ಚಿನ್ನಸ್ವಾಮಿ ಕಾಲ್ತುಳಿತ – ಜನರ ಜೀವದ ಬೆಲೆ ತಿಳಿಯದ ಸರ್ಕಾರ ತಕ್ಷಣ ರಾಜೀನಾಮೆ ನೀಡಬೇಕು : ಕಿಶೋರ್ ಕುಮಾರ್ ಪುತ್ತೂರು
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದುರಂತ ರಾಜ್ಯದ ಆಡಳಿತ ವ್ಯವಸ್ಥೆಯ ಸಂಪೂರ್ಣ ದಿವಾಳಿತನವನ್ನು ಬಹಿರಂಗಪಡಿಸಿದೆ. ಇದನ್ನು ಒಂದು ಎಚ್ಚರಿಕೆಯ ಗಂಟೆಯೆಂದು ನಾನು ಪರಿಗಣಿಸುತ್ತೇನೆ. ಇಂತಹ ಕಾಲ್ತುಳಿತದ ಜವಾಬ್ದಾರಿ ಪೂರ್ವಯೋಜನೆಯಿಲ್ಲದ, ಅತಿಯಾದ ತುರಾತುರಿಯಲ್ಲಿ ಕೈಗೊಂಡ ಆಡಳಿತಾತ್ಮಕ ತೀರ್ಮಾನಗಳ ಕಾರಣವಾಗಿ ಉಂಟಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವಅವರು, ಇದೊಂದು ಕ್ರಿಕೆಟ್ ತಂಡದ ಸಾಂಪ್ರದಾಯಿಕ ಸೀಜನ್ […]










