ಪರ ಹೋರಾಟ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಮೀರ್‌ ಎಂ.ಡಿ. ಎಂಬ ಯೂಟ್ಯೂಬರ್‌ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂದು ಹೇಳಿಕೊಂಡು ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು ಗುರಿಯಾಗಿಸಿಕೊಂಡು ಮಾಡಿದ ವೀಡಿಯೊದಿಂದಾಗಿ ಮತ್ತೆ ಸೌಜನ್ಯಾ ಪ್ರಕರಣ ಜೀವ ಪಡೆದುಕೊಂಡಿದೆ.39 ನಿಮಿಷ 8 ಸೆಕೆಂಡುಗಳ ಈ ವೀಡಿಯೊ ಆರಂಭದಲ್ಲಿ ಸಮೀರ್‌ನ ಚಾನೆಲ್‌ನಲ್ಲಿ ಮಾತ್ರ ಇತ್ತು ಹಾಗೂ ಮೊದಲ ನಾಲ್ಕು

ಮತ್ತೆ ಮುನ್ನೆಲೆಗೆ ಬಂದ ಸೌಜನ್ಯಾ ಪ್ರಕರಣ : 14 ವರ್ಷವಾದರೂ ತಗ್ಗದ ಕಾವು Read More »

error: Content is protected !!
Scroll to Top